ಲಕ್ಷ್ಮೀ ನಿವಾಸ ಧಾರಾವಾಹಿಯ ಜನಪ್ರಿಯ ನಟಿ ಚೆಲುವಿ (ಅಶ್ವಿನಿ ಮೂರ್ತಿ) ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪತಿಯ ಮುಖವನ್ನು ಎಐ ಫೋಟೋ ಮೂಲಕ ಮುಚ್ಚಿಟ್ಟು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ನಟನೆಯ ಜೊತೆಗೆ ಇವರು ಯಶಸ್ವಿ ಉದ್ಯಮಿಯೂ ಆಗಿದ್ದಾರೆ.

ಬೆಂಗಳೂರು: ಲಕ್ಷ್ಮೀ ನಿವಾಸ (Lakshmi Nivasa)ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಂದು ವೆಂಕಿ ಮತ್ತು ಚೆಲುವಿಯ ಪಾತ್ರ. ಮಾತು ಬಾರದ ವೆಂಕಿಯನ್ನು ತುಂಬಾನೆ ಪ್ರೀತಿ ಮಾಡುವ ಚೆಲುವಿಯ ಮುಗ್ಧ ಪಾತ್ರ ವೀಕ್ಷಕರಿಗೆ ತುಂಬಾನೆ ಇಷ್ಟ. ಸದ್ಯಕ್ಕಂತೂ ಧಾರಾವಾಹಿಯಲ್ಲಿ ಇಮೋಶನಲ್ ಎಪಿಸೋಡ್ ನಡೆಯುತ್ತಿದ್ದು, ಜನ ಇವರ ನಟನೆಯನ್ನ ಮೆಚ್ಚಿಕೊಂಡಿದ್ದಾರೆ. ಚೆಲುವಿ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿಯ ಹೆಸರು ಅಶ್ವಿನಿ ಮೂರ್ತಿ. ಅವರನ್ನು ಚೆರಿಕಾ ಮೂರ್ತಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಲಕ್ಷ್ಮೀ ನಿವಾಸದಲ್ಲಿ ಹೂ ಮಾರುವ ಹುಡುಗಿಯಾಗಿ ಕಾಣಿಸಿಕೊಂಡ ಚೆಲುವಿ, ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿ ದತ್ತು ಪುತ್ರ ವೆಂಕಿ ಕೈ ಹಿಡಿದು ತುಂಬಾ ಕುಟುಂಬದ ಸೊಸೆಯಾಗಿದ್ದಾಳೆ. ಮೂಕ ಗಂಡನಿಗೆ ಧ್ವನಿಯಾಗಿರೋ ಚೆಲುವಿಗೆ ಆರ್ಥಿಕವಾಗಿ ಸದೃಢವಾಗಬೇಕು ಮತ್ತು ಅಂಧ ತಾಯಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಅನ್ನೋದು ಚೆಲುವಿಯ ಆಸೆಯಾಗಿದೆ. ಇತ್ತೀಚೆಗೆ ತನಗೆ ಗಂಡನಂತಿರೋ ಮಗು ಬೇಕೆಂದು ಚೆಲುವಿ ಹೇಳಿಕೊಳ್ಳುತ್ತಿದ್ದಾಳೆ.

ಇದು Lakshmi Nivasa ಸೀರಿಯಲ್​ ಸ್ಟೋರಿಯಾದರೆ, ಇದೀಗ ನಟಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿದ್ದಾರೆ. ಆದರೆ ನಟಿ ಇಲ್ಲಿ ಜಾಣ್ಮೆ ತೋರಿದ್ದಾರೆ. ಎಐ ರಚಿತ ಫೋಟೋ ಶೇರ್​ ಮಾಡಿದ್ದು, ತಮ್ಮ ಪತಿಯ ಮುಖವನ್ನು ರಿವೀಲ್​ ಮಾಡಲಿಲ್ಲ. ನನ್ನ ಶಾಂತಿ, ಸುರಕ್ಷಿತ ಸ್ಥಳ ಮತ್ತು ನಾನು ಯಾವಾಗಲೂ ನಂಬಬಹುದಾದ ವ್ಯಕ್ತಿಯಾಗಿದ್ದಕ್ಕಾಗಿ ಧನ್ಯವಾದಗಳು. ದೇವರು ನಿಮ್ಮನ್ನು ನಿಜವಾಗಿಯೂ ವಿಶೇಷವಾಗಿಸಿದ್ದಾನೆ, ಮತ್ತು ನಾನು ನಿಮಗಾಗಿ ಪ್ರತಿದಿನ ಅವನಿಗೆ ಧನ್ಯವಾದ ಹೇಳುತ್ತೇನೆ ಎಂದು ಶೀರ್ಷಿಕೆ ಕೊಟ್ಟು ಎಐ ಫೋಟೋ ಹಾಕಿದ್ದಾರೆ ನಟಿ. ಈ ಹಿನ್ನೆಲೆಯಲ್ಲಿ ಈ ರಹಸ್ಯ ಪತಿ ಯಾರು ಎನ್ನುವ ಬಗ್ಗೆ ನಟಿಯ ಫ್ಯಾನ್ಸ್​ಗೆ ಸಿಕ್ಕಾಪಟ್ಟೆ ಕುತೂಹಲ ಉಂಟಾಗಿದೆ. ದಯವಿಟ್ಟು ಪತಿಯನ್ನು ಪರಿಚಯಿಸಿ ಎಂದು ಕಮೆಂಟ್ಸ್​ನಲ್ಲಿ ಅಭಿಮಾನಿಗಳು ಕೇಳುತ್ತಿದ್ದಾರೆ.

