ಸಂಗಾತಿಯನ್ನು ಅಪ್ಪಿ ಮುದ್ದಾಡಿಕೊಂಡು ಮಲಗಿ, ಲೈಫ್ ಹ್ಯಾಪಿಯಾಗಿರುತ್ತೆ
ದಿನವಿಡೀ ಆಫೀಸ್ (Office), ಮನೆ (Home) ಅಂತ ಕೆಲ್ಸ. ರಾತ್ರಿಯಾದ್ರೆ ಸಾಕು ಒಮ್ಮೆ ಹೋಗಿ ಬೆಡ್ (Bed)ಲ್ಲಿ ಬಿದ್ಕೊಳ್ಳೋಣ ಅನ್ಸುತ್ತೆ. ಹೆಚ್ಚಿನವರು ಮಾಡೋದು ಕೂಡಾ ಹೀಗೇನೆ. ಆದ್ರೆ ಹೀಗೆ ಮಾಡ್ಬೇಡಿ. ಸಂಗಾತಿ (Partner)ಯನ್ನು ಅಪ್ಪಿಕೊಂಡು ಮಲಗಿ. ಇದ್ರಿಂದ ಎಷ್ಟೊಂದು ಪ್ರಯೋಜನವಿದೆ ಅಂತ ಗೊತ್ತಾದ್ರೆ ನೀವು ಕೂಡಾ ಡೈಲಿ ಹೀಗೇ ಮಾಡ್ತೀರಾ ?
ಬರಿಯ ಒಂದು ಹಗ್ ಮಾಡುವುದರಿಂದ ನಿಮ್ಮ ಮನಸ್ಸಿನ ಭಾವನೆಗಳು ನಿಮ್ಮ ಸಂಗಾತಿಯ ಮನಸ್ಸನ್ನು ಮುಟ್ಟುತ್ತದೆ. ಮಾತಿನಲ್ಲಿ ಹೇಳಲಾಗದ ಎಷ್ಟೋ ವಿಚಾರಗಳನ್ನು ಸ್ಪರ್ಶ ಹೇಳುತ್ತದೆ. ಪ್ರೀತಿ, ಆರೈಕೆ, ಸಂತೋಷ, ಕಾಳಜಿ ಈ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಹಗ್ ಮಾಡುವುದು ಒಳ್ಳೆಯ ಮಾರ್ಗ. ಇದು ನಿಮ್ಮ ಭಾವನೆಯನ್ನು ನೇರವಾಗಿ ನಿಮ್ಮ ಸಂಗಾತಿಯ ಹೃದಯಕ್ಕೆ (Heart) ತಲುಪಿಸುತ್ತದೆ. ಹಗ್ ಮಾಡುವುದು ಎಂದರೆ ಬರಿಯ ರೊಮ್ಯಾನ್ಸ್ (Romance) ಎಂದರ್ಥವಲ್ಲ. ಬದಲಿಗೆ ಎರಡು ಹೃದಯಗಳು ಪರಸ್ಪರ ಮಾತನಾಡಿಕೊಳ್ಳುವ ವಿಶೇಷ ಸಮಯ. ನೀವು ಬಾಯಿ ಮಾತಿನಲ್ಲಿ ಹೇಳಲಾಗದ ಎಷ್ಟೋ ಸಂಗತಿಗಳನ್ನು ಈ ಸಣ್ಣ ಕ್ರಿಯೆ ಅರ್ಥ ಮಾಡಿಸುತ್ತದೆ. ನೀವು ಹೇಳುತ್ತಿರುವ ಭಾವನೆಗಳನ್ನು ಅಪ್ಪುಗೆ ನಿಮ್ಮ ಸಂಗಾತಿಯ ಮನ ಮುಟ್ಟುವಂತೆ ಅರ್ಥ ಮಾಡಿಸುತ್ತದೆ.
ಇದು ಸುಮ್ಮನೆ ಹೇಳುತ್ತಿರುವ ಮಾತಲ್ಲ, ಇದರ ಬಗ್ಗೆ ಸಂಶೋಧನೆಗಳು (Research) ಕೂಡ ನಡೆದಿವೆ. ಹಾಗಾಗಿ ವೈಜ್ಞಾನಿಕವಾಗಿಯೂ ಕೂಡ ಈ ಎಲ್ಲ ಸಂಗತಿಗಳು ಸಾಬೀತಾಗಿದೆ. ಒತ್ತಡ (Stress) ಹಾಗೂ ಉದ್ವೇಗ (Anxiety) ಇಂತಹ ಸೂಕ್ಷ್ಮ ವಿಚಾರಗಳನ್ನು ಸ್ಪರ್ಶದಿಂದ ಕಡಿಮೆ ಮಾಡಬಹುದು ಅಂದರೆ ಶೇಕ್ ಹ್ಯಾಂಡ್ (Shake Hand) ಅಥವಾ ಹಗ್ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಗೆ ಧೈರ್ಯ ನೀಡಬಹುದು ಅವರ ಬಗ್ಗೆ ಅವರಿಗೆ ಆತ್ಮವಿಶ್ವಾಸ (Confidence) ಮೂಡುವಂತೆ ಮಾಡಬಹುದು ಹಾಗೂ ನಂಬಿಕೆ ಹೆಚ್ಚಿಸಬಹುದು.
