ಮೂಗಿನ ಮೇಲೇ ಸಿಟ್ಟು ! ಇಂಥವರ ಜೊತೆ ಮಾತನಾಡುವುದು ಹೇಗಪ್ಪಾ !

ಕೆಲವೊಬ್ರನ್ನು ನೀವು ನೋಡಿರ್ತೀರಿ. ಮೂಗಿನ ಮೇಲೆ ಸಿಟ್ಟು (Angry). ಯಪ್ಪಾ ಇಂಥವರ ಜೊತೆ ಮಾತನಾಡೋದು ಹೇಗಪ್ಪಾ ಅನ್ನೋ ಚಿಂತೇನಾ ? ವಿಪರೀತ ಸಿಟ್ಟಿದವರಿಗೆ ಸಿಟ್ಟು ಬರದಂತೆ ಮಾತನಾಡೋ ಟ್ರಿಕ್ಸ್ (Tricks) ಏನು ನಾವ್ ಹೇಳ್ತಿವಿ

Expert Offers Tips To Deal With A Passive Aggressive Person Vin

ಅತಿಯಾಗಿ ಸಿಟ್ಟಿರುವವರನ್ನು ಕಂಡ್ರೆ ಸಾಮಾನ್ಯವಾಗಿ ಯಾರಿಗೂ ಇಷ್ಟವಾಗಲ್ಲ. ಮಾತು ಮಾತಿಗೂ ಸಿಡುಕ್ತಿರ್ತಾರೆ, ಯಾವ ಕಾರಣಕ್ಕೆ ಅಂತಾನೂ ಗೊತ್ತಾಗಲ್ಲ. ಯಾಕೆ ಬೇಕಪ್ಪಾ ರಗಳೆ ಅಂತ ಹಲವರು ಮಾತನಾಡದೆ ಸುಮ್ನಿರ್ತಾರೆ. ಅಯ್ಯೋ, ಅವರ ಸಹವಾಸವಲ್ಲ ಎಂದು ದೂರವೇ ಇರಲು ಪ್ರಯತ್ನಿಸುತ್ತಾರೆ. ಏನೋ ಮಾತನಾಡುತ್ತಿದ್ದಾಗಲೆಲ್ಲಾ ಸಡನ್ನಾಗಿ ಸಿಟ್ಟಿಗೇಳುವ ಸ್ವಭಾವ ವಿಚಿತ್ರ ಎನಿಸಿಬಿಡುತ್ತದೆ. ನಾವೇನು ಹೇಳ್ ಬಾರ್ದು ಹೇಳಿಬಿಟ್ಟೆವಪ್ಪಾ ಎಂದು ನಮ್ಮನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಸಿಟ್ಟಿನ (Angry) ಸ್ವಭಾವ ಮನುಷ್ಯರಲ್ಲಿ ಸಾಮಾನ್ಯವಾಗಿದೆ. ಅನೇಕ ಜನರು ನಕಾರಾತ್ಮಕ ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸಲು ಕಷ್ಟಪಡುತ್ತಾರೆ. ಮತ್ತು ಇದನ್ನು ಸಿಟ್ಟಿನ ಮೂಲಕ ವ್ಯಕ್ತಪಡಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ಮೇಯೊ ಕ್ಲಿನಿಕ್ ಪ್ರಕಾರ, ಅತಿಯಾದ ಸಿಟ್ಟಿನ ವರ್ತನೆಯು ನಕಾರಾತ್ಮಕ (Negative) ಭಾವನೆಗಳನ್ನು ಬಹಿರಂಗವಾಗಿ ತಿಳಿಸುವ ಬದಲು ಪರೋಕ್ಷವಾಗಿ ವ್ಯಕ್ತಪಡಿಸುವ ಮಾದರಿಯಾಗಿದೆ. ಈ ರೀತಿ ಸಿಟ್ಟಿನ ನಡವಳಿಕೆಯನ್ನು ಪ್ರದರ್ಶಿಸುವ ವ್ಯಕ್ತಿಯು ಏನು ಹೇಳುತ್ತಾನೆ ಮತ್ತು ಅವನು ಏನು ಮಾಡುತ್ತಾನೆ ಎಂಬುದು ಪರಸ್ಪರ ಸಂಬಂಧ ಹೊಂದಿದೆ. ಅನೇಕ ಜನರು ಕೆಲವೊಮ್ಮೆ ತಮ್ಮ ಭಾವನೆಗಳ ಜತೆ ಹೆಣಗಾಡುತ್ತಾರೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಕಷ್ಟಪಡುತ್ತಾರೆ. ಇಂಥಾ ಸಂದರ್ಭದಲ್ಲಿ ಇದು ಸಿಟ್ಟಿನ ರೂಪದಲ್ಲಿ ಹೊರ ಬರುತ್ತದೆ.

