ಬರ್ತ್ಡೇ, ಆನಿವರ್ಸರಿ, ಪ್ರಮೋಷನ್....ಹೀಗೆ ಸ್ನೇಹಿತರು, ಬಂಧುಗಳಿಗೆ ನಿಮ್ಮ ಬಳಿ ಪಾರ್ಟಿ ಕೇಳಲು ಹತ್ತು ಹಲವು ನೆಪಗಳಿರುತ್ತವೆ. ನಿಮಗೇನೋ ಪಾರ್ಟಿ ನೀಡಬೇಕು ಎಂಬ ಮನಸ್ಸಿರುತ್ತದೆ. ಆದರೆ, ಹೋಟೆಲ್ನಲ್ಲೂ ರೆಸಾರ್ಟ್ಲ್ಲೂ ಪಾರ್ಟಿ ಆರೇಂಜ್ ಮಾಡಿದರೆ ಜೇಬಿಗೆ ಕತ್ತರಿ ಗ್ಯಾರಂಟಿ. ಹೀಗಿರುವಾಗ ಎಲ್ಲರನ್ನೂ ಮನೆಗೇ ಕರೆದು ಪಾರ್ಟಿ ನೀಡಬೇಕೆಂಬ ಬಯಕೆ ನಿಮ್ಮದು. ಆದರೆ, ಪಾರ್ಟಿಗೆ ಸಿದ್ಧತೆ ಮಾಡೋದೇ ದೊಡ್ಡ ತಲೆನೋವಾಗಿದೆಯೇ? ಹಾಗಿದ್ರೆ ನೀವು ಇದನ್ನೊಮ್ಮೆ ಓದಲೇಬೇಕು.

ಇದು ಕನಸಿನ ಮನೆ, ಭಾವನೆಗಳ ಅಡಿಪಾಯ, ಅನುಬಂಧದ ಗೋಪುರ

ದಿನಾಂಕ, ವೇಳೆ ನಿಗದಿಪಡಿಸಿ: ಪಾರ್ಟಿಯನ್ನು ಯಾವ ದಿನ ಆರೇಂಜ್ ಮಾಡಿದರೆ ನಿಮಗೆ ಹಾಗೂ ಅತಿಥಿಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ಪರಿಶೀಲಿಸಿ. ಉದಾಹರಣೆಗೆ ವಾರದ ಮಧ್ಯಭಾಗದಲ್ಲಿ ಪಾರ್ಟಿ ಆರೇಂಜ್ ಮಾಡಿದರೆ ನೀವು ಆಫೀಸ್ಗೆ ರಜೆ ಹಾಕಬೇಕಾಗಬಹುದು. ಜೊತೆಗೆ ಬರುವ ಅತಿಥಿಗಳಿಗೂ ತೊಂದರೆ. ವೀಕೆಂಡ್ಗಳಲ್ಲಿ ಪಾರ್ಟಿ ಆಯೋಜಿಸಿದರೆ ನಿಮಗೂ, ಅತಿಥಿಗಳಿಗೂ ಇಬ್ಬರಿಗೂ ಅನುಕೂಲ. ಪಾರ್ಟಿಗೆ ಯಾವ ಸಮಯ (ಮಧ್ಯಾಹ್ನ ಅಥವಾ ರಾತ್ರಿ) ಸೂಕ್ತ ಎಂಬ ಬಗ್ಗೆಯೂ ಯೋಚಿಸಿ.

ಯಾರನ್ನೆಲ್ಲ ಆಹ್ವಾನಿಸಬೇಕು?: ಪಾರ್ಟಿಗೆ ಯಾರನ್ನೆಲ್ಲ ಆಹ್ವಾನಿಸಬೇಕು ಎಂಬುದನ್ನು ಮನೆಯ ಸದಸ್ಯರೆಲ್ಲ ಕೂತು ಚರ್ಚಿಸಿ, ಪಟ್ಟಿ ಮಾಡಿ. ಇದರಿಂದ ಪಾರ್ಟಿಗೆ ಅಂದಾಜು ಎಷ್ಟು ಜನರಾಗಬಹುದು ಎಂಬ ಚಿತ್ರಣ ಸಿಗುತ್ತದೆ. ಜ್ಯೂಸ್, ಊಟ, ಡ್ರಿಂಕ್ಸ್ ಆರೇಂಜ್ ಮಾಡಲು ಕೂಡ ಇದರಿಂದ ಅನುಕೂಲವಾಗುತ್ತದೆ.

ತಲೆ ಬುಡದಲ್ಲಿ ಇದನ್ನೆಲ್ಲ ಇಟ್ಕೊಂಡ್ರೆ ಕಾಡುತ್ತೆ ಮನೋರೋಗ!

