Moradabad newlywed elopes: ಉತ್ತರ ಪ್ರದೇಶದ ಮೊರದಾಬಾದ್ ಬಸ್ ನಿಲ್ದಾಣದಲ್ಲಿ, ಪಕೋಡಾ ತರಲು ಗಂಡನನ್ನು ಕಳುಹಿಸಿದ ನವ ವಿವಾಹಿತೆಯೊಬ್ಬಳು ಆತ ಹಿಂತಿರುಗುವಷ್ಟರಲ್ಲಿ ನಾಪತ್ತೆಯಾಗಿದ್ದಾಳೆ. ಮೂರು ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು.

ಗಂಡನನ್ನು ಪಕೋಡಾ ತರಲು ಕಳುಹಿಸಿ ಎಸ್ಕೇಪ್ ಆದ ಮಹಿಳೆ

ಮೊರದಾಬಾದ್‌: ಬಸ್ ನಿಲ್ದಾಣದಲ್ಲಿ ಗಂಡನನ್ನು ಪಕೋಡಾ ತರುವಂತೆ ಕಳುಹಿಸಿದ ಪತ್ನಿಯೊಬ್ಬಳು ಬಳಿಕ ಆತ ಪಕೋಡಾ ತರುವುದಕ್ಕೆ ಹೋಗುತ್ತಿದ್ದಂತೆ ಗಂಡನನ್ನು ಬಿಟ್ಟು ಪರಾರಿಯಾಗಿರುವಂತಹ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಹೊಸದಾಗಿ ಮದುವೆಯಾದ ನವವಧು ಗಂಡನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಅಮ್ರೋಹಾ ಜಿಲ್ಲೆಯ ನಿವಾಸಿಯಾದ ಪ್ರೀತಮ್ ಸಿಂಗ್ ಎಂಬ ವ್ಯಕ್ತಿಗೆ ರಾಮ್‌ಪುರ ಜಿಲ್ಲೆಯ ಯುವತಿ 18 ವರ್ಷದ ರಿಮ್‌ಜಿಮ್ ಜೊತೆ ಕಳೆದ ವರ್ಷ ಡಿಸೆಂಬರ್ 1 ರಂದು ಅಂದರೆ ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೋಳಿ ಹಬ್ಬಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಘಟನೆ

ರಿಮ್‌ಜಿಮ್ ಈ ಬಾರಿಯ ಹೋಳಿ ಹಬ್ಬದಂದು ತನ್ನ ಪೋಷಕರ ಮನೆಯಾದ ಮನೆಗೆ ತೆರಳಿದ್ದಳು. ಹಬ್ಬವೆಲ್ಲಾ ಮುಗಿದ ನಂತರ ಪ್ರೀತಮ್ ಮಾರ್ಚ್ 9 ರಂದು ಅವಳನ್ನು ಮರಳಿ ಕರೆತರಲು ಹೋದಳು. ಮುಂದೆ ಏನು ಕಾದಿದೆ ಎಂಬುದನ್ನು ತಿಳಿಯದ ಪ್ರೀತಮ್, ರಿಮ್‌ಜಿಮ್ ಜೊತೆ ಒಟ್ಟಿಗೆ ತನ್ನ ಮನೆಗೆ ಪ್ರಯಾಣ ಬೆಳೆಸಿದ್ದಾನೆ. ಪ್ರಯಾಣದ ನಡುವೆ ಇಬ್ಬರೂ ಬಿಲಾರಿ ಬಸ್ ನಿಲ್ದಾಣದಲ್ಲಿ ಇಳಿದು ಮುಂದಿನ ಬಸ್‌ಗಾಗಿ ಕಾಯುತ್ತಿದ್ದಾಗ ರಿಮ್‌ಜಿಮ್ ತನಗೆ ಹಸಿವಾಗುತ್ತಿದೆ ಏನನ್ನಾದರೂ ಬಿಸಿಬಿಸಿಯಾಗಿ ತಿನ್ನುವುದಕ್ಕೆ ತನ್ನಿ ಎಂದು ಹೇಳಿದ್ದಾಳೆ. ಪತ್ನಿಯ ಹೊಟ್ಟೆ ಹಸಿವು ನೀಗಿಸುವುದಕ್ಕಾಗಿ ಪತಿ ಪಕೋಡಾ ತರುವುದಕ್ಕೆ ಹೋಗಿದ್ದಾನೆ. ಇದಾಗಿ ಕೆಲ ನಿಮಿಷಗಳ ನಂತರ ವಾಪಸ್ ಬಂದಾಗ ರಿಮ್‌ಜಿಮ್ ನಾಪತ್ತೆಯಾಗಿದ್ದಾಳೆ.

ಇದನ್ನೂ ಓದಿ: ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಲು ಗೂಗಲ್‌ನ 2 ಕೋಟಿ ವೇತನದ ಕೆಲಸ ಬಿಟ್ಟ ಬೆಂಗಳೂರು ಟೆಕ್ಕಿ

ಮೊದಲಿಗೆ ಪ್ರೀತಂ ಪತ್ನಿ ರಿಮ್‌ಜಿಮ್ ಸಮೀಪದಲ್ಲೇ ಎಲ್ಲೋ ಇರಬಹುದು ಎಂದು ಭಾವಿಸಿದ್ದಾನೆ. ಆದರೆ ಸುತ್ತಮುತ್ತಲೂ ನೋಡಿ ಹುಡುಕಾಡಿದಾಗ ಎಲ್ಲೂ ಕಾಣಿಸದೇ ಹೋಗಿದ್ದು, ಬಸ್ ನಿಲ್ದಾಣದಲ್ಲಿದ್ದವರು ಕೂಡ ಆಕೆ ಹೊರಟು ಹೋಗಿದ್ದನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಇದರಿಂದ ಗಾಬರಿಯಾದ ಪ್ರೀತಮ್ ಪೊಲೀಸ್ ಠಾಣೆಗೆ ಹೋಗಿ ಪತ್ನಿ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದಾನೆ. ತನ್ನ ಪತ್ನಿ ಆಕೆಯ ತವರೂರಿನ ಸಮೀಪದ ಯುವಕನ ಜೊತತೆ ಹೊರಟು ಹೋಗಿರಬಹುದು ಎಂದು ಆತ ಸಂಶಯ ವ್ಯಕ್ತಪಪಡಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಜೊತೆಗೆ ಆಕೆಯ ಮೊಬೈಲ್ ಫೋನ್ ಲೋಕೇಷನ್ ಟ್ರೇಸ್ ಮಾಡುವ ಮೂಲಕ ಆಕೆ ಎಲ್ಲಿರಬಹುದು ಎಂದು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಝೋಮ್ಯಾಟೋ ಮೂಲಕ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿ ಕಾಲು ಸಿಕ್ತು ಎಂದ ಗ್ರಾಹಕ: ವೀಡಿಯೋ ವೈರಲ್