Asianet Suvarna News Asianet Suvarna News

#GreyDivorce: ಎಷ್ಟು ದಿನ ಒಟ್ಟಿಗಿದ್ದರೇನು? ಅರಿತು ಕೊಳ್ಳದಿದ್ದರೆ ಬೇರೆ ಆಗೋದೊಂದೇ ದಾರಿ

ಗ್ರೇ ಡೈವೋರ್ಸ್ ಅಥವಾ ಬಿಳಿಕೂದಲಿನವರ ಡೈವೋರ್ಸ್ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕಾರಣವೇನು?

 

 

Know about raising Grey divorce cases and reasons
Author
Bengaluru, First Published Jun 10, 2021, 4:10 PM IST

ಜಗತ್ತಿನ ಖ್ಯಾತ ಉದ್ಯಮಿ ಜೋಡಿ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಇತ್ತೀಚೆಗೆ ಡೈವೋರ್ಸ್ ಮಾಡಿಕೊಂಡರು. ಅದಕ್ಕೆ ಅವರು ನೀಡಿದ ಕಾರಣ- 'We can't grow anymore' ಅಂದರೆ ನಾವಿನ್ನು ಜೊತೆಯಾಗಿ ಬೆಳೆಯಲಾರೆವು ಅಂತ. ಆದರೆ ಇದು ನಿಜವಲ್ಲ ಅಂತ ಎಲ್ಲರಿಗೂ ಗೊತ್ತು. ವೈವಾಹಿಕವಾಗಿಯೂ ಆರ್ಥಿಕವಾಗಿಯೂ ಖ್ಯಾತಿಯ ದೃಷ್ಟಿಯಿಂದಲೂ ಈ ಜೋಡಿ ಈಗಾಗಲೇ ಸಾಕಷ್ಟು ಬೆಳೆದಿದೆ. ಹಾಗಿದ್ದರೆ ವಿಚ್ಛೇದನ ಪಡೆಯಲು ಕಾರಣವೇನು? ಗೇಟ್ಸ್‌ನ ವಿವಾಹೇತರ ಸಂಬಂಧವೇ ಅದಕ್ಕೆ ಕಾರಣ. ಗೇಟ್ಸ್‌ನ ಸಲಿಂಗಿ ಮತ್ತು ಹೊರಲಿಂಗಿ ಸಂಬಂಧಗಳು ಇವರ ದಾಂಪತ್ಯದ ವಿಷಯದಲ್ಲಿ ಸ್ಫೋಟಕಗಳಾಗಿ ಪರಿಣಮಿಸಿದವು.

ಇಂಥ ಕೇಸ್ ಇವರಿಬ್ಬರದಷ್ಟೇ ಅಲ್ಲ. ಅಮೆರಿಕದಲ್ಲಿ, ಯುರೋಪ್‌ನಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಮದುವೆಯಾಗಿ ತುಂಬ ವರ್ಷಗಳಾದ ಮೇಲೆ, ವಯಸ್ಸಾದ ಬಳಿಕ ಅಂದರೆ ಸುಮಾರು ತಮ್ಮ 60-70ರ ವಯಸ್ಸಿನಲ್ಲಿ ದಾಂಪತ್ಯಕ್ಕೆ ವಿಚ್ಛೇದನ ನೀಡುವವರ ಸಂಖ್ಯೆ ಏರುತ್ತಿದೆ. ಬಿಲ್‌ಗೆ ಈಗ 65 ವರ್ಷ, ಮೆಲಿಂಡಾಗೆ 56 ವರ್ಷ, ಮದುವೆಯಾಗಿ 27 ವರ್ಷಗಳಾಗಿವೆ. ಗ್ರೇ ಡೈವೋರ್ಸ್ ಎಂದರೆ 60ರ ನಂತರ ವಿಚ್ಛೇದನ ಪಡೆಯುವುದು. ಈ ಹೆಸರು ಯಾಕೆಂದರೆ ಅಷ್ಟು ಹೊತ್ತಿಗೆ ದಂಪತಿಯ ತಲೆಗೂದಲು ಹೆಚ್ಚಾಗಿ ಬೂದಾ ಬಣ್ಣಕ್ಕೆ (ಗ್ರೇ) ತಿರುಗಿರುತ್ತದೆ; ಹಾಗಾಗಿ. ಇವರನ್ನು ಸಿಲ್ವರ್ ಸ್ಪ್ಲಿಟ್ಟರ್ಸ್ ಅಥವಾ ಡೈಮಂಡ್  ಸ್ಪ್ಲಿಟ್ಟರ್ಸ್ ಎಂದೂ ಕರೆಯುತ್ತಾರೆ. 

