Relationship trends corporate world: ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಓರ್ವ ಯುವತಿ ಕಾರ್ಪೊರೇಟ್ ಜಗತ್ತಿನಲ್ಲಿ ವಿವಾಹೇತರ ಸಂಬಂಧಗಳ ಬಗ್ಗೆ ಚರ್ಚಿಸುತ್ತಾಳೆ. ಅಷ್ಟೇ ಅಲ್ಲ, ಆಕೆ ಬಹಿರಂಗಪಡಿಸಿರುವ ಮಾಹಿತಿ ಕೇಳಿದರೆ ನಿಮಗೇ ಆಶ್ಚರ್ಯವಾಗುತ್ತದೆ. 

ಕಾರ್ಪೊರೇಟ್ ಜಗತ್ತಿನಲ್ಲಿ ವಿವಾಹೇತರ ಸಂಬಂಧಗಳು ಸಾಮಾನ್ಯ ಎಂದು ಹಲವರು ಹೇಳಿಕೊಳ್ಳುತ್ತಾರೆ. ನಿಮಗೆಲ್ಲರಿಗೂ ವಿವಾಹೇತರ ಸಂಬಂಧಗಳ ಬಗ್ಗೆ ತಿಳಿದಿರಬಹುದು. ಆದರೆ ನಾವೀಗ ವಿವಾಹೇತರ ಸಂಬಂಧದ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ಅನಿಸುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಹೌದು. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಓರ್ವ ಯುವತಿ ಕಾರ್ಪೊರೇಟ್ ಜಗತ್ತಿನಲ್ಲಿ ವಿವಾಹೇತರ ಸಂಬಂಧಗಳ ಬಗ್ಗೆ ಚರ್ಚಿಸುತ್ತಾಳೆ. ಅಷ್ಟೇ ಅಲ್ಲ, ಆಕೆ ಬಹಿರಂಗಪಡಿಸಿರುವ ಮಾಹಿತಿ ಕೇಳಿದರೆ ನಿಮಗೇ ಆಶ್ಚರ್ಯವಾಗುತ್ತದೆ.

ಹಾಗಾದ್ರೆ ಈ ವಿಡಿಯೋದಲ್ಲಿ ಯುವತಿ ಹೇಳಿದ್ದೇನು?

ಈ ವಿಡಿಯೋದಲ್ಲಿ ಯುವತಿ, "ಕಾರ್ಪೊರೇಟ್ ಉದ್ಯೋಗಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ. ಆದರೂ ಜನರು ಏಕೆ ಮದುವೆಯಾಗುತ್ತಿದ್ದಾರೆ?. ಏಕೆಂದರೆ ಅವರಿಗೆ ತಮ್ಮ ಹೆತ್ತವರನ್ನು ನೋಡಿಕೊಳ್ಳಲು ಮತ್ತು ಮಕ್ಕಳನ್ನು ಪಡೆಯಲು ಯಾರಾದರೂ ಬೇಕು" ಅದಕ್ಕಾಗಿ ಎಂದು ಖಾರವಾಗಿ ನುಡಿದಿದ್ದಾಳೆ. ಅಷ್ಟೇ ಅಲ್ಲ, "ಹೇ, ಮಕ್ಕಳನ್ನು ದತ್ತು ತೆಗೆದುಕೊಂಡು ನಿಮ್ಮ ಪೋಷಕರನ್ನು ನೋಡಿಕೊಳ್ಳಲು ಸೇವಕಿಯನ್ನು ನೇಮಿಸಿಕೊಳ್ಳಿ, ಬದಲಾಗಿ ಮದುವೆಯಾಗುವುದಲ್ಲ" ಎಂದಿದ್ದಾಳೆ.

ಬಳಕೆದಾರರು ಹೇಳಿದ್ದೇನು?

ನೀವು ಈಗಷ್ಟೇ ವೀಕ್ಷಿಸಿದ ವಿಡಿಯೋವನ್ನು @venom1s ಎಂಬ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ, ವಿಡಿಯೋವನ್ನು 44,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಿಡಿಯೋ ವೀಕ್ಷಿಸಿದ ನಂತರ ಬಳಕೆದಾರರು ಯುವತಿಯ ಪರವಾಗಿಯೇ ಮಾತನಾಡಿದ್ದಾರೆ. ಓರ್ವ ಬಳಕೆದಾರರು "ನಾನು ಹಳ್ಳಿಯ ಹುಡುಗಿಯ ಜೊತೆ ಮಾತ್ರ ಇದನ್ನು ಮಾಡುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರರು "ಬಹುತೇಕ ಎಲ್ಲಾ ಮಹಿಳೆಯರು ಇದನ್ನು ಇಷ್ಟಪಡುತ್ತಾರೆ" ಎಂದು ಬರೆದಿದ್ದಾರೆ. ಹಾಗೆಯೇ "ನಾನು ನೋಡಿದ್ದರಿಂದ, ಇದು 90% ಕ್ಕಿಂತ ಹೆಚ್ಚು", "ನೀವು ಹೇಳಿದ್ದು ಸರಿ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ 

