ಮದುವೆ ಅಂದ್ರೆ ಬರೀ ಸಂಗಾತಿ ಜೊತೆಗೆ ನಿಮ್ಮ ಬದುಕೆಂದು ಭಾವಿಸಬೇಡಿ,ಅವರ ಕುಟುಂಬದವರೊಂದಿಗೂ ಹೊಂದಾಣಿಕೆಯಿಂದ ಬಾಳೋದು ಅಗತ್ಯ. ಮದುವೆಯಾದ ಹೊಸತರಲ್ಲಿ ಕುಟುಂಬದ ಪ್ರತಿ ಸದಸ್ಯರ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳೋದು ತುಸು ಕಷ್ಟದ ಕೆಲ್ಸ. ಅದ್ರಲ್ಲೂ ನಾದಿನಿ ಜೊತೆ ವ್ಯವಹರಿಸೋದು ಹೇಗೆ ಎಂಬ ಗೊಂದಲ ಅನೇಕರನ್ನು ಕಾಡಿರುತ್ತೆ. ಅದ್ರಲ್ಲೂಗಂಡನ ಮನೆಗೆ ಕಾಲಿಟ್ಟ ಹೆಣ್ಣಿಗೆ ಪ್ರಾರಂಭದ ದಿನಗಳಲ್ಲಿನಾದಿನಿಯ ಜೊತೆ ಬಾಂಧವ್ಯ ಬೆಸೆಯೋದೇ ಸವಾಲಿನ ಕೆಲ್ಸ. ಹೀಗಿರೋವಾಗ ಉತ್ತಮ ಬಾಂಧವ್ಯ ಬೆಸೆಯಲು ನಾದಿನಿ ಜೊತೆ ಹೇಗೆ ವ್ಯವಹರಿಸಬೇಕು ಎಂಬುದಕ್ಕೆ ಇಲ್ಲಿವೆ ಟಿಪ್ಸ್.

ಮದುವೆಗೆ ಓಕೆ ಅನ್ನೋ ಮುನ್ನ ಹಿಂಗೆಲ್ಲ ಯೋಚಿಸಿದ್ದೀರಾ?

ಜೊತೆಯಾಗಿ ಸಮಯ ಕಳೆಯಿರಿ
ಜೊತೆಯಾಗಿ ಒಂದಿಷ್ಟು ಸಮಯ ಕಳೆದಾಗಲೇ ಒಬ್ಬರನ್ನೊಬ್ಬರು ಅರಿಯಲು ಸಾಧ್ಯ. ಶಾಪಿಂಗ್ಗೆ ಹೋಗೋದು, ಸ್ಪಾಕ್ಕೆ ಭೇಟಿ ನೀಡೋದು, ಜೊತೆಯಾಗಿ ಕೇಕ್ ಮಾಡೋದು ಇಲ್ಲವೆ ಕೈಯಲ್ಲಿ ಒಂದು ಗ್ಲಾಸ್ ಕಾಫಿ ಹಿಡಿದು ಆರಾಮವಾಗಿ ಕೂತು ಹರಟೋದು. ಹೀಗೆ ಆಗಾಗ ಇಬ್ಬರು ಒಟ್ಟಿಗೆ ಸೇರಿ ಏನಾದ್ರು ಮಾಡುತ್ತಿದ್ರೆ ಇಬ್ಬರ ನಡುವೆ ಆತ್ಮೀಯತೆ, ಸಲುಗೆ ಬೆಳೆಯುತ್ತೆ.ಇದು ಸಂಬಂಧವನ್ನು ಗಟ್ಟಿಗೊಳಿಸುತ್ತೆ.

