Asianet Suvarna News Asianet Suvarna News

ಅಬ್ಬಬ್ಬಾ..ಏನ್ ಕಾಲ ಬಂತಪ್ಪಾ, AI ರಚಿಸಿದ ಹಾಲೋಗ್ರಾಮ್‌ನ್ನು ಮದ್ವೆಯಾಗಲಿದ್ದಾಳೆ ನಟಿ!

ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾತ ಎಲ್ಲಾ ಬಿಟ್ಟು ಹಾಲೋಗ್ರಾಮ್‌ನ್ನು ಮದ್ವೆಯಾಗಲು ಪ್ಲಾನ್ ಮಾಡ್ತಿದ್ದಾನೆ. ಅರೆ ಇದೆಂಥಾ ವಿಚಿತ್ರ ಅನ್ಬೇಡಿ. ಫುಲ್ ಸ್ಟೋರಿ ಓದಿ. 

Spanish Artist Alicia Framis Set To Become First Woman To Marry AI Generated Hologram Vin
Author
First Published Feb 14, 2024, 3:56 PM IST

ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಸಾಮಾನ್ಯ ವಿಷಯವಾಗಿ ಉಳಿದಿದೆ.

ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹಾಲೋಗ್ರಾಮ್‌(ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದವರೂ ಇದ್ದಾರೆ.  ಹಾಗೆಯೇ ಯುವತಿಯೊಬ್ಬಳು ವಿಶ್ವದಲ್ಲೇ ಮೊದಲ ಬಾರಿಗೆ AI ರಚಿಸಿದ ಹಾಲೋಗ್ರಾಮ್‌ನ್ನು ಮದುವೆಯಾಗಲು ಸಜ್ಜಾಗಿದ್ದಾಳೆ. ಸ್ಪ್ಯಾನಿಷ್ ರಂಗಭೂಮಿ ನಟಿ ಅಲಿಸಿಯಾ ಫ್ರಾಮಿಸ್ ಹೊಲೊಗ್ರಾಫಿಕ್ ತಂತ್ರಜ್ಞಾನ ಬಳಸಿಕೊಂಡು ಮಾಡಿದ ಹಾಲೋಗ್ರಾಮ್‌ನ್ನು ಮದುವೆಯಾಗಲು ಯೋಜಿಸುತ್ತಿದ್ದಾಳೆ. 

ಸಿಗರೇಟ್ ಇಲ್ಲ ಅಂದ್ರೆ ವಧು ಇಲ್ಲ… ಚೀನಾದಲ್ಲಿ ಹಳೆ ಸಂಪ್ರದಾಯಕ್ಕೆ ಹೊಸ ಟಚ್

ಅಲಿಸಿಯಾ ಫ್ರಾಮಿಸ್ ಪ್ರತಿ ಭಾವನಾತ್ಮಕ ಅಗತ್ಯವನ್ನು ಪೂರೈಸಲು ವರನನ್ನು ವಿನ್ಯಾಸಗೊಳಿಸಿದ್ದಾರೆ. ಆಕೆಯ ಗಂಡನ ಹೆಸರು AILex ಎಂದು ಸಹ ತಿಳಿಸಿದ್ದಾರೆ. ಮದುವೆಯು ಫ್ರಾಮಿಸ್ ಅವರ 'ಹೈಬ್ರಿಡ್ ಕಪಲ್' ಯೋಜನೆಯ ಭಾಗವಾಗಿದೆ. 

ಫ್ರಾಮಿಸ್ ಎಐ-ರಚಿಸಿದ ಹೊಲೊಗ್ರಾಮ್‌ನ್ನು ಮದುವೆಯಾಗುವ ಮೊದಲ ಮಹಿಳೆಯೆಂದು ಗುರುತಿಸಿಕೊಳ್ಳಲಿದ್ದಾರೆ. ಈ ವರ್ಷವೇ ಮದುವೆ ನಡೆಯಲಿದೆ. ಈಗಾಗಲೇ ತಮ್ಮ ಮದುವೆಗೆ ಸ್ಥಳವನ್ನು ಕಾಯ್ದಿರಿಸಿದ್ದಾರೆ. ಸಮಾರಂಭವು ಈ ವರ್ಷ ರೋಟರ್‌ಡ್ಯಾಮ್‌ನ ವಸ್ತುಸಂಗ್ರಹಾಲಯದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಫ್ರಾಮಿಸ್ ಪ್ರಸ್ತುತ ತನ್ನ ಮದುವೆಯ ಉಡುಪನ್ನು ವಿನ್ಯಾಸಗೊಳಿಸುತ್ತಿದ್ದಾರೆ ಮತ್ತು ಸಮಾರಂಭದಲ್ಲಿ ಭಾಗವಹಿಸುವವರ ಉಡುಪನ್ನು ನಿರ್ಧರಿಸುತ್ತಿದ್ದಾರೆ. 

ಈ ಸಮುದಾಯದಲ್ಲಿ ಮದುವೆಗೂ ಮುನ್ನ ಗರ್ಭಿಣಿ ಆಗಿಲ್ಲ ಅಂದ್ರೆ ಇಲ್ಲಿ ಮದ್ವೇನೆ ನಡೆಯಲ್ಲ!

 
 
 
 
 
 
 
 
 
 
 
 
 
 
 

A post shared by @hybridcouples

Follow Us:
Download App:
  • android
  • ios