ನಿಮ್ಮನ್ನು ನೀವು ಪ್ರೀತಿಸೋದು ಮುಖ್ಯ: ಈ ಸೂತ್ರಗಳನ್ನು ಅಳವಡಿಸಿ
ಕೆಲವರು ಪ್ರೀತಿಗಾಗಿ ಹಂಬಲಿಸಿ ತಮ್ಮನ್ನು ತಾವು ಮರೆಯುತ್ತಾರೆ, ಇನ್ನು ಕೆಲವರು ಪ್ರೀತಿಯ ಅಮಲಿನಲ್ಲಿ ತೇಲುತ್ತಾ ತಮ್ಮ ತನವನ್ನು ಕಳೆದುಕೊಂಡಿರುತ್ತಾರೆ. ಕೆಲವೊಮ್ಮೆ ಪ್ರೀತಿಯನ್ನೆ ಕಳೆದುಕೊಂಡು ತಮ್ಮನ್ನೆ ತಾವು ಮರೆಯುತ್ತಾರೆ. ಯಾಕೆ ಹೀಗೆ? ಎಲ್ಲಾದಕ್ಕೂ ಮೊದಲು ನಮ್ಮನ್ನು ನಾವು ಪ್ರೀತಿಸಬೇಕು..
ಕೆಲವೊಮ್ಮೆ ನಾವು ಯಾರನ್ನಾದರೂ ಎಷ್ಟು ಪ್ರೀತಿಸುತ್ತೇವೆ ಅಥವಾ ಕೇರ್ ಮಾಡುತ್ತೇವೆ ಎಂದರೆ ನಮ್ಮ ಇಷ್ಟ, ಕಷ್ಟ, ಆಸೆಗಳನ್ನೆಲ್ಲಾ ಮರೆತು ಪ್ರೀತಿ ಕೇರ್ ಮಾಡುತ್ತೇವೆ. ಲವ್ ಮಾಡುತ್ತಿದ್ದರೂ ಸಹ ಅಷ್ಟೇ ನಮಗಿಂತ ಹೆಚ್ಚಾಗಿ ಬೇರೆಯವರನ್ನು ಲವ್ ಮಾಡುತ್ತೀರಿ. ಇದು ಸರಿಯಲ್ಲ. ಬೇರೆಯವರನ್ನು ಲವ್, ಕೇರ್ ಮಾಡುವುದಕ್ಕಿಂತ ನಿಮ್ಮನ್ನು ನೀವು ಪ್ರೀತಿಸೋದು ತುಂಬಾನೆ ಮುಖ್ಯ. ಹಾಗೆ ಮಾಡಿದರೆ ಮಾತ್ರ ನೀವು ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ...
ಅದಕ್ಕಾಗಿ ಏನೆಲ್ಲಾ ಮಾಡಬೇಕು ಅನ್ನೋ ಲಿಸ್ಟ್ ಇಲ್ಲಿದೆ. ನೀವು ಈ ರೂಲ್ಸ್‌ಗಳನ್ನು ಪಾಲಿಸಿದರೆ ಸಾಕು..
ಸದಾ ಕಾಲ ಸಂತೋಷವಾಗಿರುವ ಒಂದು ಸುಲಭ ವಿಧಾನ ಎಂದರೆ ಸ್ಪಾಗೆ ಹೋಗಿ ಪೂರ್ತಿ ದೇಹಕ್ಕೆ ಮಸಾಜ್ ಮಾಡಿ.
ಹೋಲಿಕೆ ಮಾಡಲು ಹೋಗಬೇಡಿ. ಇದು ನಮ್ಮನ್ನು ನಾವು ಪ್ರೀತಿಸಲು ಸಾಧ್ಯವಾಗದಂತೆ ಮಾಡುತ್ತದೆ. ಹೋಲಿಕೆ ಮಾಡುತ್ತಾ ಹೋದಂತೆ ನಮ್ಮನ್ನು ನಾವು ಕೀಳಾಗಿ ಕಾಣಲು ಆರಂಭಿಸುತ್ತೇವೆ. ಇದರಿಂದ ನಮ್ಮ ಮೇಲೆ ನಮಗೆ ಕೋಪ ಬರುವ ಸಾಧ್ಯತೆ ಇದೆ. ಆದುದರಿಂದ ಯಾವತ್ತೂ ಹೋಲಿಕೆ ಮಾಡಬೇಡಿ.
ಯಾವುದಾದರೂ ಫೇವರಿಟ್ ರೆಸ್ಟಾರೆಂಟ್‌ಗೆ ತೆರಳಿ ಇಷ್ಟವಾದ ತಿಂಡಿ ತಿಂದು ಎಂಜಾಯ್ ಮಾಡಿ. ಅಥವಾ ಮನೆಯಲ್ಲಿಯೇ ಇಷ್ಟವಾದ ತಿನಿಸುಗಳನ್ನು ಮಾಡಿ ಎಂಜಾಯ್ ಮಾಡಬೇಕು. ಏನಾದರೂ ತಿನ್ನಲು ಇನ್ನೊಬ್ಬರನ್ನು ಕಾಯಲು ಹೋಗಲೇಬೇಡಿ.
