Asianet Suvarna News Asianet Suvarna News

ಮದ್ವೆ ಗಿದ್ವೆ ಬೇಡ, ಲಿವ್‌ ಇನ್‌ ಸಂಬಂಧವೇ ಬೆಸ್ಟ್‌ ಅನ್ನೋ ರಾಶಿ ಪೈಕಿ ನೀವೂ ಇದೀರಾ?

ಸ್ವಾತಂತ್ರ್ಯ ಕಳೆದುಕೊಳ್ಳುವ ಭಯ, ಸಾಮಾಜಿಕ ಹೇರಿಕೆಗಳು, ಕುಟುಂಬಗಳ ವಿವಿಧ ರೀತಿಯ ಒತ್ತಡದಿಂದ ತಪ್ಪಿಸಿಕೊಳ್ಳುವುದು, ತಮ್ಮ ಆಸಕ್ತಿಯನ್ನೇ ಪೋಷಿಸಿಕೊಳ್ಳುವ ಅವಕಾಶ ಸೇರಿದಂತೆ ಹಲವು ರೀತಿಯ ಅಂಶಗಳ ಕಾರಣದಿಂದ ಸಮಾಜದಲ್ಲಿ ಇಂದು ಲಿವ್‌ ಇನ್‌ ರಿಲೇಷನ್ಸ್‌ ಹೆಚ್ಚುತ್ತಿವೆ. ಇದರತ್ತ ಐದು ರಾಶಿಗಳ ಜನ ಹೆಚ್ಚು ಆಕರ್ಷಿತರಾಗುತ್ತಾರೆ.
 

Aquarius Sagittarius aries zodiac signs likes live in relations rather than in wedding lock sum
Author
First Published Nov 6, 2023, 4:20 PM IST

ಪ್ರೀತಿ-ಪ್ರೇಮದ ಸಂಬಂಧಗಳು ಕೆಲವರನ್ನು ನೋಡಿದಾಗ ವಿಚಿತ್ರ ಎನಿಸುತ್ತವೆ. ಕೆಲವರು ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸಿದರೆ, ಮತ್ತೆ ಕೆಲವರು ಏಕಕಾಲದಲ್ಲಿ ನಾಲ್ಕು ಜನರೊಂದಿಗೆ ಫ್ಲರ್ಟ್‌ ಮಾಡುತ್ತಿರುತ್ತಾರೆ. ಕೆಲವರು ಸಂಬಂಧಗಳಿಗೆ ಮಹತ್ವ ನೀಡುವುದಿಲ್ಲ. ಕೆಲವರು ಅತಿಯಾದ ಮಹತ್ವ ಕೊಟ್ಟು ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಪ್ರೀತಿ-ಪ್ರೇಮ ಮತ್ತು ಸಂಬಂಧಗಳ ಮಟ್ಟಿಗೆ ಒಬ್ಬೊಬ್ಬರದು ಒಂದೊಂದು ರೀತಿಯ ವರ್ತನೆ, ನಿರ್ಧಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಲ್ಲಿ ನಮ್ಮ ನಿರ್ಣಯಕ್ಕಿಂತ ಗ್ರಹಗತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಪ್ರೀತಿ-ಸಂಬಂಧಗಳ ಕುರಿತಾಗಿ ನಾವು ತೆಗೆದುಕೊಳ್ಳುವ ಪ್ರತಿಯೊಂದೂ ನಿರ್ಣಯಗಳು ರಾಶಿಚಕ್ರದ ಪ್ರಭಾವದಿಂದಲೇ ಆಗಿರುತ್ತವೆ. ನೀವು ಯಾವ ರಾಶಿಯಲ್ಲಿ ಜನಿಸಿದ್ದೀರಿ ಎನ್ನುವ ಆಧಾರದ ಮೇಲೆ ನಿಮ್ಮ ಪ್ರೀತಿ-ಪ್ರೇಮ ಹಾಗೂ ಸಂಬಂಧಗಳು ರೂಪುಗೊಳ್ಳುತ್ತವೆ. ಅದಕ್ಕೆ ತಕ್ಕಂತೆ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತ ಹೋಗುತ್ತೀರಿ. ಇತ್ತೀಚಿನ ದಿನಗಳಲ್ಲಿ ಲಿವ್‌ ಇನ್‌ ರಿಲೇಷನ್ಸ್‌ ಹೆಚ್ಚು. ವ್ಯಕ್ತಿಗತವಾಗಿ ದೊರೆಯುವ ಹೆಚ್ಚು ಸ್ವಾತಂತ್ರ್ಯ, ಸಂಬಂಧದಲ್ಲಿರುವ ಫ್ಲೆಕ್ಸಿಬಿಲಿಟಿ, ಸಾಮಾಜಿಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುವ ಹಂಬಲ, ಭಾವನಾತ್ಮಕ ಬಾಂಧವ್ಯ ಮುಂತಾದ ಕಾರಣದಿಂದಾಗಿ ಲಿವ್‌ ಇನ್‌ ಸಂಬಂಧಗಳು ಇಂದು ಅಧಿಕವಾಗಿವೆ. ಸಂಬಂಧಕ್ಕೊಂದು ಭದ್ರತೆ ಇಲ್ಲವಾದರೂ ಇಂದಿನ ಯುವಪೀಳಿಗೆಯನ್ನು ಅತಿ ಹೆಚ್ಚಾಗಿ ಸೆಳೆಯುತ್ತಿದೆ ಲಿವ್‌ ಇನ್. ಇದಕ್ಕೆ ಇತರೆ ಸಾಮಾಜಿಕ ಕಾರಣಗಳೂ ಸಾಕಷ್ಟಿರಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವೇ ರಾಶಿಗಳ ಜನರು ಇದನ್ನು ಇಷ್ಟಪಡುತ್ತಾರೆ. 

