Asianet Suvarna News Asianet Suvarna News

ಪ್ರೇಯಸಿಗೆ ತಿಂಗಳಿಗೆ 82 ಲಕ್ಷ ರೂ. ಸ್ಯಾಲರಿಯಾಗಿ ಕೊಡುತ್ತಾನೆ ಈ ಬಾಯ್‌ಫ್ರೆಂಡ್‌ !

ಬಾಯ್‌ಫ್ರೆಂಡ್‌ (Boyfriend) ತನ್ನ ಗರ್ಲ್‌ಫ್ರೆಂಡ್‌ಗೆ (Girlfriend) ಗಿಫ್ಟ್‌ ಕೊಡೋದು ನೀವು ಕೇಳಿರ್ಬೋದು. ಖರ್ಚಿಗೆ ಇರಲಿ ಅಂತ ಇಂತಿಷ್ಟು ದುಡ್ಡು ಕೊಡೋ ಹುಡುಗರೂ ಇದ್ದಾರೆ. ಆದ್ರೆ ಈ ಬಾಯ್‌ಫ್ರೆಂಡ್‌ ತನ್ನ ಗರ್ಲ್‌ಫ್ರೆಂಡ್‌ಗೆ ತಿಂಗಳಿಗೆ ಇಂತಿಷ್ಟು ಅಂತ ಸ್ಯಾಲರಿ ಕೊಡ್ತಾನೆ. ಅದು ಅಷ್ಟಿಷ್ಟಲ್ಲ ಬರೋಬ್ಬರಿ 82 ಲಕ್ಷ ರೂ. ಹೀಗೆ ಸಂಬಳ (Salary) ಕೊಡ್ತಿರೋದು ಮತ್ಯಾರೂ ಅಲ್ಲ ಖ್ಯಾತ ಫುಟ್ಬಾಲ್ ಆಟಗಾರ. 

This Girlfriend Takes Rs 80 Lakh Per Month As Salary From Her Boyfriend Vin
Author
Bengaluru, First Published Apr 30, 2022, 2:39 PM IST

ಖ್ಯಾತ ಫುಟ್ಬಾಲ್ ಆಟಗಾರ (Football Player)  ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ವಿಶ್ವದ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಅಥ್ಲೆಟಿಕ್ಸ್ ಹೊರತುಪಡಿಸಿ, ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಸಮಯದಲ್ಲಿ, ಅವರು ತಮ್ಮ ಗೆಳತಿ (Girlfriend) ಜಾರ್ಜಿನಾ ರೋಡ್ರಿಗಸ್ ಬಗ್ಗೆ ಮಾತನಾಡುತ್ತಿರುತ್ತಾರೆ. ವರದಿಗಳ ಪ್ರಕಾರ, ರೊನಾಲ್ಡೊ ತನ್ನ ಗೆಳತಿಗೆ ಮಾಸಿಕ ವೆಚ್ಚದಲ್ಲಿ 80 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ನೀಡುತ್ತಾರಂತೆ. ಗೆಳತಿಯರಿಗೆ ಪಾವತಿಸಿದ ಹಣವನ್ನು ಬ್ರಿಟಿಷ್ ಮಾಧ್ಯಮಗಳಲ್ಲಿ 'ಸಂಬಳ' ಎಂದು ಉಲ್ಲೇಖಿಸಲಾಗಿದೆ. ಅಷ್ಟಕ್ಕೂ ಕೆಲಸದವರಿಗೆ ಸಂಬಳ (Salary) ನೀಡುತ್ತಾರೆ. ಹೆಂಡತಿಗೆ ಸಂಬಳ ಯಾಕೆ ಎಂಬ ಪ್ರಶ್ನೆ ಮೂಡಬಹುದು.

ಮಕ್ಕಳ ಆರೈಕೆ ಮತ್ತು ಇತರ ವೆಚ್ಚಗಳಿಗಾಗಿ 82 ಲಕ್ಷ ರೂ.
ರೊನಾಲ್ಡೊ ಮತ್ತು ಜಾರ್ಜಿನಾ  ಐಷಾರಾಮಿ ಜೀವನ (Luxurious Life) ನಡೆಸುತ್ತಿದ್ದಾರೆ. ಈ ಹಿಂದೆ, ರೊನಾಲ್ಡೊ ತನ್ನ ಗೆಳತಿ ಜಾರ್ಜಿನಾಗೆ 1.5 ಕೋಟಿ ಮೌಲ್ಯದ ವಾಹನವನ್ನು ನೀಡಿದ್ದರು. ದಂಪತಿ ಆಗಾಗ ವಿದೇಶಗಳಲ್ಲಿ ಎಂಜಾಯ್‌ ಮಾಡುವುದನ್ನು ನೋಡಬಹುದು. ಜಾರ್ಜಿನಾ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅವರ ಐಷಾರಾಮಿ ಜೀವನವನ್ನು ಪ್ರತಿಬಿಂಬಿಸುವ ಫೋಟೋಗಳನ್ನು ನೋಡಬಹುದು. ಜಾರ್ಜಿನಾ ಮತ್ತು ರೊನಾಲ್ಡೊ 2017ರಿಂದ ಜೊತೆಯಾಗಿ ಜೀವನ ನಡೆಸುತ್ತಿದ್ದಾರೆ. ಎಲ್ ನ್ಯಾಶನಲ್ ಪ್ರಕಾರ ಜಾರ್ಜಿನಾ ರೋಡ್ರಿಗಸ್ ಪ್ರತಿ ತಿಂಗಳು ಮಕ್ಕಳ ಆರೈಕೆ ಮತ್ತು ಇತರ ವೆಚ್ಚಗಳಿಗಾಗಿ" 83,000 ಪೌಂಡ್‌ಗಳನ್ನು (ಸುಮಾರು ರೂ 82 ಲಕ್ಷ) ಪಡೆಯುತ್ತಾರೆ ಎಂದು ತಿಳಿದುಬಂದಿದೆ.

