ತಡವಾಗಿ ಬಂದರೆಂದು ಶಿಕ್ಷಕಿಗೆ ಹೊಡೆದ ಪ್ರಾಂಶುಪಾಲೆ; ವಿಡಿಯೋ ವೈರಲ್
ಆಗ್ರಾದಲ್ಲಿ ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕಿಯೊಬ್ಬರು ದೈಹಿಕವಾಗಿ ಹೊಡೆದಾಡಿಕೊಂಡ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮಯಪಾಲನೆ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
ಶಾಲೆಯ ಪ್ರಾಂಶುಪಾಲರು ಶಿಕ್ಷಕಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಮೇ 3ರಂದು ಆಗ್ರಾದ ಪ್ರಾಥಮಿಕ ಶಾಲೆಯೊಂದರಲ್ಲಿ ಈ ಘಟನೆ ಸಂಭವಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿ ಗುಂಜಾ ಚೌಧರಿ ಅವರಿಗೆನ್ನು ಪ್ರಾಂಶುಪಾಲರು ಬೈದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ, ಪ್ರಾಂಶುಪಾಲರು ಕೂಡ ಕಳೆದ ನಾಲ್ಕು ದಿನಗಳಿಂದ ತಡವಾಗಿ ಬರುತ್ತಿರುವುದನ್ನು ನೆನಪಿಸಿ ಆರೋಪಿಸಿದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಉದ್ವಿಗ್ನತೆ ಹೆಚ್ಚಾದಂತೆ, ಘರ್ಷಣೆಯು ದೈಹಿಕ ಹಲ್ಲೆಗೆ ತಿರುಗಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಪ್ರಾಂಶುಪಾಲರು ಮತ್ತು ಶಿಕ್ಷಕಿ ತೀವ್ರ ವಾಗ್ವಾದಕ್ಕಿಳಿದಿದ್ದು, ಅವಹೇಳನಕಾರಿ ಪದಗಳನ್ನು ಬಳಸಿ ದೈಹಿಕ ಹಿಂಸೆಯಲ್ಲಿ ತೊಡಗಿದ್ದಾರೆ.
'ಈಟ್ ರಾಜಾ' ಭಾರತದ ಮೊದಲ ಝೀರೋ ವೇಸ್ಟ್ ಜ್ಯೂಸ್ ಬಾರ್; ಆಕರ್ಷಣೆ ಜೊತೆ ಮಾದರಿ ಕೂಡಾ
ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದರು ಮತ್ತು ಇಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸಿದರು, ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು.
ಶಿಕ್ಷಕಿಯು ಪ್ರಾಂಶುಪಾಲೆಯ ಬಟ್ಟೆಯನ್ನು ಹರಿದು ಹಾಕುವುದರೊಂದಿಗೆ ವಾಗ್ವಾದವು ಕೊನೆಗೊಂಡಿತು ಮತ್ತು ಪ್ರಾಂಶುಪಾಲರು ಶಿಕ್ಷಕರ ಕೂದಲನ್ನು ಎಳೆಯುವ ಮೂಲಕ ಪ್ರತೀಕಾರ ತೀರಿಸಿದರು. ಇದರಿಂದ ಶಿಕ್ಷಕಿಯ ಕಣ್ಣಿಗೆ ಗಾಯಗಳಾಗಿವೆ.
ನೋ ಪ್ಯಾಂಟ್ಸ್ ಡೇ; ಪ್ಯಾಂಟಿಯಲ್ಲೇ ಪೇಟೆ ಸುತ್ತಿದ ಪ್ಯಾಟೆ ಮಂದಿ!
ಘಟನೆಯ ಕುರಿತು ಸಿಕಂದರಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಇದುವರೆಗೆ ಯಾವುದೇ ಔಪಚಾರಿಕ ಪ್ರಕರಣ ದಾಖಲಾಗಿಲ್ಲ, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, Xನಲ್ಲಿ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೀಡಿಯೊ ವೈರಲ್ ಆಗಿದೆ.