•    ಕುಂಭ (Aquarius)
ಕುಂಭ ರಾಶಿಯ ಜನರ ವರ್ತನೆ ಇತರರಿಗೆ ವಿಚಿತ್ರ ಎಂದು ಕಾಣಬಹುದು. ಇವರು ಸ್ವತಂತ್ರ ಹಾಗೂ ಅಸಾಂಪ್ರದಾಯಿಕ (Unconventional) ಚಿಂತನೆಗಳಿಗೆ ಹೆಸರುವಾಸಿ. ಇವರು ತಮ್ಮ ಸ್ವಾತಂತ್ರ್ಯಕ್ಕೆ ಅಪಾರ ಬೆಲೆ ನೀಡುತ್ತಾರೆ. ಸಂಬಂಧಗಳ (Relationship) ಗೋಜಲಿನಲ್ಲಿ ಸಿಲುಕುವುದು ಇವರಿಗೆ ಇಷ್ಟವಾಗುವುದಿಲ್ಲ. ಸಾಂಪ್ರದಾಯಿಕ ವೈವಾಹಿಕ ವ್ಯವಸ್ಥೆಗೆ ಒಳಪಡಲು ಹಿಂಜರಿಯುತ್ತಾರೆ. ಕುಟುಂಬಗಳನ್ನು (Families) ಬೆಸೆಯುವ ಮದುವೆಯಿಂದ ನಿರ್ಬಂಧಗಳೇ (Restrictions) ಹೆಚ್ಚು ಎನ್ನುವುದು ಇವರ ವಾದ. ಹೀಗಾಗಿ, ಸುಲಭವಾಗಿ ಲಿವ್‌ ಇನ್‌ ಸಂಬಂಧಕ್ಕೆ (Live-in Relationship) ಮನಸ್ಸು ಮಾಡುತ್ತಾರೆ.

ಶುಕ್ರ ಗೋಚರ, ಈ ರಾಶಿಗೆ 25 ದಿನದಲ್ಲಿ ಟ್ರೂ ಲವ್ ಸಿಗುತ್ತೆ.. ಹೇಗೆ ಗೊತ್ತಾ?

•    ಮಿಥುನ (Gemini)
ಸೋಷಿಯಲ್‌ ಬಟರ್‌ ಫ್ಲೈ ಎನಿಸಿಕೊಂಡಿರುವ ಮಿಥುನ ರಾಶಿಯ ಜನ ವಿಭಿನ್ನತೆ, ರೋಚಕತೆ (Excitement) ಮತ್ತು ಬದಲಾವಣೆಯನ್ನು (Change) ನಿರೀಕ್ಷಿಸುತ್ತಾರೆ. ಇವರು ಲಿವ್‌ ಇನ್‌ ಸಂಬಂಧಕ್ಕೆ ಆದ್ಯತೆ ನೀಡುವುದು ಹೆಚ್ಚು. ಏಕೆಂದರೆ, ಈ ಸಂಬಂಧ ಇವರ ಸಾಮಾಜಿಕ (Social) ಚಟುವಟಿಕೆಗಳಿಗೆ ಹೆಚ್ಚು ತಡೆಯಾಗುವುದಿಲ್ಲ. ಮತ್ತು ಯಾವುದೇ ಬದಲಾವಣೆ ಅಳವಡಿಸಿಕೊಳ್ಳಲು ಇಲ್ಲಿ ಹಿಂಜರಿಕೆ ಇರುವುದಿಲ್ಲ.