ನಟಿಯ ಕುರಿತು ಒಂದಿಷ್ಟು...

ಅಂದಹಾಗೆ, ಚೆರಿಕಾ ಆರ್. ಮೂರ್ತಿ (ಅಶ್ವಿನಿ ಆರ್. ಮೂರ್ತಿ ಎಂದೂ ಪರಿಚಿತರು) ಕನ್ನಡ ಮತ್ತು ತಮಿಳು ಕಿರುತೆರೆ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಮಾತ್ರವಲ್ಲದೇ ಉದ್ಯಮಿಯೂ ಆಗಿದ್ದಾರೆ. ಇವರು ಲಕ್ಷ್ಮಿ ನಿವಾಸಕ್ಕೂ ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಮಹೇಶ್ ರಾವ್ ನಿರ್ದೇಶನದ ಜೀ ತಮಿಳು ವಾಹಿನಿಯ 'ಗೆಟ್ಟಿಮೇಳಂ' (Gettimelam) ಧಾರಾವಾಹಿಯಲ್ಲಿ 'ರೇವತಿ' ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಶ್ರೀಷ ನಾಯಕನಾಗಿ ನಟಿಸಿರುವ ಕನ್ನಡದ 'ತರಂಗಾಂತರಂಗ' ಸಿನಿಮಾದಲ್ಲಿ ಚೆರಿಕಾ ಮೂರ್ತಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಅಕ್ಕ ಆಗಿ ಇವರು ನಟಿಸಿದ್ದರು, ಅಷ್ಟೇ ಅಲ್ಲ ಮರಳಿ ಮನಸಾಗಿದೆ, ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲೂ ಅಶ್ವಿನಿ ನಟಿಸಿದ್ದರು. ಸದ್ಯ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಚೆಲ್ವಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಉದ್ಯಮಿಯೂ ಹೌದು

ನಟನೆಯ ಜೊತೆಗೆ ವೃತ್ತಿಪರ ಕಾಸ್ಮೆಟಾಲಜಿಸ್ಟ್ ಮತ್ತು ಎಸ್ಥೆಟಿಷಿಯನ್ (Aesthetician) ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಬೆಂಗಳೂರಿನಲ್ಲಿ 'ಎಆರ್ ನೇಲ್ ಸ್ಟುಡಿಯೋ' (AR Nail Studio) ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಮ್ಮ ಫ್ಯಾಷನ್, ಸಾಂಪ್ರದಾಯಿಕ ಸೀರೆ ಉಡುಗೆಗಳು ಮತ್ತು ಜೀವನಶೈಲಿಯ ವಿಡಿಯೋಗಳ ಮೂಲಕ Instagram ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಮೂಲಕ ಲಕ್ಷ್ಮೀ ನಿವಾಸ ಚೆಲುವಿ, ನಟಿಯಾಗೋಕೂ ಮುನ್ನವೇ ಅಶ್ವಿನಿಯವರು ಬ್ಯುಸಿನೆಸ್ ವುಮೆನ್. ಇವರೊಬ್ಬ ಕಾಸ್ಮಟಾಲಜಿಸ್ಟ್ (Cosmetologist). ಇವರು ತಮ್ಮದೇ ಆದ ಬ್ಯೂಟಿ ಸಲೂನ್ ಕೂಡ ಹೊಂದಿದ್ದಾರೆ. ರಾಜಾಜಿನಗರದಲ್ಲಿ ಗ್ಲಾಮ್ ಹೌಸ್ ಯುನಿಸೆಕ್ಸ್ ಬ್ಯೂಟಿ ಸಲೂನ್ ಮಾಲೀಕರು ಇವರು. ಹೇರ್, ಸ್ಕಿನ್, ನೈಲ್ ಆರ್ಟ್, ಮೇಕಪ್ ಎಲ್ಲವನ್ನೂ ಇಲ್ಲಿ ಮಾಡಿ ಕೊಡ್ತಾರೆ. ಇನ್ನು ಇವರ ಬ್ಯೂಟಿ ಸಲೂನ್ (beauty salon) ಭಾರಿ ಜನಪ್ರಿಯತೆ ಗಳಿಸಿದ್ದು, ನಟಿಯರಾದ ವಿಜಯಲಕ್ಷ್ಮೀ, ಸ್ವಾತಿ, ಅಭಿಜ್ಞಾ ಭಟ್, ರುಹಾನಿ ಶೆಟ್ಟಿ, ಪೂಜಾ ದುಗ್ಗಣ್ಣ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ಭೇಟಿ ನೀಡಿ, ಸೇವೆ ಪಡೆದು ಕೊಂಡಿದ್ದಾರೆ.