11 ವರ್ಷದ ವಿದ್ಯಾರ್ಥಿ ಜೊತೆ ಶಿಕ್ಷಕಿಯ ಲವ್ವಿಡವ್ವಿ..ಎಲ್ಲೆಲ್ಲೋ ಟಚ್ಚಿಂಗ್..ರಾತ್ರಿಯೆಲ್ಲಾ ಟೆಕ್ಸ್ಟಿಂಗ್!
ಗುರು ದೇವೋ ಭವ ಅಂತಾರೆ..ಆದ್ರೆ ಇಲ್ಲೊಬ್ಬ ಶಿಕ್ಷಕಿ ಆ ಹೆಸರಿಗೇ ಕಳಂಕ ತಂದಿದ್ದಾಳೆ. ತನ್ನ 11 ವರ್ಷದ ವಿದ್ಯಾರ್ಥಿಯೊಂದಿಗೇ ಸಂಬಂಧವಿಟ್ಟುಕೊಂಡಿದ್ದಾಳೆ. ರಾತ್ರಿಯೆಲ್ಲಾ ಸ್ಟೂಡೆಂಟ್‌ಗೆ ಟೆಕ್ಸ್ಟ್ ಮಾಡ್ತಾಳಂತೆ, ಎಲ್ಲೆಲ್ಲೋ ಮುಟ್ತಾಳಂತೆ!
ಗುರು ದೇವೋ ಭವ ಅಂತಾರೆ..ಆದ್ರೆ ವಿಸ್ಕಾನ್ಸಿನ್‌ನ ಶಿಕ್ಷಕಿರೊಬ್ಬರು ತನ್ನ 11 ವರ್ಷದ ವಿದ್ಯಾರ್ಥಿಗಳೊಂದಿಗೆ ಅನುಚಿತ ಸಂಬಂಧವನ್ನು ಇಟ್ಟುಕೊಂಡ ಆರೋಪಕ್ಕೆ ಗುರಿಯಾಗಿದ್ದಾರೆ. ಸೇಂಟ್ ಪಾಲ್ ನಿವಾಸಿ, 24 ವರ್ಷದ ಮ್ಯಾಡಿಸನ್ ಬರ್ಗ್‌ಮನ್ ಈಗ 13 ವರ್ಷದೊಳಗಿನ ವಿದ್ಯಾರ್ಥಿ ಸೇರಿದಂತೆ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಸೇಂಟ್ ಕ್ರೊಯಿಕ್ಸ್ ಕೌಂಟಿಯಲ್ಲಿ ಸಲ್ಲಿಸಲಾದ ದೂರಿನಲ್ಲಿ, ಹಡ್ಸನ್‌ನಲ್ಲಿರುವ ರಿವರ್ ಕ್ರೆಸ್ಟ್ ಎಲಿಮೆಂಟರಿ ಸ್ಕೂಲ್‌ನಲ್ಲಿನ ಶಿಕ್ಷಕರ ವರ್ತನೆಯ ಬಗ್ಗೆ ಪೊಲೀಸರು ಎಚ್ಚರಿಸಿದ್ದಾರೆ ಎಂದು ಬಹಿರಂಗಪಡಿಸಿದೆ. ಬರ್ಗ್‌ಮನ್ ಮತ್ತು 5 ನೇ ತರಗತಿಯ ವಿದ್ಯಾರ್ಥಿಯ ನಡುವಿನ ಅನುಚಿತ ನಡವಳಿಕೆಯನ್ನು ವರದಿಯು ನಿರ್ದಿಷ್ಟವಾಗಿ ಉಲ್ಲೇಖಿಸಿದೆ. ಇಬ್ಬರ ನಡುವಿನ ಮೆಸೇಜ್‌ನ ಸ್ಕ್ರೀನ್‌ಶಾಟ್‌ನ್ನು ಸಂತ್ರಸ್ತರ ಪೋಷಕರು ಕಂಡುಕೊಂಡಿದ್ದಾರೆ.
