ಬೇಗ ಬೋರಾಗುವ Relationship.. ಹೀಗೆ ಹೊಸತನ ತನ್ನಿ

ಮದುವೆಯಾಗಿ ಎಷ್ಟೇ ವರ್ಷವಾಗಿರಲಿ ಪ್ರತಿ ದಿನವೂ ಕಲಿಕೆಯಿರುತ್ತದೆ. ಅನೇಕರು ತಮ್ಮದೆ ಸರಿ ಎಂಬ ಭಾವನೆಯಲ್ಲಿ ಬದುಕುತ್ತಿರುತ್ತಾರೆ. ಆದ್ರೆ ಅದು ಸಂಗಾತಿ ಮನಸ್ಸಿಗೆ ಇಷ್ಟವಾಗಿದ್ಯಾ ಎಂಬುದನ್ನು ನೋಡಲು ಹೋಗುವುದಿಲ್ಲ. ಸುಖ ಸಂಸಾರ ನಿಮ್ಮದಾಗ್ಬೇಕೆಂದ್ರೆ ಕೆಲವೊಂದು ವಿಷ್ಯ ತಿಳಿಯುವುದು ಬಹಳ ಮುಖ್ಯ. 

Tips for Building a Healthy Relationship

ಸಂಬಂಧ (Relationship) ಕನ್ನಡಿ (Mirror) ಯಂತೆ. ಕೈ ತಪ್ಪಿ ಬಿದ್ದರೂ ಒಡೆಯುತ್ತೆ. ಬೇಕು ಅಂತ ಎಸೆದ್ರೂ ಒಡೆಯುತ್ತೆ. ಹಾಗಾಗಿ ಸಂಬಂಧ ಎಂದೂ ಬೀಳದಂತೆ ನೋಡಿಕೊಳ್ಳಬೇಕು. ಸಂಬಂಧವು ಹೊಸ (New) ದಾಗಿರಲಿ ಅಥವಾ ಹಳೆಯದಾಗಿರಲಿ ಅದನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪ್ರೀತಿ (Love) ಸಂಬಂಧದಲ್ಲಿ ನಂಬಿಕೆ (Faith), ಪ್ರೀತಿ ಮತ್ತು ತಿಳುವಳಿಕೆ ಅಗತ್ಯವಿರುತ್ತದೆ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಮತ್ತು ಬೆಂಬಲಿಸುವ ಜೊತೆಗೆ  ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ ಸಂಬಂಧವನ್ನು ಆರೋಗ್ಯಕರವಾಗಿ ಮಾಡಬಹುದು. ಒಬ್ಬರು ಸಂಬಂಧ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ರೆ ಸಾಲುವುದಿಲ್ಲ.  ಎರಡೂ ಕಡೆಯಿಂದ ಪ್ರಯತ್ನಗಳು ನಡೆಯಬೇಕೆಂಬುದು ಕೂಡ ನಿಜ. ಎರಡು ಕಡೆಯಿಂದ  ವಿಶ್ವಾಸ (Confidence), ನಂಬಿಕೆ, ಗೌರವ (Respect) ವಿದ್ದಲ್ಲಿ ಯಾವುದೇ ಸಂಬಂಧ ಯಶಸ್ವಿಯಾಗುತ್ತದೆ. ಪ್ರೀತಿ ಸಂಬಂಧ ಎಲ್ಲ ಸಂಬಂಧಕ್ಕಿಂತ ಬಹಳ ಸೂಕ್ಷ್ಮವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಸಂಬಂಧ ಬಹುಬೇಗ ಬೋರ್ ಆಗುತ್ತಿದೆ. ಇದ್ರಿಂದ ವಿಚ್ಛೇದನ (Divorce) ಪ್ರಕರಣಗಳೂ ಹೆಚ್ಚಾಗ್ತಿವೆ. ಸಂಬಂಧ ಹಳೆಯದಾಗ್ತಿದ್ದಂತೆ ಹುಳಿಯಾಗಲು ಶುರುವಾಗುತ್ತದೆ. ಸಂಬಂಧ ಎಂದೆಂದೂ ಫ್ರೆಶ್ (Fresh) ಹಾಗೂ ಖುಷಿ (Enjoy) ಯಾಗಿರಬೇಕೆಂದ್ರೆ ಕೆಲವು ಪ್ರಮುಖ ಸಲಹೆಗಳನ್ನು ಅನುಸರಿಸಿ. ಮನೆ ಕಟ್ಟುವಾಗ ತಳ ಹೇಗೆ ಗಟ್ಟಿಯಾಗಿರಬೇಕೋ ಹಾಗೆ ಸಂಬಂಧದಲ್ಲೂ ಪಾಯ ಗಟ್ಟಿಯಾಗಿರಬೇಕು. ಅದು ಸರಿಯಾಗಿದ್ದಲ್ಲಿ ಸಂಬಂಧದ ಮನೆಯಲ್ಲಿ ಭದ್ರವಾಗಿರಬಹುದು. ಇಂದು ಆರೋಗ್ಯಕರ ಸಂಬಂಧ ಉಳಿಸಿಕೊಳ್ಳಲು ಏನೆಲ್ಲ ಮಾಡ್ಬೇಕು ಎಂಬುದನ್ನು ಹೇಳ್ತೇವೆ. 