ನಿಮಗೆ ಇಷ್ಟವಾಗುವಂತಹ ಉತ್ತಮವಾದ ಹವ್ಯಾಸಗಳನ್ನು ರೂಢಿ ಮಾಡಿ. ಇದು ಮನಸ್ಸು ಯಾವಾಗಲೂ ತೊಡಗಿರುವಂತೆ ಮಾಡುತ್ತದೆ. ಪುಸ್ತಕಗಳನ್ನು ಓದುವುದು, ಚಿತ್ರ ಮಾಡುವುದು, ಗಾರ್ಡನಿಂಗ್ ಇವೆಲ್ಲವೂ ಮನಸ್ಸಿಗೆ ಸಂತೋಷ ನೀಡುತ್ತದೆ.
ಟಿವಿ, ಮೊಬೈಲ್, ಫ್ರೆಂಡ್ಸ್, ಕೆಲಸ ಎಲ್ಲಾ ಬಿಟ್ಟು ನಿಮಗಾಗಿ ಸಮಯ ಮೀಸಲಿಟ್ಟು ರಿಲ್ಯಾಕ್ಸ್ ಆಗಿ. ನಿಮಗೆ ಏನು ಇಷ್ಟವಿದೆಯೋ ಅದನ್ನು ಟ್ರೈ ಮಾಡಿ.
ಬ್ಯೂಟಿ ಸಲೂನ್‌ನಲ್ಲಿ ಅಪಾಯಿಂಟ್‌ಮೆಂಟ್ ಪಡೆದುಕೊಂಡು ಮೆನಿಕ್ಯೂರ್ ಅಥವಾ ಪೆಡಿಕ್ಯೂರ್ ಮಾಡಿಸಿಕೊಳ್ಳಿ. ಯಾವುದೋ ಕಾರ್ಯಕ್ರಮ ಬರಲು ಅಥವಾ ಇನ್ಯಾರೋ ಹೇಳೊವರೆಗೂ ಕಾಯಬೇಡಿ. ನಿಮಗೆ ಇಷ್ಟವಿರುವ ಬ್ಯೂಟಿ ಟ್ರಿಕ್ಸ್ ಗಳನ್ನು ಟ್ರೈ ಮಾಡಬಹುದು.
ಪ್ರತಿಯೊಬ್ಬ ಮಹಿಳೆ ಹಾಗೂ ಹುಡುಗಿಯರಿಗೂ ಶಾಪಿಂಗ್ ಮಾಡುವುದೆಂದರೆ ತುಂಬಾನೆ ಇಷ್ಟವಾದ ವಿಷಯ. ನಮ್ಮನ್ನು ನಾವು ಪ್ರೀತಿಸಬೇಕಾದರೆ ನಮಗೆ ಇಷ್ಟವಾದ ಎಲ್ಲಾ ವಸ್ತುಗಳ ಶಾಪಿಂಗ್ ಮಾಡಬೇಕು.
ಯಾವಾಗಲೂ ನಿದ್ರೆ ಮಾಡೋದಕ್ಕಿಂತಒಂದೆರಡು ಗಂಟೆ ಹೆಚ್ಚು ಹೊತ್ತು ಮಗುವಿನಂತೆ ನಿದ್ರಿಸಿ. ಇದರಿಂದ ಮನಸು ರಿಲ್ಯಾಕ್ಸ್ ಆಗುತ್ತದೆ.
ಎಲ್ಲಾ ರೀತಿಯ ನೆಗೆಟಿವ್ ಯೋಚನೆ, ಆಲೋಚನೆಗಳನ್ನು ಮನಸ್ಸಿನಿಂದ ದೂರ ಇರಿಸಿ, ಬೇಸರ ವಿಷಯಗಳು ಹೆಚ್ಚು ಹೊತ್ತು ಮನಸ್ಸಿನಲ್ಲಿಡಲು ಅವಕಾಶ ನೀಡಬೇಡಿ.
ಯಾವಾಗಲೂ ಸಂತೋಷವಾಗಿರುವ, ಪಾಸಿಟಿವ್ ಆಗಿ ಯೋಚನೆ ಮಾಡುವ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಇದರಿಂದ ಸದಾ ಕಾಲ ಸಂತೋಷವಾಗಿರೋದು ಖಂಡಿತಾ.
ಮನೆಯ ಒಳಾಂಗಣ ನಿಮಗೆ ಬೋರ್ ಎಂದು ಅನಿಸಿದರೆ, ಮನೆಗೆ ಬೇಕಾದ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಂದು ಮನೆಯ ಲುಕ್ ಬದಲಾಯಿಸಿ, ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ನಿಮಗಾಗಿ ನೀವು ಸೇವಿಂಗ್ಸ್ ಮಾಡಿ, ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡಿ, ಟ್ರಾವೆಲ್ ಮಾಡಿ, ಹೊಸ ಹೊಸ ಜನರನ್ನು ಭೇಟಿ ಮಾಡಿ. ಇದರಿಂದ ನಿಮ್ಮ ಬಗ್ಗೆ ನಿಮಗೆ ತಿಳಿಯಲು ಸುಲಭವಾಗುತ್ತದೆ.