Real Story: ನನ್ನ ಹೆಂಡ್ತಿ ಗರ್ಭಿಣಿ ಆದ್ರೆ ಮಗು ನನ್ನದಲ್ಲ!

ವಿವಾಹೇತರ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ.  ಕದ್ದುಮುಚ್ಚಿ ನಡೆಯುವ ಈ ಸಂಬಂಧ ಕೆಲವೊಮ್ಮೆ ಬಹಿರಂಗವಾಗುತ್ತೆ. ಪತ್ನಿ, ಪರಪುರುಷನ ಜೊತೆ ಸಂಬಂಧ ಬೆಳೆಸಿದ್ದಾಳೆ ಎಂಬುದನ್ನು ಒಪ್ಪಿಕೊಳ್ಳೋದೆ ಕಷ್ಟ. ಹಾಗಿರುವಾಗ ಯಾರದ್ದೋ ಮಗುವನ್ನು ತನ್ನ ಮಗುವೆಂದು ಒಪ್ಪಿಕೊಳ್ಳುವುದು ಸವಾಲಿನ ಕೆಲಸ. 
 

This Man Wife Is Pregnant But The Child Is Not His how he should receive it

ಮನೆಗೊಂದು ಪುಟಾಣಿ ಮಗು ಬರ್ತಿದೆ ಅಂದ್ರೆ ಎಲ್ಲರಿಗೂ ಖುಷಿ ಸಾಮಾನ್ಯ. ಅದ್ರಲ್ಲೂ ತಂದೆ – ತಾಯಿಯಾಗ್ತಿರುವ ಜೋಡಿಗೆ ಸ್ವರ್ಗದ ಅನುಭವವಾಗುತ್ತದೆ. ಯಾವಾಗ ಮಗು ಈ ಜಗತ್ತಿಗೆ ಬರುತ್ತೆ, ಕರುಳಿನ ಕುಡಿಯನ್ನು ಎಂದು ಎತ್ತಿ ಆಡಿಸ್ತೇವೆ ಎಂದು ಪಾಲಕರು ಕಾಯ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ತನ್ನ ಪತ್ನಿ ಗರ್ಭ ಧರಿಸಿರುವುದೇ ತಲೆಬಿಸಿಗೆ ಕಾರಣವಾಗಿದೆ. ಪತ್ನಿ ಗರ್ಭಿಣಿಯಾಗಿದ್ದಾಳೆಂಬ ವಿಷ್ಯ ಆತನಿಗೆ ಖುಷಿ ತಂದಿಲ್ಲ. ಯಾಕೆ ಅನ್ನೋದು ಗೊತ್ತಾ?

ಮದುವೆ (Marriage) ಯಾದ್ಮೇಲೆ ಸಂಬಂಧವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಎಲ್ಲರೂ ಬಯಸ್ತಾರೆ. ವಂಶಾಭಿವೃದ್ಧಿಗೆ ಮುಂದಾಗ್ತಾರೆ. ಪತ್ನಿ ಗರ್ಭಿಣಿ (Pregnant ) ಎಂಬ ವಿಷ್ಯ ತಿಳಿದಾಗ ಸಂತೋಷ (Happiness) ವಾಗುತ್ತದೆ. ಆದ್ರೆ ಈ ವ್ಯಕ್ತಿಗೆ ಪತ್ನಿ (Wife) ಗರ್ಭಿಣಿ ಎಂಬುದು ತಿಳಿದಾಗಿನಿಂದ ನಿದ್ರೆ ಬರ್ತಿಲ್ಲ. ಇದಕ್ಕೆ ಕಾರಣವಿದೆ. ಅನೇಕ ತಿಂಗಳಿಂದ ಆತ ಪತ್ನಿಯಿಂದ ದೂರವಿದ್ದಾನಂತೆ. ಇಬ್ಬರ ಮಧ್ಯೆ ಯಾವುದೇ ಸಂಬಂಧ ಬೆಳೆದಿಲ್ಲವಂತೆ. ಹೀಗಿರುವಾಗ ಪತ್ನಿ ಗರ್ಭಿಣಿಯಾಗಲು ಹೇಗೆ ಸಾಧ್ಯ ಎಂಬುದು ಆತನ ಪ್ರಶ್ನೆ. ಪತ್ನಿ ಹೊಟ್ಟೆ (Stomach) ಯಲ್ಲಿ ಬೆಳೆಯುತ್ತಿರುವ ಮಗು ನನ್ನದಲ್ಲ. ಬೇರೆ ಯಾವ ವ್ಯಕ್ತಿಯ ಮಗುವಿಗೆ ನಾನು ತಂದೆಯಾಗ್ತಿದ್ದೇನೆ. ನನಗೆ ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ, ಏನ್ ಮಾಡ್ಲಿ ಎಂದು ಈತ ತಜ್ಞರನ್ನು ಕೇಳಿದ್ದಾನೆ.

ತಜ್ಞ (Expert) ರ ಉತ್ತರ : ಈ ಮಗು ನಿಮ್ಮದಲ್ಲ ಎಂಬುದು ನಿಮಗೆ ಖಚಿತವಾಗಿದೆಯೇ ಎಂದು ತಜ್ಞರು ಪ್ರಶ್ನೆ ಕೇಳಿದ್ದಾರೆ. ಯಾಕೆಂದ್ರೆ ಇದು  ಸಣ್ಣಪುಟ್ಟ ಆರೋಪವಲ್ಲ. ಈ ಒಂದು ಕಾರಣದಿಂದ  ನಿಮ್ಮ ವೈವಾಹಿಕ ಜೀವನ  ಸಂಪೂರ್ಣ ಛಿದ್ರವಾಗಬಹುದು. ಹಾಗಾಗಿ, ಈ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ತಜ್ಞರು ಹೇಳಿದ್ದಾರೆ.

