ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅಧಿಕ ಗೋಲು: ರೊನಾಲ್ಡೋ ನಂ.1
* ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಹೊಸ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೋ
* ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ
* ರೊನಾಲ್ಡೋ ಸದ್ಯ 111 ಗೋಲುಗಳೊಂದಿಗೆ ಗರಿಷ್ಠ ಗೋಲು ಸರದಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ
ಪ್ಯಾರಿಸ್(ಸೆ.03): ಪೋರ್ಚುಗಲ್‌ನ ತಾರಾ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.
ಐರ್ಲೆಂಡ್ ವಿರುದ್ಧ ಬುಧವಾರ ನಡೆದ 2022ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ರೊನಾಲ್ಡೋ 2 ಗೋಲು ಬಾರಿಸಿದರು. ಈ ಮೂಲಕ ಇರಾನ್‌ನ ಅಲಿ ದಯಿ ದಾಖಲೆ(109 ಗೋಲು)ಯನ್ನು ಮುರಿದರು. ರೊನಾಲ್ಡೋ ಸದ್ಯ 111 ಗೋಲುಗಳೊಂದಿಗೆ ಗರಿಷ್ಠ ಗೋಲು ಸರದಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಪೋರ್ಚುಗಲ್ ಪರ ಕಳೆದ 47 ಪಂದ್ಯಗಳಲ್ಲಿ ರೊನಾಲ್ಡೋ 49 ಗೋಲುಗಳನ್ನು ಬಾರಿಸಿರುವುದು ವಿಶೇಷ.
ರೊನಾಲ್ಡೋ ಮೈದಾನದಲ್ಲಷ್ಟೇ ಅಲ್ಲದೇ ಮೈದಾನದಾಚೆಗೂ ಹಲವು ದಾಖಲೆಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿದ ಅಥ್ಲೀಟ್ ಎನ್ನುವ ದಾಖಲೆಯೂ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿದೆ. ಇನ್ನು 2021ರ ಏಪ್ರಿಲ್ ವೇಳೆಗೆ ಫೇಸ್‌ಬುಕ್‌ನಲ್ಲಿ ಅತಿಹೆಚ್ಚು ಲೈಕ್(124,726,150) ಪಡೆದ ಅಥ್ಲೀಟ್ ಎನ್ನುವ ಕೀರ್ತಿಯೂ ರೊನಾಲ್ಡೋ ಪಾಲಾಗಿದೆ.
ಅಭಿಮಾನಿಗಳಿಗೆ ಶಾಕ್; ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ಲಿಯೋನೆಲ್ ಮೆಸ್ಸಿ ಗುಡ್ ಬೈ!
ಕ್ರಿಸ್ಟಿಯಾನೋ ರೊನಾಲ್ಡೋ ಕೆಲವು ದಿನಗಳ ಹಿಂದಷ್ಟೇ ಯುವೆಂಟಸ್ ಫುಟ್ಬಾಲ್ ಕ್ಲಬ್ ತೊರೆದು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಸೇರ್ಪಡೆಗೊಂಡಿದ್ದಾರೆ. ರೊನಾಲ್ಡೋ 2003ರಲ್ಲಿ ಮ್ಯಾಂಚೆಸ್ಟರ್ ಕ್ಲಬ್‌ನಿಂದಲೇ ತಮ್ಮ ಫುಟ್ಬಾಲ್ ವೃತ್ತಿಜೀವನವನ್ನು ಆರಂಭಿಸಿದ್ದರು. ಇನ್ನು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪರವೂ 7 ನಂಬರಿನ ಜೆರ್ಸಿ ತೊಟ್ಟು ರೊನಾಲ್ಡೋ ಕಣಕ್ಕಿಳಿಯಲಿದ್ದಾರೆ.