'ಬೇರೆ ಮಹಿಳೆ ಎದುರಿಗೆ ಬಂದರೆ ಸಾಕು, ಏನೇನೋ ಆಸೆ, ಏನ್ಮಾಡ್ಲಿ?'
ಆಕರ್ಷಣೆ ಸಹಜ. ಆದ್ರೆ ಮನೆಯಲ್ಲಿ ಮುದ್ದಾದ ಮಡದಿ ಇದ್ದಾಗ್ಲೂ ಬೇರೆ ಮಹಿಳೆಯರಿಗೆ ಆಕರ್ಷಿತರಾಗೋದು, ಅವರ ಜೊತೆ ಸಂಬಂಧ ಬೆಳೆಸೋದು ಅಪರಾಧ. ದಾಂಪತ್ಯ ದ್ರೋಹ. ಇದೆಲ್ಲ ಗೊತ್ತಿದ್ದೂ ಇಲ್ಲೊಬ್ಬ ಇಕ್ಕಟ್ಟಿನಲ್ಲಿ ಸಿಲುಕಿದ್ದಾನೆ.
ಮದುವೆಯಾದ್ಮೇಲೆ ದೇಹ ಮತ್ತು ಮನಸ್ಸು ಕೇವಲ ಸಂಗಾತಿಗೆ ಮೀಸಲಾಗಿರಬೇಕು. ಮನಸ್ಸು ಬೇರೆಯವರನ್ನು ಬಯಸ್ತಾ ಇದ್ರೆ ಅದು ಸಂಗಾತಿಗೆ ಮಾಡುವ ಮೋಸವೇ ಸರಿ. ಜಗತ್ತಿನಲ್ಲಿ ಅನೇಕರು ಈ ವಿಷ್ಯದಲ್ಲಿ ಸಂಗಾತಿಗೆ ಮೋಸ ಮಾಡ್ತಾರೆ. ಕೆಲವರು ಬಯಸಿ, ಬಯಸಿ ಸಂಗಾತಿಗೆ ಮೋಸ ಮಾಡಿದ್ರೆ ಮತ್ತೊಂದಿಷ್ಟು ಜನರಿಗೆ ಚಂಚಲ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಮನಸ್ಸು ಹೇಳಿದಂತೆ ಅವರು ಓಡುವ ಸ್ಥಿತಿ ನಿರ್ಮಾಣವಾಗಿರುತ್ತದೆ. ಈ ವ್ಯಕ್ತಿ ಕೂಡ ಈಗ ಅದೇ ಇಕ್ಕಟ್ಟಿನಲ್ಲಿದ್ದಾನೆ. ಮನೆಯಲ್ಲಿ ಸುಂದರ ಪತ್ನಿ ಇದ್ದರೂ ಆತನಿಗೆ ವಿವಾಹಿತ ಮಹಿಳೆಯರು ಕಂಡ್ರೆ ಬಯಕೆ ಹೆಚ್ಚಾಗುತ್ತದೆ.
ಆತನಿಗೆ ಮದುವೆ (Marriage) ಯಾಗಿ ಎರಡು ವರ್ಷ ಕಳೆದಿದೆ. ಮದುವೆಗೆ ಮುನ್ನ ಆತ ಕೆಲ ವಿವಾಹಿತ ಮಹಿಳೆ (Woman) ಯರ ಜೊತೆ ಶಾರೀರಿಕ ಸಂಬಂಧ (Physical Relationship ) ಬೆಳೆಸಿದ್ದಾನಂತೆ. ಪತ್ನಿ ತುಂಬಾ ಸುಂದರ ಹಾಗೂ ಆಕರ್ಷಕವಾಗಿದ್ದಾಳಂತೆ. ಪತ್ನಿ ತನ್ನನ್ನು ಅತಿಯಾಗಿ ಪ್ರೀತಿ ಮಾಡ್ತಾಳೆ ಎನ್ನುವ ಆತ, ಪತ್ನಿಗೆ ಮೋಸ ಮಾಡ್ತಿದ್ದಾನೆ. ಮದುವೆಯಾದ್ಮೇಲೂ ವಿವಾಹಿತ ಮಹಿಳೆಯರ ಮೇಲಿನ ಆಕರ್ಷಣೆ ಹೋಗಿಲ್ಲವಂತೆ. ವಿವಾಹಿತ ಮಹಿಳೆಯರ ಜೊತೆ ಸಮಯ ಕಳೆಯಲು ಬಯಸುವ ಈತ ಅವರನ್ನು ಕಾಣ್ತಿದ್ದಂತೆ ಸಂಭೋಗದ ಬಯಕೆ ಹೆಚ್ಚಾಗುತ್ತದೆಯಂತೆ.
