ತಪ್ಪಿಸಿಕೊಂಡಿದ್ದ ಮರಿಯೊಂದು ತಾಯಿಯನ್ನು ಮತ್ತೆ ಸೇರಿದ್ದು, ಈ ವೇಳೆ ತಾಯಿ ಮಗುವಿನ ಭಾವುಕ ಪುರ್ಮಿಲನದ ವಿಡಿಯೋ ವೈರಲ್ ಆಗಿದೆ.
ತಾಯಿ ಪ್ರೀತಿಗೆ ಎಂದಿಗೂ ಬೆಲೆ ಕಟ್ಟಲಾಗದು. ತಾಯ್ತನ ತಾಯಿ ಪ್ರೀತಿ ಎಂಬುದು ಮನುಷ್ಯ ಜನ್ಮಕ್ಕೆ ಸೀಮಿತವಲ್ಲ. ಪ್ರಾಣಿಗಳು ಕೂಡ ತಮ್ಮ ಮರಿಗಳ ಮೇಲೆ ಪ್ರೀತಿ ತೋರುವ ಮರಿ ಕಳೆದು ಹೋದಾಗ ರೋದಿಸುವ ಹಲವು ದೃಶ್ಯಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಕರಡಿ ಜಾತಿಯ ಕೋಲ ಎಂದು ಕೆಯಲ್ಪಡುವ ಪ್ರಾಣಿಯೊಂದು ಕಳೆದುಹೋದ ತನ್ನ ಮರಿ ಮತ್ತೆ ಸಿಕ್ಕಾಗ ತೋರುವ ಪ್ರೀತಿ ಊಹೆಗೂ ನಿಲುಕದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭೂಮಿಯ ಮೇಲಿರುವ ನಿಧಾನವಾಗಿ ಚಲಿಸುವ ಜೊತೆಗೆ ಮುದ್ದಾಗಿರುವ ಪ್ರಾಣಿಗಳಲ್ಲಿ ಒಂದಾದ ಈ ಕೋಲಾದ ಈ ವಿಡಿಯೋವನ್ನು ಜಾಗ್ವಾರ್ ಪಾರುಗಾಣಿಕಾ ಕೇಂದ್ರ, ಕಾಡು ಪ್ರಾಣಿಗಳ ರಕ್ಷಣೆ, ಪುನರ್ವಸತಿ ಮತ್ತು ಬಿಡುಗಡೆಗಾಗಿ ಕೆಲಸ ಮಾಡುವ ಸಂಸ್ಥೆಯು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಕಂದನ ಉಳಿಸಲು ನಾಗನನ್ನೇ ಎದುರಾಕ್ಕೊಂಡ ತಾಯಿ ಅಳಿಲು: ಕೊನೆಗೆ ಆಗಿದ್ದೇನು?
ಈ ವಿಡಿಯೋದಲ್ಲಿ ಮರದಲ್ಲಿ ನೇತಾಡುತ್ತಿರುವ ತಾಯಿ ಕೋಲಾ ಕಾಣಿಸುತ್ತಿದೆ. ಸ್ವಲ್ಪ ಸಮಯದ ನಂತರ, ಒಬ್ಬ ವ್ಯಕ್ತಿಯು ಅದರ ಮರಿಯನ್ನು ಮರದಲ್ಲಿ ನೇತಾಡುತ್ತಿರುವ ತಾಯಿಗೆ ನೀಡುತ್ತಾಳೆ. ತಕ್ಷಣವೇ ತನ್ನ ಮರಿಯನ್ನು ಗುರುತಿಸುವ ತಾಯಿ ಮರಿಯನ್ನು ಎದೆಗಪ್ಪಿಕೊಂಡು ಬಿಗಿಯಾಗಿ ಹಿಡಿದುಕೊಳ್ಳುತ್ತಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊವನ್ನು 1.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. 81 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
ಕಂದನ ಉಳಿಸಲು ನಾಗನನ್ನೇ ಎದುರಾಕ್ಕೊಂಡ ತಾಯಿ ಅಳಿಲು: ಕೊನೆಗೆ ಆಗಿದ್ದೇನು?