ಸುಮಾರು ಇಪ್ಪತ್ತು, ಮೂವತ್ತು ಅಥವಾ ನಲುವತ್ತು ವರುಷಗಳ ಕಾಲ ಜೊತೆಯಾಗಿ ಬದುಕಿದವರು ಯಾಕೆ ಬೇರಾಗುತ್ತಾರೆ? ಇದಕ್ಕೆ ಕಾರಣಗಳೇನು? ಯುವ ವಿಚ್ಛೇದಿತರಿಗೆ ಕಾರಣಗಳು ಇರುವಂತೆಯೇ ಪ್ರೌಢ ವಿಚ್ಛೇದಿತರಿಗೂ ಇರುತ್ತವೆ. ಹಾಗೇ ಇಂದು ಡೈವೋರ್ಸ್ ಕೂಡ ಭಾರತದಂಥ ಸಾಂಪ್ರದಾಯಿಕ ಸಮಾಜಗಳಲ್ಲಿ ಕೂಡ ಅಸ್ಪೃಶ್ಯ ವಿಷಯವಲ್ಲ. ನಾನು ಡೈವೋರ್ಸಿ ಎಂದು ಹೇಳಿದರೆ ಯಾರೂ ಹುಬ್ಬೇರಿಸುವುದಿಲ್ಲ. 

ಸಂಗಾತಿ ಇಂಪ್ರೆಸ್ ಮಾಡೋ ರೊಮ್ಯಾಂಟಿಕ್ ಟ್ರಿಕ್ಸ್ ಇವು ...

ಸಾಮಾನ್ಯವಾಗಿ ಫೈನಾನ್ಷಿಯಲ್ ಅಥವಾ ಹಣಕಾಸಿನ ಕಾರಣಗಳಿರುತ್ತವೆ; ದಂಪತಿಗಳಲ್ಲಿ ಯಾರೋ ಒಬ್ಬರು ಹಣಕಾಸು ನಿಭಾವಣೆಯಲ್ಲಿ ವಿಫಲರಾದರೆ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಮೈ ಮೇಲೆ ತುಂಬಾ ಸಾಲ ಮಾಡಿಕೊಂಡಿರುವುದು, ಅದನ್ನು ನಿರ್ವಹಿಸಲು ಆಗದಿರುವಿಕೆ, ಇದಕ್ಕಾಗಿ ಪದೇ ಪದೇ ಮನೆಯಲ್ಲಿ ಜಗಳ- ಇವೆಲ್ಲ ಮದುವೆ ಮುರಿಯಲು ಮುಂದಾಗುತ್ತವೆ. ಕೆಲವೊಮ್ಮೆ ಸಂಸಾರದಲ್ಲಿ ಒಬ್ಬನೇ/ಳೇ ಸಂಪಾದಿಸುವುದು, ಇನ್ನೊಬ್ಬ/ಳು ಯಾವುದೇ ಕೆಲಸ ಮಾಡದೆ ಸಂಗಾತಿಯ ಸಂಪಾದನೆಯನ್ನು ಮುಗಿಸುವುದು ಕೂಡ ಇನ್ನೊಂದು ಕಾರಣ. ಕೆಲವೊಮ್ಮೆ ಖರ್ಚು ಮಾಡುವ ಹವ್ಯಾಸ ಆರೋಗ್ಯಕರವಾಗಿ ಇರಲಿಕ್ಕಿಲ್ಲ. ಸಂಗಾತಿ ದುಡಿದು ತಂದುದನ್ನು ತಾನು, ಅಥವಾ ತಾನೇ ದುಡಿದುದನ್ನು ತಾನು ಕುಟುಂಬಕ್ಕೆ ನೀಡದೆ ಕೆಟ್ಟ ಹವ್ಯಾಸಗಳಿಗೆ ದುಂದು ವೆಚ್ಚ ಮಾಡಬಹುದು. ಅತಿ ಖರೀದಿ, ಜೂಜು, ಸಾಲು ನೀಡುವಿಕೆಗಳೂ ಕಾರಣವಾಗಬಹುದು. 

