ಬೆಟ್ ಕಟ್ಟಿ ಕಿಸ್ ಕೊಟ್ಟ ವರ, ಸಿಟ್ಟಿಗೆದ್ದ ವಧು ಪೊಲೀಸರನ್ನು ಕರೆದಾಗ ಬೆಪ್ಪಾದ !
ಈಗೆಲ್ಲಾ ಮದ್ವೆ ನಿಲ್ಲೋಕೆ ದೊಡ್ಡ ದೊಡ್ಡ ಕಾರಣಗಳೇನೂ ಬೇಕಿಲ್ಲ. ಸೀರೆ ಚೆನ್ನಾಗಿಲ್ಲ, ಊಟ ಚೆನ್ನಾಗಿರಲ್ಲಿಲ್ಲ ಅನ್ನೋ ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಮದ್ವೆ ನಿಂತ್ಹೋಗುತ್ತದೆ. ಉತ್ತರಪ್ರದೇಶದಲ್ಲೂ ಹಾಗೆಯೇ ಆಗಿದೆ. ವರನ ಕಿಸ್‌ನ ಬೆಟ್‌ಗೆ ಬೇಸತ್ತು ವಧು ಮದ್ವೇನೆ ಬೇಡಪ್ಪಾ ಅಂದಿದ್ದಾಳೆ. ಅಷ್ಟಕ್ಕೂ ಆ ಮುತ್ತಿನ ಕಥೆಯೇನು ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.
ಮದುವೆ (Marriage) ಅನ್ನೋದು ಒಂದು ಸುಂದರವಾದ ಸಂಬಂಧ. ಈ ಅನುಬಂಧ ಏಳೇಳು ಜನ್ಮದ್ದು ಅಂತಾರೆ. ಆದರೆ ಇತ್ತೀಚಿನ ದಿನಗಳಂತೂ ಏಳೇಳು ಜನ್ಮ ಬಿಟ್ಟು ಮದುವೆಯಾದ ಒಂದೇ ವರ್ಷಕ್ಕೆ ಡಿವೋರ್ಸ್ ಆಗಿರುತ್ತೆ. ಅಷ್ಟೇ ಅಲ್ಲ, ಮದುವೆ ಮಂಟಪದಲ್ಲೇ ಅದೆಷ್ಟೋ ಸಂಬಂಧಗಳು (Relationship) ಮುರಿದು ಬೀಳುತ್ತವೆ. ಹಿಂದೆಲ್ಲಾ ಹಿರಿಯರು ಮದುವೆ ಅಂದ್ರೆ ಅನುಸರಿಸಿಕೊಂಡು ಬಾಳೋದು ಅಂತಿದ್ರು. ಆದ್ರೆ ಈಗಿನ ಹುಡುಗ-ಹುಡುಗಿಯರು ಸಣ್ಣಪುಟ್ಟ ವಿಚಾರಕ್ಕೆಲ್ಲಾ ಸಿಟ್ಟಿಗೆದ್ದು ಮಂಟಪದಿಂದ ಎದ್ದು ನಡೆದುಬಿಡ್ತಾರೆ. ಹೀಗಾಗಿಯೇ ಅದೆಷ್ಟೋ ಮದುವೆಗಳು ನಿಂತು ಹೋಗಿವೆ.
ಹುಡುಗಿ ದಪ್ಪ, ಹುಡುಗನಿಗೆ ಕೂದಲ್ಲಿಲ್ಲ, ಹುಡುಗ ತಂದ ಸೀರೆ (Saree) ಚೆನ್ನಾಗಿಲ್ಲ, ಊಟ ಚೆನ್ನಾಗಿ ಮಾಡಿಸಲ್ಲಿಲ್ಲ ಹೀಗೆ ಸಣ್ಣಪುಟ್ಟ ಕಾರಣಕ್ಕೆ ಮದುವೆಯನ್ನು ಅರ್ಧಕ್ಕೇ ಮೊಟಕುಗೊಳಿಸಿದವರಿದ್ದಾರೆ. ಹಾಗೆಯೇ, ಇಲ್ಲೊಂದೆಡೆ ಬೆಟ್ ಗೆಲ್ಲಲು 300 ಅತಿಥಿಗಳ (Guest) ಮುಂದೆ ತನ್ನನ್ನು ಚುಂಬಿಸಿದ ವರನನ್ನು (Bride groom) ವಧು ತಿರಸ್ಕರಿಸಿದ್ದಾಳೆ. ಹುಡುಗನ ಗುಣನಡತೆಯ ಬಗ್ಗೆ ನನಗೆ ಅನುಮಾನವಿದೆ ಎಂದು ಹೇಳಿ ವಧು (Bride) ಮದುವೆಯನ್ನು ಕ್ಯಾನ್ಸಲ್ ಮಾಡಿಸಿದ್ದಾಳೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಏನದು ಮಂಟಪದಲ್ಲಿ ನಡೆದ ಒಂದು ಮುತ್ತಿನ ಕಥೆ.
ಗಂಡಿನ ಮನೆಯವರು ತಂದ ಲೆಹೆಂಗಾ ಮೆಚ್ಚದ ವಧು: ನಿಂತ ಮದುವೆ
ಗೆಸ್ಟ್ ಮುಂದೆ ಕಿಸ್ ಯಾಕೆ ಕೊಟ್ಟೆ, ಸಿಟ್ಟಿಗೆದ್ದ ವಧು ಮಾಡಿದ್ದೇನು ?
