Asianet Suvarna News Asianet Suvarna News

ಮಕ್ಕಳಿಗೆ ಸೆಕ್ಸ್ ಪಾಠವೆಂದರೆ ಏನು ಹೇಳಿ ಕೊಡಬೇಕು, ಸ್ವಾತಿ ಹೇಳ್ತಾರೆ ಇಲ್ ಕೇಳಿ

ಮಕ್ಕಳಿಗೆ ಲೈಂಗಿಕ ಶಿಕ್ಷಣ ಹೇಗಿರಬೇಕು, ಎಷ್ಟಿರಬೇಕು? ಈ ಬಗ್ಗೆ ಸ್ವಾತಿ ಜಗದೀಶ್‌ ಹೇಳಿಕೊಡುವ ಸರಳ ತಂತ್ರಗಳನ್ನು ತಿಳಿಯೋಣ ಬನ್ನಿ.

Use these simple sex education guides by Swathi Jagadish for your child
Author
Bengaluru, First Published May 24, 2021, 2:48 PM IST

ಮಕ್ಕಳಿಗೆ ಲೈಂಗಿಕ ಶಿಕ್ಷಣ ಯಾವಾಗಿನಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು, ಮುಜುಗರವಾಗದಂತೆ ಸಂಗತಿಗಳನ್ನು ತಿಳಿಸುವುದು ಹೇಗೆ, ಪ್ರಾಥಮಿಕ ಸಂಗತಿಗಳು ಯಾವುವು, ಪ್ರೌಢ ಸಂಗತಿಗಳು ಯಾವುವು ಅಂತನ್ನುವುದೆಲ್ಲಾ ಆಧುನಿಕ ಅಮ್ಮ- ಅಪ್ಪಂದಿರಿಗೆ ತುಂಬಾ ತಲೆ ತಿನ್ನುವ ವಿಷಯವೇ. ನಮ್ಮ ಮತ್ತು ಹಿಂದಿನ ತಲೆಮಾರಿನಲ್ಲಿ ಆದಂತೆ ಹೇಗೋ ಕಲಿತ್ಕೋತಾರೆ ಬಿಡು ಅನ್ನುವಂತಿಲ್ಲ. ಮಕ್ಕಳು ಆಗಾಗ ನಾನು ಹೇಗೆ ಹುಟ್ಟಿದೆ, ನೀನೂ ಅಪ್ಪನೂ ಜೊತೇಗೆ ಮಲ್ಕೊಂಡ್ರೆ ಇನ್ನೊಂದು ಮಗು ಹುಟ್ಟುತ್ತಾ ಅಂತೆಲ್ಲ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. 

 

 
 
 
 
 
 
 
 
 
 
 
 
 
 
 

A post shared by Swati Jagdish (@mayas_amma)

ಇಲ್ಲೊಬ್ಬರಿದ್ದಾರೆ, ಅವರ ಹೆಸರು ಸ್ವಾತಿ ಜಗದೀಶ್. ಇವರು ಲ್ಯಾಕ್ಟೇಶನ್ ಎಕ್ಸ್‌ಪರ್ಟ್ ಹಾಗೂ ಸೆಕ್ಸ್ ಎಜುಕೇಟರ್ (ಸ್ತನ್ಯಪಾನ ಹಾಗೂ ಲೈಂಗಿಕ ತಜ್ಞೆ). ಇವರದೊಂದು ಇನ್‌ಸ್ಟಗ್ರಾಮ್ ಅಕೌಂಟ್ ಇದೆ. ಅದರಲ್ಲಿ ಇವರು ಸಕ್ರಿಯೆ. ಇವರ ಮಗಳ ಹೆಸರು ಮಾಯಾ. ತನ್ನ ಮಗಳಿಗೆ ಲೈಂಗಿಕ ವಿಷಯಗಳ ಬಗ್ಗೆ ಹೇಗೆ ಅರಿವು ಮೂಡಿಸುತ್ತೇನೆ ಎಂಬುದನ್ನು ಈಕೆ ವಿಡಿಯೋ, ಪಿಪಿಟಿಗಳನ್ನು ಮಾಡಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಮಕ್ಕಳಿಗೆ ಆರಂಭದಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು- ಆದರೆ ಅದು ಹೇಗೆ ಎಂಬ ಬಗ್ಗೆ ತಿಳಿವು ಬೇಕು. ಕೆಲವು ಹೊಸ ತಾಯಂದಿರಿಗೆ ಸ್ತನ್ಯಪಾನದ ಬಗ್ಗೆ ಕೂಡ ಸರಿಯಾದ ಅರಿವು ಇರೋದಿಲ್ಲ. ಆ ಬಗ್ಗೆ ಕೂಡ ಅರಿವು ಮೂಡಿಸುವ ಕೆಲಸವನ್ನು ಸ್ವಾತಿ ಮಾಡುತ್ತಿರುತ್ತಾರೆ. 