ಮಕ್ಕಳು ಇಡೀ ದಿನ ಕಚ್ಚಾಡ್ತಾರಾ? ಅವರ ನಡುವೆ ಪ್ರೀತಿ ತರಲು ಇಲ್ಲಿವೆ vastu tips.

ನಾವೆಲ್ಲರೂ ಪ್ರತಿದಿನ ಅಂತಹ ಜನರನ್ನು ಭೇಟಿಯಾಗಬೇಕಾಗಿ ಬರುತ್ತದೆ. ಕುಟುಂಬದ ಸದಸ್ಯ, ಸ್ನೇಹಿತ, ಸಹೋದ್ಯೋಗಿ ಯಾರು ಕೂಡಾ ಆಗಿರಬಹುದು. ಎಕ್ಸ್‌ಪರ್ಟ್‌ ನೇದ್ರಾ ಗ್ಲೋವರ್ ತವ್ವಾಬ್, ಅತಿಯಾದ ಸಿಟ್ಟಿರುವ ವ್ಯಕ್ತಿಯ ಜೊತೆ ವ್ಯವಹರಿಸಲು ಸಲಹೆಗಳನ್ನು ನೀಡುತ್ತಾರೆ. 

ಅತಿಯಾಗಿ ಸಿಟ್ಟಿರುವವರ ಜೊತೆ ಮಾತನಾಡುವಾಗ ಯಾವಾಗಲೂ ಶಾಂತ ರೀತಿಯಲ್ಲಿ ವರ್ತಿಸಬೇಕು. ಜೀವನದಲ್ಲಿ ಅವರೇನಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದಾರಾ ಎಂಬುದನ್ನು ತಿಳಿದುಕೊಳ್ಳಬೇಕು. ನಾನು ನಿಮ್ಮೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವಾಗ ನೀವು ಪ್ರತಿಕ್ರಿಯಿಸುತ್ತಿಲ್ಲ ಎಂದು ನಾನು ಗಮನಿಸುತ್ತೇನೆ. ಏನು ತಪ್ಪಾಗಿದೆ ಹೇಳಿ ಎಂದು ಕೇಳಬೇಕು. ಎಲ್ಲವೂ ಸರಿಯಾಗಿದೆ ಎಂದು ನೀವು ಹೇಳುತ್ತಿದ್ದೀರಿ, ಆದರೆ ನೀವು ಸಾಮಾನ್ಯವಾಗಿ ವರ್ತಿಸುತ್ತಿಲ್ಲ ಎಂಬ ರೀತಿಯಲ್ಲಿ ಮಾತನಾಡಬೇಕು. ನಾವು ಹೊಂದಿರುವ ಯಾವುದೇ ಸಮಸ್ಯೆಯನ್ನು ಪರಿಹರಿಸಲು ನಾನು ಬಯಸುತ್ತೇನೆ. ಸಮಸ್ಯೆಯ ಬಗ್ಗೆ ಮಾತನಾಡೋಣ ಎಂಬುದನ್ನು ಅವರಿಗೆ ವಿವರಿಸಿ ತಿಳಿಸಬೇಕು ಎನ್ನುತ್ತಾರೆ.

ಕೋಪದಿಂದ ಪ್ರತಿಕ್ರಿಯಿಸಬೇಡಿ: ಬೇರೊಬ್ಬರು ಕೋಪದಲ್ಲಿದ್ದಾಗ, ನಿಮ್ಮ ಮೇಲೆ, ಕೋಪಗೊಳ್ಳುವ ಸಾಧ್ಯತೆ ಸಹ ಹೆಚ್ಚಾಗಿರುತ್ತದೆ. ಹೀಗಾಗಿ ನೀವು ಕೋಪಗೊಂಡ ವ್ಯಕ್ತಿಯೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿರುವಾಗ, ನಿಮ್ಮ ಸ್ವಂತ ಕೋಪವನ್ನು ಅದರಿಂದ ದೂರವಿಡುವುದು ಉತ್ತಮವಾಗಿದೆ. ಅತಿಯಾಗಿ ಸಿಟ್ಟು ಬರುವವರ ಜತೆ ಮಾತನಾಡುವಾಗ ಬೇರೆನು ವಿಚಾರಗಳನ್ನು ಗಮನಿಸಿಕೊಳ್ಳಬೇಕು ತಿಳಿದುಕೊಳ್ಳೋಣ.