Scroll to load tweet…

ವಿವಾಹೇತರ ಸಂಬಂಧಗಳು ಪ್ರಾರಂಭವಾಗುವುದೇ ಇಲ್ಲಿ
ಮದುವೆ ಒಂದು ಪವಿತ್ರ ಬಂಧ. ಅದು ಅರೆಂಜ್ ಮದುವೆಯಾಗಿದ್ದರೂ ಸರಿ ಅಥವಾ ಪ್ರೇಮ ವಿವಾಹವಾಗಿದ್ದರೂ ಸಹ. ಇಬ್ಬರು ವ್ಯಕ್ತಿಗಳು ವಿವಾಹದ ಬಂಧಕ್ಕೆ ಪ್ರವೇಶಿಸಿದಾಗ ಅದು ಅವರನ್ನು ಜೀವನಪರ್ಯಂತ ಒಟ್ಟಿಗೆ ಬಂಧಿಸುತ್ತದೆ. ಪ್ರೀತಿ, ಗೌರವ ಮತ್ತು ವಿಶ್ವಾಸದಿಂದ ತುಂಬಿದ ಈ ಸಂಬಂಧವು ಎಂದಿಗೂ ಮುರಿಯುವುದಿಲ್ಲ. ಆದರೆ ಪ್ರೀತಿ, ಗೌರವ ಮತ್ತು ವಿಶ್ವಾಸ ಕಳೆದುಹೋದಾಗ ವಿವಾಹೇತರ ಸಂಬಂಧಗಳು ಪ್ರಾರಂಭವಾಗುತ್ತವೆ. ಅಂದರೆ ನೀವು ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗದ ಮದುವೆಯಲ್ಲಿ ಆ ಸಂತೋಷವನ್ನು ಹೊರಗೆ ಹುಡುಕಲು ಪ್ರಾರಂಭಿಸುತ್ತೀರಿ. ಬೇರೊಬ್ಬರೊಂದಿಗೆ ಸಂಬಂಧವನ್ನು ಪ್ರಾರಂಭಿಸುತ್ತೀರಿ. ನೀವು ಮನೆಗಿಂತ ಮನೆಯ ಹೊರಗೆ ನಿಮ್ಮ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಲು ಪ್ರಾರಂಭಿಸುತ್ತೀರಿ. ನಂತರ ಒಂದು ದಿನ ನೀವು ಆ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳುತ್ತೀರಿ.

ಭಾರತದಲ್ಲೂ ಹೆಚ್ಚಾಯ್ತು!
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚಾಗಿ ಕಂಡುಬರುತ್ತಿವೆ. ಮೊದಲೆಲ್ಲಾ ಇದನ್ನು ನಾವು ವಿದೇಶದಲ್ಲಿ ಮಾತ್ರ ನೋಡಬಹುದಾಗಿತ್ತು. ಇದರ ಲಕ್ಷಣಗಳು ಈಗೀಗ ಭಾರತದಲ್ಲಿಯೂ ಕಂಡುಬರುತ್ತವೆ. ಮದುವೆಯ ನಂತರ ಬೇರೊಬ್ಬರೊಂದಿಗೆ ಪ್ರೀತಿಯಲ್ಲಿ ಬೀಳುವುದು ಅಥವಾ ಬೇರೊಬ್ಬರೊಂದಿಗೆ ದೈಹಿಕ, ಭಾವನಾತ್ಮಕ ಅಥವಾ ಮಾನಸಿಕ ಸಂಬಂಧವನ್ನು ಹೊಂದಿರುವುದು ವಿವಾಹೇತರ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಮದುವೆಯ ನಂತರ ಸಂಬಂಧವನ್ನು ಹೊಂದಿರುವುದು ಪಾಪವೆಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿ ಜನರು ತಮ್ಮ ಮದುವೆಗಳನ್ನು ಉಳಿಸಿಕೊಳ್ಳಲು ತಮ್ಮ ಕುಟುಂಬ ಸದಸ್ಯರ ಸಹಾಯವನ್ನು ಪಡೆಯುವುದನ್ನು ನೀವು ನೋಡಬಹುದು. ಮದುವೆಯ ಬಂಧವು ಎಷ್ಟು ಪವಿತ್ರವಾಗಿದೆಯೆಂದರೆ ಇಬ್ಬರೂ ಸಂಗಾತಿಗಳು ಪರಸ್ಪರ ಸಂಪೂರ್ಣವಾಗಿ ಸಮರ್ಪಿತರಾಗಿರುತ್ತಾರೆ. ಆದರೆ ಈ ಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ವಿವಾಹೇತರ ಸಂಬಂಧಗಳು ಸಂಬಂಧಗಳು ಸಹ ಸಾಮಾನ್ಯವಾಗಿರುವುದು ದುಃಖಕರ ಸಂಗತಿ.