ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆರಡು ವರ್ಷ, ಅವಿವಾಹಿತ. ಹದಿನೆಂಟನೇ ವಯಸ್ಸಿನಿಂದಲೂ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಆದರೆ ಇತ್ತೀಚೆಗೆ ಅದರ ಬಗ್ಗೆ ಜಿಗುಪ್ಸೆ ಬಂತು. ಏಕಾಏಕಿ ಬಿಟ್ಟುಬಿಟ್ಟೆ. ಬಿಟ್ಟು ಎರಡು ತಿಂಗಳಾಗಿದೆ. ಈ ನಡುವೆ ಆಗಾಗ ರಾತ್ರಿಯಲ್ಲಿ ಸ್ವಪ್ನಸ್ಖಲನ ಆಗುತ್ತದೆ. ಯಾರೊಡನೆಯೋ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಂತೆ ಕನಸುಗಳು ಬೀಳುತ್ತವೆ. ಇದು ಸಾಮಾನ್ಯವೇ? ಇದನ್ನು ನಿವಾರಿಸಿಕೊಳ್ಳಲು ಮತ್ತೆ ಹಸ್ತಮೈಥುನ ಶುರು ಮಾಡಬೇಕೇ ಅಥವಾ ಬಿಟ್ಟು ಬಿಡಬಹುದೇ? ಇದರಿಂದ ಏನಾದರೂ ಸಮಸ್ಯೆ ಇದೆಯೇ?

#Feelfree: ಕೊರೋನಾ ಕಾಲದ ಎಫೆಕ್ಟ್‌, ಸೆಕ್ಸ್ ಅಂದರೆ ಭಯ! ...

ಉತ್ತರ: ಹಸ್ತಮೈಥುನದ ಬಗ್ಗೆ ನಿಮಗೆ ಯಾಕೆ ಜಿಗುಪ್ಸೆ ಬಂತು ಎಂದು ನೀವು ತಿಳಿಸಿಲ್ಲ. ಅದೇನೇ ಇದ್ದರೂ, ಹಸ್ತಮೈಥುನ ಕೆಟ್ಟ ಅಭ್ಯಾಸವೇನೂ ಅಲ್ಲ. ಪ್ರತಿಯೊಂದು ಜೀವಿಗೂ ಲೈಂಗಿಕ ಅನುಭವ ಎಂಬುದು ದೇಹದ ಅವಶ್ಯಕತೆ. ಹಸಿವಾದಾಗ ಆಹಾರ, ಸುಸ್ತಾದಾಗ ನಿದ್ರೆಯಂತೆಯೇ ಅದು ಕೂಡ. ಯವ್ವನದಲ್ಲಿ ಎಲ್ಲರೂ ಹಸ್ತಮೈಥುನ ಮಾಡಿಕೊಳ್ಳುತ್ತಾರೆ. ಒಂದು ಜೋಕ್ ಇದೆ. ಶೇಕಡಾ ತೊಂಬತ್ತೊಂಬತ್ತು ಮಂದಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆ, ಮತ್ತು ಶೇ.ಒಂದು ಮಂದಿ ತಾನು ಅದನ್ನು ಮಾಡಿಕೊಳ್ಳುವುದಿಲ್ಲ ಎಂದು ಸುಳ್ಳು ಹೇಳುತ್ತಾರೆ ಅಂತ. ಒಂಟಿಯಾಗಿರುವ, ಮದುವೆಯಾಗದ, ಆದರೆ ಸೆಕ್ಸ್ ಸುಖ ಅಪೇಕ್ಷಿಸುವ ವಯಸ್ಕರಿಗೆ ಹಸ್ತಮೈಥುನ ಎಂಬುದು ಒಂದು ವರವೇ ಸರಿ. ಆದ್ದರಿಂದ ಅದರ ಬಗ್ಗೆ ಏನಾದರೂ ಕೆಟ್ಟ ಅಭಿಪ್ರಾಯಗಳಿದ್ದರೆ ಬಿಟ್ಟು ಬಿಡಿ.  

ಇನ್ನು, ಹಸ್ತಮೈಥುನವನ್ನು ನಾನು ಬಿಟ್ಟಿದ್ದೇನೆ ಎಂದು ನೀವು ಹೇಳುತ್ತಿದ್ದೀರಿ. ಅದನ್ನು ಪೂರ್ತಿ ಬಿಟ್ಟುಬಿಡಬೇಕು ಎಂಬುದು ನಿಮ್ಮ ನಿಲುವಾಗಿದ್ದರೆ ಅದೂ ಓಕೆ, ನಾನು ಅದನ್ನು ಗೌರವಿಸುತ್ತೇನೆ. ಅದನ್ನು ಬಿಟ್ಟು ಕೂಡ ಬದುಕಬಹುದು. ಎಷ್ಟೋ ಬ್ರಹ್ಮಚಾರಿಗಳು ಜೀವನಪೂರ್ತಿ ಲೈಂಗಿಕ ಅನುಭವ ಪಡೆಯದೆ ಇದ್ದುಬಿಡುವುದು ಇದೆ. ಆದರೆ ಅವರಲ್ಲೂ ವೀರ್ಯ ಸೃಷ್ಟಿಯಾಗುತ್ತದಲ್ಲ? ಅದು ಎಲ್ಲಾದರೂ ಒಂದು ಕಡೆ ಹೊರಹೋಗಲೇಬೇಕು. ಅದಕ್ಕಾಗಿ ಅದು ಆರಿಸಿಕೊಳ್ಳುವ ದಾರಿಯೇ ಸ್ವಪ್ನಸ್ಖಲನ. ಮನಸ್ಸು ಈ ವೀರ್ಯ ಹೊರಹೋಗಲು ಸನ್ನಿವೇಶವನ್ನು ಕಲ್ಪಿಸುತ್ತದೆ. ರಾತ್ರಿ ನೀವು ನಿದ್ರೆ ಹೋದಾಗ, ಲೈಂಗಿಕ ಕ್ರಿಯೆಯ ಕಡೆಗೆ ನಿಮ್ಮ ಮನಸ್ಸನ್ನು ಸೆಳೆಯುವ ಕನಸ್ಸು ಬೀಳುವಂತೆ ಪ್ರಜ್ಞೆಯು ಪ್ರಚೋದಿಸುತ್ತದೆ. ಹೀಗೆ ಅರೆಪ್ರಜ್ಞಾವಸ್ಥೆಯಲ್ಲಿ ಬೀಳುವ ರತಿಕ್ರೀಡೆಯ ಕನಸಿನಿಂದಾಗಿ ನಿಮ್ಮ ಶಿಶ್ನ ನಿಮಗೆ ಅರಿವೇ ಇಲ್ಲದಂತೆ ಉದ್ರೇಕಗೊಳ್ಳುತ್ತದೆ ಹಾಗೂ ಸ್ಖಲನ ಉಂಟಾಗುತ್ತದೆ. ಇದೇ ಸ್ವಪ್ನಸ್ಖಲನ. 