ಬಜೆಟ್ ಸಿದ್ಧಪಡಿಸಿ: ಪಾರ್ಟಿಗೆ ನೀವು ಎಷ್ಟು ಹಣ ವ್ಯಯಿಸಲು ಸಿದ್ಧರಿದ್ದೀರಿ ಎಂಬುದನ್ನು ನಿರ್ಧರಿಸಿ. ಪಾರ್ಟಿಗೆ ಅಗತ್ಯವಾಗಿರುವ ಪ್ರತಿ ವಸ್ತುಗಳ ಪಟ್ಟಿ ಸಿದ್ಧಪಡಿಸಿ. ಪ್ರತಿ ವಸ್ತುವಿನ ಮುಂದೆ ಅದಕ್ಕೆ ತಗಲುವ ಅಂದಾಜು ವೆಚ್ಚವನ್ನು ನಮೂದಿಸಿ. ಇದರಿಂದ ಪಾರ್ಟಿಗೆ ಎಷ್ಟು ಖರ್ಚಾಗಬಹುದು ಹಾಗೂ ನಿಮ್ಮ ಬಜೆಟ್ಗೆ ಹೇಗೆ ಸರಿದೂಗಿಸಿಕೊಳ್ಳಬಹುದು ಎಂಬ ಚಿತ್ರಣ ಸಿಗುತ್ತದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಹಾಗೂ ನಿಮ್ಮ ಮಿತಿಯೊಳಗೆ ಖರ್ಚು ಮಾಡಲು ಈ ಬಜೆಟ್ ಪ್ರತಿ ನೆರವು ನೀಡುತ್ತದೆ.

ಮೆನುವಲ್ಲಿ ಏನಿರಬೇಕು?: ಪಾರ್ಟಿಯ ಕೇಂದ್ರಬಿಂದು ಸಹವಾಗಿ ನೀವು ಸರ್ವ್ ಮಾಡುವ ಫುಡ್. ಆದಕಾರಣ ಮೆನುವಿನಲ್ಲಿ ರುಚಿ ರುಚಿಯಾದ ಖಾದ್ಯಗಳನ್ನು ನೀಡುವ ಬಗ್ಗೆ ಯೋಚಿಸಿ. ಹಾಗಂತ ಮೆನುವಿಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವೆರೈಟಿ ಖಾದ್ಯಗಳನ್ನು ಸೇರಿಸಲು ಹೋಗಬೇಡಿ. ಇದರಿಂದ ಆಹಾರ ವೆಸ್ಟ್ ಆಗುವ ಸಾಧ್ಯತೆ ಹೆಚ್ಚು. ಆದಕಾರಣ ಊಟ ಸಿಂಪಲ್ ಆಗಿದ್ದರೂ ಪರವಾಗಿಲ್ಲ ರುಚಿಯಲ್ಲಿ ಬೊಂಬಾಟ್ ಆಗಿರುವಂತೆ ಎಚ್ಚರ ವಹಿಸಿ. ಮೆನುವಿನಲ್ಲಿರಬೇಕಾದ ಖಾದ್ಯಗಳನ್ನು ಪಟ್ಟಿ ಮಾಡಿ.

ಫುಡ್ ಎಲ್ಲಿಂದ ತರಬೇಕು?:  ಮೆನುವಿನಲ್ಲಿ ಏನಿರಬೇಕು ಎಂಬುದನ್ನು ನಿರ್ಧರಿಸಿದ ಬಳಿಕ ಅದನ್ನು ಮನೆಯಲ್ಲೇ ಸಿದ್ಧಪಡಿಸುವುದಾ ಅಥವಾ ಹೋಟೆಲ್ ಇಲ್ಲವೆ ಕೇಟರರ್ಸ್ಗೆ ಆರ್ಡರ್ ಮಾಡುವುದಾ ಎಂಬ ಬಗ್ಗೆ ಯೋಚಿಸಿ. ಮನೆಯಲ್ಲೇ ಸಿದ್ಧಪಡಿಸುವುದಾದರೆ ಅದಕ್ಕೆ ಅಗತ್ಯವಿರುವ ಸಾಮಗ್ರಿಗಳು ಯಾವುವು ಎಂಬುದನ್ನು ಪಟ್ಟಿ ಮಾಡಿ. ಒಂದು ವೇಳೆ ಮನೆಯಲ್ಲಿ ಸಿದ್ಧಪಡಿಸುವುದರಿಂದ ಕೆಲಸದ ಹೊರೆ ಹೆಚ್ಚಾಗುತ್ತದೆ ಎಂದೆನಿಸಿದರೆ ಹೋಟೆಲ್ ಅಥವಾ ಕೇಟರರ್ಸ್ಗೆ ಆರ್ಡರ್ ನೀಡಿ.

