ಹೆಂಡ್ತಿ (Wife) ಗೊತ್ತಲ್ಲ. ಸಣ್ಣ ಪುಟ್ಟ ವಿಚಾರಗಳನ್ನು ಮುಚ್ಚಿಟ್ರೆನೇ ಮನೆಯಲ್ಲಿ ರಂಪ-ರಾಮಾಯಣ ಮಾಡಿಬಿಡ್ತಾಳೆ. ಹೀಗಿರುವಾಗ ಇಲ್ಲೊಬ್ಬ ಭೂಪ ತಾನು ವೀರ್ಯ (Sperm) ಮಾರಾಟ ಮಾಡ್ತಿದ್ದ ವಿಚಾರವನ್ನೇ ಮುಚ್ಚಿಡ್ಡಿದ್ದಾನೆ. ಹೆಂಡ್ತಿಯ ರಿಯಾಕ್ಷನ್ ಹೇಗಿತ್ತು ನೋಡಿ. 

ವೀರ್ಯ ದಾನ (Sperm Donor) ಮಾಡುವ ಬಗ್ಗೆ ನೀವು ಕೇಳಿರಬಹುದು. 2012ರಲ್ಲಿ ಬಿಡುಗಡೆಗೊಂಡ ಬಾಲಿವುಡ್ ಚಿತ್ರ ವಿಕ್ಕಿ ಡೋನರ್, ಇಂಥದ್ದೇ ಕಥಾಹಂದರವನ್ನು ಹೊಂದಿತ್ತು. ಈ ಸಿನಿಮಾದಲ್ಲಿ ನಟ ಆಯುಷ್ಮಾನ್ ಖುರಾನಾ (Ayushmann Khurrana) ವೀರ್ಯ ದಾನಿಯ ಪಾತ್ರದಲ್ಲಿ ನಟಿಸಿದ್ದರು. ಅದೇನು ರೀಲ್‌ ಸ್ಟೋರಿಯಾಯ್ತ. ಆದ್ರೆ ರಿಯಲ್ ಲೈಫ್‌ನಲ್ಲೂ ಒಬ್ಬ ಹಾಗೆ ಮಾಡಿದ್ದಾನೆ ನೋಡಿ. ನಿಜ ಜೀವನದಲ್ಲಿ ಪತ್ನಿಗೂ ಗೊತ್ತಾಗದಂತೆ ವೀರ್ಯವನ್ನು ಮಾರಾಟ ಮಾಡ್ತಿದ್ನನಂತೆ. ಹಾಗಂತ ಹೆಂಡ್ತಿ ಕೈಯಲ್ಲಿ ವಿಷ್ಯಾನ ಎಷ್ಟೂಂತ ಮುಚ್ಚಿಡೋಕೆ ಆಗುತ್ತೆ. ಸರಿಯಾಗಿ ತಗ್ಲಾಕ್ಕೊಂಡಿದ್ದಾನೆ. ವೀರ್ಯ ಮಾಡುತ್ತಿದ್ದುದ್ದನ್ನು ತಿಳಿದು ಪತ್ನಿ ಹೇಗೆ ಪ್ರತಿಕ್ರಿಯಿಸಿದಳು ಎಂಬುದನ್ನು ಪತಿ ಸೋಶಿಯಲ್ ಮೀಡಿಯಾದಲ್ಲಿ(Social media) ಹೇಳಿಕೊಂಡಿದ್ದಾನೆ.

ಹಣ ಗಳಿಸಲು ವೀರ್ಯ ಮಾರಾಟ ಮಾಡಿದ !
ರೆಡ್ಡಿಟ್ ನಲ್ಲಿ ವ್ಯಕ್ತಿ ತಾನು ವೀರ್ಯ ಮಾರಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಷ್ಟದ ದಿನಗಳಲ್ಲಿ ನಾನು ವೀರ್ಯ ಮಾರಾಟ ಮಾಡಿ ಸಮಸ್ಯೆಯನ್ನು ನಿಭಾಯಿಸಿದೆ. ಇದರಿಂದ ಸಾವಿರಾರು ರೂಪಾಯಿ ಹಣ (Money)ವನ್ನು ಗಳಿಸಿದ್ದೆ. ಆದ್ರೆ ಈ ವಿಷಯವನ್ನು ಪತ್ನಿಗೆ ಹೇಳಿರಲಿಲ್ಲ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ, ಒಮ್ಮೆ ಸ್ನೇಹಿತರ ಜೊತೆ ಮಾತನಾಡುತ್ತಾ ಕುಳಿತಾಗ, ತಾನು ವೀರ್ಯ ಮಾರಾಟ ಮಾಡಿರುವ ಸತ್ಯವನ್ನು ಬಾಯಿ ಬಿಟ್ಟಿದ್ದೆ. ಈ ವೇಳೆ ಆತನ ಪತ್ನಿಯೂ ಅಲ್ಲೇ ಇದ್ದಳು. ತನ್ನ ಪತಿ ವೀರ್ಯ ಮಾರಾಟ ಮಾಡುತ್ತಿದ್ದವ ವಿಷಯ ಕೇಳಿ ಪತ್ನಿ ಸಿಟ್ಟಿಗೆದ್ದಳು ಎಂಬುದಾಗಿ ತಿಳಿಸಿದ್ದಾನೆ.

