ಕೊರೋನಾ ಲಸಿಕೆ ಹಾಕಿಸಿಕೊಂಡ ಎಷ್ಟು ದಿನದ ನಂತರ ಸೆಕ್ಸ್ ಮಾಡಬಹುದು ?

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಎಷ್ಟು ದಿನಗಳ ನಂತರ ಸೆಕ್ಸ್ ಮಾಡಬಹುದು? ಏನು ಎಚ್ಚರಿಕೆ ತೆಗೆದುಕೊಳ್ಳಬೇಕು?

Can you have sex after getting Covid vaccine

ಈಗ ಎಲ್ಲರೂ ಕೋವಿಡ್‌ಗೆ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ದಿನ, ಹಾಕಿಸಿಕೊಂಡ ದಿನ ಅಥವಾ ಹಾಕಿಸಿಕೊಂಡ ಕೆಲವು ದಿನಗಳಲ್ಲಿ ಸೆಕ್ಸ್ ಮಾಡಬಹುದೇ ಎಂಬುದು ಎಲ್ಲರಲ್ಲಿರುವ ಸಹಜ ಕುತೂಹಲ. ಇದಕ್ಕೆ ತಜ್ಞರು ಏನು ಹೇಳುತ್ತಾರೆ?

ಕೋವಿಡ್‌ಗೆ ಸಂಬಂಧಿಸಿದ ವ್ಯಾಕ್ಸಿನ್‌ಗಳ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುವಾಗ, ವ್ಯಾಕ್ಸಿನ್‌ ಹಾಕಿಸಿಕೊಳ್ಳುವ ಪುರುಷರಿಗೂ ಮಹಿಳೆಯರಿಗೂ ಕೆಲವು ಸೂಚನೆಗಳನ್ನು ನೀಡಲಾಗಿದೆ. ಅದು ಹೀಗಿದೆ:

- ವ್ಯಾಕ್ಸಿನ್ ಹಾಕಿಸಿಕೊಂಡ ನಂತರ ಮೂರು ತಿಂಗಳವರೆಗೆ ಸಂಭೋಗ ನಡೆಸುವಾಗ ಕಾಂಡೋಮ್‌ನಂತಹ ಕಾಂಟ್ರಸೆಪ್ಟಿವ್‌ಗಳನ್ನು ಉಪಯೋಗಿಸಬೇಕು. ಸಾಧ್ಯವಾದರೆ ಅಷ್ಟು ಕಾಲ ಪ್ರಜನನ ಪ್ರಕ್ರಿಯೆಯನ್ನು (ಮಗುವಿಗಾಗಿ ಸೆಕ್ಸ್) ಮುಂದೂಡಬೇಕು. 
- ಹಾಗೆಯೇ ವ್ಯಾಕ್ಸಿನ್ ಮೊದಲ ಡೋಸ್‌ನಿಂದ ಹಿಡಿದು, ಎರಡನೇ ಡೋಸ್‌ನ ಬಳಿಕ ಮೂರು ತಿಂಗಳವರೆಗೆ ವೀರ್ಯ ದಾನ ಮಾಡಬಾರದು.   

ಲಸಿಕೆ ಹಾಕಿಸಿದ ನಂತರ ಜ್ವರ ಬಂದರೆ ನೀವು ಸ್ಟ್ರಾಂಗ್ ಅಂತೇನೂ ಅಲ್ಲ! ...

ಇದು ಎಲ್ಲೆಡೆ ಚರ್ಚೆಯನ್ನು ಹುಟ್ಟುಹಾಕಿದೆ. ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗವಹಿಸಿದವರಿಗೆ ಈ ನಿಯಮ ಅನ್ವಯಿಸುವುದಾದರೆ, ಇತರರಿಗೂ ಅನ್ವಯಿಸಬೇಕಲ್ಲವೇ? ಈ ನಿಯಮ ಹಾಕಲು ವೈಜ್ಞಾನಿಕ ಕಾರಣ ಏನಾದರೂ ಇರಲೇಬೇಕಲ್ಲವೇ? ಈ ಕುರಿತು ಪ್ರಶ್ನಿಸಲಾಗಿ ತಜ್ಞರು ನೀಡಿದ ಅಭಿಪ್ರಾಯಗಳು ಹೀಗಿವೆ.

