ಮದುವೆ ಮಂಟಪದಲ್ಲಿ ವಧು-ವರರು ಎಲ್ಲರೆದುರೇ ರೊಮಾನ್ಸ್ ಮಾಡಲು ಆರಂಭಿಸುತ್ತಾರೆ. ಇದನ್ನು ಕಂಡು ಮುಜುಗರಕ್ಕೊಳಗಾದ ಪುರೋಹಿತರು ಮಧ್ಯಪ್ರವೇಶಿಸಿ ಅವರನ್ನು ತಡೆಯುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಇಂದು, ಮದುವೆಯು ಔಪಚಾರಿಕ ಸಮಾರಂಭಕ್ಕಿಂತ ಹೆಚ್ಚಾಗಿ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ವಿಡಿಯೋಶೂಟ್ ಕಾರ್ಯಕ್ರಮವಾಗಿಬಿಟ್ಟಿದೆ. ಮದುವೆ ಫಿಕ್ಸ್ ಆದಾಗಿನಿಂದಲೂ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಬೇಬಿ ಬಂಪ್ ಷೋ ಎಂದೆಲ್ಲಾ ಮದುವೆ ಎನ್ನುವ ಕಾನ್ಸೆಪ್ಟ್ ಬದಲಾಗಿ ಹೋಗಿದೆ. ಅದರಲ್ಲಿಯೂ ಈಚಿನ ದಿನಗಳಲ್ಲಿ ಲವ್ ಮ್ಯಾರೇಜ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮದುಮಕ್ಕಳ ನಡುವೆ ಮದುವೆಗೂ ಮುನ್ನವೇ ಅನ್ಯೋನ್ಯತೆ ಬೆಳೆದಿರುತ್ತದೆ. ಅಲ್ಲಿ ನಾಚಿಕೆ, ಅಂಜಿಕೆ ಎನ್ನೋದು ಬಹಳ ಕಡಿಮೆಯೇ. ಆದ್ದರಿಂದ ಎಲ್ಲರ ಎದುರೇ ರೊಮಾನ್ಸ್ ಮಾಡಲು ಅವರು ಅಂಜುವುದಿಲ್ಲ. ಆದರೆ, ಮದುವೆಯ ದಿನ ಮದುಮಕ್ಕಳು ನಾಚಿಕೆ ಬಿಟ್ಟರೂ, ಅಲ್ಲಿ ಬಂದಿರುವ ಜನರು ಇವರನ್ನು ನೋಡಿ ಕಣ್ಣುಮುಚ್ಚಿಕೊಳ್ಳುವ ಸ್ಥಿತಿಯೂ ಇಂದು ಸರ್ವೇ ಸಾಮಾನ್ಯ ಎನ್ನಿಸಿಬಿಟ್ಟಿದ್ದು, ಅಂಥದ್ದೇ ಒಂದು ವಿಡಿಯೋ ವೈರಲ್ ಆಗ್ತಿದೆ.