Know about raising Grey divorce cases and reasons


ಸಾಮಾನ್ಯವಾಗಿ ಈ ಸಂಸಾರಗಳಲ್ಲಿ, ಮಕ್ಕಳು ಬೆಳೆದು ಕಲಿತು, ಕೆಲಸಕ್ಕಾಗಿ ದೂರ ಹೋದ ಮೇಲೆ ಡೈವೋರ್ಸ್ ಪ್ರಕ್ರಿಯೆ ಶುರುವಾಗುತ್ತದೆ. ಈ ಸಂದರ್ಭದಲ್ಲಿ ದಂಪತಿಗಳನ್ನು ಎಂಪ್ಟಿ ನೆಸ್ಟ್ ಸಿಂಡ್ರೋಮ್ ಅಥವಾ ಖಾಲಿ ಗೂಡು ವ್ಯಸನ ಕಾಡಲಾರಂಭಿಸುತ್ತದೆ. ಇದುವರೆಗೂ ಮಕ್ಕಳನ್ನು ಜೊತೆಯಾಗಿ ಬೆಳೆಸುವ ಉದ್ದೇಶದಿಂದ ಹೇಗೋ ಜೊತೆಯಾಗಿದ್ದೆವು. ಮುಂದೇನು? ಎಂಬ ಪ್ರಶ್ನೆ ಕಾಡುತ್ತದೆ. ತನ್ನ ಜೊತೆಯಾಗಿ ಇಷ್ಟು ವರ್ಷ ನಡೆದು ಬಂದ ಸಂಗಾತಿ ತನ್ನ ಅಂದಿನ ಸಂಗಾತಿಯೇ ಅಲ್ಲ ಎಂಬ ಬೇಸರ ಕಾಡುತ್ತದೆ. 

ನವವಿವಾಹಿತರೇ? ಲೈಂಗಿಕ ಜೀವನ ಸುಮಧುರವಾಗಿರಲು ಈ ವಿಷಯಗಳ ಕಡೆಗೆ ಇರಲಿ ಗಮನ ...

ಈ ದಾಂಪತ್ಯಗಳ ವಿಚ್ಛೇದನಕ್ಕೆ ಇನ್ನೊಂದು ಪ್ರಮುಖ ಕಾರಣ ಎಂದರೆ ವಿವಾಹೇತರ ಸಂಬಂಧ. ದಾಂಪತ್ಯದಲ್ಲಿ ಏಕತಾನತೆ ಕಾಡುವಾಗ ಗಂಡು ಅಥವಾ ಹೆಣ್ಣು ವಿವಾಹದಾಚೆಗೆ ಲೈಂಗಿಕ ಸುಖ ಅಥವಾ ಸಾಂಗತ್ಯಕ್ಕಾಗಿ ಕೈ ಚಾಚಬಹುದು. ಗಂಡು ತನಗಿಂತ ಸಣ್ಣ ಹೆಣ್ಣಿನೆಡೆಗೆ ಹಾಗೂ ಹೆಣ್ಣು ತನಗಿಂತ ಯುವ ಗಂಡಸಿನಡೆಗೆ ಕೈ ಚಾಚಬಹುದು. ಈಗ ವಿವಾಹೇತರ ಸಂಬಂಧ ಕೂಡ ಮುಂದುವರಿದ ಸಮಾಜಗಳಲ್ಲಿ ಅಷ್ಟೊಂದು ಅಸ್ಪೃಶ್ಯ ವಿಷಯ ಅಲ್ಲ. ಸಾಂಪ್ರದಾಯಿಕ ಮನಸ್ಥಿತಿ ಇಂಥ ಸಂದರ್ಭಗಳಲ್ಲಿ ಜಗಳ ಕಾಯುತ್ತದೆ; ಆದರೆ ಆಧುನಿಕ ಮನಸ್ಥಿತಿ, ಕಡ್ಡಿ ಮುರಿದಂತೆ, ಅಂಥ ಸಂಗಾತಿಯಿಂದ ಸಂಬಂಧವನ್ನೇ ಮುರಿದುಕೊಂಡು ದೂರವಾಗುತ್ತದೆ. ಇಲ್ಲಿ ಕ್ಷಮೆಯ ಪ್ರಶ್ನೆಯೇ ಇಲ್ಲ. 