ನಾವು ಈ ತಾಯಿ ಮತ್ತು ಮಗುವನ್ನು (ಬ್ರಾಡಿಪಸ್ ವೆರಿಗೇಟಸ್) ಮತ್ತೆ ಒಂದುಗೂಡಿಸಲು ಸಾಧ್ಯವಾಯಿತು ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಎಂದು ಜಾಗ್ವಾರ್ ಪ್ರಾಣಿ ರಕ್ಷಣಾ ಕೇಂದ್ರವು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದೆ. ಮೇ 10 ರಂದು, ಸಿಬ್ಬಂದಿಯೊಬ್ಬರು ಬೀಚ್ ಬಳಿ ನೆಲದ ಮೇಲೆ ಈ ಮರಿ ಅಳುತ್ತಿರುವುದನ್ನು ಕಂಡು ಹಿಡಿದರು. ನಂತರ ಅದರ ತಾಯಿಯನ್ನು ಅವರು ಪತ್ತೆ ಮಾಡಿದರು. ಮರದ ಮೇಲಿದ್ದ ತಾಯಿಯನ್ನು ಗಮನಿಸಿದ ಸಿಬ್ಬಂದಿ ಮರಿಯನ್ನು ಪಶುವೈದ್ಯರ ಬಳಿ ತಪಾಸಣೆಗೆ ಕರೆತಂದರು. ಈ ವೇಳೆ ಮರಿಯೂ ಹುಷಾರಾಗಿದ್ದು ಅದಕ್ಕೆ ಯಾವುದೇ ಗಾಯಗಳಾಗಿಲ್ಲ ಎಂಬುದನ್ನು ತಪಾಸಣೆ ವೇಳೆ ಗೊತ್ತಾಗಿದೆ. ನಾವು ಮಗುವಿನ ಅಳುವಿಕೆಯನ್ನು ರೆಕಾರ್ಡ್ ಮಾಡಿದೆವು ಮತ್ತು ತಾಯಿಯ ಗಮನವನ್ನು ಸೆಳೆಯಲು ಮರದ ಬಳಿ ಅದನ್ನು ಬಿಟ್ಟೆವು. ಅಲ್ಲದೇ ತಾಯಿ ಅದರ ಬಳಿ ಬರುವವರೆಗೂ ತಾಳ್ಮೆಯಿಂದ ಕಾಯುತ್ತಿದ್ದೆವು ಎಂದು ಅವರು ಬರೆದುಕೊಂಡಿದ್ದಾರೆ.
ತಬ್ಬಲಿ ಹುಲಿಮರಿಗಳಿಗೆ ತಾಯಿ ಪ್ರೀತಿ ತೋರುವ ಶ್ವಾನ: ವಿಡಿಯೋ ವೈರಲ್
ಪ್ರೀತಿ ಕರುಣೆ ಕಾಳಜಿ ತೋರಿಸುವುದಕ್ಕೆ ಯಾವುದೇ ಮಿತಿಗಳಿರುವುದಿಲ್ಲ. ಪ್ರೀತಿ (love) ಕಾಳಜಿಯ ಭಾವನೆ ಕೇವಲ ಮನುಷ್ಯರಲ್ಲಿ ಮಾತ್ರ ಇಲ್ಲ ಪ್ರಾಣಿಗಳಿಗೂ ಭಾವನೆಗಳಿದೆ. ಅದೂ ಹಲವು ಬಾರಿ ಸಾಬೀತಾಗಿದೆ. ತಾಯಿ ಇಲ್ಲದ ತಬ್ಬಲಿ ಮಕ್ಕಳಿಗೆ ಶ್ವಾನವೊಂದು ತೋರಿಸುತ್ತಿರುವ ಪ್ರೀತಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ತಾಯಿಯಿಂದ ದೂರದ ಮೂರು ಹುಲಿಮರಿಗಳನ್ನು ಶ್ವಾನವೊಂದು ತನ್ನ ಮಕ್ಕಳಂತೆ ಸಲಹುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಾಬ್ರಡಾರ್ ತಳಿಯ ಶ್ವಾನವೊಂದು ಮೂರು ಹುಲಿ ಮರಿಗಳನ್ನು ತನ್ನ ಮಕ್ಕಳಂತೆ ಮುದ್ದಾಡುತ್ತಿದೆ. ಈ ತಾಯಿ ಶ್ವಾನ (Dog) ಹಾಗೂ ಪುಟ್ಟ ಹುಲಿ ಮರಿಗಳ (Tiger cube) ನಡುವಿನ ಪ್ರೀತಿಯ ಬಂಧಕ್ಕೆ ನೆಟ್ಟಿಗರು ಕೂಡ ಭಾವುಕರಾಗಿ ಶಹಭಾಷ್ ಅಂದಿದ್ದಾರೆ. ಇದು ಚೀನಾದ ವಿಡಿಯೋ ಆಗಿದ್ದು, ಹುಲಿ ಮರಿಗಳು ನಾಯಿಯ ಸುತ್ತ ಸುತ್ತ ಸುತ್ತುತ್ತ ಆಟವಾಡುತ್ತಿವೆ. ಈ ವಿಡಿಯೋದ ಮೂಲದ ಪ್ರಕಾರ ಈ ಮರಿಗಳಿಗೆ ಜನ್ಮ ನೀಡಿದ ತಾಯಿ ಹುಲಿ ನಂತರ ಇವುಗಳಿಗೆ ಹಾಲುಡಿಸಲು ನಿರಾಕರಿಸಿತ್ತು ಎಂದು ತಿಳಿದು ಬಂದಿದೆ.