ಇಂಥಾ ಹುಡುಗನ್ನ ಮದ್ವೆ ಆಗ್ಲೇಬೇಡಿ… ಜೀವನ ನರಕವಾಗುತ್ತೆ!
ಎಲ್ಲರಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತೆ.. ನಮ್ಮಲ್ಲಿ ಯಾರೂ ಪರ್ಫೆಕ್ಟ್ ವ್ಯಕ್ತಿಯಾಗಲು ಸಾಧ್ಯವಿಲ್ಲ. ಹೀಗೆಲ್ಲಾ ಇರೋವಾಗ ನಿಮಗಾಗಿ ಮಿಸ್ಟರ್ ರೈಟ್ (Mister Right) ಅನ್ನು ಹುಡುಕೋದು ಕಷ್ಟದ ಕೆಲಸ ಆಗುತ್ತೆ ಅಲ್ವಾ? ಮದುವೆ ಅನ್ನೋದು ಲೈಫ್ ಲಾಂಗ್ ರಿಲೇಶನ್ ಶಿಪ್ ಆಗಿದ್ದು, ಇದಕ್ಕಾಗಿ ಹೇಗೆ ಪರ್ಫೆಕ್ಟ್ ವ್ಯಕ್ತಿಯನ್ನು ಹುಡುಕೋದು ಎಂಬ ಯೋಚನೆಯಲ್ಲಿ ನೀವಿದ್ರೆ ನಿಮಗಾಗಿ ಒಂದಿಷ್ಟು ಸಲಹೆಗಳು ಇಲ್ಲಿವೆ.
ನೀವು ಮದುವೆ ಆಗೋ ಮೊದಲು, ಕೆಲವೊಂದು ವಿಷಯದ ಬಗ್ಗೆ ಖಚಿತವಾಗಿರಬೇಕು. ಅಂದ್ರೆ ಕೆಲವೊಂದು ಗುಣಗಳನ್ನು ಹೊಂದಿರುವ ವ್ಯಕ್ತಿಯನ್ನು ನೀವು ಮದುವೆ ಆಗದೇ ಇರೋದೆ ಬೆಸ್ಟ್. ಅವರ ಅಂದ ಚಂದ ನೋಡಿ ನೀವು ಲವ್ ಮಾಡಿದ್ರೆ ಮುಂದೆ ನಿಮ್ಮ ಮ್ಯಾರಿಡ್ ಲೈಫ್ ತುಂಬಾನೆ ಕಷ್ಟ ಆಗೋದು ಖಂಡಿತಾ. ಹಾಗಿದ್ರೆ ಯಾವ ಹುಡುಗ ನಿಮಗೆ ಮಿಸ್ಟರ್ ರೈಟ್ ಆಗಲ್ಲ ನೋಡಿ…
ಪದೇ ಪದೇ ಪ್ರಾಮಿಸ್ ಬ್ರೇಕ್ ಮಾಡಿದ್ರೆ
ಆತ ನಿಮಗೆ ಸಾಕಷ್ಟು ಪ್ರಾಮಿಸ್ ಮಾಡಿರಬಹೂದ್, ಆದರೆ ಯಾವತ್ತೂ ಆ ಪ್ರಾಮಿಸ್ ಅನ್ನು (promise) ಪೂರೈಸುವ ಯೋಚನೆ ಮಾಡದೇ ಇದ್ದರೆ, ನೀವು ಈ ವ್ಯಕ್ತಿಯ ಬಗ್ಗೆ ಮತ್ತೆ ಯೋಚಿಸುವ ಸಮಯ ಇದು. ಒಂದು ಅಥವಾ ಎರಡು ಬಾರಿ ಹಾಗೆ ಮಾಡಿದ್ರೆ ಕ್ಷಮಿಸಬಹುದು ಆದರೆ ಪ್ರತಿದಿನ ಇದೇ ಮುಂದುವರೆದರೆ ನಿಮಗೆ ಕಷ್ಟವಾಗೋದು.
ನಿಮ್ಮನ್ನು ಕಂಟ್ರೋಲ್ ಮಾಡುವವನು
ಇದನ್ನೇ ತಿನ್ನಬೇಕು, ಅದನ್ನೇ ಧರಿಸಬೇಕು, ಹೀಗೆ ನಡೆಯಬೇಕು, ಯಾರೋಂದಿಗೂ ಜಾಸ್ತಿ ಮಾತನಾಡಬಾರದು… ಅನ್ನೋದೆಲ್ಲಾ ಮೊದ ಮೊದಲು ನಿಮಗೆ ಇಷ್ಟವಾಗುತ್ತೆ, ಅವರು ಪ್ರೀತಿಯಿಂದ (Love) ಇದನ್ನೆಲ್ಲಾ ಮಾಡ್ತಿದ್ದಾರೆ ಎಂದು ನಿಮಗೆ ಅನಿಸುತ್ತೆ, ಆದರೆ ಪ್ರತಿ ದಿನವೂ ಅದೇ ಮುಂದುವರೆದರೆ, ಉಸಿರುಗಟ್ಟಿಸುವ ಅನುಭವ ಉಂಟಾಗೋದು ಖಂಡಿತಾ. ಅವನು ನಿಮ್ಮನ್ನು ನಿಯಂತ್ರಿಸಲು (control) ಪ್ರಯತ್ನಿಸಿದರೆ, ನೀವು ನಿಜವಾಗಿಯೂ ಅಂತಹ ವ್ಯಕ್ತಿಯೊಂದಿಗೆ ಇರಲು ಬಯಸುವಿರಾ? ಯೋಚನೆ ಮಾಡಿ….
