ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ
ನಿದ್ದೆ ಕಾಣದ ರಾತ್ರಿಗಳು ಗುಡ್ ನೈಟ್ ಆಗುವುದು ಸಾಧ್ಯವೇ ಇಲ್ಲ. ಉತ್ತಮ ನಿದ್ರೆಗಾಗಿ ವಾಸ್ತು ಏನು ಹೇಳುತ್ತದೆ ನೋಡೋಣ.
ಮೊಬೈಲ್ ಬ್ಯಾಟರಿ ರಿಚಾರ್ಜ್ ಆದಂತೆ ನಮ್ಮ ದೇಹವೂ ರಾತ್ರಿಯಿಡೀ ಚೆನ್ನಾಗಿ ನಿದ್ರಿಸಿ ರಿಚಾರ್ಜ್ ಆದರೆ ಮರುಬೆಳಗ್ಗೆ ಸರಿಯಾಗಿ ಕೆಲಸ ಮಾಡಬಹುದು. ಸುಖನಿದ್ರೆಯು ಉತ್ತಮ ಆರೋಗ್ಯಕ್ಕೆ ರಹದಾರಿ. ಸರಿಯಾದ ಸಮಯದಲ್ಲಿ ಗುಣಮಟ್ಟದ ನಿದ್ರೆ ಮಾಡುವುದು ಮಾನಸಿಕ, ದೈಹಿಕ ಆರೋಗ್ಯವನ್ನು ಸುಧಾರಿಸುವುದಷ್ಟೇ ಅಲ್ಲ, ನಮ್ಮ ಜೀವನದ ಗುಣಮಟ್ಟವನ್ನೇ ಹೆಚ್ಚಿಸುತ್ತದೆ. ಆದರೆ, ದೈನಂದಿನ ಜಂಜಡಗಳ ಮಧ್ಯೆ ಸಿಲುಕಿ ನುಜ್ಜುಗುಜ್ಜಾಗುವ ಹಲವರಿಗೆ ಸೌಂಡ್ ಸ್ಲೀಪ್ ಎಂಬುದು ಕನಸಿನಂತೆ ಭಾಸವಾಗುತ್ತದೆ. ಚೆನ್ನಾಗಿ ನಿದ್ರಿಸಲು ಮಾತ್ರೆ ಮೊರೆ ಹೋಗುವ ಮೊದಲು ವಾಸ್ತು ಏನು ಹೇಳುತ್ತದೆ ಎಂದು ತಿಳಿದುಕೊಂಡು ಅಭ್ಯಸಿಸಿ ನೋಡಿ.
- ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬೇಡಿ. ಈ ದಿಕ್ಕಿನಲ್ಲಿ ಭೂಮಿಯ ಅಯಸ್ಕಾಂತೀಯ ವಲಯವಿರುವುದರಿಂದ ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದಾಗ ರಕ್ತವು ಹೆಚ್ಚಾಗಿ ನಿಮ್ಮ ತಲೆಯತ್ತ ಹರಿಯಲಾರಂಭಿಸುತ್ತದೆ. ಏಕೆಂದರೆ ರಕ್ತದಲ್ಲಿರುವ ಐರನ್‌ನ್ನು ಮ್ಯಾಗ್ನೆಟ್ ಸೆಳೆಯತೊಡಗುತ್ತದೆ. ಇದರಿಂದ ರಕ್ತದ ಹರಿವು ಅಚಾನಕ್ ಹೆಚ್ಚಾಗಿ ಹ್ಯಾಮೋರೇಜ್ ಇಲ್ಲವೇ ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಸರಿಯಾಗಿ ನಿದ್ದೆ ಬಾರದಿರುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.
- ಉರಿಯುವ ಬಲ್ಬ್‌ನ ಕೆಳಗೆ ಮಲಗಬೇಡಿ. ಅದು ನಿಮ್ಮ ಮಾನಸಿಕ ಸಮತೋಲನವನ್ನು ಹಾಳು ಮಾಡುತ್ತದೆ.
- ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇರಿಸಬೇಡಿ. ಒಂದು ವೇಳೆ ಇದ್ದರೂ, ರಾತ್ರಿ ಮಲಗುವಾಗ ಅವನ್ನು ಬಟ್ಟೆಯಿಂದ ಮುಚ್ಚಿಬಿಡಿ. ಬೆಡ್‌ರೂಂನಲ್ಲಿ ಕನ್ನಡಿ ಇದ್ದರೆ ಅದು ನೀವು ಹಳೆಯದಕ್ಕೇ ಜೋತು ಬೀಳುವಂತೆ ಮಾಡುತ್ತದೆ. ಭವಿಷ್ಯವನ್ನುಯೋಜಿಸಲು ಬಿಡುವುದಿಲ್ಲ.
ಜಗಳ ಆಡೋದ್ ಬಿಟ್ಹಾಕಿ, ಚೆನ್ನಾಗಿ ಲೈಫ್ ಲೀಡ್ ಮಾಡಲು ಹೀಗ್ ಮಾಡಿ!
- ವಾಸ್ತು ಶಾಸ್ತ್ರದಂತೆ ಅಕ್ವೇರಿಯಂ, ಇನ್‌ಡೋರ್ ಪ್ಲ್ಯಾಂಟ್ಸ್ ಸೇರಿದಂತೆ ಯಾವುದೇ ಜೀವವಿರುವ ವಸ್ತುಗಳು ಮಲಗುವ ಕೋಣೆಯಲ್ಲಿರಬಾರದು. ಚೂಪಾದ ಮೂಲೆಗೆ ತಾಗಿಸಿ ಮಂಚವನ್ನಿಡಬೇಡಿ.
- ಬೆಡ್‌ರೂಂನ್ನು ಸಾಧ್ಯವಾದಷ್ಟು ಸ್ವಚ್ಛವಾಗಿರಿಸಿ. ಮೂಲೆ ಮೂಲೆಯೂ ಧೂಳು, ಬಲೆಗಳಿಂದ ಮುಕ್ತವಾಗಿರಬೇಕು. ಇದು ಮಲಗುವ ಕೋಣೆಗೆ ಪಾಸಿಟಿವಿಟಿ ತರಲು ಮೊದಲ ಹೆಜ್ಜೆ. ಅಲ್ಲದೆ ಇದರಿಂದ ನಿದ್ರೆಗೆ ಭಂಗ ತರುವ ಸೊಳ್ಳೆ, ನುಸಿಗಳಂಥ ಕೀಟಗಳೂ ದೂರ ಉಳಿಯುತ್ತವೆ.
- ಅನಗತ್ಯ ಫರ್ನಿಚರ್‌ಗಳನ್ನು ಕೋಣೆಯಲ್ಲಿರಿಸಿಕೊಳ್ಳಬೇಡಿ. ಬೆಡ್‌ರೂಂನಾದ್ಯಂತ ಕಾಸ್ಮಿಕ್ ಎನರ್ಜಿ ಸರಾಗವಾಗಿ ಹರಿದಾಡುವುದಕ್ಕೆ ಈ ಅನಗತ್ಯ ಫರ್ನಿಚರ್‌ಗಳು ಅಡೆತಡೆಗಳಾಗುತ್ತವೆ.
- ಸಕಾರಾತ್ಮಕ ಸಂದೇಶ ಕೊಡುವ ವಾಲ್‌ಪೇಪರ್, ಫೋಟೋಗಳಷ್ಟೇ ಕೋಣೆಯಲ್ಲಿರಲಿ. ನೆಗೆಟಿವ್ ಶೇಡ್ ಇರುವ ಯಾವುದೇ ಚಿತ್ರವೂ ಕೋಣೆಯಲ್ಲಿರಕೂಡದು. ಇದು ನಿಮ್ಮ ಮನಸ್ಸನ್ನು ಕುಗ್ಗಿಸುತ್ತದೆ.
ಮನೆ ಮಂದಿ ಸಂತೋಷವಾಗಿರಲು ಇಲ್ಲಿವೆ ವಾಸ್ತು ಟಿಪ್ಸ್!