•    ಧನು (Sagittarius)
ನಿಸರ್ಗ ಸಹಜವಾಗಿ ಧನು ರಾಶಿಯ ಜನ ಸಾಹಸ ಪ್ರವೃತ್ತಿ ಮತ್ತು ಅನ್ವೇಷಣಾತ್ಮಕ ಬುದ್ಧಿಯುಳ್ಳವರು. ಸ್ವತಂತ್ರ (Freedom) ನಿಲುವಿಗೆ ಆದ್ಯತೆ ನೀಡುವವರು. ವ್ಯಕ್ತಿಗತ ಬೆಳವಣಿಗೆಗೆ (Personal Growth) ಬೆಲೆ ನೀಡುತ್ತಾರೆ. ಬೌದ್ಧಿಕ ಚಟುವಟಿಕೆ, ಪ್ರವಾಸಗೈಯುವುದು ಇವರಿಗಿಷ್ಟ. ತಮ್ಮ ಜೀವನಶೈಲಿಗೆ ಲಿವ್‌ ಇನ್‌ ಸಂಬಂಧವೇ ಸೂಕ್ತ ಎನ್ನುತ್ತಾರೆ.

•    ಮೇಷ (Aries)
ಮೇಷ ರಾಶಿಯ ಜನ ಸಹ ಸಿಕ್ಕಾಪಟ್ಟೆ ಸ್ವತಂತ್ರ ಧೋರಣೆಯುಳ್ಳವರು. ಸಾಮಾಜಿಕ ನಿಯಮಗಳಿಗೆ (Norms) ಅನುಗುಣವಾಗಿ ನಡೆದುಕೊಳ್ಳುವುದು ಇವರಿಗೆ ಇಷ್ಟವಾಗುವುದಿಲ್ಲ. ಸಂಬಂಧಗಳಿಂದ ಮನುಷ್ಯನ ಮೇಲೆ ಹಿಡಿತ ಹೆಚ್ಚಾಗುತ್ತದೆ ಎನ್ನುವ ಭಾವನೆ ಹೊಂದಿರುತ್ತಾರೆ. ತಮ್ಮ ಫ್ಲೆಕ್ಸಿಬಲ್‌ (Flexible) ಗುಣ ಹಾಗೂ ಅತ್ಯುತ್ಸಾಹದ ಕಾರ್ಯಶೈಲಿಗೆ ಲಿವ್‌ ಇನ್‌ ಸಂಬಂಧವೇ ಸೂಕ್ತ ಎಂದು ಭಾವಿಸುತ್ತಾರೆ. 

ಪೋಷಕರು-ಮಕ್ಕಳು ಹಾವು ಮುಂಗುಸಿ ಥರ ಕಿತ್ತಾಡೋದಕ್ಕೆ ಜಾತಕ ಕಾರಣವಾ?

•    ಮೀನ (Pisces)
ಭಾವನಾತ್ಮಕ (Emotional) ಸೂಕ್ಷ್ಮತೆಯುಳ್ಳ ಮೀನ ರಾಶಿಯ ಜನ ಕಲ್ಪನಾಶೀಲರು. ಭಾವನಾತ್ಮಕ ಬಾಂಧವ್ಯ ಸಾಧ್ಯವಾಗುವುದರಿಂದ ಲಿವ್‌ ಇನ್‌ ಸಂಬಂಧವನ್ನು ಇವರು ಇಷ್ಟಪಡುವ ಸಾಧ್ಯತೆ ಹೆಚ್ಚು. ಮದುವೆಯ ಚೌಕಟ್ಟಿಲ್ಲದೆಯೂ ಒಬ್ಬರನ್ನೊಬ್ಬರು ಇಷ್ಟಪಟ್ಟು, ಅರ್ಥ ಮಾಡಿಕೊಳ್ಳುವುದಕ್ಕೆ ಇವರು ಬೆಲೆ (Value) ನೀಡುತ್ತಾರೆ. 
 

Follow Us:
Download App:
  • android
  • ios