ಫೆಂಗ್ ಶುಯಿ: ನಿಂಬೆ ಹಣ್ಣಿನ ಬಣ್ಣಕ್ಕೂ ಇದೆ ವಾಸ್ತು ನಂಟು

ಡ್ರಿಂಕ್ಸ್ ಬೇಕೇ ಬೇಡವೆ?: ಪಾರ್ಟಿ ಎಂದ ಮೇಲೆ ಡ್ರಿಂಕ್ಸ್ ಮಾಮೂಲು. ಆದರೆ, ಕೆಲವರಿಗೆ ಡ್ರಿಂಕ್ಸ್ ಇದ್ದರೆ ಪಾರ್ಟಿ ಇಷ್ಟವಾಗದೆ ಹೋಗಬಹುದು. ಆದಕಾರಣ ನೀವು ಕರೆಯುವ ಅತಿಥಿಗಳ ಮನಸ್ಥಿತಿಗೆ ಅನುಗುಣವಾಗಿ ಡ್ರಿಂಕ್ಸ್ ಬೇಕೇ ಬೇಡವೆ ಎಂಬುದನ್ನು ನಿರ್ಧರಿಸಿ. ಒಂದು ವೇಳೆ ಡ್ರಿಂಕ್ಸ್ ಅಗತ್ಯವೆಂದೆನಿಸಿದರೆ ಗೆಸ್ಟ್ಗಳಿಗೆ ಅವರ ಆದ್ಯತೆಗೆ ಅನುಗುಣವಾದ ಡ್ರಿಂಕ್ಸ್ ವ್ಯವಸ್ಥೆ ಮಾಡುವುದು ಉತ್ತಮ. ಇದಕ್ಕಾಗಿ ಗೆಸ್ಟ್ಗಳ ಬಳಿ ಈ ಬಗ್ಗೆ ಪಾರ್ಟಿಗೆ ಕೆಲವು ದಿನಗಳು ಬಾಕಿಯಿರುವಾಗಲೇ ವಿಚಾರಿಸಿ

ಅಗತ್ಯ ವಸ್ತುಗಳ ಖರೀದಿ: ಪಾರ್ಟಿ ದಿನ ಅಗತ್ಯವಿರುವ ವಸ್ತುಗಳು ಯಾವುವು ಎಂಬುದನ್ನು ಪಟ್ಟಿ ಮಾಡಿ. ಉದಾಹರಣೆಗೆ ಟಿಶ್ಯೂ, ಟವಲ್, ಪ್ಲಾಸ್ಟಿಕ್ ಕಪ್ಗಳು, ಪ್ಲೇಟ್ಗಳು ಇತ್ಯಾದಿ. ಇವನ್ನೆಲ್ಲ ಮುಂಚಿತವಾಗಿ ಖರೀದಿಸಿಡುವುದರಿಂದ ಪಾರ್ಟಿ ದಿನ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. 

ಮನೆಯಲ್ಲಿ ಯಾವ ಸ್ಥಳ ಸೂಕ್ತ: ನೀವು ಆಹ್ವಾನಿಸುವ ಅತಿಥಿಗಳ ಸಂಖ್ಯೆಗೆ ಅನುಗುಣವಾಗಿ ಪಾರ್ಟಿಯನ್ನು ಮನೆಯೊಳಗೇ ಮಾಡಬಹುದೇ, ಇಲ್ಲವೆ ಎಂಬುದನ್ನು ಪರಿಶೀಲಿಸಿ. ಮನೆಯೊಳಗಿನ ಸ್ಥಳಾವಕಾಶ ಸಾಲದಿದ್ದರೆ ಟೆರೇಸ್ ಅಥವಾ ಮನೆ ಹೊರಭಾಗದಲ್ಲಿ ಲಭ್ಯವಿರುವ ಜಾಗದಲ್ಲಿ ಪಾರ್ಟಿ ಆರೇಂಜ್ ಮಾಡಬಹುದು. 

ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ

ಆಸನ ವ್ಯವಸ್ಥೆ: ಅತಿಥಿಗಳಿಗೆ ಕೂರಲು ಮನೆಯಲ್ಲಿರುವ ಆಸನಗಳು ಸಾಲುತ್ತವೆಯೇ? ಎಂಬುದನ್ನು ಪರಿಶೀಲಿಸಿ. ಇಲ್ಲವಾದರೆ ಬಾಡಿಗೆಗೆ ಕುರ್ಚಿ, ಟೇಬಲ್ಗಳನ್ನು ತರುವ ವ್ಯವಸ್ಥೆ  ಮಾಡಿ. ಪಾರ್ಟಿ ಪ್ರಾರಂಭಕ್ಕೂ ಮುನ್ನ ಇವು ನಿಮ್ಮ ಮನೆ ಸೇರುವಂತೆ ವ್ಯವಸ್ಥೆ ಮಾಡಿ.