ಪತಿ ಮೇಲೆ colleague ಕಣ್ಣು ಹಾಕಿದ್ದಾಳಾ? ಹೀಗೆ ಕಂಡು ಹಿಡೀಬಹುದು!
ಹುಡುಗ – ಹುಡುಗಿ ಒಟ್ಟಿಗೆ ಇದ್ದಾರೆಂದ್ರೆ ಅವರಿಬ್ಬರು ಪ್ರೇಮಿಗಳು ಎನ್ನಲು ಸಾಧ್ಯವಿಲ್ಲ. ಹಾಗೆ ಸಹೋದ್ಯೋಗಿಗಳ ಮಧ್ಯೆ ಆಪ್ತತೆ ಇದೆ ಅಂದ್ರೆ ಅಕ್ರಮ ಸಂಬಂಧದ ಹೆಸರಿಡಲು ಆಗೋದಿಲ್ಲ. ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂಬುದನ್ನು ಕೆಲ ವರ್ತನೆ ಮೂಲಕ ಪತ್ತೆ ಮಾಡ್ಬಹುದು.
ಪರಿಪೂರ್ಣ ದಾಂಪತ್ಯಕ್ಕೆ ಜೀವನ (Life) ಪರ್ಯಂತ ಪರಿಶ್ರಮ ಬೇಕು. ಯಾಕೆಂದ್ರೆ ಯಾವಾಗ ಬೇಕಾದ್ರೂ ದಾಂಪತ್ಯದಲ್ಲಿ ಬಿರುಕು ಮೂಡಬಹುದು. 15 – 20 ವರ್ಷಗಳ ಕಾಲ ಸಂಸಾರ ನಡೆಸಿ ನಂತ್ರ ವಿಚ್ಛೇದನ ಪಡೆದವರು ನಮ್ಮ ಮುಂದಿದ್ದಾರೆ. ಅದೇನೇ ಇರಲಿ, ಕೆಲಸಕ್ಕೆ ಹೋಗುವ ಪತಿ ಬಗ್ಗೆ ಒಂದು ಕಣ್ಣು ಇದ್ದೇ ಇರುತ್ತದೆ. ವಿಶೇಷವಾಗಿ ಮಹಿಳಾ ಸಹೋದ್ಯೋಗಿಗಳ ಮೇಲೆ ಹೆಚ್ಚಿನ ಗಮನವಿರುತ್ತದೆ. ಎಲ್ಲ ತಿಳಿದಿದ್ದು, ಕೆಲ ಮಹಿಳೆಯರು ಕಚೇರಿ ಸಹೋದ್ಯೋಗಿ ಜೊತೆ ಫ್ಲರ್ಟ್ ಮಾಡ್ತಾರೆ. ಇದೇ ಪತ್ನಿಯ ಟೆನ್ಷನ್ ಜಾಸ್ತಿಯಾಗಲು ಕಾರಣ. 8 ಗಂಟೆಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದ್ರಿಂದ ಸಾಮಾನ್ಯವಾಗಿ ಸಹೋದ್ಯೋಗಿಗಳ ಮಧ್ಯೆ ಒಂದು ಸಂಬಂಧ ಹುಟ್ಟಿಕೊಳ್ಳುತ್ತದೆ. ಆದ್ರೆ ಆ ಸಂಬಂಧ ಗಡಿ ಮೀರದಂತೆ ನೋಡಿಕೊಳ್ಳಬೇಕು. ಸ್ವಲ್ಪ ಯಾಮಾರಿದ್ರೂ ದಾಂಪತ್ಯ ಹಾಳಾಗುವ ಸಾಧ್ಯತೆಯಿರುತ್ತದೆ. ಇಂದು ನಾವು ಪತ್ನಿಯಾದವಳು ಏನೆಲ್ಲ ಗಮನಿಸಬೇಕು ಎಂಬುದನ್ನು ಹೇಳ್ತೇವೆ.