ನಿಮಗೆ ಆದ್ಯತೆ ನೀಡದಿದ್ದರೆ?
ಕೊಡೋದು, ತೆಗೆದುಕೊಳ್ಳೋದು, ಹಂಚಿಕೊಳ್ಳೋದು ಎಲ್ಲಾ ಸಂಬಂಧದಲ್ಲೂ ಇದ್ದೇ ಇರುತ್ತೆ. ಆದರೆ ನಿಮಗೆ ಯಾವುದೇ ಆದ್ಯತೆ ನೀಡದೆ, ತನಿಗೆ ಬೇಕೆನಿಸಿದನ್ನು ಮಾಡುವ ವ್ಯಕ್ತಿ ಜೊತೆ ನೀವು ಬಾಳಲು ಯೋಚಿಸಿದರೆ, ನಿಮ್ಮ ಜೀವನದ ಅರ್ಥವೇ ಕಳೆದು ಹೋಗಬಹುದು.
ಎಂದಿಗೂ ಸಾರಿ ಕೇಳದಿರುವುದು
ಅವನು ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಾನೆ ಮತ್ತು ಕ್ಷಮಿಸಿ (sorry) ಎಂದೂ ಹೇಳುತ್ತಾನೆ. ಮತ್ತೆ ಮತ್ತೆ ಆತ ಕ್ಷಮೆ ಕೇಳೋದನ್ನೆ ಬಿಟ್ಟು ಬಿಡುತ್ತಾನೆ, ಆದರೆ ತನಗೆ ಬೇಕೆನಿಸಿದಂತೆ ತಪ್ಪು ಮಾಡುತ್ತಿರುತ್ತಾರೆ. ನಿಮ್ಮ ಸಂಗಾತಿಯೂ ಇಂತಹ ಗುಣವನ್ನು ಹೊಂದಿದ್ದರೆ, ಒಮ್ಮೆ ಯೋಚಿಸಿ… ಈತ ನಿಮಗೆ ಯೋಗ್ಯನೆ ಎಂದು…
ನಿಮ್ಮ ಅಭಿಪ್ರಾಯ ಕೇಳದೇ ಇರೋದು
ಪ್ರತಿಯೊಬ್ಬರೂ ಹೊಂದಿರುವಂತೆ ಒಂದು ಸಣ್ಣ ಅಹಂ (Ego) ಒಳ್ಳೆಯದು, ಆದರೆ ನಿಮ್ಮ ಅಭಿಪ್ರಾಯ ಅವನಿಗೆ ಮುಖ್ಯವಲ್ಲದಿದ್ದರೆ, ತನ್ನ ಅಭಿಪ್ರಾಯವನ್ನು ಮಾತ್ರ ಮುಖ್ಯ ಎಂದು ಅಂದುಕೊಂಡರೆ,, ನೀವು ಅದರ ಬಗ್ಗೆ ಎರಡರಿಂದ ಮೂರು ಬಾರಿ ಯೋಚಿಸಿ. ನಿಮ್ಮ ಅಭಿಪ್ರಾಯವು ಅವನಿಗೆ ಯಾವಾಗಲೂ ಮುಖ್ಯವಾಗಿರಬೇಕು. ಸಂಬಂಧ ಸುಂದರವಾಗಿರಲು ಇಬ್ಬರ ಅಭಿಪ್ರಾಯವೂ ಮುಖ್ಯ.
ಪದೇ ಪದೇ ಸುಳ್ಳು ಹೇಳುವುದು
ನಿಮ್ಮ ಸಂಗಾತಿ ಪದೇ ಪದೇ ಸುಳ್ಳು ಹೇಳುತ್ತಿದ್ದರೆ, ಆತನ ಬಗ್ಗೆ ಎಚ್ಚರ ಆಗಿರೋದು ಉತ್ತಮ. ಸಣ್ಣ ವಿಷಯಕ್ಕೆ ಸುಳ್ಳು ಹೇಳೋದು ಓಕೆ… ಆದರೆ ಎಲ್ಲಾ ಟೈಮ್ ನಲ್ಲೂ ಸುಳ್ಳು ಹೇಳ್ತಿದ್ರೆ ಅದರಿಂದ ನಿಮ್ಮ ಜೀವನಕ್ಕೆ ಮುಳುವಾಗಬಹುದು. ಆದುದರಿಂದ ಅವರನ್ನು ಮದ್ವೆ ಆಗದೇ ಇದ್ರೇನೆ ಒಳ್ಳೇದು.