ಹಸು-ಎಮ್ಮೆ ಅಥವಾ ಮೇಕೆ, ಮಗುವಿಗೆ ಯಾವ ಹಾಲು ಬೆಸ್ಟ್? ...

ಇವರ ಮಗಳು ಮಾಯಾಗೆ ಈಗಿನ್ನೂ ಆರು ವರ್ಷ. ಅಗಲೇ ಲೈಂಗಿಕ ಸಂಬಂಧಿ ಹಲವು ವಿಚಾರಗಳನ್ನು ವೈಜ್ಞಾನಿಕವಾಗಿ ಕಲಿತಿದ್ದಾಳೆ. ಇತ್ತೀಚೆಗೆ ಆಕೆಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಒಬ್ಬಾಕೆ ಮಹಿಳೆ, ಈಕೆಯನ್ನು 'ಮಾಯು' ಎಂದು ಕರೆದರು. ಅದು ಆಕೆಗೆ ಇಷ್ಟವಾಗಲಿಲ್ಲ. ತನ್ನನ್ನು ಮಾಯು ಎಂದು ತನ್ನ ಕುಟುಂಬದವರು ಮಾತ್ರ ಕರೆಯಬೇಕು ಎಂದೂ, ಬೇರೆಯವರು ಹಾಗೆ ಕರೆದರೆ ನನಗೆ ಇಷ್ಟವಾಗುವುದಿಲ್ಲ ಎಂದೂ ಸ್ಪಷ್ಟವಾಗಿ ಹೇಳಿಬಿಟ್ಟಳು. ಅಂದರೆ ತ್ನ ಬೇಕು- ಬೇಡವನ್ನು ಸ್ಪಷ್ಟವಾಗಿ ತಿಳಿಸುವ ಕೌಶಲವನ್ನು ಆಕೆ ಈಗಲೇ ಕಲಿತಿದ್ದಾಳೆ.
ಮಕ್ಕಳಿಗೆ ಸೆಕ್ಸ್ ಎಜುಕೇಶನ್‌ ನೀಡುವುದು ಹೇಗೆ ಎಂಬ ಬಗ್ಗೆ ಸ್ಟೆಪ್‌ ಬೈ ಸ್ಟೆಪ್‌ ಗೈಡ್‌ಲೈನ್‌ಗಳನ್ನು ಸ್ವಾತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಅದು ಹೀಗಿದೆ:
- ತಮ್ಮ ಜನನಾಂಗಗಳ ಬಗ್ಗೆ ಮುಕ್ತವಾಗಿ ಮಾತಾಡಬಲ್ಲ ಮಕ್ಕಳು, ಲೈಂಗಿಕ ದೌರ್ಜನ್ಯವನ್ನು ಬೇಗನೆ ಅರ್ಥ ಮಾಡಿಕೊಳ್ಳಬಲ್ಲವರು ಮತ್ತು ಅದನ್ನು ವಿರೋಧಿಸಬಲ್ಲವರು ಆಗಿರುತ್ತಾರೆ.
- ನಿಮ್ಮ ಮಕ್ಕಳ ಜೊತೆ ನೀವು ಇದರ ಬಗ್ಗೆ ಮುಕ್ತವಾಗಿ ಹಾಗೂ ವೈಜ್ಞಾನಿಕವಾಗಿ ಮಾತನಾಡಬಲ್ಲಿರಾದರೆ, ನಿಮ್ಮ ಮತ್ತು ಅವರ ಸಂಬಂಧ ಇನ್ನಷ್ಟು ಆಪ್ತವಾಗಿರುತ್ತದೆ.

