ಸಂಗಾತಿ ನಿಮ್ಮನ್ನು ನಿಯಂತ್ರಿಸುತ್ತಿದ್ದಾರೆ ಅನ್ನೋದಕ್ಕೆ ಈ 7 ವರ್ತನೆಗಳು ಸಾಕು!

ಕೆಲವೊಮ್ಮೆ ಸಂಗಾತಿ ಮಾತು,ವರ್ತನೆ ಉಸಿರುಗಟ್ಟಿಸಬಹುದು. ಸಂಗಾತಿ ತನ್ನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನವೂ ಮೂಡಬಹುದು. ಹಾಗಾದ್ರೆ ಸಂಗಾತಿ ನಿಮ್ಮನ್ನು ನಿಯಂತ್ರಿಸುತ್ತಿದ್ದಾರೆ ಅನ್ನೋದನ್ನು ಸೂಚಿಸೋ ಸಂಗತಿಗಳು ಯಾವುವು? 

These 7 things shows your partner controls you

ಅರಿತು ಬಾಳೋ ಸಂಗಾತಿಯಿದ್ರೆ ಜೀವನ ನೆಮ್ಮದಿ ಹಾಗೂ ಸಂತಸದ ಗೂಡು. ಸಂಗಾತಿಗಳು ಒಬ್ಬರನ್ನೊಬ್ಬರು ಅರಿತು ಬಾಳೋ ಜೊತೆಗೆ ಪರಸ್ಪರ ಗೌರವ, ಆದರ ಹೊಂದಿರೋದು ಕೂಡ ಅಗತ್ಯ. ಪ್ರೀತಿಯಿರೋ ಕಡೆ ಗೌರವವೂ ಇರಲೇಬೇಕು.ಆಗ ಮಾತ್ರ ಸಂಬಂಧ ಗಟ್ಟಿಗೊಳ್ಳುತ್ತೆ.ಸಂಸಾರದ ಜವಾಬ್ದಾರಿಗಳಿಗೆ ಇಬ್ಬರೂ ಸಮನಾಗಿ ಹೆಗಲು ನೀಡಿದಾಗ ಪಯಣ ಸುಗಮವಾಗಿರುತ್ತದೆ.ಆದ್ರೆ ಎಷ್ಟೋ ಸಂಸಾರಗಳಲ್ಲಿ ಒಬ್ಬ ಸಂಗಾತಿ ಇನ್ನೊಬ್ಬರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಸಂಗಾತಿ ತನ್ನೆಲ್ಲ ಕೆಲಸ-ಕಾರ್ಯಗಳನ್ನು ನಿಯಂತ್ರಿಸುತ್ತಿರೋದು ಇನ್ನೊಬ್ಬರಿಗೆ ಗೊತ್ತಾಗೋದೇ ಇಲ್ಲ.ಆದ್ರೆ ದೀರ್ಘಕಾಲಿಕ ಸಂಬಂಧದಲ್ಲಿ ಇಂಥ ಬೆಳವಣಿಗೆ ಖಂಡಿತಾ ಒಳ್ಳೆಯದ್ದಲ್ಲ.ಸಂಗಾತಿ ನಿಮ್ಮನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸೂಚಿಸೋ 7 ಸಂಗತಿಗಳು ಇಲ್ಲಿವೆ.

ಸ್ಟ್ರಾಂಗ್ ಹೆಣ್ಣು ಮಗಳು ಎಂದಿಗೂ ಈ ತಪ್ಪುಗಳನ್ನು ಮಾಡೋದಿಲ್ಲ

ಆತ್ಮೀಯರ ಜೊತೆ ಬೆರೆಯಲು ಬಿಡೋದಿಲ್ಲ
ಇದು ಸಂಗಾತಿ ನಿಮ್ಮನ್ನು ನಿಯಂತ್ರಿಸಲು ಬಳಸೋ ಮೊದಲ ಟ್ರಿಕ್‌. ಕುಟುಂಬದವರು ಹಾಗೂ ಸ್ನೇಹಿತರಿಂದ ನಿಮ್ಮನ್ನು ಆದಷ್ಟು ದೂರವಿಡಲು ಪ್ರಯತ್ನಿಸುತ್ತಾರೆ. ಸದಾ ಸ್ನೇಹಿತರು ಅಥವಾ ಅಕ್ಕ ಇಲ್ಲವೆ ಅಣ್ಣನ ಜೊತೆ ಫೋನ್‌ನಲ್ಲೇ ಕಾಲಹರಣ ಮಾಡುವೆ ಎಂದು ನಿಮ್ಮನ್ನು ಅವರು ದೂರಬಹುದು. ಅಷ್ಟೇ ಅಲ್ಲ, ನೀವು ಹೆಚ್ಚು ಆತ್ಮೀಯವಾಗಿರೋ ಅಥವಾ ನೆರವಿಗಾಗಿ ಅವಲಂಬಿಸಿರೋ ವ್ಯಕ್ತಿಯ ವಿರುದ್ಧ ನಿಮ್ಮನ್ನು ಎತ್ತಿ ಕಟ್ಟಲು ಕೂಡ ಪ್ರಯತ್ನಿಸಬಹುದು. ಉದಾಹರಣೆಗೆ ಏನೇ ತೊಂದರೆಯಾದ್ರೂ ನೆರವಿಗೆ ಧಾವಿಸೋ ನಿಮ್ಮ ಆತ್ಮೀಯ ಸ್ನೇಹಿತ ಅಥವಾ ಸ್ನೇಹಿತೆ ಬಗ್ಗೆ ಇಲ್ಲಸಲ್ಲದ ಕಥೆ ಕಟ್ಟಿ ನಿಮ್ಮನ್ನು ಅವರಿಂದ ದೂರ ಮಾಡಲು ಪ್ರಯತ್ನಿಸೋದು.

