Asianet Suvarna News Asianet Suvarna News

ನವ ಜೋಡಿಗಳ ಹನಿಮೂನ್ ಸ್ವರ್ಗವಾಗಿರುವ ಮಾಲ್ಡೀವ್ಸ್‌ನಲ್ಲಿ ಗರಿಷ್ಠ ಡಿವೋರ್ಸ್‌ ಕೇಸ್!

ಭಾರತ ಹಾಗೂ ಮೋದಿ ಟೀಕಿಸಿದ ಮಾಲ್ಡೀವ್ಸ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಹಲವು ದಶಕಗಳಿಂದ ಮಾಲ್ಡೀವ್ಸ್ ಹನಿಮೂನರ್ಸ್ ಸ್ವರ್ಗ ಎಂದೇ ಗುರುತಿಸಿಕೊಂಡಿದೆ. ನವ ಜೋಡಿಗಳು,ಪ್ರಣಯ ಹಕ್ಕಿಗಳ ಮೊದಲ ಆಯ್ಕೆ ಮಾಲ್ಡೀವ್ಸ್. ಆದರೆ ಇದೇ ಮಾಲ್ಡೀವ್ಸ್‌ನಲ್ಲಿ ಡಿವೋರ್ಸ್ ಸಂಖ್ಯೆ ಕೂಡ ವಿಶ್ವದಲ್ಲೇ ಗರಿಷ್ಠ.
 

tourist Honeymoon paradise Maldives record With Highest Divorce Rate ckm
Author
First Published Jan 9, 2024, 4:34 PM IST

ಮಾಲ್ಡೀವ್ಸ್(ಜ.09) ಭಾರತವನ್ನು ಕೆಣಕಲು ಹೋದ ಮಾಲ್ಡೀವ್ಸ್ ಇದೀಗ ಹೈರಾಣಾಗಿದೆ. ಮಾಲ್ಡೀವ್ಸ್ ಪ್ರವಾಸಗಳು ರದ್ದಾಗುತ್ತಿದೆ. ಆರ್ಥಿಕ ಹೊಡೆತಕ್ಕೆ ಬೆದರಿದ  ಮಾಲ್ಡೀವ್ಸ್ ಭಾರತ ಟೀಕಿಸಿದ ಸಚಿವರ ಅಮಾನತು ಮಾಡಿದೆ. ಆದರೆ ಪರಿಸ್ಥಿತಿ ಕೈಮೀರಿದೆ. ಮಾಲ್ಡೀವ್ಸ್ ಪ್ರಮುಖವಾಗಿ ಹನಿಮೂನ್ ಸ್ವರ್ಗ ಎಂದೇ ಬಿಂಬಿತವಾಗಿದೆ. ನವ ಜೋಡಿಗಳು, ಪ್ರಣಯ ಹಕ್ಕಿಗಳು ಹೆಚ್ಚಾಗಿ ಮಾಲ್ಡೀವ್ಸ್‌ನಲ್ಲಿ ಕೆಲ ಹೊತ್ತು ಕಳೆಯಲು ಇಷ್ಟಪಡುತ್ತಾರೆ. ಆದರೆ ಇದೇ ಮಾಲ್ಡೀವ್ಸ್‌ನಲ್ಲಿ ವಿಚ್ಚೇದನ ಪ್ರಮಾಣ ಅತ್ಯಂತ ಗರಿಷ್ಠ ಅನ್ನೋ ಸತ್ಯ ಹೆಚ್ಚಿನವರಿಗೆ ತಿಳಿದಿಲ್ಲ. ವಿಶ್ವದಲ್ಲೇ ಅತ್ಯಂತ ಗರಿಷ್ಠ ಡಿವೋರ್ಸ್ ರೇಟ್ ಹೊಂದಿದೆ ದೇಶಗಳ ಪೈಕಿ ಮಾಲ್ಡೀವ್ಸ್ ಮೊದಲ ಸ್ಥಾನದಲ್ಲಿದೆ. 

ವಿಶ್ವದ ರಾಷ್ಟ್ರಗಳ ಪೈಕಿ ಗರಿಷ್ಠ ಡಿವೋರ್ಸ್ ಪ್ರಮಾಣದ ರಾಷ್ಟ್ರ ಮಾಲ್ಡೀವ್ಸ್. ಇಲ್ಲಿ 1000 ಮಂದಿಯಲ್ಲಿ 5.5 ವಿಚ್ಚೇದನ ಕೇಸ್ ದಾಖಲಾಗುತ್ತದೆ.  ಪರಿಸ್ಥಿತಿ, ಸಂದರ್ಭ, ಸಂಬಂಧ, ಆರ್ಥಿಕತೆ, ಮಾನಸಿಕತೆ, ಹೊಂದಾಣಿಕೆ ಸೇರಿದಂತೆ ಹಲವು ಕಾರಣಗಳಿವೆ. ಇದರ ಜೊತೆಗೆ ಮಾಲ್ಡೀವ್ಸ್ ಸರ್ಕಾರದ ಮದುವೆ ಹಾಗೂ ಕುಟುಂಬ ನೀತಿಯೂ ಕಾರಣ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. 