ಕ್ರಿಸ್ಟಿಯಾನೋ ರೊನಾಲ್ಡೋ ಜರ್ಸಿಗಳ ಸೇಲ್‌ನಿಂದ 1,900 ಕೋಟಿ ರುಪಾಯಿ ಗಳಿಕೆ!

ಜಾರ್ಜಿನಾ ವೃತ್ತಿಪರ ಮಾಡೆಲ್‌. ಅವರು ವಿವಿಧ ಪ್ರಸಿದ್ಧ ವ್ಯವಹಾರಗಳ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ, ಅವರು ಸುಮಾರು 36 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಪ್ರತಿ ಫೋಟೋವನ್ನು ಲಕ್ಷಾಂತರ ಜನರು ಇಷ್ಟಪಡುತ್ತಾರೆ ಮತ್ತು ಕಾಮೆಂಟ್ ಮಾಡುತ್ತಾರೆ. ಇತ್ತೀಚೆಗೆ, 'ಐ ಆಮ್ ಜಾರ್ಜಿನಾ' ಸಾಕ್ಷ್ಯಚಿತ್ರದಲ್ಲಿ, ಜಾರ್ಜಿನಾ ಅವರ ಜೀವನದ ಎಲ್ಲಾ ಅಂಶಗಳನ್ನು ಚರ್ಚಿಸಲಾಗಿದೆ. 

ಜಾರ್ಜಿನಾ ರೋಡ್ರಿಗಸ್ ಜೊತೆ ಡೇಟಿಂಗ್ ಮಾಡುತ್ತಿರುವ ರೊನಾಲ್ಡೋ
ರೊನಾಲ್ಡೋ ಇದುವರೆಗೂ ಯಾರನ್ನೂ ವಿವಾಹವಾಗಿಲ್ಲ. ರೊನಾಲ್ಡೋ ಜಾರ್ಜಿನಾ ರೋಡ್ರಿಗಸ್ ಜೊತೆಗೂ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿಗೆ ಈಗಾಗಲೇ ಮೂರು ವರ್ಷದ ಮಗಳಿದ್ದಾಳೆ. ಆಕೆಗೆ ಮಾರ್ಟಿನಾ ಎಂದು ಹೆಸರಿಟ್ಟಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋ 2010rರಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದರು. ಇದಾದ 7 ವರ್ಷಗಳ ಬಳಿಕ ರೊನಾಲ್ಡೋ ಇಬ್ಬರು ಅವಳಿ ಮಕ್ಕಳಿಗೆ ತಂದೆಯಾದರು. ಜಾರ್ಜಿನಾ ಓರ್ವ ಮಾಡೆಲ್ ಆಗಿದ್ದಾರೆ.  2016ರಲ್ಲಿ ಸ್ಪೇನ್‌ನಲ್ಲಿ ಜಾರ್ಜಿಯಾ ರೊನಾಲ್ಡೊ ಅವರನ್ನು ಭೇಟಿಯಾದರು. ಭೇಟಿ ಪರಿಚಯಕ್ಕೆ ತಿರುಗಿ ಇಬ್ಬರೂ ಡೇಟಿಂಗ್ ಮಾಡಲು ಆರಂಭಿಸಿದರು.

ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅಧಿಕ ಗೋಲು: ರೊನಾಲ್ಡೋ ನಂ.1

ರೊನಾಲ್ಡೊ ಮತ್ತು ಜಾರ್ಜಿನಾ ಐಷಾರಾಮಿ ಜೀವನಶೈಲಿ
ರೊನಾಲ್ಡೊ ಮತ್ತು ಜಾರ್ಜಿನಾ ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಾರೆ.  ದಂಪತಿ 48 ಕೋಟಿಯ ಐಷಾರಾಮಿ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.  ಅರಮನೆಯು ಈಜುಕೊಳ, ಜಿಮ್ ಮತ್ತು ಫುಟ್ಬಾಲ್ ಮೈದಾನವನ್ನು ಸಹ ಹೊಂದಿದೆ.ಈ ಹಿಂದೆ ರೊನಾಲ್ಡೊ ತನ್ನ ಗೆಳತಿ ಜಾರ್ಜಿಯಾಗೆ 1.5 ಕೋಟಿ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 55 ಕೋಟಿಯ ವಿಹಾರ ನೌಕೆಗಳಲ್ಲಿ ಪ್ರಯಾಣಿಸುತ್ತಾರೆ. ಬುಗಾಟಿ, ರೋಲ್ಸ್ ರಾಯಲ್ ಮತ್ತು ಫೆರಾರಿಯಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.  ಅವರು ವಿಮಾನ ಪ್ರಯಾಣಕ್ಕಾಗಿ ಖಾಸಗಿ ಜೆಟ್ ಬಳಸುತ್ತಾರೆ.

Follow Us:
Download App:
  • android
  • ios