ಭಾರತ ಟೀಕಿಸಿದ ಮಾಲ್ಡೀವ್ಸ್ ಕಂಗಾಲು, ಅಧ್ಯಕ್ಷ ಮೊಹಮ್ಮದ್ ಮುಯಿಝ ಪದಚ್ಯುತಿಗೆ ಪ್ರತಿಪಕ್ಷ ಹೋರಾಟ!

ಪ್ರಧಾನಿ ಮೋದಿ ಹಾಗೂ ಭಾರತೀಯರ ನಿಂದಿಸಿದ ಮಾಲ್ಡೀವ್ಸ್ ಸಿಚವರ ವಜಾ ಮಾಡಿದರೂ ಪರಿಸ್ಥಿತಿ ತಣ್ಣಗಾಗಿಲ್ಲ. ಭಾರತದ ಆಕ್ರೋಶ ಬೆಚ್ಚಿ ಬಿದ್ದಿರುವ ಮಾಲ್ಡೀವ್ಸ್ ಪ್ರತಿಪಕ್ಷಗಳು ಇದೀಗ ಭಾರತ ಹಾಗೂ ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟೇ ಅಲ್ಲ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಪದಚ್ಯುತಿಗೆ ಹೋರಾಟಗಳು ಆರಂಭಗೊಂಡಿದೆ

Maldives MP Ali Azim demand vote of no confidence against President Mohamed Muizzu ckm

ಮಾಲ್ಡೀವ್ಸ್(ಜ.09) ಮಾಲ್ಡೀವ್ಸ್ ಅಕ್ಷರಶಃ ಕಂಗಾಲಾಗಿದೆ. ಭಾರತ ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿ ಇದೀಗ ಹೆಣಗಾಡುತ್ತಿದೆ. ನಿಂದಿಸಿದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿದೆ. ಆದರೆ ಈ ಮಾತುಗಳಿಂದ ಮಾಲ್ಡೀವ್ಸ್‌ಗೆ ಅತೀ ದೊಡ್ಡ ಹಿನ್ನಡೆಯಾಗಿದೆ. ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಾಲ್ಡೀವ್ಸ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಪದಚ್ಯುತಿಗೆ ಹೋರಾಟ ತೀವ್ರಗೊಳ್ಳುತ್ತಿದೆ. ಮಾಲ್ಡೀವ್ಸ್ ಸಂಸದ, ಅಲ್ಪಸಂಖ್ಯಾತ ಸಮುದಾಯದ ನಾಯಕ ಅಲಿ ಅಜೀಮ್, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಆಗ್ರಹಿಸಿದ್ದಾರೆ.

ದೇಶದ ವಿದೇಶಾಂಗ ನೀತಿಯ ಸ್ಥಿರಿತೆ ಎತ್ತಿಹಿಡಿಯಲು ಹಾಗೂ ನೆರೆ ರಾಷ್ಟ್ರವನ್ನು ಪ್ರತ್ಯೇಕವಾಗಿಡುವ ಪ್ರಯತ್ನವನ್ನು ತಡೆಯಲು ಸಮರ್ಥವಾಗಿದ್ದೇವೆ. ನಾವ ಪ್ರಜಾಪ್ರಭುತ್ವವಾದಿಗಳು.  ಮಾಲ್ಡೀವ್ಸ್ ಸರ್ಕಾರದ ಕಾರ್ಯದರ್ಶಿಗಳೇ, ನೀವು ಅಧ್ಯಕ್ಷ ಮೊಹಮ್ಮದ್ ಮುಯಿಝಿ ಅದಿಕಾರದಿಂದ ಪದಚ್ಯುತಗೊಳಿಸಲು ಸಿದ್ದರಿದ್ದೀರಾ? ಅವಿಶ್ವಾಸ ನಿರ್ಣಯ ತೆಗೆದುಕೊಳ್ಳಲು ಸಿದ್ದವಾಗಿದ್ದೀರಾ ಎಂದು ಅಲಿ ಅಜೀಮ್ ಪ್ರಶ್ನಿಸಿದ್ದಾರೆ. 

 

ಮಾಲ್ಡೀವ್ಸ್‌ಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್, ಲಕ್ಷದ್ವೀಪದ ನೀರು ಯೋಜನೆ ಆರಂಭಿಸಿದ ಇಸ್ರೇಲ್!

ಮಾಲ್ಡೀವ್ಸ್ ಸರ್ಕಾರದ ಸಚಿವರು ಹಾಗೂ ಸರ್ಕಾರದ ನಡೆಯನ್ನು ಮಾಲ್ಡೀವ್ಸ್ ಮಾಜಿ ಅಧ್ಯಕ್ಷರು, ಪ್ರತಿಪಕ್ಷಗಳ ನಾಯಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರ ವಿರುದ್ಧ ಮರಿಯಮ್‌ ಬಳಕೆ ಮಾಡಿರುವ ಪದಗಳು ಸರಿಯಾದುದಲ್ಲ ಎಂದು ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಖಂಡಿಸಿದ್ದಾರೆ. ರಕ್ಷಣೆಯ ವಿಚಾರದಲ್ಲಿ ಭಾರತ ಮಾಲ್ಡೀವ್ಸ್‌ನ ಪ್ರಮುಖ ಮಿತ್ರರಾಷ್ಟ್ರ. ಮಾರಿಯಂ ಬಳಕೆ ಮಾಡಿರುವ ಪದಗಳು ಮಾಲ್ಡೀವ್ಸ್‌ನ ರಕ್ಷಣೆ ಮತ್ತು ಯಶಸ್ಸಿಗೆ ತೊಂದರೆ ಮಾಡಬಹುದು. ಈ ಹೇಳಿಕೆಯಿಂದ ಮಾಲ್ಡೀವ್ಸ್‌ ಸರ್ಕಾರ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ ಅವರ ಹೇಳಿಕೆನ್ನು ಖಂಡಿಸುವುದರ ಜೊತೆಗೆ ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸರ್ಕಾರದ ನೀತಿಯಲ್ಲ ಎಂದು ಭಾರತಕ್ಕೆ ಅರ್ಥ ಮಾಡಿಸಬೇಕು’ ಎಂದು ಹೇಳಿದ್ದಾರೆ.

ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ಸೆಹ್ವಾಗ್!

ಇತ್ತ ಮಾಲ್ಡೀವ್ಸ್ ವಿರುದ್ಧ ಭಾರತ ವಿದೇಶಾಂಗ ಸಚಿವಾಲಯ ಖಡಕ್ ಸಂದೇಶ ರವಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಲ್ಡೀವ್ಸ್‌ನ ಮೂವರು ಸಚಿವರ ಅಮಾನತು ಸಾಲದು. ಅಬರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಭಾರತ ಸರ್ಕಾರ ಆಗ್ರಹಿಸಿದೆ. ಸೋಮವಾರ ಮಾಲ್ಡೀವ್ಸ್‌ನ ಭಾರತದ ಪ್ರತಿನಿಧಿಯನ್ನು ಕರೆಸಿ ವಿದೇಶಾಂಗ ಸಚಿವಾಲಯ ಈ ಆಗ್ರಹವನ್ನು ವ್ಯಕ್ತಪಡಿಸಿದೆ

Latest Videos
Follow Us:
Download App:
  • android
  • ios