- ಹಾಸಿಗೆಯ ಕೆಳಗೆ ಯಾವುದೇ ವಸ್ತುಗಳನ್ನು ಇಡಬೇಡಿ. ನಿಮ್ಮ ನೆನಪುಗಳನ್ನು ಕೆದಕುವಂಥ ವಸ್ತುಗಳು, ಕೀಗಳು, ಹಣ ಇತ್ಯಾದಿಯನ್ನು ಹಾಸಿಗೆ ಕೆಳಗಿರಿಸುವುದು ಉಚಿತವಲ್ಲ. ಹಲವರು ಅಲಾರಾಂ ಗಡಿಯಾರವನ್ನು ದಿಂಬಿನ ಕೆಳಗಿಟ್ಟುಕೊಂಡು ಮಲಗುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ ಅಭ್ಯಾಸವಾಗಿದ್ದು, ದಂಪತಿ ಮಧ್ಯೆ ಜಗಳ ತಂದಿಡುತ್ತದೆ. ಅಲಾರಾಂನ್ನು ಬೆಡ್ ಬಲ ಅಥವಾ ಎಡಕ್ಕೆ ಇರಿಸಿಕೊಳ್ಳಿ.
- ಮಲಗುವ ಕೋಣೆ ಗೋಡೆಗಳಿಗೆ ಹಸಿರು, ಪಿಂಕ್, ನೀಲಿ ಅಥವಾ ಹಳದಿ ಬಣ್ಣವನ್ನು ಬಳಸಿ. ಬಣ್ಣಗಳು ತಿಳಿಯಾಗಿದ್ದು ಸೂರ್ಯನ ಬೆಳಕನ್ನು ರಿಫ್ಲೆಕ್ಟ್ ಮಾಡುವಂತಿರಬೇಕು. ಅದು ಬೆಳಗ್ಗೆ ಕಣ್ಣು ಬಿಡುವಾಗ ನಿಮ್ಮ ಚೈತನ್ಯ ಹೆಚ್ಚಿಸುತ್ತದೆ.
- ಹಾಸಿಗೆಗೆ ಹಾಸುವ ಬಟ್ಟೆ ಗಾಢ ಬಣ್ಣದ್ದಾಗಿರಲಿ ಹಾಗೂ ದಿಂಬಿನ ಕವರ್ ಬಣ್ಣ ಬಿಳಿ ಬಣ್ಣದ್ದಾಗಿರಲಿ.
ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮಲಗೋ ದಿಕ್ಕು ಹೀಗಿರಲಿ...
- ಮಲಗುವಾಗ ಬೆಡ್‌ರೂಂ ಬಾಗಿಲತ್ತ ಕಾಲು ಹಾಕಬೇಡಿ. ಇದರಿಂದ ಕೆಟ್ಟ ಕನಸುಗಳು ಬೀಳುವುದನ್ನು ತಪ್ಪಿಸಬಹುದು.
- ನಿಮ್ಮ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್‌ಗಳನ್ನು ದೇಹದಿಂದ ಬಹು ದೂರದಲ್ಲಿರಿಸಿ. ಕೋಣೆಯಿಂದ ಹೊರಗಿಟ್ಟರೂ ಆದೀತು. ಇವುಗಳಿಂದ ಹೊಮ್ಮುವ ಎಲೆಕ್ಟ್ರಿಕ್ ಸಿಗ್ನಲ್‌ಗಳು ನಿದ್ದೆ ಮೇಲೆ ಪರಿಣಾಮ ಬೀರುತ್ತವೆ.
- ಮೆಟಲ್ ಮಂಚಗಳನ್ನು ಬಳಸಬೇಡಿ.
- ಕೋಣೆಯ ಕಿಟಕಿಗಳನ್ನು ದಿನದಲ್ಲಿ ಕನಿಷ್ಠ 3-4 ಗಂಟೆಗಳ ಕಾಲವಾದರೂ ತೆರೆದಿಡಿ. ಸರಿಯಾದ ಗಾಳಿ ಬೆಳಕು ಕೋಣೆಗೆ ಪಾಸಿಟಿವಿಟಿ ಹೊತ್ತು ತರುತ್ತದೆ.
- ಅಡುಗೆ ಕೋಣೆಯ ಮೇಲೆ ಬೆಡ್ ರೂಂ ಕಟ್ಟಿಸಬೇಡಿ.