Asianet Suvarna News Asianet Suvarna News

ಹಿಂದು ಧರ್ಮಕ್ಕೆ ಸೇರಿ, ಸಪ್ತಪದಿ ತುಳಿದು ವಿವಾಹವಾದ ಮುಸ್ಲಿಂ ಯುವತಿಯರು!

ಉತ್ತರ ಪ್ರದೇಶದ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಯುವತಿಯರು ಹಿಂದು ಧರ್ಮಕ್ಕೆ ಮತಾಂತರಗೊಂಡು ಹಿಂದು ಯುವಕರನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಮ್ಮ ಧರ್ಮದಲ್ಲಿ ನಮಗೆ ಗೌರವ ಸಿಕ್ಕಿಲ್ಲ. ಬರೀ ಮೂರು ಮಾತಿನಲ್ಲಿ ತಲಾಕ್‌ ನೀಡುವ ಸಂಪ್ರದಾಯದಿಂದ ಬೇಸತ್ತು ಈ ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ.
 

2 Muslim girls became Hindus took seven rounds in the temple in Uttar Pradesh Bareilly san
Author
First Published Dec 1, 2022, 4:17 PM IST

ನವದೆಹಲಿ (ಡಿ.1): ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರು ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ. ಇಬ್ಬರೂ ಕೂಡ ಬರೇಲಿಯ ದೇವಸ್ಥಾನದಲ್ಲಿ ತಾವು ಇಷ್ಟಪಟ್ಟ ಹಿಂದು ಹುಡುಗರನ್ನು ಹಿಂದು ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈ ಮದುವೆಯನ್ನು ಸ್ಥಳೀಯ ಆರ್ಯ ಸಮಾಜ ಮಂದಿರದಲ್ಲಿ ನೋಂದಣಿಯನ್ನೂ ಮಾಡಿಕೊಳ್ಳಲಾಗಿದೆ. ಮದುವೆಯ ಬಳಿಕ ಮಾತನಾಡಿದ ಈ ಯುವತಿಯರು, 'ನಮಗೆ ಹಿಂದು ಧರ್ಮದಲ್ಲಿ ನಂಬಿಕೆ ಇದೆ. ಮಹಿಳೆಯರಿಗೆ ಮುಸ್ಲಿಂ ಸಮಾಜದಲ್ಲಿ ಯಾವುದೇ ಗೌರವ ಸಿಗೋದಿಲ್ಲ. ಎಲ್ಲಿ ಬೇಕಾದರಲ್ಲಿ, ಯಾವ ಕಾರಣವೂ ಇಲ್ಲದೆ ಮೂರು ಬಾರಿ ತಲಾಕ್‌ ಹೇಳಿದರೆ ಅಲ್ಲಿ ಸಂಬಂಧ ಮುಗಿದು ಹೋಗುತ್ತದೆ. ಇನ್ನು ಹಲಾಲ್‌ ಅನ್ನು ಎಲ್ಲಿ ಬೇಕಾದರೂ, ಯಾವ ವಿಚಾರದಲ್ಲಿ ಬೇಕಾದರೂ ಅನ್ವಯಿಸಿಕೊಳ್ಳಬಹುದು' ಎಂದು ಹೇಳಿದ್ದಾರೆ. ಮದುವೆ ಸಮಾರಂಭವು ಬರೇಲಿಯ ಮೇದಿನಾಥ್‌ನ ಅಗಸ್ತ್ಯ ಮುನಿ ಆಶ್ರಮದಲ್ಲಿ ನಡೆದಿದೆ. ಪಂಡಿತ್‌ ಕೆಕೆ ಶಂಕಾಧರ್‌ ಇಬ್ಬರೂ ಯುವತಿಯರ ಮದುವೆಯನ್ನು ನೆರವೇರಿಸಿಕೊಟ್ಟಿದ್ದಾರೆ. ಮದುವೆಗೂ ಮುನ್ನ ಇಬ್ಬರನ್ನು ಶುದ್ದೀಕರಣ ಮಾಡಿ ಹಿಂದು ಧರ್ಮಕ್ಕೆ ಸೇರ್ಪಡೆ ಮಾಡಲಾಗಿದೆ. ಹಿಂದು ಧರ್ಮಕ್ಕೆ ಸೇರಿದ ಬಳಿಕ ಅವರ ಹೆಸರನ್ನೂ ಬದಲಾವಣೆ ಮಾಡಲಾಗಿದೆ. ಇರಾಮ್‌ ಜೈದಿ ತನ್ನ ಹೆಸರನ್ನು ಸ್ವಾತಿ ಎಂದಾಗಿ, ಶಹನಾಜ್‌ ತನ್ನ ಹೆಸೆನ್ನು ಸುಮನ್‌ ಆಗಿ ಬದಲಾಯಿಸಿಕೊಂಡಿದ್ದಾರೆ.