ಆರೋಗ್ಯಕರ ಸಂಬಂಧ ಉಳಿಸಿಕೊಳ್ಳಲು ಮಹತ್ವದ ಸಲಹೆ : 

ಮಾತು : ಪ್ರೀತಿ ಸಂಬಂಧ ಮಾತ್ರವಲ್ಲ ಯಾವುದೇ ಸಂಬಂಧವನ್ನು ಆರೋಗ್ಯಕರವಾಗಿ ಮತ್ತು ಗಟ್ಟಿಯಾಗಿಸಲು ಚೆನ್ನಾಗಿ ಮಾತನಾಡುವುದು ಮತ್ತು ಉತ್ತಮ ಸಂವಹನವನ್ನು ಹೊಂದುವುದು ಬಹಳ ಮುಖ್ಯ. ಎಷ್ಟೇ ಕೆಲಸ (Work) ದ ಒತ್ತಡವಿರಲಿ ಅದರ ಮಧ್ಯೆಯೇ ಸಮಯ ನಿಗದಿ ಮಾಡ್ಬೇಕು. ಸಮಯ ಸಿಕ್ಕಾಗೆಲ್ಲ ನಿಮ್ಮ ಸಂಗಾತಿ ಜೊತೆ ಮಾತನಾಡಿ. ಮಾತು ಸಾಧ್ಯವಿಲ್ಲವೆಂದ್ರೆ ಸಂದೇಶವನ್ನಾದ್ರೂ ಕಳುಹಿಸಿ. ಅನೇಕ ಬಾರಿ ಕೆಲ ವಿಷ್ಯಗಳನ್ನು ಸಂಗಾತಿಗೆ ಹೇಳದೆ ಮುಚ್ಚಿಡುತ್ತೇವೆ. ಇದು ಸರಿಯಲ್ಲ. ನಿಮ್ಮ ಭಾವನೆಗಳನ್ನು ಮಾತಿನ ರೂಪದಲ್ಲಿ ಅವರ ಮುಂದಿಡಿ. ಅವರು ಹೇಳುವ ಮಾತುಗಳನ್ನು ಕೂಡ ನೀವು ಆಲಿಸಿ. ನಿಮ್ಮವರ ದುಃಖ ಅಥವಾ ಸಂತೋಷವನ್ನು ನೀವು ಕೇಳಿದ್ರೂ ಸಾಕು. ಕೇಳುವ ಕಿವಿಯ ಅವಶ್ಯಕತೆ ಅನೇಕರಿಗಿರುತ್ತದೆ. 

ಹೆಂಡ್ತಿಗೆ ಗೊತ್ತಾಗದ ಹಾಗೆ ರಹಸ್ಯವಾಗಿ ವೀರ್ಯ ಮಾರಾಟ ಮಾಡ್ತಿದ್ದ ಗಂಡ..!