ಪತಿ ಮೇಲೆ ಸಹೋದ್ಯೋಗಿ ಕಣ್ಣು ಬಿದ್ರೆ ಏನ್ಮಾಡ್ಬೇಕು? :
ತಡರಾತ್ರಿಯಲ್ಲಿ ಸಂದೇಶ ಕಳುಹಿಸುವುದು ಅಥವಾ ಕರೆ ಮಾಡುವುದು : ಪತಿ ಸಹೋದ್ಯೋಗಿಯೊಬ್ಬರು ಕೆಲಸಕ್ಕೆ ಸಂಬಂಧಿಸಿದಂತೆ ತಡರಾತ್ರಿಯಲ್ಲಿ ನಿಮ್ಮ ಪತಿಗೆ ಕರೆ ಮಾಡಿದರೆ ಅಥವಾ ಸಂದೇಶ ಕಳುಹಿಸಿದರೆ ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ ಇದು ಪ್ರತಿದಿನ ನಡೆದ್ರೆ ಹಾಗೂ ವಿಷ್ಯ ಕೆಲಸಕ್ಕೆ ಮಾತ್ರ ಸೀಮಿತವಾಗದೆ ವೈಯಕ್ತಿಕವಾದ್ರೆ ಎಚ್ಚರವಹಿಸುವುದು ಮುಖ್ಯ. ಇಬ್ಬರ ಮಧ್ಯೆ ರೋಮ್ಯಾಂಟಿಕ್ ಸಂಬಂಧ ಶುರುವಾಗುವ ಮೊದಲು ಕ್ರಮಕೈಗೊಳ್ಳಿ.
ಸಂಗಾತಿಯನ್ನು ಅಪ್ಪಿ ಮುದ್ದಾಡಿಕೊಂಡು ಮಲಗಿ, ಲೈಫ್ ಹ್ಯಾಪಿಯಾಗಿರುತ್ತೆ
ಬಿಗಿಯಾದ, ಆಕರ್ಷಕ ಬಟ್ಟೆ : ಕಚೇರಿಯಲ್ಲಿ ಡ್ರೆಸ್ ಗೆ ಸಂಬಂಧಿಸಿದಂತೆ ಕೆಲ ನಿಯಮಗಳಿರುತ್ತವೆ. ಆದ್ರೆ ಸಹೋದ್ಯೋಗಿ ಅದನ್ನು ಮೀರಿದ ಬಟ್ಟೆ ಧರಿಸುತ್ತಿದ್ದರೆ ಅಥವಾ ಅತಿ ಬಿಗಿಯಾದ ಬಟ್ಟೆ ಧರಿಸಿ ನಿಮ್ಮ ಪತಿಯ ಗಮನ ಸೆಳೆಯಲು ಮುಂದಾಗಿದ್ದರೆ ಆಕೆ ಉದ್ದೇಶ ಬೇರೆಯೇ ಇದೆ ಎಂದರ್ಥ. ಈ ಸಂದರ್ಭದಲ್ಲೂ ನೀವು ಎಚ್ಚೆತ್ತುಕೊಳ್ಳಬೇಕು.
ನಿರಂತರವಾಗಿ ಸ್ಪರ್ಶಿಸಲು ಪ್ರಯತ್ನ : ಅನೇಕರಿಗೆ ಇನ್ನೊಬ್ಬರನ್ನು ಮುಟ್ಟಿ ಮಾತನಾಡುವ ಅಭ್ಯಾಸವಿರುತ್ತದೆ. ಆದ್ರೆ ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಶವಿರುವುದಿಲ್ಲ. ಮತ್ತೆ ಕೆಲವರು ಮನಸ್ಸಿನಲ್ಲಿ ಕಲ್ಮಶವನ್ನಿಟ್ಟುಕೊಂಡು ಸ್ಪರ್ಶಿಸುತ್ತಾರೆ. ಈವೆರಡರ ವ್ಯತ್ಯಾಸ ನಿಮಗೆ ತಿಳಿದಿರಬೇಕು. ಹಾಗೆ ಪತಿ ಸಹೋದ್ಯೋಗಿ ನಿಮ್ಮ ಸಂಗಾತಿಯನ್ನು ಕಾರಣವಿಲ್ಲದೆ ಸ್ಪರ್ಶಿಸಲು ಮುಂದಾದ್ರೆ ಅಥವಾ ಪದೇ ಪದೇ ಸ್ಪರ್ಶಿಸುವ ಪ್ರಯತ್ನ ನಡೆಸಿದ್ರೆ ಅವರ ಉದ್ದೇಶ ಬೇರೆಯೇ ಇದೆ ಎಂದರ್ಥ. ಅವರ ಉದ್ದೇಶ ಸರಿಯಿಲ್ಲ ಎಂಬುದನ್ನು ನೀವು ಅವರ ಸ್ಪರ್ಶದಿಂದಲೇ ಪತ್ತೆ ಮಾಡಿ.