ಹೊಗಳಲು ಹಿಂಜರಿಕೆ ಬೇಡ
ಹೊಗಳಿಕೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಇನ್ನೊಬ್ಬರೊಂದಿಗೆ ಸಂಬಂಧ ಬೆಸೆಯೋ ಸಂಗತಿಗಳಲ್ಲಿ ಹೊಗಳಿಕೆ ಕೂಡ ಒಂದು. ಹೊಗಳಿಕೆ ಎಂದಿಗೂ ಬೇಸರ ಮೂಡಿಸೋದಿಲ್ಲ, ಬದಲಿಗೆ ಮನಸ್ಸಿಗೆ ಖುಷಿ ನೀಡೋ ಜೊತೆ ನಿಮ್ಮನ್ನು ನೀವು ವಿಶೇಷವೆಂದು ಪರಿಗಣಿಸಲು ನೆರವು ನೀಡುತ್ತೆ. ನಿಮ್ಮ ನಾದಿನಿ ಹೊಸ ಡ್ರೆಸ್ ಧರಿಸಿದಾಗ ʼನೀನು ಈ ಡ್ರೆಸ್ನಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದೀಯಾʼ ಎನ್ನಲು ಮರೆಯಬೇಡಿ. ಹಾಗಂತ ಎಲ್ಲದಕ್ಕೂ ಆಕೆಯನ್ನು ಹೊಗಳಿ ಅಟ್ಟಕ್ಕೇರಿಸಬೇಡಿ. ಜಾಸ್ತಿಯಾದ್ರೆ ಅಮೃತವೂ ವಿಷಯೆಂಬಂತೆ ನೀವು ಹೆಚ್ಚು ಹೊಗಳಿದ್ರೆ ಅವೆಲ್ಲವೂ ನಾಟಕೀಯವಾಗಿ ಕಾಣಿಸಬಹುದು. ಹೀಗಾಗಿ ಅಗತ್ಯವೆನಿಸಿದಾಗ ಮಾತ್ರ ಮೆಚ್ಚುಗೆ ಸೂಚಿಸಿ.

ನಿಮಗೆ ನಿಜವಾಗಿಯೂ ಪ್ರೀತಿಯಾಗಿದ್ರೆ... ಅವರನ್ನು ಕಂಡಾಗ ಈ ರೀತಿಯೆಲ್ಲಾ ಆಗುತ್ತಾ?

ವಿಶೇಷ ದಿನಗಳಂದು ಶುಭಾಶಯ ಹೇಳಲು ಮರೆಯಬೇಡಿ
ನಿಮ್ಮ ನಾದಿನಿಯ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಉದ್ಯೋಗದಲ್ಲಿ ಬಡ್ತಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಆಕೆಗೆ ತಪ್ಪದೆ ಶುಭಾಶಯ ತಿಳಿಸಿ. ಈ ರೀತಿ ಶುಭಾಶಯ ಹೇಳೋದು, ಅಭಿನಂದಿಸೋದು ಖಂಡಿತಾ ಅವರಿಗೆ ಖುಷಿ ನೀಡುತ್ತೆ. ಅದ್ರಲ್ಲೂ ವಿಷ್ ಜೊತೆಗೊಂದು ಪುಟ್ಟ ಉಡುಗೊರೆಯಿದ್ದರೆ ಆಕೆ ಇನ್ನಷ್ಟು ಖುಷಿ ಪಡೋದು ಗ್ಯಾರಂಟಿ. 

ಸಲಹೆ ಕೇಳಲು ಹಿಂಜರಿಯಬೇಡಿ
ನಮ್ಮ ಬಳಿ ಯಾರಾದ್ರೂ ಸಲಹೆ ಕೇಳಿದಾಗ ಅವರ ಬಗ್ಗೆ ಪ್ರೀತಿ ಮೂಡೋ ಜೊತೆ ನಮ್ಮ ಬಗ್ಗೆ ಒಂದಿಷ್ಟು ಅಭಿಮಾನವೂ ಹುಟ್ಟಿಕೊಳ್ಳುತ್ತೆ. ಇದು ಸಹಜ ಕೂಡ. ಸಲಹೆ ಕೇಳೋದ್ರಿಂದ ಯಾರೂ ಸಣ್ಣವರಾಗೋದಿಲ್ಲ. ಆದ್ರೆ ಅನಗತ್ಯವಾಗಿ ಇನ್ನೊಬ್ಬರಿಗೆ ಸಲಹೆ ನೀಡಬಾರದಷ್ಟೆ. ಹೀಗಾಗಿ ನಿಮ್ಮ ನಾದಿನಿ ಬಳಿ ನೀವು ಸಲಹೆ ಕೇಳಲು ಹಿಂಜರಿಯಬೇಡಿ. ಆಕೆ ನೀಡಿದ ಸಲಹೆಯನ್ನು ಪರಿಗಣಿಸಿ. ಇದ್ರಿಂದ ಆಕೆಗೆ ನೀವು ತೋರುತ್ತಿರೋ ಪ್ರೀತಿ, ಗೌರವದ ಮಹತ್ವ ತಿಳಿಯುತ್ತೆ. ಆಕೆ ನಿಮಗೆ ಮಹತ್ವದ ಸಲಹೆ, ಸೂಚನೆಗಳನ್ನು ನೀಡಬಲ್ಲಳು ಕೂಡ. ಅದ್ರಲ್ಲೂಕುಟುಂಬದ ಇತರ ಸದಸ್ಯರ ಜೊತೆ ಹೇಗೆ ಬೆರೆಯಬೇಕು ಎಂಬ ಟಿಪ್ಸ್ ಪಡೆಯಲು ನಿಮ್ಗೆ ಆಕೆಗಿಂತ ಸೂಕ್ತವಾದ ವ್ಯಕ್ತಿ ಬೇರೆ ಯಾರೂ ಇಲ್ಲ.