ವಿವಾಹಿತ ಮಹಿಳೆಯರ ಜೊತೆ ಸಂಬಂಧ ಬೆಳೆಸಬೇಕೆಂಬ ಆಸೆಯನ್ನು ಎಷ್ಟು ನಿಯಂತ್ರಿಸಿದ್ರೂ ಸಾಧ್ಯವಾಗ್ತಿಲ್ಲ ಎನ್ನುತ್ತಾನೆ ಆತ. ಪತ್ನಿ ಜೊತೆ ಸಂಬಂಧ ಬೆಳೆಸುವಾಗ್ಲೂ ಆತನಿಗೆ ಬೇರೆ ಮಹಿಳೆಯರು ನೆನಪಾಗ್ತಾರಂತೆ. ಪತ್ನಿ ಮೇಲೆ ನನಗೆ ಯಾವುದೇ ಆಸಕ್ತಿಯಿಲ್ಲ. ಆಕೆಯನ್ನು ನೋಡಿದ್ರೆ ಯಾವುದೇ ಬಯಕೆಯುಂಟಾಗುವುದಿಲ್ಲ ಎನ್ನುತ್ತಾನೆ ವ್ಯಕ್ತಿ. ಪತ್ನಿಗೆ ನಾನು ಮೋಸ ಮಾಡ್ತಿದ್ದೇನೆ ಎಂಬ ಬೇಸರವಿದೆ. ಹಾಗೆಯೇ ಇದನ್ನು ಬಗೆಹರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಅನೇಕ ಕೌನ್ಸಿಲರ್ ಭೇಟಿಯಾಗಿದ್ದೇನೆ. ಆದ್ರೂ ನನಗೆ ನನ್ನ ಭಾವನೆ ನಿಯಂತ್ರಿಸಲು ಸಾಧ್ಯವಾಗ್ತಿಲ್ಲ. ನಾನು ಎಲ್ಲ ಸಂಗತಿಯನ್ನು ಪತ್ನಿಗೆ ಹೇಳಲಾ ಎಂದು ಆತ ಪ್ರಶ್ನೆ ಮಾಡಿದ್ದಾನೆ.
ತಜ್ಞರ ಸಲಹೆ : ಪ್ರತಿಯೊಬ್ಬರಿಗೂ ಅವರದೇ ಆದ ಸೆಕ್ಸ್ ಕಲ್ಪನೆಯಿರುತ್ತದೆ. ಅದ್ರಲ್ಲಿ ಎಲ್ಲವೂ ಸ್ವೀಕಾರಕ್ಕೆ ಅರ್ಹವಾಗಿರಬೇಕೆಂದೇನು ನಿಯಮವಿಲ್ಲ. ಮದುವೆಗೆ ಮೊದಲೇ ನೀವು ಶಾರೀರಿಕ ಸಂಬಂಧ ಬೆಳೆಸಿದ್ದೀರಿ. ಅದೂ ವಿವಾಹಿತ ಮಹಿಳೆಯರ ಜೊತೆ ಸಂಬಂಧ ಬೆಳೆಸಿದ್ದೀರಿ. ಹಾಗಾಗಿಯೇ ನೀವು ಈಗ್ಲೂ ಬೇರೆ ಪುರುಷರ ಪತ್ನಿಯನ್ನು ನೋಡಿದ್ರೆ ಆಕರ್ಷಣೆಗೆ ಒಳಗಾಗ್ತೀರಿ ಎನ್ನುತ್ತಾರೆ ತಜ್ಞರು. ಶಾರೀರಿಕ ಸಂಬಂಧದ ಇಚ್ಛೆಯನ್ನು ಕೆಲ ದಿನಗಳ ಕಾಲ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಹಾಗೆಯೇ ಇದಕ್ಕೆ ಸಹಾಯ ಮಾಡುವ, ನಿಮ್ಮ ಮನಸ್ಸನ್ನು ಬೇರೆಡೆ ಸೆಳೆಯುವ ಕೌನ್ಸಿಲರ್ ಭೇಟಿಯಾಗಿ, ಅವರಿಂದ ಚಿಕಿತ್ಸೆ ಪಡೆಯಿರಿ ಎನ್ನುತ್ತಾರೆ ತಜ್ಞರು.
