Asianet Suvarna News Asianet Suvarna News

51 ವರ್ಷದಿಂದ ದೂರವಿದ್ದು ಮೊದಲ ಬಾರಿ ಭೇಟಿಯಾದ ಒಡಹುಟ್ಟಿದವರು !

ಚಿಕ್ಕಂದಿನಲ್ಲೇ ದೂರವಾದ ಒಡಹುಟ್ಟಿದವರು 51 ವರ್ಷಗಳಲ್ಲಿ ಮೊದಲ ಬಾರಿಗೆ ಭೇಟಿಯಾದ ಘಟನೆ ಟೆಕ್ಸಾಸ್‌ನಲ್ಲಿ ನಡೆದಿದೆ. ಚಿಕ್ಕಂದಿನಲ್ಲೇ ಅಪಹರಣಗೊಂಡ ಸಹೋದರಿಯನ್ನು  ಡಿಎನ್‌ಎ ಪರೀಕ್ಷೆ ನಡೆಸಿ ಪತ್ತೆಹಚ್ಚಲಾಯಿತು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Siblings Meet For The First Time In 51 Years As One Of Them Was Abducted Vin
Author
First Published Nov 30, 2022, 3:21 PM IST

ಟೆಕ್ಸಾಸ್‌ನಲ್ಲಿ ವಾಸವಿದ್ದ ಕುಟುಂಬ (Family)ದಲ್ಲಿ ಹಿರಿಯ ಸಹೋದರಿ, ಮೆಲಿಸ್ಸಾ ಹೈಸ್ಮಿತ್, 23 ಆಗಸ್ಟ್ 1971ರಂದು ಟೆಕ್ಸಾಸ್‌ನ ಫೋರ್ಟ್ ವರ್ತ್‌ನಿಂದ ಬೇಬಿ ಸಿಟ್ಟರ್‌ನಿಂದ ಅಪಹರಿಸಲ್ಪಟ್ಟರು. ಆಕೆಗಿನ್ನೂ ಎರಡು ವರ್ಷವೂ ಆಗಿರಲ್ಲಿಲ್ಲ. ಮನೆ ಮಂದಿ ಮಗುವಿಗಾಗಿ ನಗರವಿಡೀ ಹುಡುಕಾಡಿದರೂ ಸಿಕ್ಕಿರಲ್ಲಿಲ್ಲ. ಸ್ವಲ್ಪ ಸಮಯದವರೆಗೆ ತನಿಖೆ ನಡೆದರೂ ಪೊಲೀಸರಿಗೆ ಆಕೆಯ ನಾಪತ್ತೆ ಪ್ರಕರಣವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಮೆಲಿಸ್ಸಾ ಕಣ್ಮರೆಯಾಗುವ ಸಮಯದಲ್ಲಿ ಅವಳ ತಾಯಿ (Mother) ಅಲ್ಟಾ ಅಪಾಂಟೆಂಕೊ ಅವರಿಂದ ಬೆಳೆಸಲ್ಪಟ್ಟಳು. ಆದರೆ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಕಾರಣ ಅವರಿಗೆ ತನ್ನ ಮಗಳನ್ನು ನೋಡಿಕೊಳ್ಳಲು ಯಾರಾದರೂ ಬೇಕಾಗಿದ್ದರು. ಆದ್ದರಿಂದ, ಅವರು ಸ್ಥಳೀಯ ಪತ್ರಿಕೆಯಲ್ಲಿ ಬೇಬಿ ಸಿಟ್ಟರ್‌ಗೆ ಜಾಹೀರಾತನ್ನು (Advertisement) ಪೋಸ್ಟ್ ಮಾಡಿದ್ದರು. 

ಜಾಹೀರಾತಿಗೆ ರುತ್ ಜಾನ್ಸನ್ ಎಂಬವರು ಉತ್ತರಿಸಿದ್ದರು. ಮಗು (Baby) ಮೆಲಿಸ್ಸಾವನ್ನು ಅಲ್ಟಾ ಅವರ ರೂಮ್‌ಮೇಟ್ ಬೇಬಿ ಸಿಟ್ಟರ್‌ಗೆ ಹಸ್ತಾಂತರಿಸಿದರು. ಅಲ್ಟಾ ಅದೇ ತಮ್ಮ ಮಗುವನ್ನು ಕೊನೆಯ ಬಾರಿಗೆ ನೋಡಿದರು. ಅದರ ಬಳಿಕ 51 ವರ್ಷಗಳ ನಂತರ ಮಗುವನ್ನು ಭೇಟಿಯಾಗಿದ್ದಾರೆ. ಕಣ್ಮರೆಯಾದ ವರ್ಷಗಳ ನಂತರ, ಮೆಲಿಸ್ಸಾ ಅವರ ಪೋಷಕರು ಮತ್ತೆ ಒಟ್ಟಿಗೆ ಸೇರಿಕೊಂಡು ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. ಇವರೆಲ್ಲರೂ ಬೆಳೆದು ದೊಡ್ಡವರಾಗಿದ್ದರೂ ತಮ್ಮ ಒಡೆಹುಟ್ಟಿದವರನ್ನು ನೋಡಿರಲ್ಲಿಲ್ಲ.

