ಒಬ್ಬರೊಬ್ಬರನ್ನು ಬಿಟ್ಟಿರೋದು ಕಷ್ಟ ಅಂತೆ, ಒಬ್ಬನನ್ನೇ ಮದುವೆಯಾದ ಅವಳಿ..!
ಟ್ವಿನ್ಸ್ ಸಹೋದರಿಯರ ಜೀವನ ವಿಭಿನ್ನವಾಗಿರುತ್ತದೆ. ಒಂದೇ ರೀತಿಯ ದಿರಿಸು, ಫೂಟ್‌ವೇರ್ ಧರಿಸುತ್ತಾರೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಟ್ವನ್ಸ್ ಸಹೋದರಿಯರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾಗದೆ ಒಬ್ಬನನ್ನೇ ಮದುವೆಯಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮುಂಬೈ: ಮುಂಬೈನಲ್ಲಿ ಐಟಿ ಎಂಜಿನಿಯರ್ ಆಗಿರುವ ಅವಳಿ ಸಹೋದರಿಯರು (Twin sisters) ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಒಬ್ಬನೇ ವ್ಯಕ್ತಿಯನ್ನೇ ವಿವಾಹ (Wedding)ವಾಗಿದ್ದಾರೆ. ಎಲ್ಲರ ಅಚ್ಚರಿಗೆ ಕಾರಣವಾದ ಈ ವಿವಾಹಕ್ಕೆ ಹುಡುಗಿಯ ಹಾಗೂ ಹುಡುಗನ ಕುಟುಂಬದವರು ಸಹ ಒಪ್ಪಿಗೆ ಸೂಚಿಸಿದ್ದಾರೆ. ಸೋಲಾಪುರ ಜಿಲ್ಲೆಯ ಅಕ್ಲುಜ್ ಗ್ರಾಮದಲ್ಲಿ ವಿವಾಹವನ್ನು ಅದ್ಧೂರಿಯಾಗಿ ಮಾಡಲಾಯಿತು. ಆದರೆ, ಇದು ಕಾನೂನುಬದ್ಧವೇ ಅಥವಾ ನೈತಿಕವೇ ಎಂದು ಸಾಮಾಜಿಕ ಜಾಲತಾಣ (Social media)ಗಳಲ್ಲಿ ಜನರು ಕೇಳುತ್ತಿದ್ದಾರೆ. ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ಐಟಿ ಇಂಜಿನಿಯರ್‌ಗಳಾಗಿದ್ದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಬ್ಬರು ಸಹೋದರಿಯರು ತಮ್ಮ ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ನೋಡಲು ಸಹ ಇಬ್ಬರೂ ಒಂದೇ ರೀತಿಯಿದ್ದಾರೆ. ಹಾಗೆಯೇ ಜೀವನ (Life)ದಲ್ಲಿಯೂ ಇಬ್ಬರೂ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿತಿ ಅತುಲ್‌ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಅವಳಿ ಸಹೋದರಿಯರ ಮದುವೆಗೆ ಶುಭಾಷಯ (Wishes) ಕೋರಿರೆ, ಇನ್ನು ಕೆಲವರು ಮೀಮ್ಸ್ ಹಾಕಿ ಮದುವೆ ಬಗ್ಗೆ ತಮಾಷೆ ಮಾಡಿದ್ದಾರೆ.
ಹಿಂದು ಧರ್ಮಕ್ಕೆ ಸೇರಿ, ಸಪ್ತಪದಿ ತುಳಿದು ವಿವಾಹವಾದ ಮುಸ್ಲಿಂ ಯುವತಿಯರು!
ವರನಾಗಿರುವ ಮಲಶಿರಾಸ್ ತಾಲೂಕಿನ ನಿವಾಸಿ ಅತುಲ್ ಮಾತನಾಡಿ, ಕೆಲ ದಿನಗಳ ಹಿಂದೆ ತಂದೆ ತೀರಿಕೊಂಡ ಬಳಿಕ ಯುವತಿಯರು ತಾಯಿಯೊಂದಿಗೆ ವಾಸವಾಗಿದ್ದರು.ಒಮ್ಮೆ ಇಬ್ಬರು ಸಹೋದರಿಯರು ಹಾಗೂ ಅವರ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅತುಲ್ ಅವರ ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರ ಪರಿಚಯವಾಗಿದ್ದು, ಪ್ರೀತಿಯಾಗಿದೆ' ಎಂದು ಹೇಳಿಕೊಂಡಿದ್ದಾರೆ.