ಭಾರತ ಟೀಕಿಸಿದ ಮಾಲ್ಡೀವ್ಸ್ ಕಂಗಾಲು, ಅಧ್ಯಕ್ಷ ಮೊಹಮ್ಮದ್ ಮುಯಿಝ ಪದಚ್ಯುತಿಗೆ ಪ್ರತಿಪಕ್ಷ ಹೋರಾಟ!

ವಿಶ್ವದ ಟಾಪ್ 10 ಡಿವೋರ್ಸ್ ದೇಶ
ಮಾಲ್ಡೀವ್ಸ್; 1,000 ಮಂದಿಗೆ 5.5 ಡಿವೋರ್ಸ್ ರೇಟ್
ಗೌಮ್; 1,000 ಮಂದಿಗೆ 4.3 ಡಿವೋರ್ಸ್ ರೇಟ್
ರಷ್ಯಾ; 1,000 ಮಂದಿಗೆ 3.9 ಡಿವೋರ್ಸ್ ರೇಟ್
ಮೊಲ್ಡೋವಾ; 1,000 ಮಂದಿಗೆ 3.8 ಡಿವೋರ್ಸ್ ರೇಟ್
ಬೆಲಾರಸ್ ; 1,000 ಮಂದಿಗೆ 3.7 ಡಿವೋರ್ಸ್ ರೇಟ್
ಚೀನಾ; 1,000 ಮಂದಿಗೆ 3.2 ಡಿವೋರ್ಸ್ ರೇಟ್
ಅರುಬಾ; 1,000 ಮಂದಿಗೆ 2.9 ಡಿವೋರ್ಸ್ ರೇಟ್
ಜಾರ್ಜಿಯಾ; 1,000 ಮಂದಿಗೆ 2.9 ಡಿವೋರ್ಸ್ ರೇಟ್
ಉಕ್ರೇನ್; 1,000 ಮಂದಿಗೆ 2.9 ಡಿವೋರ್ಸ್ ರೇಟ್
ಕೋಸ್ಟ ರಿಕಾ; 1,000 ಮಂದಿಗೆ 2.8 ಡಿವೋರ್ಸ್ ರೇಟ್

ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ಸೆಹ್ವಾಗ್!

ಮಾಲ್ಡೀವ್ಸ್‌ ಇತಿಹಾಸದಲ್ಲಿ ಡಿವೋರ್ಸ್ ಕುರಿತ ಉಲ್ಲೇಖವಿದೆ. ಮೊರಕ್ಕೊ ದೇಶದ ಪ್ರಯಾಣಿಕ ಹಾಗೂ ಇತಿಹಾಸಕಾರ ಇಬ್ನ್ ಬಟ್ಟುಟಾ 1343ರಲ್ಲಿ ಮಾಲ್ಡೀವ್ಸ್ ಪ್ರವಾಸ ಮಾಡಿ ಕೆಲ ಮಹತ್ವದ ವಿಚಾರಗಳನ್ನು ದಾಖಲಿಸಿದ್ದಾನೆ.ತನ್ನ ರಿಹ್ಲಾ ಪ್ರವಾಸಕಥನದಲ್ಲಿ ಮಾಲ್ಡೀವ್ಸ್ ಕುರಿತು ಬರೆದಿದ್ದಾನೆ. ಮಾಲ್ಡೀವ್ಸ್ ಸೌಂದರ್ಯ ನೋಡಿ ಕೆಲ ತಿಂಗಳು ಇಲ್ಲೆ ಕಳೆದಿದ್ದಾನೆ. ಇಷ್ಟೇ ಅಲ್ಲ ಕೆಲ ತಿಂಗಳು ಕಾಲ ಮಾಲ್ಡೀವ್ಸ್‌ನಲ್ಲಿದ್ದ ಇಬ್ನ್ ಬಟ್ಟುಟಾ 6 ಬಾರಿ ಮದುವೆಯಾಗಿ ವಿಚ್ಚೇದನ ಪಡೆದಿರುವುದಾಗಿ ಪ್ರವಾಸಕಥನದಲ್ಲಿ ಉಲ್ಲೇಖಿಸಿದ್ದಾನೆ. 

ಇದೀಗ ಭಾರತ ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್ ಹೊತ್ತಿ ಉರಿಯುತ್ತಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದೆ. ಆದರೆ ಭಾರತ ಲಕ್ಷದ್ವೀಪವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.  

Follow Us:
Download App:
  • android
  • ios