* ಜೆರ್ಸಿ ಮಾರಾಟದಲ್ಲಿ ಹೊಸ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೋ ಶರ್ಟ್* ರೊನಾಲ್ಡೋ ಜೆರ್ಸಿ ಮಾರಾಟದಿಂದಲೇ 1,900 ಕೋಟಿ ರು ಗಳಿಕೆ* ರೊನಾಲ್ಡೋಗೆ ಮ್ಯಾಂಚೆಸ್ಟರ್‌ ತಂಡ ವಾರ್ಷಿಕ 260 ಕೋಟಿ ರು. ಸಂಭಾವನೆ 

ಮ್ಯಾಂಚೆಸ್ಟರ್(ಸೆ.13)‌: ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ, ಇಟಲಿಯನ್‌ ಲೀಗ್‌ ಬಿಟ್ಟು ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ಗೆ ಕಾಲಿಟ್ಟಿದ್ದೇ ತಡ, ಅವರ ಹೆಸರನ್ನು ಹೊಂದಿರುವ ಜೆರ್ಸಿಗಳನ್ನು ಖರೀದಿಸಲು ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡದ ಅಭಿಮಾನಿಗಳು ಮುಗಿಬಿದ್ದಿದ್ದಾರೆ. 

ಕಳೆದ ಒಂದು ವಾರದಲ್ಲಿ ರೊನಾಲ್ಡೋ ಹೆಸರು ಹಾಗೂ ‘7’ ಸಂಖ್ಯೆ ಇರುವ ಜೆರ್ಸಿಗಳ ಮಾರಾಟದಿಂದ ಜೆರ್ಸಿ ತಯಾರಕ ಸಂಸ್ಥೆ ಆ್ಯಡಿಡಾಸ್‌ ಬರೋಬ್ಬರಿ 187 ಮಿಲಿಯನ್‌ ಪೌಂಡ್‌(ಅಂದಾಜು 1,900 ಕೋಟಿ ರು.) ಗಳಿಸಿದೆ ಎಂದು ತಿಳಿದುಬಂದಿದೆ. ಜೆರ್ಸಿಗಳ ಮಾರಾಟದಿಂದ ತಂಡಕ್ಕೆ ಇಂತಿಷ್ಟು ಕಮಿಷನ್‌ ದೊರೆಯಲಿದೆ. ಈ ರೀತಿಯಾಗಿ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡ 13.1 ಮಿಲಿಯನ್‌ ಪೌಂಡ್‌(ಅಂದಾಜು 133 ಕೋಟಿ ರು.) ಹಣ ಸಂಪಾದಿಸಿದೆ. ರೊನಾಲ್ಡೋಗೆ ಮ್ಯಾಂಚೆಸ್ಟರ್‌ ತಂಡ ವಾರ್ಷಿಕ 260 ಕೋಟಿ ರು. ಸಂಭಾವನೆ ನೀಡಲಿದೆ.

Scroll to load tweet…
Scroll to load tweet…

ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅಧಿಕ ಗೋಲು: ರೊನಾಲ್ಡೋ ನಂ.1

ಕ್ರಿಸ್ಟಿಯಾನೋ ರೊನಾಲ್ಡೋ ಫುಟ್ಬಾಲ್ ವೃತ್ತಿಜೀವನವನ್ನು ಮ್ಯಾಂಚೆಸ್ಟರ್ ಕ್ಲಬ್‌ನಿಂದಲೇ ಆರಂಭಿಸಿದ್ದರು. ಇದೀಗ ರೊನಾಲ್ಡೋ ದಿಗ್ಗಜ ಫುಟ್ಬಾಲಿಗನಾಗಿ ಬೆಳೆದುನಿಂತಿದ್ದಾರೆ. ಸದ್ಯ ಅಂತರರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಫುಟ್ಬಾಲಿಗ ಎನ್ನುವ ದಾಖಲೆ ಕೂಡಾ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿದೆ. ಫಿಫಾ ವಿಶ್ವಕಪ್ ಹೊರತುಪಡಿಸಿ ಉಳಿದೆಲ್ಲಾ ಟೂರ್ನಿಗಳನ್ನು ರೊನಾಲ್ಡೋ ಜಯಿಸಿದ್ದಾರೆ.