ಇದು ಕನಸಿನ ಮನೆ, ಭಾವನೆಗಳ ಅಡಿಪಾಯ, ಅನುಬಂಧದ ಗೋಪುರ

ಪ್ಲ್ಯಾಸ್ಟಿಕ್ ಬ್ಯಾಗ್ ಬದಲಿಗೆ ಪೇಪರ್ ಬ್ಯಾಗ್ ಬಳಸಲು ಅಭ್ಯಾಸ ಮಾಡಿಕೊಂಡಿದ್ದೀರಿ. ಜೀವನಶೈಲಿಯಲ್ಲಿ ಇಂಥ ಸಣ್ಣಪುಟ್ಟ ಬದಲಾವಣೆಗಳು ಬಂದರೆ, ಅವು ಮನೆಯನ್ನೂ ಆ ಮೂಲಕ ಪರಿಸರವನ್ನೂ ಬದಲಾಯಿಸಬಲ್ಲಷ್ಟು ಶಕ್ತಿಶಾಲಿಯಾಗಿವೆ. ಇಲ್ಲಿ ನಿಮ್ಮ ಮನೆಯನ್ನು ಖರ್ಚಿಲ್ಲದೆ ಪರಿಸರಸ್ನೇಹಿಯಾಗಿಸುವ ಕೆಲವೊಂದು ಮಾರ್ಗಗಳಿವೆ.

Simple ways to make your home eco-friendly

ಪರಿಸರವನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಮನೆಯಿಂದಲೇ ಆರಂಭವಾಗಬೇಕು ಈ ಸೇವ್ ನೇಚರ್ ಅಭಿಯಾನ. ಇದಕ್ಕಾಗಿ ನಮ್ಮ ಪ್ರತಿ ವರ್ತನೆ, ಯೋಚನೆಯಲ್ಲೂ ಪರಿಸರ ಕಾಳಜಿ ತುಂಬಿರಬೇಕು. ಆಗ ಸಣ್ಣ ಸಣ್ಣ ರೀತಿಯಲ್ಲಿ ಎಕೋ ಫ್ರೆಂಡ್ಲಿಯಾಗಿರುವ ಅಭ್ಯಾಸ ಮಾಡಿಕೊಳ್ಳುತ್ತೇವೆ. ಪ್ರತಿಯೊಬ್ಬರೂ ಇಂಥ ಸಣ್ಣ ಬದಲಾವಣೆಗಳನ್ನು ತಮ್ಮ ಮನೆ ಹಾಗೂ ಅಭ್ಯಾಸದಲ್ಲಿ ತಂದುಕೊಂಡರೆ, ಅದು ಪ್ರಕೃತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗುತ್ತದೆ. ನಮಗಾಗಿ ಪರಿಸರ ಎಂಬ ಸ್ವಾರ್ಥ ಯೋಚನೆ ಬಿಟ್ಟು ಪರಿಸರಕ್ಕಾಗಿ ನಾವು ಎಂಬ ಚಿಂತನೆ ಬೆಳೆಸಿಕೊಳ್ಳೋಣ. 

ಆಫೀಸ್‌ನಲ್ಲಿ ವಾಸ್ತು ಹೀಗಿದ್ದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ!

ಇನ್‌ಕ್ಯಾಂಡಿಸೆಂಟ್ ಬಲ್ಬ್ ಬದಲಿಸಿ

ಮನೆಯಲ್ಲಿನ ಇನ್‌ಕ್ಯಾಂಡಿಸೆಂಟ್ ಬಲ್ಬ್‌ಗಳನ್ನು ಬದಲಿಸಿ ಸಿಎಫ್ಎಲ್ ಅಥವಾ ಎಲ್ಇಡಿ ಬಲ್ಬ್‌ಗಳನ್ನು ಬಳಸುವುದರಿಂದ ಸಾಕಷ್ಟು ಎನರ್ಜಿ ಉಳಿಸಬಹುದು. ಸಾಕಷ್ಟು ಎಂದರೆ ಸುಮಾರು ಶೇ.66ರಷ್ಟು. ಸಿಎಫ್ಎಲ್ ಹಾಗೂ ಎಲ್ಇಡಿ ಬಲ್ಬ್‌ಗಳು ಎರ್ಜಿ ಉಳಿಸುವ ಜೊತೆಗೆ ಬಹುಕಾಲ ಬಾಳಿಕೆ ಬರುತ್ತವೆ. ಜೊತೆಗೆ ಸಾಕಷ್ಟು ಬೆಳಕು ನೀಡಿದರೂ ಕಣ್ಣಿಗೆ ಕುಕ್ಕುವುದಿಲ್ಲ.

ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಅನ್‌ಪ್ಲಗ್ ಮಾಡಿ

ಟಿವಿ ಆಫ್ ಮಾಡಿದ‌ ಕೂಡಲೇ ವಿದ್ಯುತ್ ಉಳಿಸಬಹುದೆಂದುಕೊಂಡಿದ್ದರೆ ಅದು ಖಂಡಿತಾ ನಿಮ್ಮ ತಪ್ಪು ತಿಳಿವಳಿಕೆ. ಟಿವಿಯ ಪ್ಲಗ್ ಸಂಪರ್ಕ ತಪ್ಪಿಸಿಲ್ಲವಾದರೆ ಅದು ಎನರ್ಜಿ ಎಳೆದುಕೊಳ್ಳುತ್ತಲೇ ಇರುತ್ತದೆ. ಕೇವಲ ಟಿವಿಯಲ್ಲ, ವಾಷಿಂಗ್ ಮೆಶೀನ್, ಮೈಕ್ರೋವೇವ್ ಓವನ್, ಎಲೆಕ್ಟ್ರಿಕ್ ಕೆಟಲ್ಸ್, ಐರನ್ ಬಾಕ್ಸ್ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಆಗಿರಲಿ, ಅದರ ಕೆಲಸ ಮುಗಿದ ಕೂಡಲೇ ಅನ್‌ಪ್ಲಗ್ ಮಾಡಿ ಸ್ವಿಚ್ ಆಫ್ ಮಾಡಿ. ಇದು ನಿಮ್ಮ ಎನರ್ಜಿ ಬಳಕೆಯನ್ನು ಶೇ.15ರಷ್ಟು ಉಳಿಸುತ್ತದೆ. 

ಫ್ರಿಡ್ಜ್‌ನ್ನು ನೆರಳಿನಲ್ಲಿಡಿ

ಫ್ರಿಡ್ಜ್‌ನ್ನು ಸೂರ್ಯನ ಬೆಳಕಿನಿಂದ ದೂರವಿಡಿ. ಸೂರ್ಯನ ಕಿರಣಗಳೇ ಅದಕ್ಕೆ ಬೀಳುತ್ತಿದ್ದರೆ, ಒಳಗೆ ತಂಪಾಗಿಟ್ಟುಕೊಳ್ಳಲು ಫ್ರಿಡ್ಜ್ ಹೆಚ್ಚಿನ ಕೆಲಸ ಮಾಡಬೇಕು. ನಿಮಗೆ ಫ್ರಿಡ್ಜ್‌ನಿಂದ ಏನಾದರೂ ತೆಗೆಯಬೇಕೆಂದಿದ್ದರೆ ಅವುಗಳೇನೇನೆಂದು ಮುಂಚೆಯೇ ನಿರ್ಧರಿಸಿ ಬಾಗಿಲು ತೆರೆಯಿರಿ. 50 ಬಾರಿ ಬಾಗಿಲು ತೆಗೆದು ಹಾಕುವುದು ಕೂಡಾ ಫ್ರಿಡ್ಜ್ ಹೆಚ್ಚಿನ ವಿದ್ಯುತ್ ಬಳಸುವಂತೆ ಮಾಡುತ್ತದೆ. ನಿಮಗೂ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ರೆಫ್ರಿಜರೇಟರ್ ಹಾಗೂ ಗೋಡೆಯ ನಡುವೆ ಕನಿಷ್ಠ 7.6 ಸೆಂ.ಮೀ. ಗ್ಯಾಪ್ ಇರಲಿ. ಇದು ಫ್ರಿಡ್ಜ್‌ಗೆ ಸರಿಯಾಗಿ ಏರ್‌ಫ್ಲೋ ಆಗುವಂತೆ ನೋಡಿಕೊಳ್ಳುತ್ತದೆ. 

ಫೆಂಗ್ ಶುಯಿ: ನಿಂಬೆ ಹಣ್ಣಿನ ಬಣ್ಣಕ್ಕೂ ಇದೆ ವಾಸ್ತು ನಂಟು

ಅಡುಗೆಮನೆಯ ಕಸವನ್ನು ಗೊಬ್ಬರವಾಗಿಸಿ

ಇದು ನಿಮ್ಮ ಮನೆಯ ಕಸವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲ, ಮರುಬಳಕೆಯಾಗುತ್ತದೆ. ಸಸ್ಯಗಳಿಗೂ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಅಡುಗೆಮನೆಯ ಹಸಿ ಕಸವನ್ನು ಕಾಂಪೋಸ್ಟ್ ಮಾಡಲು ಸುಲಭ ವಿಧಾನವೆಂದರೆ ಎರೆಹುಳು ಗೊಬ್ಬರ ತಯಾರಿಕೆ. ರೆಡಿಮೇಡ್ ವಾರ್ಮ್ ಕಿಟ್ ತಂದು ಅದರಲ್ಲಿ ಕಿಚನ್ ವೇಸ್ಟ್‌ಗಳನ್ನು ಹಾಕುತ್ತಾ ಬಂದರೆ, ಅವು ಅತ್ಯುತ್ತಮ ಗೊಬ್ಬರವಾಗುತ್ತದೆ. ಅದನ್ನು ನೀವು ಮನೆಯಲ್ಲಿ ಗಿಡ ಬೆಳೆಸಲು ಬಳಸಬಹುದು. ಇದರಿಂದ ಕಸವೂ ತಗ್ಗುತ್ತದೆ, ಹಸಿರೂ ಹೆಚ್ಚುತ್ತದೆ. ನಿಮಗೂ ಮನೆಯಲ್ಲೇ ಬೆಳೆದ ಹೂವು, ತರಕಾರಿಗಳು ದೊರೆಯುತ್ತವೆ ಅಂದರೆ ಆರೋಗ್ಯವೂ ಚೆನ್ನಾಗಿರುತ್ತದೆ. 