ನಿಮ್ಮನ್ನು ನೀವು ಪ್ರೀತಿಸೋದು ಮುಖ್ಯ

ಅಗತ್ಯ ಸಂದರ್ಭಗಳಲ್ಲಿ ರಾಜೀಯಾಗಿ
ಭಿನ್ನಾಭಿಪ್ರಾಯ, ವೈಮನಸ್ಸು ಎಲ್ಲ ಸಂಬಂಧಗಳಲ್ಲೂ ಮೂಡುತ್ತೆ. ನಾದಿನಿ ವಿಷಯದಲ್ಲೂ ಇದು ಸಹಜ. ಅಷ್ಟಕ್ಕೂ ಆಕೆ ನಿಮ್ಮ ಸಂಗಾತಿಯ ಸಹೋದರಿ. ಹೀಗಾಗಿ ಆಕೆ ಜೊತೆಗೂ ನೀವು ಪ್ರೀತಿ, ಕಾಳಜಿ ಹಾಗೂ ಅಕ್ಕರೆಯಿಂದ ನಡೆದುಕೊಳ್ಳಬೇಕು. ಕೆಲವೊಮ್ಮೆ ಆಕೆಯ ವರ್ತನೆ ಅಥವಾ ಮಾತಿನಿಂದ ನಿಮಗೆ ನೋವಾಗಬಹುದು, ಹಾಗಂತ ನೀವೂ ಅದೇರೀತಿ ವರ್ತಿಸಲು ಹೋಗಬೇಡಿ. ಆಕೆಯ ಭಾವನೆಗಳಿಗೆ ನೋವಾಗದಂತೆ ಪರಿಸ್ಥಿತಿಯನ್ನು ಪ್ರಬುದ್ಧತೆಯಿಂದ ನಿರ್ವಹಿಸಿ. ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಅಥವಾ ಸ್ವಲ್ಪ ಸಮಯ ಸುಮ್ಮನಿದ್ದು ಬಿಡಿ. ಕಾಲಕ್ಕೆ ಎಲ್ಲವನ್ನೂ ಮರೆಸೋ ಶಕ್ತಿಯಿದೆ.

ನೆರವು ನೀಡಿ
ನಿಮ್ಮ ನಾದಿನಿಗೆ ಅಗತ್ಯ ಸಂದರ್ಭಗಳಲ್ಲಿ ನೆರವು ನೀಡಲು ಹಿಂದೇಟು ಹಾಕಬೇಡಿ. ಆಕೆಗೆ ಶಾಪಿಂಗ್ಗೆ ಹೋಗಬೇಕಾಗಿರುತ್ತೆ,ಆ ಸಮಯದಲ್ಲಿ ಆಕೆ ಮಕ್ಕಳನ್ನು ನೀವು ನೋಡಿಕೊಳ್ಳಿ. ಪಾರ್ಟಿಗೆ ಹೊರಡೋ ಸಮಯದಲ್ಲಿ ಡ್ರೆಸ್ ಮಾಡಿಕೊಳ್ಳಲು ಆಕೆಗೆ ನೆರವು ನೀಡೋದು ಸೇರಿದಂತೆ ಇಂಥ ಚಿಕ್ಕಪುಟ್ಟ ಸಹಾಯಗಳು ನಿಮ್ಮ ಕುರಿತು ಆಕೆ ಮನಸ್ಸಿನಲ್ಲಿ ನಂಬಿಕೆ, ಪ್ರೀತಿ ಹಾಗೂ ವಿಶ್ವಾಸವನ್ನು ಹುಟ್ಟುಹಾಕುತ್ತೆ.