ತಡವಾಗಿ ಬಂದರೆಂದು ಶಿಕ್ಷಕಿಗೆ ಹೊಡೆದ ಪ್ರಾಂಶುಪಾಲೆ; ವಿಡಿಯೋ ವೈರಲ್
ಶಿಕ್ಷಕಿ ಮಗುವಿಗೆ ದಿನನಿತ್ಯ ಕೆಟ್ಟ ಸಂದೇಶವನ್ನು ಕಳುಹಿಸುತ್ತಿದ್ದಳು. ಅವನನ್ನು ಸ್ಪರ್ಶಿಸುವುದನ್ನು, ಮುದ್ದಾಡುವುದನ್ನು ಆನಂದಿಸುತ್ತಿದ್ದಳು ಎಂದು ವಿದ್ಯಾರ್ಥಿ ತಿಳಿಸಿದ್ದಾನೆ. ಪೊಲೀಸ್ ವರದಿಗಳ ಪ್ರಕಾರ ಈಕೆ ಊಟದ ವಿರಾಮದ ಸಮಯದಲ್ಲಿ ಅಥವಾ ಶಾಲೆಯ ಸಮಯದ ನಂತರ ಹೀಗೆಲ್ಲಾ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಬರ್ಗ್‌ಮನ್ ಮಗುವಿನ ಜೊತೆಗಿನ ದೈಹಿಕ ಸಂವಹನಗಳನ್ನು ವಿವರಿಸುವ ಹಲವಾರು ಕೈಬರಹದ ಟಿಪ್ಪಣಿ ಪೊಲೀಸರಿಗೆ ಲಭಿಸಿದೆ.. ಡಿಸೆಂಬರ್‌ನಲ್ಲಿ ಅಫ್ಟನ್ ಆಲ್ಪ್ಸ್‌ಗೆ ಚಳಿಗಾಲದ ವಿರಾಮದ ಪ್ರವಾಸದ ಸಮಯದಲ್ಲಿ ಮಗುವಿನ ಫೋನ್ ಸಂಖ್ಯೆಯನ್ನು ಶಿಕ್ಷಕಿ ಪಡೆದುಕೊಂಡಿದ್ದು, ಸಂಬಂಧದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಕೆ ಇತ್ತೀಚಿಗೆ ತನ್ನ ಬಹುಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಜುಲೈನಲ್ಲಿ ಮದುವೆಯಾಗಲು ಸಿದ್ಧಳಾಗಿದ್ದಳು.
ಈ ಬಾಲಿವುಡ್‌ನ ಟಾಪ್ ನಟಿ ಮೊದಲು ಪ್ರಿಸ್ಕೂಲ್ ಟೀಚರ್ ಆಗಿ ಮಕ್ಕಳ ಡೈಪರ್ ಬದಲಿಸುತ್ತಿದ್ರಂತೆ!
ಶಾಲೆಯ ಪ್ರಾಂಶುಪಾಲರಾದ ಕಿಂಬರ್ಲಿ ಓಸ್ಟರ್‌ಹ್ಯೂಸ್ ಅವರು ಪೋಷಕರಿಗೆ ಸಂದೇಶದಲ್ಲಿ, 'ನಾವು ಈ ಸುದ್ದಿಯಿಂದ ಆಘಾತಕ್ಕೊಳಗಾಗಿದ್ದೇವೆ. ನಮ್ಮ ಪ್ರಾಥಮಿಕ ಕಾಳಜಿ ರಿವರ್ ಕ್ರೆಸ್ಟ್ ಸ್ಕೂಲ್ ಸಮುದಾಯ ಮಕ್ಕಳ ಯೋಗಕ್ಷೇಮವಾಗಿದೆ' ಎಂದು ಪ್ರಕಟಣೆ ಹೊರಡಿಸಿದೆ. ಸದ್ಯ ಶಿಕ್ಷಕಿಯನ್ನು ಶಾಲೆಯ ಆವರಣವನ್ನು ಪ್ರವೇಶಿಸುವುದನ್ನು ಅಥವಾ ಶಾಲಾ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಆಕೆ ಮೇ 30ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.