#Feelfree: ವೀರ್ಯ ಹೊಟ್ಟೆಗೆ ಹೋದರೆ ಗರ್ಭಿಣಿಯಾಗಬಹುದೇ? ...

ಹೀಗಾಗಿ, ನೀವು ಹಸ್ತಮೈಥುನ ಮಾಡದೇ ಇದ್ದರೂ ನಿಮಗರಿವಿಲ್ಲದಂತೆ ಲೈಂಗಿಕ ಸುಖವನ್ನು ಪಡೆಯುವ ವಿಧಾನವನ್ನು ದೇಹ ಸೃಷ್ಟಿಸಿಕೊಳ್ಳುತ್ತದೆ. ಇದರ ಬಗ್ಗೆ ಸಂಕೋಚ ಬೇಡ. ಸ್ವಪ್ನಸ್ಖಲನದ ಮುಜುಗರ ಬೇಡ ಎಂದಾದರೆ, ನಿಗದಿತ ಅವಧಿಯಲ್ಲಿ ಹಸ್ತಮೈಥುನ ಮಾಡಿಕೊಂಡು ಪಾರಾಗಬಹುದು. 


ಆದರೆ ಹಸ್ತಮೈಥುನದಿಂದ ಕೊಂಚ ಕಾಲದ ಬಿಡುಗಡೆ ಪಡೆಯುವುದೂ ಒಳ್ಳೆಯದೇ. ಹಸ್ತಮೈಥುನದ ಸಂದರ್ಭದಲ್ಲಿ ದೇಹದಲ್ಲಿ ಸೆರೊಟೋನಿನ್‌ ಹಾಗೂ ಡೋಪಮೈನ್ ಎಂಬ ಫೀಲ್ ಗುಡ್ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ನಿಮ್ಮ ಮೆದುಳಿಗೆ ಸುಖದ ಪ್ರಚೋದನೆ ಹಾಗೂ ದೇಹಕ್ಕೆ ಸುಖದ ಅನುಭವ ಆಗುತ್ತದೆ. ಈ ಹಾರ್ಮೋನ್‌ಗಳು ನಿರಂತರವಾಗಿ ಸ್ರವಿಸುತ್ತಿದ್ದರೆ, ಆಗ ಮೆದುಳು ಇವುಗಳಿಗೆ ಸ್ಪಂದಿಸುವ ತೀವ್ರತೆಯೇ ಕಡಿಮೆ ಆಗಿಬಿಡಬಹುದು. ಹೀಗಾದಾಗ ಹಸ್ತ ಮೈಥುನ ಕೂಡ ಒಂದು ರೊಟೀನ್ ಕ್ರಿಯೆಯೇ ಆಗಿಬಿಟ್ಟು, ತನ್ನ ಮಿಡಿತವನ್ನು ಕಳೆದುಕೊಳ್ಳುತ್ತದೆ. ಇದಕ್ಕೇ ಹಸ್ತಮೈಥುನ ನಿತ್ಯದ ಚಟವಾಗಬಾರದು, ಆಗಾಗ ಮಾಡುತ್ತಿದ್ದರೆ ತೊಂದರೆಯಿಲ್ಲ ಎಂದು ತಜ್ಞರು ಹೇಳುವುದು. ಒಂದು ಬಿಡುವಿನ ನಂತರ ಮತ್ತೆ ಹಸ್ತಮೈಥುನ ಮಾಡಿಕೊಂಡರೆ, ಆಗ ಮೆದುಳು ಕೂಡ ತನಗೆ ಅಗತ್ಯವಾಗಿದ್ದ ಈ ಹಾರ್ಮೋನ್ ಬಿಡುಗಡೆಯನ್ನು ಖುಷಿಯಿಂದ ಮತ್ತೆ ಸ್ವೀಕರಿಸುತ್ತದೆ. ಇದು ಒಳ್ಳೆಯ ಮಾನಸಿಕ ಆರೋಗ್ಯಕ್ಕೂ ಮೂಲ. 

#Feelfree: ನನ್ನ ಗಂಡ ಸಂಭೋಗದ ಉತ್ತುಂಗ ತಲುಪುವುದೇ ಇಲ್ಲ! ...