ವ್ಯಾಕ್ಸಿನ್‌ ಹಾಕಿಸಿಕೊಂಡಾಗ ದೇಹದ ಬಿಳಿ ರಕ್ತ ಕಣಗಳು ಚುರುಕಾಗುತ್ತವೆ. ವ್ಯಾಕ್ಸಿನ್ ಒಳಬಂದ ಭಾಗಕ್ಕೆ ಧಾವಿಸಿ ಬಂದು ಅಲ್ಲಿರುವ ಪರಕೀಯ ಕಣಗಳ ಮೇಲೆ ಸಮರ ಹೂಡುತ್ತವೆ. ಇದರಿಂದಾಗಿ ನಿಮ್ಮ ದೇಹದ ಪ್ರತಿರೋಧ ಶಕ್ತಿಯೆಲ್ಲ ಅತ್ತ ಕಡೆಯೇ ಕೇಂದ್ರೀಕರಿಸಿ, ದೇಹದ ಎನರ್ಜಿಯೆಲ್ಲ ಆ ಕಡೆಗೇ ಇರುತ್ತದೆ. ಇದರಿಂದಾಗಿ, ಸೆಕ್ಸ್‌ನಲ್ಲಿ ಭಾಗವಹಿಸಲು ಬೇಕಾದ ಉತ್ಸಾಹ, ಉದ್ರೇಕ ಮೂಡದು. ಇದು ವ್ಯಾಕ್ಸಿನ್ ಹಾಕಿಸಿಕೊಂಡ ದಿನ, ಹಾಗೂ ಮತ್ತಿನ ಒಂದೆರಡು ದಿನಗಳ ಸಂಗತಿ. ಆ ದಿನಗಳಲ್ಲಿ ವಾಸ್ತವವಾಗಿಯೂ ನಿಮಗೆ ಸಂಭೋಗ ನಡೆಸಲು ಸಾಧ್ಯವಾಗದು. ಯಾಕೆಂದರೆ ಕೆಲವರಿಗೆ ಆ ಸಮಯದಲ್ಲಿ ಮೈಕೈ ನೋವು, ಸಣ್ಣ ಮಟ್ಟಿಗೆ ಜ್ವರವೂ ಬರುತ್ತಿರುತ್ತದೆ.

ಹಿರಿಯರಲ್ಲಿ ಅಪಾಯಕಾರಿ ಕ್ವಾರಂಟೈನ್ ಬ್ಲೂಸ್: ಪಾರಾಗೋದು ಹೇಗೆ? ...

ಇನ್ನು ವ್ಯಾಕ್ಸಿನ್‌ ಹಾಕಿಸಿಕೊಂಡ ಎರಡು ವಾರಗಳ ಬಳಿಕ ನಿಮ್ಮ ದೇಹದಲ್ಲಿ ಟಿ ಸೆಲ್ ಮತ್ತು ಬಿ ಸೆಲ್ ಎಂದು ಕರೆಯಲ್ಪಡುವ ನೆನಪಿನ ಕೋಶಗಳು ಸೃಷ್ಟಿಯಾಗಿ, ಕೊರೊನಾ ವಿರುದ್ಧ ಭದ್ರ ಕೋಟೆಯನ್ನು ಕಟ್ಟಿಕೊಳ್ಳಲು ಆರಂಭಿಸುತ್ತವೆ. ವ್ಯಾಕ್ಸಿನ್‌ನಿಂದ ಪ್ರೇರೇಪಿತವಾದ ಈ ಪ್ರಕ್ರಿಯೆ ಎರಡರಿಂದ ಮೂರು ತಿಂಗಳವರೆಗೂ ಇರುತ್ತದೆ. ನೇರವಾದ ಸಂಭೋಗದಲ್ಲಿ, ಪುರುಷನ ದೇಹದ ವೀರ್ಯ, ವೀರ್ಯದ್ರವ ಮಹಿಳೆಯ ದೇಹಕ್ಕೆ ಸೇರುತ್ತದೆ.