ನಂಬಿಕೆ : ನೀವು ಸಂಬಂಧದಲ್ಲಿರುವಾಗ ನಿಮ್ಮ ಸಂಗಾತಿಯನ್ನು ನಂಬುವುದು ಬಹಳ ಮುಖ್ಯ. ಯಾವುದೇ ಸಂಬಂಧದ ಅಡಿಪಾಯ ನಂಬಿಕೆ. ಸಂಗಾತಿಯನ್ನು ನಂಬಿ ನಡೆದ್ರೆ ಪರಸ್ಪರ ಖುಷಿ,ಸಂತೋಷ ಮನೆ ಮಾಡಿರುತ್ತದೆ. ಆಗ ಯಾವುದೇ ಬಿರುಕು ಸಂಬಂಧದಲ್ಲಿ ಕಾಣಿಸಿಕೊಳ್ಳುವುದಿಲ್ಲ. 

ಗೌರವ : ಅನೇಕ ಬಾರಿ ಪ್ರೀತಿಗಿಂತ ಗೌರವ ಅಗತ್ಯವಿರುತ್ತದೆ. ನಿಮ್ಮ ಸಂಗಾತಿಯನ್ನು ನೀವು ಗೌರವಿಸದಿದ್ದರೆ, ಅವರಿಗೆ ಉಸಿರುಗಟ್ಟಿಸುವ ಅನುಭವವಾಗುತ್ತದೆ. ಇದ್ರಿಂದ ಸಂಬಂಧದಲ್ಲಿನ ಸಂತೋಷ ಮಾಯವಾಗುತ್ತದೆ. ಸಂಬಂಧವು ಆರೋಗ್ಯಕರವಾಗಿರುವುದಿಲ್ಲ. 

ಸಂಗಾತಿಗೊಂದು ಸ್ಥಾನ : ಆರೋಗ್ಯಕರ ಸಂಬಂಧ ಸದಾ ಇರ್ಬೇಕೆಂದ್ರೆ ಸಂಗಾತಿಗೆ ನಿಮ್ಮ ಜೀವನದಲ್ಲಿ ಮಹತ್ವದ ಸ್ಥಾನ ನೀಡುವುದು ಬಹಳ ಮುಖ್ಯ. ಹಾಗೆಯೇ ಮದುವೆಯಾದ್ಮೇಲೆ ಅವರ ಸ್ವಾತಂತ್ರ್ಯ ಕಸಿದುಕೊಳ್ಳಬಾರದು. ಅವರ ವೈಯಕ್ತಿಕ ಕೆಲಸಕ್ಕೆ ಸಮಯ ನೀಡುವುದು ಮುಖ್ಯವಾಗುತ್ತದೆ. ಇಲ್ಲವಾದ್ರೆ ಸಂಗಾತಿಗೆ ಕಿರಿಕಿರಿ ಹೆಚ್ಚಾಗುತ್ತದೆ ಮತ್ತು ಖಿನ್ನತೆ ಭಾವ ಮೂಡಲು ಶುರುವಾಗುತ್ತದೆ. 

ಮೂಗಿನ ಮೇಲೇ ಸಿಟ್ಟು ! ಇಂಥವರ ಜೊತೆ ಮಾತನಾಡುವುದು ಹೇಗಪ್ಪಾ !

ನಮ್ಮ ಮೇಲೆ ನಿಮಗಿರಲಿ ಪ್ರೀತಿ : ಇನ್ನೊಬ್ಬರನ್ನು ಪ್ರೀತಿಸುವ ಮೊದಲು ನಿಮ್ಮನ್ನು ನೀವು ಪ್ರೀತಿಸುವುದು ಸಹ ಬಹಳ ಮುಖ್ಯ. ನಿಮ್ಮನ್ನು ನೀವು ಪ್ರೀತಿಸಿದ್ರೆ ಇನ್ನೊಬ್ಬರನ್ನು ಪ್ರೀತಿಸುವುದು ಸುಲಭವಾಗುತ್ತದೆ. ಆಗ ಮಾತ್ರ ನೀವು ಯಾವುದೇ ಸಂಬಂಧವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. 

Latest Videos
Follow Us:
Download App:
  • android
  • ios