ಮದುವೆ ಬಳಿಕ ರಕ್ಷಣೆ ಕೋರಿದ ಸುಮನ್‌: ಶಹನಾಜ್‌ ಅಂದರೆ ಸುಮನ್‌ ಮದುವೆಯ ಬಳಿಕ ಪತಿ ಅಜಯ್‌ ಕುಮಾರ್‌ ಜೊತೆ ಪೊಲೀಸ್‌ ಠಾಣೆಗೆ ಭೇಟಿ ನೀಡಿದರು. ಪೊಲೀಸರ ಎದುರು ನಾನು ವಯಸ್ಕಳಾಗಿದ್ದು, ನನ್ನ ಸ್ವ ಇಚ್ಛೆಯಂತೆಯೇ ಹಿಂದು ಧರ್ಮ ಸ್ವೀಕಾರ ಮಾಡಿದ್ದೇನೆ. ಇದಕ್ಕೆ ಯಾರ ಒತ್ತಾಯ ಕೂಡ ಇದ್ದಿರಲಿಲ್ಲ. ಬಳಿಕ ದೇವಸ್ಥಾನದಲ್ಲಿ ಅಜಯ್‌ ಎನ್ನುವವರನ್ನು ವಿವಾಹವಾಗಿದ್ದೇನೆ. ಈಗ ನನ್ನ ಜೀವನಕ್ಕೆ ಅಪಾಯವಿದೆ. ನನ್ನ ಕುಟುಂಬ ಸದಸ್ಯರಿಂದ ಜೀವ ಬೆದರಿಕೆ ಬಂದಿದೆ ಎಂದಿದ್ದಾರೆ ಎಸ್‌ಎಸ್‌ಪಿ ಅಖಿಲೇಶ್‌ ಚೌರಾಸಿಯಾ ವೇಳೆ ಭದ್ರತೆ ನೀಡುವ ಭರವಸೆ ನೀಡಿದ್ದಾರೆ. ಅದಲ್ಲದೆ, ವರನಿಗೆ ಎಚ್ಚರಿಕೆ ನೀಡಿದ ಪೊಲೀಸರು ಯಾವುದೇ ಕಾರಣಕ್ಕೂ ಹುಡುಗಿಗೆ ಕಿರುಕುಳ ನೀಡಬಾರದು. ನಿನ್ನ ಸಲುವಾಗಿ ಆಕೆ ತನ್ನ ಧರ್ಮ ಬಿಟ್ಟುಬಂದಿದ್ದಾಳೆ ಆಕೆಗೆ ಕಿರುಕುಳ ನೀಡಿದರೆ ಸರಿ ಎನಿಸುವುದಿಲ್ಲ ಎಂದಿದ್ದಾರೆ.

ಮದುವೆಯ ವೇಳೆ ಇಬ್ಬರೂ ಯುವತಿಯರು ಸಪ್ತಪದಿ ತುಳಿದಿದ್ದು ಮಾತ್ರವಲ್ಲ, ಅವರ ಬೇಡಿಕೆಯ ಮೇಲೆಗೆ ಪತಿಯರು ಹಣೆಗೆ ಕುಂಕುಮ ಹಾಗೂ ಮಂಗಳ ಸೂತ್ರ ಕಟ್ಟಿದ್ದಾರೆ. ಬಳಿಕ ಪಂಡಿತ್‌ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.

Gujarat Elections: ಮೋದಿಯನ್ನು ಗೆಲ್ಲಿಸಿ, ಇಲ್ದಿದ್ರೆ ಪ್ರತಿ ನಗರದಲ್ಲೂ ಅಫ್ತಾಬ್‌ ಇರ್ತಾನೆ, ಅಸ್ಸಾಂ ಸಿಎಂ ಹೇಳಿಕೆ!