ರೊಮಾನ್ಸ್ ಶುರು
ಇದರಲ್ಲಿ ಮದುಮಕ್ಕಳು ಮದುಮಕ್ಕಳು, ಮದುವೆ ಮಾಡಿಸಲು ಬಂದ ಪಂಡಿತರು ಹಾಗೂ ಜನರ ಎದುರೇ ರೊಮಾನ್ಸ್ ಶುರು ಮಾಡಿಕೊಂಡು ಬಿಟ್ಟರು. ಕಿಸ್ಸಿಂಗ್ ಮಾಡಲು ಮುಂದಾದರು. ಇದನ್ನು ನೋಡಿದ ಪುರೋಹಿತರಿಗೆ ಮುಜುಗರ ಆಗಿ, ಮಧ್ಯೆ ಬಂದು, ಬ್ರೇಕ್ ಹಾಕಿದರು. ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಈಗ ವೈರಲ್ ಆಗ್ತಿರೋ ವಿಡಿಯೋದಲ್ಲಿ, ವಧು ಕ್ಯಾಮೆರಾಮನ್‌ಗಳೊಂದಿಗೆ ಮದುವೆಯ ಸ್ಥಳಕ್ಕೆ ಹಜಾರದಿಂದ ನಡೆದುಕೊಂಡು ಹೋಗುವುದನ್ನು ನೋಡಬಹುದು. ವಧು ಮದುವೆಯ ಸ್ಥಳವನ್ನು ತಲುಪಿದಾಗ, ವರನು ವಧುವನ್ನು ಮೊಣಕಾಲು ಊರಿ ಅವಳಿಗೆ ಕಿಸ್ ಮಾಡುತ್ತಾನೆ. ನಂತರ, ಕ್ಯಾಮೆರಾಮನ್‌ಗಳ ಸೂಚನೆಯಂತೆ ಇಬ್ಬರೂ ಮದುವೆಯ ಸ್ಥಳದಲ್ಲಿ ಅಪ್ಪಿಕೊಂಡು ನಿಲ್ಲುತ್ತಾರೆ. ವರನು ವಧುವಿನ ಕೆನ್ನೆಗೆ ಮೃದುವಾದ ಮುತ್ತು ನೀಡುತ್ತಾನೆ, ಮತ್ತು ಅಲ್ಲಿ ನೆರೆದಿದ್ದ ಅತಿಥಿಗಳು ಚಪ್ಪಾಳೆ ತಟ್ಟುವುದನ್ನು ವೀಡಿಯೊದಲ್ಲಿ ಕೇಳಬಹುದು.
ಆಗಮಿಸಿದ ಪುರೋಹಿತ
ಏತನ್ಮಧ್ಯೆ, ಅನಿರೀಕ್ಷಿತವಾಗಿ ಅಲ್ಲಿಗೆ ಆಗಮಿಸಿದ ಪುರೋಹಿತ, ವರನನ್ನು ವಧುವಿನಿಂದ ಬಲವಂತವಾಗಿ ಎಳೆದು ಇಬ್ಬರ ನಡುವೆ ನಿಲ್ಲುತ್ತಾನೆ. ಇದರೊಂದಿಗೆ, ವಧು ನಿರಾಶೆಯಿಂದ ಮದುವೆ ಸ್ಥಳದಿಂದ ಹೊರಹೋಗುವುದನ್ನು ಕಾಣಬಹುದು. ಈ ವಿಡಿಯೋ ನೋಡಿದ ಹಲವರು ಪುರೋಹಿತನ ವಿರುದ್ಧ ಕಿಡಿ ಕಾರುತ್ತಿದ್ದರೆ, ಮತ್ತೆ ಕೆಲವರು ಅವರು ಮಾಡಿದ್ದು ಸರಿ ಇದೆ ಎನ್ನುತ್ತಿದ್ದಾರೆ. ಪುರೋಹಿತರನ್ನು ದುಡ್ಡು ಕೊಟ್ಟು ಕರೆಸಿರುವುದು. ಅವರ ಕೆಲಸ ಮದುವೆ ಮಾಡಿಸುವುದು ಅಷ್ಟೇ. ಇವೆಲ್ಲಾ ಅಧಿಕ ಪ್ರಸಂಗ ಮಾಡಬಾರದು ಎಂದು ಕೆಲವರು ವಧು-ವರರ ಪರವಾಗಿ ನಿಂತಿದ್ದರೆ, ಮತ್ತೆ ಕೆಲವರು, ಪುರೋಹಿತರು ಮಾಡಿದ್ದು ಸರಿಯಿದೆ. ಸಾರ್ವಜನಿಕವಾಗಿ ಈ ರೀತಿ ಮಾಡುವುದು ಅಸಭ್ಯ ಎನ್ನಿಸುತ್ತದೆ. ಅವರಿಗೆ ಸ್ವಲ್ಪ ತಲೆ ಇರಬೇಕು. ಮದುವೆಯ ಬಳಿಕ ಏಕಾಂತದಲ್ಲಿ ಏನು ಬೇಕಾದ್ರೂ ಮಾಡಲಿ, ಇದು ಅತಿಯಾಯಿತು ಎನ್ನುತ್ತಿದ್ದಾರೆ.