ಇಂಥಾ ಹುಡುಗನ್ನ ಮದ್ವೆ ಆಗ್ಲೇಬೇಡಿ… ಜೀವನ ನರಕವಾಗುತ್ತೆ!
ಹೊಗಳಿಕೆ (Praising): ಎಲ್ಲಾ ಪುರುಷರು ಹೊಗಳಿಕೆಯನ್ನು ಇಷ್ಟಪಡ್ತಾರೆ. ಅದರಲ್ಲೂ ಹೆಣ್ಣಿನಿಂದ ಹೊಗಳಿಕೆ ಬಂದರೆ ಅವರ ವರ್ತನೆ ಬದಲಾಗುತ್ತದೆ. ಒಬ್ಬ ಮಹಿಳೆ ನಿರಂತರವಾಗಿ ನಿಮ್ಮ ಗಂಡನನ್ನು ಹೊಗಳುತ್ತಿದ್ದರೆ ಅದು ನಿಮ್ಮ ಗಂಡನನ್ನು ಇಷ್ಟಪಡುವ ಸಂಕೇತವಾಗಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.
ನಿಮ್ಮಿಂದ ಸದಾ ದೂರ : ನಿಮ್ಮ ಪತಿಯನ್ನು ಸಹೋದ್ಯೋಗಿ ಇಷ್ಟಪಡ್ತಿದ್ದರೆ ಅವರು ನಿಮ್ಮನ್ನು ಇಷ್ಟಪಡುವುದಿಲ್ಲ. ಪಾರ್ಟಿಯಲ್ಲಿ (party) ಸಿಕ್ಕದೆ ಪತಿಯನ್ನು ಮಾತನಾಡಿಸ್ತಾಳೆಯೇ ಹೊರತು ನಿಮ್ಮನ್ನು ಸದಾ ದೂರವಿಡುತ್ತಾಳೆ. ಆಕೆಯ ಆ ವರ್ತನೆಯಿಂದಲೂ ಅವಳ ಮನಸ್ಸನ್ನು ನೀವು ಅರಿಯಬಹುದು. ಸಂಗಾತಿ ಬಳಿ ತಾನಿದ್ದು, ನಿಮಗಿಂತ ನಾನು ಅವರಿಗೆ ಮುಖ್ಯ ಎಂಬುದನ್ನು ತೋರಿಸುವ ಪ್ರಯತ್ನ ಮಾಡ್ತಾಳೆ. ಈ ವಿಷ್ಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಗಲಾಟೆ ಶುರುವಾಗುತ್ತದೆ. ಇದೇ ಜಗಳ ದಾಂಪತ್ಯ ಮುರಿಯಲು ಕಾರಣವಾಗುತ್ತದೆ.
ಆರಂಭದಲ್ಲಿಯೇ ಇದೆಲ್ಲ ನಿಮ್ಮ ಗಮನಕ್ಕೆ ಬಂದರೆ ನಿಮ್ಮ ಪತಿಯನ್ನು ಅವಳಿಂದ ದೂರ ಮಾಡಿ. ಎಚ್ಚರಿಕೆಯ ಹೆಜೆಯಿಟ್ಟು ಈ ಬಂಧನದಿಂದ (Bonding) ಬಿಡಿಸಿಕೊಳ್ಳಿ. ಆತುರ ಮಾಡಿ, ಗಲಾಟೆ, ಜಗಳ ಮಾಡುವ ಬದಲು ಪತಿಗೆ ತಿಳಿ ಹೇಳಿ.