ಇನ್ನು ಇರಾಮ್‌ ಹಾಗೂ ಆದೇಶ್‌ ಕುಮಾರ್‌ ಕಳೆದ ಎರಡು ವರ್ಷಗಳಿಂದ ಸ್ನೇಹಿತರು. ಸ್ವಾತಿ ಎಂದು ಹೆಸರು ಬದಲಿಸಿಕೊಂಡಿರುವ ಇರಾಮ್‌ಗೆ ಈಗ 19 ವರ್ಷ. ದಾಖಲೆಗಳ ಪ್ರಕಾರ ನನ್ನ ಜನನ 2004ರ ಜನವರಿ 1 ರಂದು ಆಗಿದೆ. ನಾನು ವಯಸ್ಕಳಾಗಿದ್ದು, ನನ್ನ ಮದುವೆಯಾಗುವ ಹುಡುಗನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನನಗಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಈ ಧರ್ಮವನ್ನು ಸ್ವೀಕರಿಸಿದ್ದು, ಮುಂದೆ ಹಿಂದುವಾಗಿ ಬದುಕುತ್ತೇನೆ ಎಂದಿದ್ದಾರೆ. ನಾವಿಬ್ಬರೂ ಒಂದೇ ಗ್ರಾಮದವರು. ಮೊದಲು ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ, ನನ್ನ ಪ್ರೀತಿಯ ಕಾರಣಕ್ಕಾಗಿ ಈ ನಿರ್ಧಾರ ಮಾಡಿದ್ದೇನೆ. ಬದುಕಿದರೂ ಒಟ್ಟಿಗೆ, ಸತ್ತರೂ ಒಟ್ಟಿಗೆ ಎಂದು ತೀರ್ಮಾನ ಮಾಡಿದ ಬಳಿಕವೇ ಹಿಂದು ಧರ್ಮಕ್ಕೆ ಸೇರಿ ದೇವಸ್ಥಾನದಲ್ಲಿ ವಿವಾಹವಾಗಿದ್ದೇನೆ ಎಂದಿದ್ದಾರೆ.

ಬೆಂಗಳೂರು: ಹಿಂದೂ ಯುವತಿಯೊಂದಿಗೆ ಲವ್ವಿ ಡವ್ವಿ, ಮುಸ್ಲಿಂ ಯುವಕನಿಂದ ಲವ್‌ ಜಿಹಾದ್‌?

ಇನ್ನು ಶಹನಾಜ್‌ ಅಲಿಯಾಸ್‌ ಸುಮನ್‌ ಅವರು ಹುಟ್ಟಿದ್ದು 2004ರ ಜುಲೈ 10 ರಂದು. ಬರೇಲಿಯ ಶಂಗಾಲ್‌ಪುರ ಅವರ ಊರು. 'ನಾನು ಈಗಾಗಲೇ 10ನೇ ತರಗತಿ ವಿದ್ಯಾಭ್ಯಾಸ ಮುಗಿಸಿದ್ದು, ಅಜಯ್‌ನನ್ನು ಇಷ್ಟಪಡುತ್ತಿದ್ದೇನೆ. ಅಜಯ್‌ನಲ್ಲಿ ಪ್ರೀತಿ ಮಾಡುತ್ತಿದ್ದ ಕಾರಣಕ್ಕೆ ಭವಿಷ್ಯವನ್ನು ಗಮನಿಸಿ ಈ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ. ಪ್ರತಿ ದಿನ ನಾನು ಟಿವಿಯಲ್ಲಿ ತಲಾಕ್‌ ಕುರಿತಾದ ಸುದ್ದಿಯನ್ನು ನೋಡುತ್ತೇನೆ. ಅಪ್ಪನ ಮನೆಯನ್ನು ಬಿಟ್ಟು ಅತ್ತೆಯ ಮನೆಗೆ ಬರುವ ಯುವತಿ ತನ್ನ ಜೀವಮಾನ ಪೂರ್ತಿ ಇದೇ ಹೆದರಿಕೆಯಲ್ಲಿ ಇರುತ್ತಾಳೆ. ಕೊನೆಗೆ ಒಂದೇ ಸಮನೆ ಮೂರು ಬಾರಿ ತಲಾಕ್‌ ಎಂದು ವಿಚ್ಛೇದನ ನೀಡಲಾಗುತ್ತದೆ. ಆ ಕಾರಣದಿಂದಾಗಿ ನಾನು ಹಿಂದು ಆಗಲು ತೀರ್ಮಾನ ಮಾಡಿದ್ದೇನೆ. ಹಿಂದೂ ಧರ್ಮದಲ್ಲಿ ಸೊಸೆಯು ಮುಸಲ್ಮಾನರಂತೆ ಪರದೆಯ ಅಡಿಯಲ್ಲಿಯೇ ಬದುಕುವುದಿಲ್ಲ ಎಂದಿದ್ದಾರೆ.

Follow Us:
Download App:
  • android
  • ios