#Feelfree: ಹಸ್ತಮೈಥುನ ಬಿಟ್ಟ ನಂತರ ದೇಹದಲ್ಲಿ ಏನಾಗುತ್ತೆ ಬದಲಾವಣೆ? ...

- ಲೈಂಗಿಕ ಶಿಕ್ಷಣದ ಆರಂಭಿಕ ಹಂತವೆಂದರೆ, ಗುಪ್ತಾಂಗಗಳ ಸರಿಯಾದ ಹೆಸರನ್ನು ಮಕ್ಕಳಿಗೆ ತಿಳಿಸಿಕೊಡುವುದು. ತಲೆ, ಮೂಗು, ಬಾಯಿ ಎಂದೆಲ್ಲ ಹೇಳುವಂತೆ ಮೊಲೆ, ಶಿಶ್ನ, ಯೋನಿ ಎಂಬುದನ್ನೂ ಅಥವಾ ಇಂಗ್ಲಿಷ್‌ನಲ್ಲಿ ಇವುಗಳಿಗೆ ಏನನ್ನುತ್ತಾರೆ ಎಂಬುದನ್ನೂ ಸಹಜವಾಗಿ ಉಚ್ಚರಿಸಲು ಹೇಳಿಕೊಡಬೇಕು. ಮಗುವಿಗೆ ಸ್ನಾನ ಮಾಡಸುವಾಗ, ಕ್ಲೀನ್ ಮಾಡುವಾಗ ಇದನ್ನು ಹೇಳಿಕೊಡಬಹುದು.
- ಈ ಅಂಗಗಳ ಜೊತೆಗೆ ನಾಚಿಕೆಯನ್ನು ಜೋಡಿಸಬೇಡಿ. ಹಾಗೇ ಮಕ್ಕಳು ಈ ಅಂಗಗಳ ಹೆಸರನ್ನು ಉಚ್ಚರಿಸುವಾಗ ಮಗು ನಾಚಿಕೆಗೊಳಗಾಗುವಂತೆ ವರ್ತಿಸಬೇಡಿ, ಬೆದರಿಸಬೇಡಿ, ಸುಮ್ಮನಿರಿಸಬೇಡಿ. 
- ಮಗು ಲಿಂಗ ಸಂಬಂಧಿತ ಪ್ರಶ್ನೆಗಳನ್ನು ಕೇಳುವುದನ್ನು ಉತ್ತೇಜಿಸಿ. ನಿಮಗೆ ತಿಳಿದಿದ್ದರೆ ಸರಿಯಾದ ವೈಜ್ಞಾನಿಕ ಉತ್ತರಗಳನ್ನು ಕೊಡಿ. ಮಗುವಿನ ಆ ಪ್ರಾಯಕ್ಕೆ ಅದು ಅರ್ಥವಾಗದು ಎಂದಿದ್ದರೆ, ''ನೀನು ಪ್ರಶ್ನೆ ಕೇಳುವುದನ್ನು ನಾನು ಪ್ರೋತ್ಸಾಹಿಸುತ್ತೇನೆ. ಆದರೆ ಈ ಪ್ರಶ್ನೆಗೆ ನನಗೆ ಉತ್ತರ ತಿಳಿದಿಲ್ಲ. ತಿಳಿದುಕೊಂಡು ಹೇಳುತ್ತೇನೆ. ಅಥವಾ ಈ ಪ್ರಶ್ನೆಗೆ ಉತ್ತರ ಅರ್ಥವಾಗಲು ನೀನು ಇನ್ನು ಸ್ವಲ್ಪ ದೊಡ್ಡವನಾಗಬೇಕು'' ಎಂಬಂಥ ಉತ್ತರಗಳನ್ನು ಕೊಡಿ. 