'ಬೇರೆ ಮಹಿಳೆ ಎದುರಿಗೆ ಬಂದರೆ ಸಾಕು, ಏನೇನೋ ಆಸೆ, ಏನ್ಮಾಡ್ಲಿ?'

ಪತ್ನಿ ಜೊತೆ ಮಾತನಾಡಿ (Speak with Wife) : ಇದ್ರ ಬಗ್ಗೆ ಪತ್ನಿ ಜೊತೆ ಮಾತನಾಡುವುದು ಬಹಳ ಮುಖ್ಯವೆಂದು ತಜ್ಞರು ಹೇಳಿದ್ದಾರೆ. ನಿಮ್ಮ ಭಾವನೆಗಳನ್ನು ಅವರ ಮುಂದೆ ಹೇಳುವುದು ಒಳ್ಳೆಯದು. ಅನೇಕ ತಿಂಗಳಿಂದ ಸಂಬಂಧ ಬೆಳೆಸಿಲ್ಲ ಎಂದ್ಮೇಲೆ ಮಗು ಹೇಗೆ ಸಾಧ್ಯ ಎಂದು ಆಕೆಯನ್ನು ಪ್ರಶ್ನೆ ಮಾಡಬಹುದು. ಆಕೆ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾಳೆ. ಆಕೆ ನಿಮಗೆ ಇದ್ರ ಬಗ್ಗೆ ಉತ್ತರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

ಮಗು ಯಾರದ್ದೆಂದು ಪತ್ತೆ ಮಾಡಿ : ಮಗು ನಿಮ್ಮದಲ್ಲ ಎಂಬುದು ನಿಮಗೆ ಖಚಿತವಾದ್ರೆ ಹಾಗೂ ಮಗು ನಿಮ್ಮದಲ್ಲ ಎಂಬುದನ್ನು ಪತ್ನಿ ಒಪ್ಪಿಕೊಂಡ್ರೆ ಮಗು ಯಾರದ್ದು ಎಂಬುದನ್ನು ಪತ್ತೆ ಮಾಡಿ. ನಿಮ್ಮ ಪತ್ನಿ ಬಳಿ ಈ ವಿಷ್ಯದ ಬಗ್ಗೆ ಸರಿಯಾಗಿ ತಿಳಿಯಿರಿ. ಹಾಗೆಯೇ ಮೋಸಕ್ಕೆ ಕಾರಣವನ್ನು ಕೇಳಿ. ಮಗುವನ್ನು ದತ್ತು ತೆಗೆದುಕೊಳ್ಳಲು ಅವಳು ನಿಮ್ಮನ್ನು ಕೇಳಿದರೆ  ನೀವು ಮತ್ತೊಮ್ಮೆ ನಿಮ್ಮ ನಿರ್ಧಾರವನ್ನು ಪರಿಶೀಲಿಸಿ ಎಂದು ತಜ್ಞರು ಹೇಳಿದ್ದಾರೆ. 

ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ : ಪತ್ನಿ ಮಾಡಿದ ಮೋಸವನ್ನು ಮರೆಯಲು ಸಾಧ್ಯವಿಲ್ಲ. ಹಾಗಂತ ಸುಲಭವಾಗಿ ಆಕೆಯನ್ನು ಬಿಡಲು ಆಗುವುದಿಲ್ಲ. ಹಾಗಾಗಿ ಇಲ್ಲಿ ಬುದ್ಧಿವಂತಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಆಕೆಯ ಅರಿವಿಗೆ ಬಾರದ ಘಟನೆ ನಡೆದಿದ್ದರೆ ನೀವು ಆಕೆಯನ್ನು ಕ್ಷಮಿಸಬಹುದು. ಆಕೆ ಹಾಗೂ ಆಕೆ ಮಗುವನ್ನು ನೀವು ಸ್ವೀಕರಿಸಬಹುದು. ಮನೆಗೆ ಬರುವ ಹೊಸ ಅತಿಥಿ ಸ್ವಾಗತಕ್ಕೆ ಸಿದ್ಧವಾಗಬಹುದು.

Parenting Tips: ಅಪ್ಪ ಅಮ್ಮ ಆದ್ಮೇಲೂ ಲವ್ವು ಕಡಿಮೆ ಆಗಬಾರದು ಅಂದರೆ ಹೀಗೆ ಮಾಡಿ!

ಒಂದ್ವೇಳೆ ಆಕೆ ಉದ್ದೇಶಪೂರ್ವಕವಾಗಿ ನಿಮಗೆ ಮೋಸ ಮಾಡಿದ್ದರೆ ಅಥವಾ ಇನ್ನೂ ಮಾಡ್ತಿದ್ದರೆ, ಆಕೆ ಮನಸ್ಸಿನಲ್ಲಿ ಪಶ್ಚಾತಾಪದ ಭಾವ ಇಲ್ಲದೆ ಹೋದ್ರೆ ನೀವು ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಆಕೆಯನ್ನು ಕ್ಷಮಿಸುವ ಬದಲು ಸಂಬಂಧವನ್ನು ಕಡಿದುಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು. 

 


 

Latest Videos
Follow Us:
Download App:
  • android
  • ios