ಸತಿ ಪತಿಗಳಾಗಬೇಕಿದ್ದ ಯುವ ಜೋಡಿ ಫೋನ್‌ ಕಾಲ್‌ನಿಂದಾಗಿ ಒಂದಾಗಲು ಸಾಧ್ಯವಾಗಿಲ್ಲ. ಚನ್ನಪಟ್ಟಣದಲ್ಲಿ ನಡೆಯಬೇಕಿದ್ದ ವಿವಾಹ ಒಂದು ಪೋನ್ ಕಾಲ್‌ನಿಂದಾಗಿ ಮುರಿದುಬಿದ್ದಿದೆ. ಆದರೆ ಕೊನೆಯ ಕ್ಷಣದಲ್ಲಿ ನೆರೆ ಮನೆಯ ಯುವಕ ಆನಂದ ಯುವತಿಯ ಬಾಳಿಗೆ ಬೆಳಕಾಗಿ ಬಂದಿದ್ದಾನೆ.

ರಾಮನಗರ(ನ.22): ಇಂದು ಸತಿ ಪತಿಗಳಾಗಬೇಕಿದ್ದ ಯುವ ಜೋಡಿ ಫೋನ್‌ ಕಾಲ್‌ನಿಂದಾಗಿ ಒಂದಾಗಲು ಸಾಧ್ಯವಾಗಿಲ್ಲ. ಚನ್ನಪಟ್ಟಣದಲ್ಲಿ ನಡೆಯಬೇಕಿದ್ದ ವಿವಾಹ ಒಂದು ಪೋನ್ ಕಾಲ್‌ನಿಂದಾಗಿ ಮುರಿದುಬಿದ್ದಿದೆ.

ಅನಾಮಧೇಯ ಪೋನ್ ಕಾಲ್‌ನಿಂದ ಮದುವೆ ಮುರಿದು ಬಿದ್ದಿದ್ದು, ಹೆಣ್ಣಿನ ಮನೆಯವರಿಗೆ ಫೋನ್ ಕಾಲ್ ಬಂದಿದೆ. ಗಂಡಿಗೆ ಮೊದಲೇ ಮದುವೆಯಾಗಿದೆ ಮತ್ತು ಮಕ್ಕಳು ಇವೆ ಎನ್ನುವ ಸುದ್ದಿ ಕೊಟ್ಟ ಪೋನ್ ಕಾಲ್‌ನಿಂದ ಮದುವೆ ಮಂಟಪಕ್ಕೆ ಹೋಗಬೇಕಿದ್ದ ಕುಟುಂಬಗಳು ಠಾಣೆ ಮಟ್ಟಿಲೇರಿವೆ. ಯುವತಿಯೊಬ್ಬಳು ಕರೆ ಮಾಡಿ, ನಾನು ಈಗಾಗಲೇ ಬಸವರಾಜ್‌ನನ್ನು ಮದುವೆಯಾಗಿದ್ದು, ಛತ್ರಕ್ಕೆ ಬರುತ್ತಿದ್ದೇನೆ ಎಂದಿದ್ದಾಳೆ. ಇದರಿಂದ ಆತಂಕಗೊಂಡ ವಧುವಿನ ಸಂಬಂಧಿಕರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಎರಡೂ ಕಡೆಯವರಿಂದ ವಾಗ್ವಾದ ನಡೆದು, ವಧು ಮದುವೆಗೆ ನಿರಾಕರಿಸಿದ್ದಾಳೆ.

ನರಗುಂದದಲ್ಲಿ ಮತ್ತೆ ಭೂಕುಸಿತ: ಆತಂಕದಲ್ಲಿ ಜನತೆ

ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಇಂದು ಮದುವೆ ನಡೆಯಬೇಕಾಗಿತ್ತು. ನಗರದ ಎಲೆಕೇರಿ ಬಡಾವಣೆಯ ಭಾಗ್ಯಶ್ರೀ ವಧು ಹಾಗು ಎಲೀಯೂರು ಗ್ರಾಮದ ಬಸವರಾಜು ವರ. ಆರು ತಿಂಗಳೆ ಹಿಂದೆಯೇ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಮಧ್ಯರಾತ್ರಿ ಯವರೆಗೆ ಠಾಣೆಯಲ್ಲಿ ಹೈಡ್ರಾಮ ನಡೆದಿದ್ದು, ಆರೋಪ ಸಾಬೀತು ಮಾಡಿ ಎಂದು ವರ ಪಟ್ಟುಹಿಡಿದಿದ್ದಾನೆ.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

ನಗರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೋನ್‌ನಲ್ಲಿ ಆರೋಪ ಮಾಡಿದ ವ್ಯಕ್ತಿ ಪತ್ತೆಗೆ ಪೋಲೀಸರು ಮುಂದಾಗಿದ್ದಾರೆ. ಅಂತಿಮವಾಗಿ ಹೆಣ್ಣಿನ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಬೇರೊಬ್ಬ ವರನೊಂದಿಗೆ ವಧುವಿನ ವಿವಾಹ ನಡೆಯಲಿದೆ. ಎಲೆಕೇರಿ ಗ್ರಾಮದ ಆನಂದ್ ಎಂಬಾತ ಹೆಣ್ಣಿಗೆ ಬಾಳು ನೀಡಲು ಮುಂದಾಗಿದ್ದಾನೆ. ಆನಂದ್ ನೊಂದಿಗೆ ಭಾಗ್ಯಶ್ರೀ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ.

ಮೈಸೂರು: ಒಳ ಉಡುಪಿಗೆ ಅಂಬೇಡ್ಕರ್ ಚಿತ್ರ, BJP ಕಾರ್ಯಕರ್ತನಿಂದ ಅವಮಾನ

ಭಾಗ್ಯಶ್ರೀ ಬಾಳಿಗೆ ’ಆನಂದ’:

ಮರುದಿನವಾದ ಶುಕ್ರವಾರ ನೆರೆ ಮನೆಯ ಯುವಕ ಆನಂದ ವಧುವಿನ ಕೈ ಹಿಡಿಯಲು ಮುಂದಾಗಿದ್ದಾನೆ. ಎರಡೂ ಮನೆಯವರು ಪರಸ್ಪರ ಮಾತುಕತೆ ನಡೆಸಿ ಒಪ್ಪಿದ ಬಳಿಕ ಚೇತನಾ ಸಮುದಾಯ ಭವನದಲ್ಲಿ ಇವರಿಬ್ಬರ ವಿವಾಹ ನೆರವೇರಿಸಿದರು."