ಈ ಮನೆ ಮಕ್ಕಳೆಲ್ಲಾ ಐಎಎಸ್, ಐಪಿಎಸ್ ಅಫೀಸರ್‌ಗಳು: ಒಂದೇ ಮನೆಯಲ್ಲಿ 4 ಅಧಿಕಾರಿಗಳು

ಮೆಲಿಸ್ಸಾಳನ್ನು ಹುಡುಕುವ ಭರವಸೆಯನ್ನು ಕುಟುಂಬವು ಎಂದಿಗೂ ಬಿಟ್ಟುಕೊಡಲಿಲ್ಲ. ಅವರು ಅಂತಿಮವಾಗಿ ಡಿಎನ್ಎ ಪರೀಕ್ಷೆ ಮಾಡಿದರು ಮತ್ತು ತಂದೆ ಜೆಫ್ರಿ ಹೈಸ್ಮಿತ್ ಅವರ ಮಾದರಿಯೊಂದಿಗೆ ಮಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಮೆಲಿಸ್ಸಾ ತನ್ನ ನಿಜವಾದ ಮನೆಯಿಂದ ಕೆಲವೇ ಕಿಮೀ ದೂರದಲ್ಲಿ ಮೆಲಾನಿ ವಾಲ್ಡೆನ್ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದಳು. ಅವಳು ಕಾಣೆಯಾದ ವ್ಯಕ್ತಿ ಎಂದು ಸಹ ತಿಳಿದಿರಲಿಲ್ಲ

ಕುಟುಂಬಕ್ಕೆ ಮೆಲಿಸ್ಸಾ ಹಿಂದಿರುಗಿದ ನಂತರ, ಅವಳ ಸಹೋದರಿ ಶರೋನ್ ರೋಸ್ ಹೈಸ್ಮಿತ್ ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದಾರೆ: 'ನಮ್ಮ ವಂಶಾವಳಿಯ ಉತ್ಸಾಹಿ ಮತ್ತು ವಕೀಲರಾದ ಲಿಸಾ ಜೋ ಸ್ಕೈಲೆ ಅವರಿಗೆ ನಾವು ಪ್ರಾಮಾಣಿಕವಾಗಿ ಧನ್ಯವಾದ ಮತ್ತು ದೊಡ್ಡ ಚಪ್ಪಾಳೆಗಳನ್ನು ನೀಡಲು ಬಯಸುತ್ತೇವೆ, ಅವರು ನಮಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದರು. ಡಿಎನ್‌ಎ ಫಲಿತಾಂಶಗಳು ಮತ್ತು ತನ್ನ ಜೀವನದ ಬಹುಪಾಲು ಫೋರ್ಟ್‌ವರ್ತ್‌ನಲ್ಲಿ ವಾಸಿಸುತ್ತಿದ್ದ ನಮ್ಮದೇ ಆದ ಮೆಲಿಸ್ಸಾ ಸುಝೇನ್ ಹೈಸ್ಮಿತ್ ಅನ್ನು ಕಂಡುಹಿಡಿಯಲು ನೆರವಾಯಿತು' ಎಂದಿದ್ದಾರೆ.