The Dumb Husband: ಪತ್ನಿಗೆ ಕೋಪ ಬಂದಿದೆ ಎಂದೇ ಗೊತ್ತಾಗದ ಈ ಆಸಾಮಿ ಜೊತೆ ಏಗೋದು ಕಷ್ಟ ಕಷ್ಟ!

ಪ್ರತಿಕ್ರಿಯಿಸುವ ಮೊದಲು ಶಾಂತವಾಗಿರಿ: ಸಿಟ್ಟಿದ್ದವರ ಜತೆ ಮಾತನಾಡುವಾಗ ಜಗಳ ಮತ್ತೊಂದು ಹಂತಕ್ಕೆ ಹೋಗುವುದನ್ನು ತಪ್ಪಿಸಲು ನಿಮ್ಮ ಮನಸ್ಸನ್ನು ಶಾಂತವಾಗಿಡಿ. ದೀರ್ಘವಾಗಿ ಉಸಿರೆಳೆದುಕೊಳ್ಳಿ ಇದು ಮನಸ್ಸನ್ನು ಶಾಂತಗೊಳಿಸುತ್ತದೆ.

ಭಾವನಾತ್ಮಕ ಅಂತರವನ್ನು ಕಾಪಾಡಿಕೊಳ್ಳಿ: ಯಾವಾಗಲೂ ವ್ಯಕ್ತಿಯ ಕೋಪವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಬದಲಾಗಿ, ನಿಮ್ಮ ಭಾವನೆಗಳನ್ನು ವ್ಯಕ್ತಿಯ ಕೋಪದ ಬಗ್ಗೆ ಕುತೂಹಲಕ್ಕೆ ಪರಿವರ್ತಿಸುವ ಮೂಲಕ ಶಾಂತವಾಗಿರಿ.

ನಿಧಾನವಾಗಿ ಮಾತನಾಡಿ: ನಿಮ್ಮ ಧ್ವನಿಯನ್ನು ಹೆಚ್ಚಿಸಬೇಡಿ ಅಥವಾ ಕೋಪವನ್ನು ತಿಳಿಸುವ ಧ್ವನಿಯಲ್ಲಿ ಮಾತನಾಡಬೇಡಿ. ನಿಮಗೆ ಅಗತ್ಯವಿದ್ದರೆ ಒಂದೆರಡು ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಸಾಮಾನ್ಯ ಧ್ವನಿಯೊಂದಿಗೆ ಶಾಂತವಾದ ಧ್ವನಿಯೊಂದಿಗೆ ಮಾತನಾಡಿ.

ಕೋಪಗೊಂಡ ವ್ಯಕ್ತಿಯನ್ನು ಪ್ರಚೋದಿಸಬೇಡಿ: ಕೋಪಗೊಂಡಾಗ ಅವರನ್ನು ಪ್ರಚೋದಿಸುವ ಮಾತುಗಳನ್ನಾಡಬೇಡಿ. ಇದು ಉದ್ದೇಶಪೂರ್ವಕವಾಗಿರಬಹುದು ಅಥವಾ ಇಲ್ಲದಿರಬಹುದು. ಆದರೆ ಯಾರಾದರೂ ಕೋಪಗೊಂಡಾಗ, ಅವರು ಕೋಪಗೊಳ್ಳುತ್ತಾರೆ ಅಥವಾ ಕಡಿಮೆ ಗೌರವವನ್ನು ಅನುಭವಿಸುತ್ತಾರೆ ಎಂದು ನಿಮಗೆ ತಿಳಿದಿರುವ ಕೆಲಸಗಳನ್ನು ಮಾಡದಿರಲು ಪ್ರಯತ್ನಿಸಿ.

ಸಲಹೆಗಳನ್ನು ನೀಡುವ ಮೊದಲು ಪರಿಸ್ಥಿತಿಯನ್ನು ನಿರ್ಣಯಿಸಿ: ಯಾರನ್ನಾದರೂ ಶಾಂತಗೊಳಿಸಲು ಸಲಹೆಗಳನ್ನು ಮಾಡುವುದು ಸ್ಪಷ್ಟವಾಗಿ ಸಹಾಯವನ್ನು ಬಯಸದ ಯಾರಿಗಾದರೂ ಸೂಕ್ತವಾಗಿರುವುದಿಲ್ಲ; ಹೇಗಾದರೂ, ಕೋಪಗೊಂಡ ವ್ಯಕ್ತಿಯು ಶಾಂತಗೊಳಿಸಲು ಸಹಾಯವನ್ನು ಹುಡುಕುತ್ತಿದ್ದರೆ ಅದು ಸೂಕ್ತವಾಗಿರುತ್ತದೆ. 

Latest Videos
Follow Us:
Download App:
  • android
  • ios