ಭಾರತದಂಥ ಸುಸಂಸ್ಕೃತ ದೇಶದಲ್ಲೂ Live In Relationships ಶುರುವಾಗಿದ್ದು ಹೇಗೆ?
ಲಿವ್ ಇನ್ ಈಗ ಸಾಮಾನ್ಯ ಎನ್ನುವಂತಾಗಿದೆ. ಅನೇಕರು ಲಿವ್ ಇನ್ ನಲ್ಲಿರಲು ಇಷ್ಟಪಡ್ತಾರೆ. ವಿದೇಶಿ ಸಂಸ್ಕೃತಿ ಈಗ ನಮ್ಮದಾಗ್ತಿದೆ. ಲಿವ್ ಇನ್ ಭಾರತದಲ್ಲಿ ಆರಂಭವಾಗಿ ಹೇಗೆ ಬೆಳವಣಿಗೆ ಕಂಡಿತು ಎನ್ನುವ ವಿವರ ಇಲ್ಲಿದೆ.
ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಅನೇಕ ಬೆಳವಣಿಗೆಗಳು, ಬದಲಾವಣೆಗಳು ಆಗುತ್ತಿವೆ. ಮನುಷ್ಯನ ಜೀವನ ಕ್ರಮ ಹಾಗೂ ಬದುಕುವ ಶೈಲಿಗಳಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಅಂತಹ ಬದಲಾವಣೆಗಳಲ್ಲಿ ಲಿವ್ ಇನ್ ರಿಲೇಶನ್ಶಿಪ್ ಕೂಡ ಒಂದು. ಇದು ಆಧುನಿಕ ಪರಿಕಲ್ಪನೆಗಳಲ್ಲಿ ಒಂದಾಗಿದೆ.
ಪಾಶ್ಚಿಮಾತ್ಯ (Western) ದೇಶಗಳಲ್ಲಿ ಸರ್ವೇಸಾಮಾನ್ಯವಾಗಿರುವ ಲಿವ್ ಇನ್ ಸಂಬಂಧ ಈಗ ಭಾರತ (India) ಕ್ಕೂ ಲಗ್ಗೆ ಇಟ್ಟಿದೆ. ಪರಸ್ಪರ ಪ್ರೀತಿಸುತ್ತಿರುವ ಗಂಡು ಹೆಣ್ಣು ವಿವಾಹವಾಗದೇ ಜೊತೆಯಲ್ಲಿ ವಾಸಿಸುವ ಪದ್ಧತಿಯೇ ಲಿವ್ ಇನ್ ರಿಲೇಶನ್ಶಿಪ್. ಈ ಪದ್ಧತಿಯಲ್ಲಿ ಮದುವೆಯಾದ ನಂತರವೇ ಗಂಡು ಹೆಣ್ಣು ಜೊತೆಯಲ್ಲಿ ವಾಸ ಮಾಡಬೇಕೆನ್ನುವ ನಿಯಮ ಇರೋದಿಲ್ಲ. ಲಿವ್ ಇನ್ (Live In) ಸಂಬಂಧದ ಕುರಿತು ಅನೇಕ ರೀತಿಯ ಅಭಿಪ್ರಾಯಗಳಿವೆ. ಕೆಲವರು ಈ ಸಂಬಂಧವನ್ನು ಸರಿ ಎಂದರೆ ಇನ್ಕೆಲವರು ಈ ರೀತಿಯ ಸಂಬಂಧ ಸರಿಯಲ್ಲ ಎನ್ನುತ್ತಾರೆ.
30-40 ವರ್ಷ ಸಂಸಾರ ಮಾಡಿಯಾಗಿರುತ್ತೆ, ಇನ್ನೇನು ಸಾಯೋ ವಯಸ್ಸಲ್ಲಿ ಡಿವೋರ್ಸ್ ಕೊಡೋದ್ಯಾಕೆ?
ಭಾರತದಲ್ಲಿ ಲಿವ್ ಇನ್ ರಿಲೇಶನ್ಶಿಪ್ ಸಂಬಂಧ ಹೇಗಿದೆ? : ಸಾಮಾಜಿಕ ಜಾಲತಾಣಗಳಲ್ಲಿ ಲಿವ್ ಇನ್ ರಿಲೇಶನ್ಶಿಪ್ ಸಂಬಂಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಯ ಮೊದಲ ಹಂತ, ಇದು ಭಾರತೀಯ ಸಮಾಜದಲ್ಲಿ ಸಂಬಂಧಗಳ ದೃಷ್ಟಿಯನ್ನು ಬದಲಾಯಿಸಿದೆ ಎನ್ನಲಾಗುತ್ತಿದೆ. ವಿವಿಧ ಕಾರಣಗಳಿಂದಾಗಿ ಈ ಪದ್ಧತಿ ಭಾರತದಲ್ಲೂ ಜಾರಿಗೆ ಬಂದಿದೆ. ಇದರಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಭಾವವೂ ಹೆಚ್ಚಿದೆ. ಲಿವ್ ಇನ್ ರಿಲೇಶನ್‌ಶಿಪ್ ಸಂಬಂಧವು ವೈಯಕ್ತಿಕ ಸ್ವಾತಂತ್ರ್ಯ (Personal Freedom) ಮತ್ತು ವೈಯಕ್ತಿಕ ಆಯ್ಕೆಯನ್ನು (Personal Selection) ಗೌರವಿಸುತ್ತದೆ. ಇದು ಆರ್ಥಿಕ ಸ್ವಾತಂತ್ರ್ಯ (Financial Freddom), ಹೆಚ್ಚಿನ ಶಿಕ್ಷಣ ಮತ್ತು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದೆ. ಹೊರ ದೇಶಗಳಲ್ಲಿರುವ ಈ ಪದ್ಧತಿ ಭಾರತದಲ್ಲಿ ಪ್ರಾರಂಭವಾಗಿ ಈಗ ಭಾರತೀಯ ಸಮಾಜದ ಪ್ರಮುಖ ಭಾಗವಾಗಿದೆ.