ಮಕ್ಕಳು ಇಡೀ ದಿನ ಕಚ್ಚಾಡ್ತಾರಾ? ಅವರ ನಡುವೆ ಪ್ರೀತಿ ತರಲು ಇಲ್ಲಿವೆ vastu tips

ಒಡಹುಟ್ಟಿದವರ ಜೊತೆ ಜಗಳವಾಗ್ತಿದ್ದರೆ ಪಾಲಕರು ಈ ತಪ್ಪು ಮಾಡ್ಬೇಡಿ

ಮಕ್ಕಳ ಗಲಾಟೆಯ ಬಗೆಹರಿಸಲು ಪಾಲಕರು ಮಧ್ಯ ಪ್ರವೇಶ ಮಾಡ್ತಾರೆ. ಪಾಲಕರು ಈ ಸಮಯದಲ್ಲಿ ಒಬ್ಬರನ್ನು ಒಲಿಸುವ ಪ್ರಯತ್ನ ನಡೆಸ್ತಾರೆ. ಇನ್ನೊಬ್ಬರಿಗೆ ಬೈಯ್ಯುತ್ತಾರೆ. ಪಾಲಕರು ಒಬ್ಬರಿಗೆ ಆದ್ಯತೆ ನೀಡಿ, ಇನ್ನೊಬ್ಬರನ್ನು ನಿರ್ಲಕ್ಷ್ಯಿಸಿದ್ರೆ ಅದು ಕೂಡ ಒಡಹುಟ್ಟಿದವರ ಮಧ್ಯೆ ಅಸೂಯೆ ಜಗಳಕ್ಕೆ ಕಾರಣವಾಗುತ್ತದೆ. ಇದ್ರಿಂದ ಮಕ್ಕಳಲ್ಲಿ ದ್ವೇಷ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಪಾಲಕರ ಮೇಲೂ ಮಕ್ಕಳು ಕೋಪಗೊಳ್ತಾರೆ. ಮಕ್ಕಳ ಮನಸ್ಸಿನಲ್ಲಿ ಕಹಿ ಮನೆ ಮಾಡುತ್ತದೆ. ಇಬ್ಬರು ಮಕ್ಕಳ ಪಾಲಕರು ಮಕ್ಕಳ ಜಗಳ ಬಿಡಿಸುವ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಕೆಲ ವಿಷ್ಯವನ್ನು ಹೇಳ್ಬಾರದು. 

ನೀನು ದೊಡ್ಡವನು : ಇಬ್ಬರ ಮಧ್ಯೆ ಜಗಳ (Fight) ವಾದಾಗ ಪಾಲಕರು ದೊಡ್ಡವರ ಮೇಲೆ ಕಣ್ಣು ಬಿಡ್ತಾರೆ. ನೀನು ದೊಡ್ಡವನು, ಚಿಕ್ಕವರ ರೀತಿ ವರ್ತಿಸಬಾರದು ಎಂದು ಹೇಳ್ತಾರೆ. ಇದು ದೊಡ್ಡ ಮಕ್ಕಳ (Children) ಮನಸ್ಸ (Mind) ನ್ನು ಘಾಸಿಗೊಳಿಸುತ್ತದೆ. ಎಂದಿಗೂ ಜಗಳ ಬಿಡಿಸುವ ಸಂದರ್ಭದಲ್ಲಿ ನೀನು ದೊಡ್ಡವನು, ನಿನಗೆ ಎಲ್ಲ ಅರ್ಥವಾಗುತ್ತದೆ ಎನ್ನುತ್ತ ಚಿಕ್ಕವರ ಕೆಲಸವನ್ನು ಪಾಲಕರು ಸಮರ್ಥಿಸಿಕೊಳ್ಳಬಾರದು. 

ನಿನಗೇನೂ ಆಗಿಲ್ಲ, ಬಿಟ್ಬಿಡು : ಸಹೋದರ,ಸಹೋದರಿ ಮಧ್ಯೆ ಜಗಳವಾಗ್ತಿದ್ದರೆ, ಇಬ್ಬರು ಫೈಟಿಂಗ್ ಮಾಡ್ತಿದ್ದರೆ ಕೆಲವೊಮ್ಮೆ ಗಾಯವಾಗುತ್ತದೆ. ಒಬ್ಬರು ಇನ್ನೊಬ್ಬರಿಗೆ ಕಪಾಳಮೋಕ್ಷ ಮಾಡಬಹುದು. ಇಲ್ಲವೆ ವಸ್ತುವನ್ನು ಎಸೆಯಬಹುದು. ಆಗ ಇನ್ನೊಬ್ಬರಿಗೆ ಗಾಯವಾಗುತ್ತದೆ. ಆಗ ಮಧ್ಯಪ್ರವೇಶ ಮಾಡುವ ಪಾಲಕರು, ಏನೂ ಆಗಿಲ್ಲ, ಯಾವುದೇ ಹಾನಿಯಾಗಿಲ್ಲ ಬಿಡು ಎಂದು ಹೇಳಬಾರದು. ಇದ್ರಿಂದ ಗಾಯವಾದ ಅಥವಾ ಹೊಡೆತ ತಿಂದ ಮಗುವಿಗೆ ನೋವಾಗುತ್ತದೆ. ಪಾಲಕರು ತನಗೆ ಮಹತ್ವ ನೀಡ್ತಿಲ್ಲವೆಂದು ಅವರು ಭಾವಿಸ್ತಾರೆ. 

Follow Us:
Download App:
  • android
  • ios