ಚಿಕ್ಕಪುಟ್ಟ ವಿಷಯಗಳಿಗೆ ಟೀಕಿಸೋದು
ಟೀಕೆ ಅದೆಷ್ಟೇ ಪುಟ್ಟದಾದ್ರೂ ಕೆಲವೊಮ್ಮೆ ನಿಮ್ಮಿಬ್ಬರ ಸಂಬಂಧಕ್ಕೆ ಅದೇ ದೊಡ್ಡ ಬಾಂಬ್‌ ಆಗಿ ಪರಿರ್ತನೆಯಾಗಬಹುದು. ಮಾತಿಗೆ ಅಷ್ಟೊಂದು ಶಕ್ತಿಯಿದೆ. ಹೀಗಾಗಿ ಮನಸ್ಸಿಗೆ ನೋವುಂಟು ಮಾಡೋ ಪುಟ್ಟ ಮಾತು ಕೂಡ ಪ್ರೀತಿ, ಆದರ ಹಾಗೂ ಗೌರವವನ್ನು ತಗ್ಗಿಸಬಲ್ಲದು. ಇಂಥ ಟೀಕೆಗಳಿಂದ ಸಂಬಂಧ ಸರಿಯಾದ ಹಳಿಯಲ್ಲಿ ಸಾಗೋದು ಕಷ್ಟವಾಗುತ್ತದೆ. ಪ್ರತಿ ಕೆಲಸದಲ್ಲೂ ತಪ್ಪು ಹುಡುಕೋ ಸಂಗಾತಿ ಜೊತೆ ಖುಷಿಯಾಗಿರೋದು ಅಸಾಧ್ಯದ ಮಾತು. 

ಸಂಗಾತಿ ಇಂಪ್ರೆಸ್ ಮಾಡೋ ರೊಮ್ಯಾಂಟಿಕ್ ಟ್ರಿಕ್ಸ್ ಇವು

ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸೋದು
ನಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳೋದು ನಿಜಕ್ಕೂ ಕಷ್ಟದ ಕೆಲಸ. ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ತಪ್ಪನ್ನು ಒಪ್ಪಿಕೊಳ್ಳೋದು ಅಗತ್ಯ. ಆಗ ಮಾತ್ರ ಸಂಬಂಧಗಳು ಉಳಿಯಲು ಸಾಧ್ಯ. ಆದ್ರೆ ಸಂಗಾತಿಯ ಮೇಲೆ ಹಿಡಿತ ಹೊಂದಲು ಬಯಸೋ ವ್ಯಕ್ತಿ ಎಂದಿಗೂ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳೋದಿಲ್ಲ. ಅಷ್ಟೇ ಅಲ್ಲ, ತಪ್ಪು ತನ್ನದೇ ಎಂಬುದು ಗೊತ್ತಿದ್ದರೂ ಸಂಗಾತಿಯ ಮೇಲೆ ಹೊರಿಸಲು ಪ್ರಯತ್ನಿಸುತ್ತಾರೆ. 