ಪ್ರೇಯಸಿ ಅನಾರೋಗ್ಯದಿಂದ ಗಾಲಿಕುರ್ಚಿಯಲ್ಲಿ, ಕೈ ಬಿಡದೆ ಕೈ ಹಿಡಿದ ಪ್ರೇಮಿ
ಅಪ್ಪಟ ಪ್ರೀತಿ (Love)ಯೆಂದರೆ ಹಾಗೆಯೇ..ಎಂಥಾ ಕಠಿಣ ಪರಿಸ್ಥಿತಿಯಲ್ಲಿಯೂ ಪ್ರೇಮಿ (Lover)ಯನ್ನು ಕೈ ಬಿಡಲು ಅವರು ಸಿದ್ಧರಿರುವುದಿಲ್ಲ. ಕಷ್ಟವೋ, ಸುಖವೋ ಜೀವನುದುದ್ದಕ್ಕೂ ಜೊತೆಯಾಗಿ ಸಾಗುವ ಕನಸು ಕಾಣುತ್ತಾರೆ. ಹಾಗೆಯೇ ಒಡಿಶಾದಲ್ಲೊಂದು ಜೋಡಿ ಎಲ್ಲಾ ಕಷ್ಟಗಳನ್ನು ಹಿಮ್ಮೆಟ್ಟಿಸಿ ದಾಂಪತ್ಯ ಜೀವನಕ್ಕೆ (Married life)ಕಾಲಿಟ್ಟಿದ್ದಾರೆ. ಯಾವ ಲವ್ ಸ್ಟೋರಿಗೂ ಕಮ್ಮಿಯಿಲ್ಲ ಅನ್ನೋ ಹಾಗಿದೆ ಇವ್ರ ಪ್ರೇಮಕಥೆ. ಒಡಿಶಾದ ಡೆಬಾಸ್ಮಿತಾ ಮತ್ತು ಶ್ರುಭಾನ್ಸುಗೆ ಎಂಟು ವರ್ಷಗಳ ಹಿಂದೆ ಪ್ರೀತಿಯಾಗಿತ್ತು. ಎಲ್ಲವು ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದೆ ಎನ್ನುವಷ್ಟರಲ್ಲಿ ಡೆಬಾಸ್ಮಿತಾಳ ಬಾಳಲ್ಲಿ ಅನಿರೀಕ್ಷಿತ ಘಟನೆ ಒಂದು ಜರುಗಿತು. ಒಂದು ವರ್ಷದ ಹಿಂದೆ ಕೆಲವು ಕಾರಣಗಳಿಂದ ದೇಬಸ್ಮಿತಾ ಗಾಲಿಕುರ್ಚಿಯನ್ನು ಅವಲಂಬಿಸಬೇಕಾಯಿತು. ಆದರೆ ಹೀಗಿದ್ದೂ ಸುಭ್ರಾಂಶು ದೇಬಸ್ಮಿತಾಳನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಗೆ ಆಯ್ಕೆ ಮಾಡಿಕೊಳ್ಳಲ್ಲಿಲ್ಲ. ಬದಲಿಗೆ, ಅವರು ದೇಬಸ್ಮಿತಾಗೆ ನೀಡಿದ ಭರವಸೆಯನ್ನು ಉಳಿಸಿಕೊಂಡರು.
ಬೆಟ್ ಕಟ್ಟಿ ಕಿಸ್ ಕೊಟ್ಟ ವರ, ಸಿಟ್ಟಿಗೆದ್ದ ವಧು ಪೊಲೀಸರನ್ನು ಕರೆದಾಗ ಬೆಪ್ಪಾದ !
8 ವರ್ಷದ ಪ್ರೀತಿಯ ಕಂಪ್ಲೀಟ್ ಕಹಾನಿ
ಪಾರ್ಶ್ವವಾಯು (Paralysis)ವಿನಿಂದಾಗಿ ಡೆಬಾಸ್ಮಿತ ನೆಡೆದಾಡದಂತಾಯಿತು. ಇಂತಹ ಸಂದರ್ಭದಲ್ಲಿ ಯಾವುದೇ ಹುಡುಗನಾದರೂ ಮದುವೆ ಆಗಲು ಹಿಂಜರಿಯುತ್ತಾರೆ. ಆದರೆ, ಸುಭ್ರಾನ್ಶು ಆ ರೀತಿ ಮಾಡಲಿಲ್ಲ. ಬದಲಾಗಿ ಡೆಬಾಸ್ಮಿತರನ್ನೇ ಮದುವೆಯಾಗುವ ಮೂಲಕ ನಿಜವಾದ ಪ್ರೀತಿ ಇನ್ನೂ ಲಭ್ಯವಿದೆ ಎಂಬುದನ್ನು ತೋರಿಸಿಕೊಟ್ಟರು. ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರುಭಾನ್ಸು, 'ಅವಳಿಗೆ ನನ್ನ ಮೇಲಿರುವ ಪ್ರೀತಿಗೆ ಹೋಲಿಸಿದರೆ ನನ್ನ ಪ್ರೀತಿ ಏನೂ ಅಲ್ಲ. ನಿಜವಾಗಿ, ನಿಜವಾದ ಪ್ರೀತಿ ಏನೆಂದು ಅವಳು ನನಗೆ ಕಲಿಸಿದಳು. ಕಳೆದ ಎಂಟು ವರ್ಷಗಳಿಂದ ನಾವು ಸಂಬಂಧ (Relationship) ಹೊಂದಿದ್ದೇವೆ. ಆದರೆ ಅವಳು ಅನಾರೋಗ್ಯಕ್ಕೆ ಒಳಗಾದ ನಂತರವೂ ನಮ್ಮ ಪರಸ್ಪರ ಪ್ರೀತಿ ಕಡಿಮೆಯಾಗಿಲ್ಲ. ಬದಲಾಗಿ, ಪ್ರತಿ ದಿನವೂ ನಮ್ಮ ಪ್ರೀತಿ ಹೆಚ್ಚುತ್ತಲೇ ಇರುತ್ತದೆ' ಎಂದಿದ್ದಾರೆ.