ವರಮಾಲ ಸಮಾರಂಭದಲ್ಲಿ ವರ, ವಧುವಿಕೆಗೆಮುತ್ತಿಟ್ಟನು. ಆ ಸಮಯದಲ್ಲಿ ಸುಮಾರು 300 ಅತಿಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 23 ವರ್ಷದ ವಧು ವೇದಿಕೆಯಿಂದ ಕೆಳಗಿಳಿದು ಪೊಲೀಸರನ್ನು ಕರೆದಳು.. ವರನು ತನ್ನ ಸ್ನೇಹಿತರೊಂದಿಗೆ ಬೆಟ್ ಗೆಲ್ಲಲು ತನಗೆ ಮುತ್ತು ನೀಡಿದ್ದಾನೆ ಎಂದು ವಧು ಹೇಳಿದ್ದಾಳೆ. ಮಾತ್ರವಲ್ಲ ಹುಡುಗನ ಇಂಥಾ ನಡವಳಿಕೆ (Behaviour)ಯಿಂದ ಆತನ ಬಗ್ಗೆ ನನಗೆ ಅನುಮಾನವಿದೆ ಎಂದು ತಿಳಿಸಿದ್ದಾಳೆ. ವರನು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದನೆಂದು ವಧು ಆರೋಪಿಸಿದ್ದಾಳೆ. ಮಾತ್ರವಲ್ಲ ಆರಂಭದಲ್ಲಿ ಅನುಚಿತವಾಗಿ ವರ್ತಿಸಿದಾಗ ನಿರ್ಲಕ್ಷಿಸಿದ್ದೆ ಎಂದಿದ್ದಾಳೆ. ನಂತರ ಎರಡೂ ಕುಟುಂಬಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಮದುವೆ ಮುಂದುವರಿಸಲು ನಿರಾಕರಿಸಿದ ವಧು
'ನೂರಾರು ಅತಿಥಿಗಳ ಮುಂದೆ ಅವನು ನನ್ನನ್ನು ಚುಂಬಿಸಿದಾಗ, ನಾನು ಅವಮಾನಗೊಂಡೆ. ಅವನು ನನ್ನ ಸ್ವಾಭಿಮಾನದ ಬಗ್ಗೆ ಕಾಳಜಿ ವಹಿಸಲಿಲ್ಲ ಮತ್ತು ಹಲವಾರು ಅತಿಥಿಗಳ ಮುಂದೆ ಅನುಚಿತವಾಗಿ ವರ್ತಿಸಿದನು' ಎಂದು ವಧು ಹೇಳಿದ್ದಾಳೆ. ಪೊಲೀಸರು ಮಾತಿನಲ್ಲೇ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರು ಆದರೆ ವಧು ಅದನ್ನು ನಿರಾಕರಿಸಿದಳು. ಕೊನೆಯಲ್ಲಿ ಮದುವೆಯನ್ನು ನಿಲ್ಲಿಸಲಾಯಿತು ಮತ್ತು ಅತಿಥಿಗಳು ಮನೆಗೆ ಮರಳಿದರು.
ಫೋನ್ ಕಾಲ್‌ನಿಂದ ಮುರಿದು ಬಿದ್ದ ಮದುವೆ..! ಭಾಗ್ಯಳ ಬಾಳಿಗೆ ನೆರೆಮನೆಯ 'ಆನಂದ'
ವಧುವಿನ ತಾಯಿ, 'ವರ ಸ್ನೇಹಿತರಿಂದ ಪ್ರಚೋದನೆಗೆ ಒಳಗಾಗಿದ್ದನು, ನಾವು ನನ್ನ ಮಗಳ ಮನವೊಲಿಸಲು ಪ್ರಯತ್ನಿಸಿದ್ದೇವೆ ಆದರೆ ಅವಳು ಅವನನ್ನು ಮದುವೆಯಾಗಲು ನಿರಾಕರಿಸಿದಳು, ನಾವು ಕೆಲವು ದಿನ ಕಾಯಲು ನಿರ್ಧರಿಸಿದ್ದೇವೆ ಮತ್ತು ಸ್ವಲ್ಪ ಸಮಯ ತೆಗೆದುಕೊಳ್ಳೋಣ' ಎಂದು ಹೇಳಿದರು. ಘಟನೆ ಸಂಭವಿಸುವ ವೇಳೆಗೆ ವಿಧಿವಿಧಾನಗಳು ನಡೆದಿದ್ದರಿಂದ ತಾಂತ್ರಿಕವಾಗಿ ದಂಪತಿಗಳು ವಿವಾಹವಾಗಿದ್ದಾರೆ. ಒಂದೆರಡು ದಿನಗಳು ತಣ್ಣಗಾಗಲು ಕಾಯುವ ನಂತರ ನಾವು ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ನಲ್ಲಿ ಬೆಟ್ ಕಟ್ಟಿ ವಧುವಿಗೆ ಕಿಸ್ ಕೊಟ್ಟ ವರ, ಹುಡುಗಿ ಪೊಲೀಸರನ್ನು ಕರೆದಾಗ ಬೆಪ್ಪಾಗಿದ್ದಂತೂ ನಿಜ.
ಸೀರೆ ಕೇಳಿದ್ದಕ್ಕೆ ಮುರಿದು ಬಿದ್ದ ಮದುವೆ!