These 7 things shows your partner controls you

ಬೆದರಿಸೋದು
ಬೆದರಿಕೆಗಳು ಯಾವಾಗಲೂ ದೈಹಿಕ ಹಲ್ಲೆಯ ರೂಪದಲ್ಲೇ ಇರಬೇಕೆಂದೇನಿಲ್ಲ. ಅವು ಮಾನಸಿಕ ಹಿಂಸೆಯ ರೂಪದಲ್ಲೂ ಇರಬಹುದು. ಹೌದು, ಮಗುವನ್ನು ನೋಡಲು ಬಿಡೋದಿಲ್ಲ, ಮನೆಯಿಂದ ಹೊರಹಾಕುತ್ತೇನೆ, ಖರ್ಚಿಗೆ ಹಣ ನೀಡೋದಿಲ್ಲ ಮುಂತಾದ ಬೆದರಿಕೆಗಳ ಮೂಲಕ ಕೆಲವರು ಸಂಗಾತಿಯನ್ನು ನಿಯಂತ್ರಿಸುತ್ತಾರೆ. ಪ್ರತಿ ಕೆಲಸಕ್ಕೂ ಬೆದರಿಕೆ ಹಾಕೋ ಮೂಲಕ ಸಂಗಾತಿ ನಿಮ್ಮನ್ನು ನಿಯಂತ್ರಿಸಬಹುದು. ಕೆಲವೊಮ್ಮೆ ಬೆದರಿಕೆಗಳು ನಿಜವಾಗಿಲ್ಲದಿದ್ರೂ ಕೂಡ ಇನ್ನೊಬ್ಬ ವ್ಯಕ್ತಿಯನ್ನು ನಿಯಂತ್ರಿಸಲು ಬಳಸೋ ಅಸ್ತ್ರವಂತೂ ಹೌದು.

ಪಶ್ಚತ್ತಾಪ ಪಡುವಂತೆ ಮಾಡೋದು
ಪ್ರತಿ ಕೆಲಸದಲ್ಲೂ ತಪ್ಪು ಹುಡುಕೋ ಜೊತೆ ಪಶ್ಚತ್ತಾಪ ಪಡುವಂತೆ ಮಾಡೋ ಮೂಲಕ ಸಂಗಾತಿಯನ್ನು ನಿಯಂತ್ರಿಸಲು ಕೆಲವರು ಪ್ರಯತ್ನಿಸುತ್ತಾರೆ. ಈ ಮೂಲಕ ತಾವು ಹೇಳಿದಂತೆ ಸಂಗಾತಿ ಕೇಳುವಂತೆ ಮಾಡೋದು ಇವರ ಉದ್ದೇಶ.

ಎಷ್ಟು ದಿನ ಒಟ್ಟಿಗಿದ್ದರೇನು? ಅರಿತು ಕೊಳ್ಳದಿದ್ದರೆ ಬೇರೆ ಆಗೋದೊಂದೇ ದಾರಿ

ನಿಮ್ಮ ಅಗತ್ಯಗಳನ್ನು ಗೌರವಿಸದಿರೋದು 
ಪ್ರತಿಯೊಬ್ಬರಿಗೂ ಅವರದೇ ಆದ ವೈಯಕ್ತಿಕ ಸಮಯದ ಅವಶ್ಯಕತೆಯಿರುತ್ತೆ. ಆದ್ರೆ ಸಂಗಾತಿಯನ್ನು ನಿಯಂತ್ರಿಸಲು ಬಯಸೋ ವ್ಯಕ್ತಿ ಅವರ ಖಾಸಗಿ ಸಮಯವನ್ನು ಕಸಿಯಲು ಬಯಸುತ್ತಾನೆ. ನಿಮಗೆ ನಿಮ್ಮದೇ ಆದ ಸಮಯದ ಅವಶ್ಯಕತೆಯಿರುತ್ತೆ, ಒಂದಿಷ್ಟು ಆಸೆ-ಆಕಾಂಕ್ಷೆಗಳಿರುತ್ತವೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳೋದಿಲ್ಲ. ಅರ್ಥ ಮಾಡಿಕೊಂಡರೂ ಅದನ್ನು ಗೌರವಿಸೋದಿಲ್ಲ. 

ನಿಮ್ಮ ಅವಶ್ಯಕತೆಯಿಲ್ಲ ಎಂದು ಪದೇಪದೆ ಹೇಳೋದು
ಮಾತು ಹಾಗೂ ವರ್ತನೆ ಮೂಲಕ ನಿಮ್ಮ ಅವಶ್ಯಕತೆಯಿಲ್ಲ ಎಂಬುದನ್ನುಸಾಬೀತುಪಡಿಸಲು ಸಂಗಾತಿ ಪ್ರಯತ್ನಿಸುತ್ತಿದ್ರೆ ಅವರು ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದೇ ಅರ್ಥ. ಅಲ್ಲದೆ, ನೀವು ಅವರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂಬ ಅಪರಾಧ ಪ್ರಜ್ಞೆಯನ್ನು ನಿಮ್ಮಲ್ಲಿ ಮೂಡಿಸಲು ಪ್ರಯತ್ನಿಸುತ್ತಾರೆ. ಇದ್ರಿಂದ ನೀವು ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಸಾಕಷ್ಟು ಪ್ರಯತ್ನಿಸುತ್ತೀರಿ.ಇದ್ರಿಂದ  ನಿಮ್ಮ ಮನಸ್ಸು ಹಾಗೂ ದೇಹದ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. 
 

Latest Videos
Follow Us:
Download App:
  • android
  • ios