ಪುರುಷನ ದೇಹದಲ್ಲಿ ಸೃಷ್ಟಿಯಾಗಿರುವ ಪ್ರತಿರೋಧದ ಕಣಗಳು ಮಹಿಳೆಯ ದೇಹ ಸೇರಬಹುದು, ಅಥವಾ ಕೊರೊನಾ ವೈರಸ್‌ನ ಕಣಗಳು ಮಹಿಳೆಯ ದೇಹ ಸೇರಬಹುದು. ಇದರಿಂದ ಮುಂದೆ ಹುಟ್ಟುವ ಮಗುವಿನಲ್ಲಿ ಯಾವುದಾದರೂ ನ್ಯೂನತೆಗಳು ಸೃಷ್ಟಿಯಾಗಲೂಬಹುದು- ಹೀಗಾಗಿ ಯಾವುದೇ ಸಂಭಾವ್ಯ ಅಪಾಯ ತಪ್ಪಿಸಲು ಕಾಂಡೊಮ್ ಧರಿಸಿಯೇ ಸಂಭೋಗ ನಡೆಸಲು ತಜ್ಞರು ಸಲಹೆ ನೀಡಿದ್ದಾರೆ. ಅಂದರೆ ಅಷ್ಟು ಕಾಲ, ಎಂದರೆ ಮೂರು ತಿಂಗಳು ಮಗು ಹುಟ್ಟಿಸುವ ಚಿಂತನೆ ಮುಂದೂಡಿ ಎಂದರ್ಥ.

ಬೆತ್ತಲೆಯಾದರೆ ಇಮ್ಯೂನಿಟಿ ಪವರ್ ಹೆಚ್ಚುತ್ತಾ ? ...

ಹಾಗಿದ್ದರೆ, ಪ್ರಜನನನ ಉದ್ದೇಶ ಇಲ್ಲದೆ ಇದ್ದಾಗ, ಪುರುಷ ಮತ್ತು ಮಹಿಳೆ ಇಬ್ಬರೂ ಸಿಂಗಲ್ ಡೋಸ್ ಅಥವಾ ಡಬಲ್ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೆ, ಆಗ ಮುಕ್ತವಾಗಿ ಸಂಭೋಗ ನಡೆಸಬಹುದೇ? ವ್ಯಾಕ್ಸಿನ್ ಹಾಕಿಸಿಕೊಂಡ ಒಂದೆರಡು ದಿನಗಳಲ್ಲಿ ಮೈಯಲ್ಲಿ ಬಿಳಿರಕ್ತಕಣಗಳ ತೀವ್ರ ಚಟುವಟಿಕೆ ಕಡಿಮೆ ಆಗುವವರೆಗೆ ಸೆಕ್ಸ್ ನಡೆಸಬಾರದು. ಆ ಬಳಿಕ ಕಾಂಡೋಮ್ ಬಳಸಿ ನಡೆಸಬಹುದು. ಅಥವಾ ಮಹಿಳೆ ಕಾಪರ್ ಟಿಯಂಥ ಗರ್ಭಧಾರಣೆ ತಡೆ ಕ್ರಮ ಬಳಸುತ್ತಿದ್ದರೆ, ಆಗಲೂ ಸುರಕ್ಷಿತ ಸೆಕ್ಸ್ ನಡೆಸಲು ಯಾವುದೇ ತಡೆಯಿಲ್ಲ.

ಇದರ ಒಟ್ಟಾರೆ ಅರ್ಥ ಇಷ್ಟೆ- ವ್ಯಾಕ್ಸಿನ್ ತೆಗೆದುಕೊಂಡ ಮೂರು ತಿಂಗಳ ಕಾಲ, ಮಗು ಬೇಕೆಂಬ ಚಿಂತನೆಯಿಂದ ಸೆಕ್ಸ್ ನಡೆಸಬೇಡಿ. ಕಾಂಟ್ರಸೆಪ್ಟಿವ್ ಬಳಸಿ ಸಂಭೋಗ ನಡೆಸಿ ಸಂಭೋಗಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಸರಕಾರ ಈ ಬಗ್ಗೆ ಏನನ್ನೂ ಹೇಳಿಲ್ಲ. ಹಾಗೆಯೇ ಸರಕಾರ ನೇಮಿಸಿರುವ ತಜ್ಞರ ಸಮಿತಿಯಾಗಲೀ, ಅಖಿಲ ಭಾರತ ವೈದ್ಯಕೀಯ ಸಂಸ್ಥೆಯಾಗಲೀ, ಅಂತಾರಾಷ್ಟ್ರೀಯ ವೈದ್ಯಕೀಯ ಸಂಘಟನೆಗಳಾಗಲೀ, ವಿಶ್ವ ಆರೋಗ್ಯ ಸಂಸ್ಥೆಯಾಗಲೀ ಏನೂ ಹೇಳಿಲ್ಲ. ಮೇಲಿನದು ತಜ್ಞರ ಮಾತು.

Latest Videos
Follow Us:
Download App:
  • android
  • ios