Use these simple sex education guides by Swathi Jagadish for your child


- ಈ ಪ್ರಶ್ನೆಗಳನ್ನು ಸಹಜವಾಗಿ ಉತ್ತರಿಸಿ. ಅವುಗಳನ್ನು ಉತ್ಪ್ರೇಕ್ಷಿಸಬೇಡಿ, ಉಡಾಫೆ ಮಾಡಬೇಡಿ, ನಿರುತ್ತೇಜಿಸಬೇಡಿ, ಅಥವಾ ಇದನ್ನೆಲ್ಲ ಸಾರ್ವಜನಿಕವಾಗಿ ಕೇಳಬಾರದು ಎಂಬಂತೆ ಹಶ್‌ ಮಾಡಬೇಡಿ. ನೀವು ಅದನ್ನು ಬಚ್ಚಿಡಲು ಪ್ರಯತ್ನಿಸಿದರೆ ಮಕ್ಕಳು ನಿಮ್ಮಿಂದಾಚೆ, ಹೊರಗಡೆ ಎಲ್ಲಾದರೂ ಅದಕ್ಕೆ ಉತ್ತರ ಹುಡುಕಲು ಆರಂಭಿಸುತ್ತಾರೆ. 
- ಮಗುವಿನ ಪ್ರಾಯಕ್ಕೆ ತಕ್ಕ ಉತ್ತರಗಳನ್ನು ಕೊಡಿ. ಉದಾಹರಣೆಗೆ, ಮಗು, ತಾಯಿಯ ಬಳಿ, ಬಾತ್‌ರೂಮಿಗೆ ಪ್ಯಾಡ್ ಯಾಕೆ ತಗೊಂಡು ಹೋಗ್ತಿದೀಯ ಅಂತ ಕೇಳಿದರೆ, ಆಕೆಗೆ ನಿಮ್ಮ ಮುಟ್ಟು- ಪ್ರೆಗ್ನೆನ್ಸಿ- ಸೆಕ್ಸ್ ಹೀಗೆ ಎಲ್ಲವನ್ನೂ ವಿವರಿಸಬೇಕಿಲ್ಲ. ಎಷ್ಟು ಪ್ರಶ್ನೆಯೋ ಅಷ್ಟೇ ಉತ್ತರವಿದ್ದರೆ ಸಾಕು. ಹೆಚ್ಚೂ ಬೇಡ, ಕಡಿಮೆಯೂ ಬೇಡ. ನಿನ್ನ ಅನುಮಾನ ಪರಿಹಾರವಾಯಿತೇ ಎಂಬುದನ್ನು ಮಾತ್ರ ಖಚಿತಪಡಿಸಿಕೊಳ್ಳಿ.
- ಮಗುವಿಗೆ ಕಲಿಸುವುದರ ಮೊದಲು ನಿಮಗೆ ಲೈಂಗಿಕ ಜ್ಞಾನ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ನೀವು ಮೊದಲು ಸರಿಯಾದ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರಗಳನ್ನು  ಪಡೆಯುವುದನ್ನು ಕಲಿತುಕೊಳ್ಳಿ. ಅ ಉತ್ತರಗಳು ವೈಜ್ಞಾನಿಕವಾಗಿರಲಿ. 

ಕೊರೋನಾ ಲಸಿಕೆ ಹಾಕಿಸಿಕೊಂಡ ಎಷ್ಟು ದಿನದ ನಂತರ ಸೆಕ್ಸ್ ಮಾಡಬಹುದು ? ...
 

 

Follow Us:
Download App:
  • android
  • ios