30 ವರ್ಷಕ್ಕೆ ಮಕ್ಳು ಮಾಡ್ಕೊಳ್ಳೋ ಪ್ಲ್ಯಾನ್ ಹಾಕಿದ್ದ ನಟಿ ತಮನ್ನಾ ಮದ್ವೆ ಫಿಕ್ಸ್? ವರನಾರು ಗೊತ್ತಾ?
ಪಾಶ್ಚಿಮಾತ್ಯ ದೇಶಗಳಂತೆ ಭಾರತದಲ್ಲಿ ಲಿವ್ ಇನ್ ಸಂಬಂಧ ಕಾನೂನುಬದ್ಧವಾಗಿಲ್ಲ. ಈ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಲಿವ್ ಇನ್ ಸಂಬಂಧ ಜನರಲ್ಲಿ ಒಂದು ಹೊಸ ಆಯಾಮವನ್ನು ಹುಟ್ಟುಹಾಕಿದೆ. ಮೊದಲು ಈ ಸಂಬಂಧವನ್ನು ಒಪ್ಪಿಕೊಳ್ಳದ ಸಮಾಜ ಈಗ ಕ್ರಮೇಣವಾಗಿ ಈ ಸಾಮಾಜಿಕ ಬದಲಾವಣೆಯನ್ನು ಸ್ವೀಕರಿಸುತ್ತಿದ್ದಾರೆ. ದೊಡ್ಡ ದೊಡ್ಡ ನಗರಗಳಲ್ಲಿ ಇದು ವ್ಯಾಪಕವಾಗಿ ಹರಡುತ್ತಿದೆ. ವಿವಾದದ ಕೇಂದ್ರಬಿಂದುವೇ ಆದರೂ ಕೂಡ ಇದು ಸಮಾಜದಲ್ಲಿ ಹೊಸ ಬದಲಾವಣೆಯನ್ನು ಹುಟ್ಟುಹಾಕಿರುವುದಂತೂ ನಿಜ.
ಭಾರತದಲ್ಲಿ ಲಿವ್ ಇನ್ ಸಂಬಂಧ ಆರಂಭವಾಗಿದ್ದು ಯಾವಾಗ? : 1978 ರಲ್ಲಿ ಲಿವ್ ಇನ್ ಸಂಬಂಧವನ್ನು ಕಾನೂನುಬದ್ಧವಾಗಿ ಅನುಮೋದಿಸಲಾಯಿತು. ಬದ್ರಿ ಪ್ರಸಾದ್ ವರ್ಸಸ್ ಡೈರೆಕ್ಟರ್ ಆಫ್ ಕನ್ಸಾಲಿಡೇಷನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (Supreme Court) ಮೊದಲ ಬಾರಿಗೆ ಲಿವ್ ಇನ್ ಸಂಬಂಧವನ್ನು ಕಾನೂನುಬದ್ಧ ಎಂದು ಪರಿಗಣಿಸಿತು. ನಂತರ 2010 ರಲ್ಲಿ ಮಹಿಳೆಯರ ಸುರಕ್ಷತೆಯನ್ನು ಆಧರಿಸಿ ಲಿವ್ ಇನ್ ಸಂಬಂಧಕ್ಕೆ ಕಾನೂನು ಮಾನ್ಯತೆ ನೀಡಲಾಯಿತು. ಹಾಗೆಯೇ ಈ ಸಂಬಂಧದಲ್ಲಿರುವ ಮಹಿಳೆಯರಿಗೆ ಉಂಟಾಗುವ ಕೌಟುಂಬಿಕ ದೌರ್ಜನ್ಯಕ್ಕೆ (Domestic Violence) ಕಾನೂನಿನಡಿ ರಕ್ಷಣೆ ನೀಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಲಿವ್ ಇನ್ ರಿಲೇಶನ್ಶಿಪ್ ಸಂಬಂಧ ಯಾವಾಗ ಎಲ್ಲಿ ಪ್ರಾರಂಭವಾಯಿತು ಎನ್ನುವುದರ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲ. ಜಗತ್ತು ಎಷ್ಟೇ ಮುಂದುವರೆದರೂ, ಸಮಾಜಿಕವಾಗಿ ಎಷ್ಟೇ ಬದಲಾವಣೆಗಳು ಆದರೂ ಕೂಡ ಲಿವ್ ಇನ್ ಸಂಬಂಧದ ಕುರಿತು ಇನ್ನೂ ಅನೇಕ ಸಮಸ್ಯೆಗಳು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಲಿವ್ ಇನ್ ಸಂಬಂಧದಲ್ಲಿದ್ದ ಅನೇಕ ಮಂದಿಯ ಕೊಲೆ ಹಾಗೂ ಹಿಂಸಾಚಾರದಂತಹ ಪ್ರಕರಣಗಳನ್ನು ನಾವು ದಿನೇ ದಿನೇ ನೋಡುತ್ತಿರುತ್ತೇವೆ. ಇಂತಹ ಘಟನೆಗಳ ನಡುವೆ ಲಿವ್ ಇನ್ ಸಂಬಂಧದ ಕುರಿತು ವಿವಾದಗಳು ಹುಟ್ಟಿಕೊಳ್ಳುವುದು ಸಹಜವಾಗಿದೆ.