ನಲ್ಲಿಗಳನ್ನುಬಂದ್ ಮಾಡಿ

ನಿಮ್ಮ ಹಲ್ಲು ತಿಕ್ಕಿ ಮುಗಿಯುವವರೆಗೂ ನಲ್ಲಿಯಲ್ಲಿ ನೀರು ಹೋಗುತ್ತಲೇ ಇರುವುದು ನೀರಿನ ವೃಥಾ ಪೋಲಲ್ಲವೇ? ಪ್ರತಿ ಕೆಲಸಕ್ಕೂ ಎಷ್ಟು ಬೇಕೋ ಅಷ್ಟೇ ನೀರು ಬಳಸಿ. ಅಲ್ಲದೆ, ಒಂದು ಬಕೆಟ್ ನೀರನ್ನು ಬಹುೂಪಯೋಗ ಮಾಡಿಕೊಂಡು ನೀರುಳಿಸಬಹುದು. ಉದಾಹರಣೆಗೆ ಮನೆ ಒರೆಸಲು ಬಳಸಿದ ನೀರನ್ನೇ ಗಿಡಗಳಿಗೆ ಹಾಕಿ. ಬಟ್ಟೆ ತೊಳೆದ ನೀರನ್ನು ಟಾಯ್ಲೆಟ್‌ಗೆ ಬಳಸಿ. ಬಟ್ಟೆ ನೆನೆಸಿದ ಸೋಪಿನ ನೀರಿನಿಂದಲೇ ಬಾತ್‌ರೂಂ ತೊಳೆಯಬಹುದು. ಇನ್ನು ಮನೆಯಲ್ಲಿ ಯಾವುದಾದರೂ ನಲ್ಲಿ ಲೀಕ್ ಆಗುತ್ತಿದ್ದರೆ ತಡ ಮಾಡದೆ ಪ್ಲಂಬರ್‌ನ್ನು ಕರೆಸಿ ಸರಿ ಮಾಡಿಸಿ. ಏಕೆಂದರೆ ಒಂದು ನಲ್ಲಿ ಸೋರುತ್ತಿದ್ದರೂ ಅದರಿಂದ ಸುಮಾರು 182 ಲೀಟರ್‌ನಷ್ಟು ನೀರು ಪೋಲಾಗುತ್ತದೆ. 

ಜಗಳ ಆಡೋದ್ ಬಿಟ್ಹಾಕಿ, ಚೆನ್ನಾಗಿ ಲೈಫ್ ಲೀಡ್ ಮಾಡಲು ಹೀಗ್ ಮಾಡಿ!

ಸೋಲಾರ್ ಪ್ಯಾನೆಲ್ ಅಳವಡಿಸಿ

ಪ್ರತಿ ಪರಿಸರಸ್ನೇಹಿ ಮನೆಗೂ ಸೋಲಾರ್ ಅಗತ್ಯ ಫೀಚರ್. ಮನೆಯ ಬಲ್ಬ್‌ಗಳು, ಟಿವಿ ಹಾಗೂ ಬಿಸಿನೀರಿಗೆ ಸೋಲಾರ್ ಪ್ಯಾನೆಲ್ ಅಳವಡಿಸುವುದರಿಂದ ನಿಮಗೆ ಕ್ಲೀನ್ ಎನರ್ಜಿ ಸಿಗುತ್ತದೆ ಅಳ್ಲದೆ ವಿದ್ಯುತ್ ಕೂಡಾ ಉಳಿತಾಯವಾಗುತ್ತದೆ. ಇವು ಬಹುಕಾಲ ಎಂದರೆ ಕನಿಷ್ಠ 20 ವರ್ಷವಾದರೂ ಬಾಳಿಕೆ ಬರುವುದರಿಂದ ಕಾಸ್ಟ್ಲಿ ಖಂಡಿತಾ ಅಲ್ಲ. ಜೊತೆಗೆ, ಪವರ್ ಕಟ್ ಇದ್ದರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. 

Latest Videos
Follow Us:
Download App:
  • android
  • ios