ಸೆಕ್ಸ್ ಮಾಡಿ ತೂಕ ಇಳಿಸಿಕೊಳ್ಬೋದಾ ? ತಜ್ಞರು ಏನಂತಾರೆ
ಪತ್ನಿ ನೋಡಿದ್ರೆ ಯಾವುದೇ ಭಾವನೆ ಬರೋದಿಲ್ಲ ಎನ್ನುವ ನೀವು ಪತ್ನಿಗೆ ಮತ್ತಷ್ಟು ಹತ್ತಿರವಾಗಿ ಎನ್ನುತ್ತಾರೆ ತಜ್ಞರು. ನಿಮ್ಮನ್ನು ನೀವು ದೋಷಿ ಮಾಡಿಕೊಂಡು ಕೊರಗುವ ಬದಲು, ನಿಮ್ಮ ಪತ್ನಿ ಜೊತೆ ಹೆಚ್ಚು ಸಮಯ ಕಳೆಯಿರಿ. ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಎನ್ನುತ್ತಾರೆ ತಜ್ಞರು. ಪತ್ನಿ ಜೊತೆಗಿರುವಾಗ ಅಪ್ಪಿತಪ್ಪಿಯೂ ಬೇರೆ ಮಹಿಳೆಯರ ಬಗ್ಗೆ ಆಲೋಚನೆ ಮಾಡ್ಬೇಡಿ. ಮದುವೆ ಎಂಬುದು ಸೂಕ್ಷ್ಮ ಸಂಬಂಧ. ಇಲ್ಲಿ ಸ್ವಲ್ಪ ಯಡವಟ್ಟಾದ್ರೂ ಮದುವೆ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ತಜ್ಞರು.
Relationship Tips: ಚಿತ್ರ ವಿಚಿತ್ರವಾಗಿದೆ ಮಹಿಳೆಯರ ಸೆಕ್ಸ್ ಫ್ಯಾಂಟಸಿ
ಈ ಬಗ್ಗೆ ಪತ್ನಿಗೆ ಹೇಳುವುದು ಸಂಪೂರ್ಣ ನಿಮ್ಮ ನಿರ್ಧಾರ. ಈ ಸಮಸ್ಯೆಯನ್ನು ನೀವೊಬ್ಬರೇ ಬಗೆಹರಿಸಿಕೊಳ್ಳಬಲ್ಲಿರಿ ಎಂದಾದ್ರೆ ಪತ್ನಿಗೆ ಹೇಳುವ ಅಗತ್ಯವಿಲ್ಲ. ಪತ್ನಿ ಇದ್ರಿಂದ ನೊಂದುಕೊಳ್ಳಬಹುದು. ಸಂಬಂಧ ಹಾಳಾಗಬಹುದು. ಆದ್ರೆ ನಿಮ್ಮ ದುಷ್ಚಟವನ್ನು ಸುಧಾರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದಾದ್ರೆ ನೀವು ನಿಮ್ಮ ಪತ್ನಿ ಸಹಾಯ ಪಡೆಯುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.