ಬದುಕು ಇನ್ನೂ ಇದೆ ಎಂದು ಇಂಥ ಸಮಾಜಗಳಲ್ಲಿ ಭಾವಿಸುತ್ತಾರೆ. ಅರುವತ್ತು ವರ್ಷವಾದ ಕೂಡಲೇ ನನ್ನ ಬದುಕೆಲ್ಲ ಮುಗಿಯಿತು ಎಂದು  ಭಜನೆ ಮಾಡುತ್ತಾ ಯಾರೂ ಕೂರುವುದಿಲ್ಲ. ಸಮಾಜದಲ್ಲಿ ಆಕ್ಟಿವ್ ಆಗಿರುತ್ತಾರೆ. ಹಾಗೇ ಆಧುನಿಕವಾದ ಆರೋಗ್ಯ ಸೇವೆಗಳು ಮನುಷ್ಯನ ಆರೋಗ್ಯ ಹಾಗೂ ಸರಾಸರಿ ಆಯುಷ್ಯವನ್ನು ಏರಿಸಿವೆ. 
ದುರ್ವ್ಯಸನಗಳು ಕೂಡ ವಿಚ್ಛೇದನಕ್ಕೆ ಪ್ರಮುಖ ಕಾರಣ. ಕುಡಿತ ಹಾಗೂ ಲೈಂಗಿಕ ವ್ಯಸನಗಳಿಗೆ ದಾಸನಾದ ಗಂಡನಿಂದ ದೂರವಿರುವುದೇ ಲೇಸು ಎಂದು ಹೆಂಡತಿಗೆ ಕಾಣಬಹುದು. ಜೂಜಾಡಿ ಎಲ್ಲ ಹಣ ಕಳೆದುಕೊಂಡು ಬರುವ ಗಂಡಸನ್ನು ಯಾವ ಹೆಣ್ಣು ತಾನೆ ಸಹಿಸುತ್ತಾಳೆ? 

FeelFree: ಪಕ್ಕದ ಮನೆಯವಳ ಒಳ ಉಡುಪು ನೋಡಿದರೆ ಗಂಡನಿಗೆ ಉದ್ರೇಕ! ...

ಈ ಪ್ರಾಯದಲ್ಲಿ ಆಗುವ ವಿಚ್ಛೇದನದ ದುಷ್ಪರಿಣಾಮವನ್ನು ಮಕ್ಕಳೂ ಕಾಣಬೇಕಾಗುತ್ತದೆ. ಈಗಿವರು ಸಣ್ಣ ಮಕ್ಕಳಲ್ಲವಾದರೂ, ಅಪ್ಪ- ಅಮ್ಮನ ವಿಚ್ಛೇದನದಿಂದ ಆಗುವ ಭಾವನಾತ್ಮಕ ಶೋಕವನ್ನು ಇವರು ಭರಿಸಲೇಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಮಕ್ಕಳು ಯಾರೋ ಒಬ್ಬರ ಜೊತೆ ಇರಬೇಕಾದೀತು; ಅಪ್ಪ ಅಥವಾ ಅಮ್ಮನ ಹೊಸ ಡೇಟಿಂಗ್ ವೈಖರಿಗೆ ಒಗ್ಗಿಕೊಳ್ಳಲು ಹೆಣಗಾಡಬೇಕಾದೀತು. ಇಂಥ ಸಂದರ್ಭಗಳಲ್ಲಿ ವಿಚ್ಛೇದಿತರಿಗೂ ಮಕ್ಕಳಿಗೂ ಕೌನ್ಸೆಲಿಂಗ್ ಅನಿವಾರ್ಯವಾದೀತು.

ಭಾರತದಲ್ಲೂ ಇಂಥ ಡೈವೋರ್ಸ್‌ಗಳ ಸಂಖ್ಯೆ ತೀರಾ ಎನ್ನುವಷ್ಟಲ್ಲವಾದರೂ ಇತರ ಕಡೆಗಳಂತೆಯೇ ಹೆಚ್ಚುತ್ತಿದೆ. ಆಧುನಿಕತೆಯನ್ನು ಬರಮಾಡಿಕೊಂಡ ಬಳಿಕ ಅದರ ಉಪ ಉತ್ಪನ್ನಗಳನ್ನೂ ಸಹಿಸಲೇಬೇಕಲ್ಲವೆ?     

Follow Us:
Download App:
  • android
  • ios