Relationship Tips : ಸಮಯ ನೀಡದ ಪತಿಗೆ ಹೀಗೆ ಬುದ್ದಿ ಕಲಿಸಿ
ಮುದ್ದಾಡುವಿಕೆ, ದಿಂಬಿನ ಜಗಳ, ಹಗ್ ನಿಮ್ಮ ಸಂಗಾತಿಯೊಂದಿಗೆ ನೀವು ಹೊಂದಬಹುದಾದ ಕೆಲವು ಮಧುರ ಕ್ಷಣಗಳು. ಇವಿಷ್ಟೇ ಅಲ್ಲ, ನೀವು ಪ್ರೀತಿಸುವವರ ಪಕ್ಕದಲ್ಲಿ ಮಲಗುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ ? ಇದು ಸತ್ಯ. ಹೆಚ್ಚಿನ ಜನರು ನಿದ್ರಾಹೀನತೆ ಅಥವಾ ದುಃಸ್ವಪ್ನಗಳಂತಹ ಸಮಸ್ಯೆಯನ್ನು ಅನುಭವಿಸುತ್ತಾರೆ. ಆದರೆ ನಿಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವುದು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಅದು ಹೇಗೆ ಎಂಬುದು ಇಲ್ಲಿದೆ:
ಉತ್ತಮ ನಿದ್ರೆಯ ಮಾದರಿ: ಸಂಗಾತಿಯ ಪಕ್ಕದಲ್ಲಿ ಮಲಗುವುದು ನಿದ್ರೆಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಿದ್ರೆಯ ಗುಣಮಟ್ಟವು ಉತ್ತಮಗೊಳ್ಳುತ್ತದೆ, ನಾವು ಹೆಚ್ಚು ಪ್ರೀತಿಸುವವರ ಪಕ್ಕದಲ್ಲಿ ಮಲಗುವುದು ನಮಗೆ ಸುರಕ್ಷಿತ ಎಂಬ ಭಾವನೆಯನ್ನು ನೀಡುತ್ತದೆ. ಹೀಗಾಗಿ ಬೇಗ ನಿದ್ದೆ ಬರುತ್ತದೆ. ಮಾತ್ರವಲ್ಲ ನೀವು ಯಾವುದೇ ಗೊಂದಲವಿಲ್ಲದ ಉತ್ತಮ ನಿದ್ರೆಯನ್ನು ಪಡೆಯುತ್ತೀರಿ. ಇದರಿಂದ ಇಡೀ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಉತ್ತಮ ದೈಹಿಕ ಆರೋಗ್ಯ: ದಂಪತಿಯಾಗಿ ಒಟ್ಟಿಗೆ ಮಲಗುವ ಪ್ರಯೋಜನವು ದೈಹಿಕ ಆರೋಗ್ಯಕ್ಕೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಮ್ಮ ಸಂಗಾತಿಯ ಪಕ್ಕದಲ್ಲಿ ಮಲಗುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುವ ಹೆಚ್ಚಿನ ಮಟ್ಟದ ಆಕ್ಸಿಟೋಸಿನ್ ಅನ್ನು ಒದಗಿಸುವುದರಿಂದ ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ನೀವು ಹೆಚ್ಚು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಸುಧಾರಿಸುತ್ತದೆ.
ಮಗುವಾದ ಮೇಲೆ ಗಂಡನಿಗೆ ಲೈಂಗಿಕಾಸಕ್ತಿಯೇ ಇಲ್ಲ, ಏನ್ಮಾಡ್ಲಿ?
ಉತ್ತಮ ಮಾನಸಿಕ ಆರೋಗ್ಯ: ನಿಮ್ಮ ಸಂಗಾತಿಯ ಆಲಿಂಗನದಲ್ಲಿ ನೀವು ಮಲಗಿದಾಗ, ನಿಮ್ಮ ಮೆದುಳಿನಲ್ಲಿ ರಕ್ಷಣೆ ಮತ್ತು ಕಾಳಜಿಯ ಭಾವನೆ ಬೆಳೆಯುತ್ತದೆ. ನೀವು ಪ್ರೀತಿಸಲ್ಪಡುತ್ತೀರಿ ಎಂದು ಭಾವಿಸುತ್ತೀರಿ ಅದು ನೇರವಾಗಿ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಉತ್ತಮವಾಗಲು ಸಹಾಯ ಮಾಡುತ್ತದೆ. ಹೆಚ್ಚಿನ ಜನರು ಆತಂಕವನ್ನು ಎದುರಿಸುತ್ತಾರೆ ಆದರೆ ನಿಮ್ಮ ಸಂಗಾತಿಯೊಂದಿಗೆ ಮಲಗುವುದು ಅದನ್ನು ಕಡಿಮೆ ಮಾಡುತ್ತದೆ. ಮುದ್ದಾಡುವಿಕೆಯು ಸಿರೊಟೋನಿನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುವ 'ಫೀಲ್ ಗುಡ್' ಹಾರ್ಮೋನ್ ಎಂದೂ ಕರೆಯಲ್ಪಡುತ್ತದೆ.
ಸಂಬಂಧವನ್ನು ಸುಧಾರಿಸುತ್ತದೆ: ಪರಸ್ಪರರ ಪಕ್ಕದಲ್ಲಿ ಮಲಗುವ ಮೂಲಕ ಸಂಬಂಧದ ಗುಣಮಟ್ಟವನ್ನು ಸುಧಾರಿಸಬಹುದು. ನೀವು ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಹಂಚಿಕೊಳ್ಳಲು ಸಾಧ್ಯವಾಗದಿರುವಲ್ಲಿ ಇದು ಸಂಬಂಧದಲ್ಲಿ ಕೆಲವೊಮ್ಮೆ ಬಿರುಕು ಮೂಡಲು ಕಾರಣವಾಗುತ್ತದೆ. ಆದರೆ ಸಂಗಾತಿಯನ್ನು ಮುದ್ದಾಡಿಕೊಂಡು ಮಲಗುವ ಅಭ್ಯಾಸ ನಿಮ್ಮ ವೈವಾಹಿಕ ಜೀವನವನ್ನು ಚೆನ್ನಾಗಿಡುತ್ತದೆ.