ಕಚೇರಿಯಲ್ಲಿ Ex lover ಜೊತೆ ಕೆಲ್ಸ ಮಾಡ್ಬೇಕಿದ್ರೆ ಇದು ನೆನಪಿರಲಿ

ವೀರ್ಯ ಮಾರಾಟ ಮಾಡುವ ಹಿಂದೆ ಬೇರೆ ಯಾವುದೇ ಉದ್ದೇಶವಿರಲ್ಲಿಲ್ಲ. ಆರ್ಥಿಕ ಸಂಕಷ್ಟದಿಂದ ಹೊರಬರಬೇಕಿತ್ತು. ಇದು ಕೇವಲ ಹಣ ಸಂಪಾದನೆಯ ಮಾರ್ಗವಾಗಿತ್ತು. ಈ ವಿಷಯವನ್ನು ಪತ್ನಿಗೆ ಹೇಳಬಾರದಿತ್ತು. ಆದ್ರೆ ಸ್ನೇಹಿತರ ಜೊತೆಗೆ ಮಾತುಕತೆ ವೇಳೆ ಈ ವಿಷಯ ಬಹಿರಂಗಪಡಿಸದಿದ್ರೆ, ಆಕೆಗೆ ವಿಷಯ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ನನ್ನ ಕಾಲೇಜಿನ ಕೊನೆಯ ವರ್ಷದಲ್ಲಿಆಕೆಯನ್ನು ಭೇಟಿಯಾದಾಗ ಪ್ರೀತಿ ಮೂಡಿತು.

ಆರು ವರ್ಷದ ಹಿಂದೆ ಇಬ್ಬರೂ ಮದುವೆ ಆಗಿದ್ದೇಬೆ. ನಮಗೆ ಮಕ್ಕಳು ಸಹ ಇವೆ. ಆದರೆ ಒಂದು ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ವೇಳೆ ನನಗೆ ಸಹಾಯ ಮಾಡಿದ್ದು ವೀರ್ಯ ಮಾರಾಟದ ಕೆಲಸ. ಅಂದು ನಾನು ಸುಮಾರು 12 ಸಾವಿರ ರೂ. ಹಣ ಸಂಪಾದಿಸಿದ್ದೆ. ಆದ್ರೆ ಈ ವಿಷಯ ಪತ್ನಿಗೆ ತಿಳಿದಾಗ ಅದು ಇಷ್ಟು ದೊಡ್ಡ ಮಟ್ಟದ ಗಲಾಟೆಗೆ ಕಾರಣ ಆಗುತ್ತೆ ಅತ ತಿಳಿದಿರಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.

ಹುಡುಗಿಯರ ಈ ಐದು ಗುಟ್ಟುಗಳು ನಿಮಗೆ ತಿಳಿದಿರಲೇಬೇಕು!

ಪತಿ ಮೋಸ ಮಾಡಿದ್ದಾನೆಂದು ಮಹಿಳೆಯ ಆಕ್ರೋಶ
ಪತಿ ತನಗೆ ಗೊತ್ತಾಗದ ಹಾಗೇ ಇಷ್ಟೆಲ್ಲಾ ವ್ಯವಹಾರ ಮಾಡಿದ್ರೆ ಹೆಂಡ್ತಿ ಸುಮ್ನಿರ್ತಾಳ. ವೀರ್ಯ ಮಾರಾಟದ ವಿಷಯ ತಿಳಿಯುತ್ತಲೇ ಪತಿ ನನ್ನಿಂದ ಎಲ್ಲಾ ವಿಷಯವನ್ನು ಮುಚ್ಚಿಟ್ಟು ನನಗೆ ಮೋಸ ಮಾಡಿದ್ದಾನೆ ಎಂದು ಪತ್ನಿ ಹೇಳುತ್ತಿದ್ದಾಳೆ. ಆದ್ರೆ ನನಗೆ ಇದರಲ್ಲಿ ಪತ್ನಿಗೆ ಯಾವುದೇ ರೀತಿಯ ಮೋಸ ಮಾಡುವ ಭಾವನೆ ಇರಲಿಲ್ಲ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. ವೀರ್ಯ ದಾನದ ಬಗ್ಗೆ ಪತಿಯ ಪೋಸ್ಟ್ ಓದಿದ ನೆಟ್ಟಿಗರು ಭಿನ್ನ-ವಿಭಿನ್ನ ರೀತಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜಗತ್ತು ಬದಲಾಗಿದೆ. ವೀರ್ಯ ದಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ವೈದ್ಯರು ದಾನಿಗಳ ಹೆಸರನ್ನು ರಹಸ್ಯವಾಗಿ ಇರಿಸುತ್ತಾರೆ ಎಂದು ಹೇಳಿದ್ದಾರೆ.

ಓರ್ವ ಮಹಿಳೆ ಕಮೆಂಟ್ ಮಾಡಿ, ನಿಮ್ಮ ಪತ್ನಿಯದ್ದು ಸಹಜ ವರ್ತನೆ. ಇಂತಹ ಸುದ್ದಿ ಕೇಳಿದಾಗ ಶಾಕ್ ಆಗೋದು ನಿಜ. ಮುಂದೊಂದು ದಿನ ಯಾರಾದ್ರೂ ತನ್ನ ಜೈವಿಕ ತಂದೆಯಂತೆ ನಿಮ್ಮನ್ನು ಹುಡುಕಿಕೊಂಡು ಬಂದ್ರೆ ಏನ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.