Asianet Suvarna News Asianet Suvarna News

ಈ ಮನೆ ಮಕ್ಕಳೆಲ್ಲಾ ಐಎಎಸ್, ಐಪಿಎಸ್ ಅಫೀಸರ್‌ಗಳು: ಒಂದೇ ಮನೆಯಲ್ಲಿ 4 ಅಧಿಕಾರಿಗಳು

ಈ ಮನೆಯಲ್ಲಿ ಹುಟ್ಟಿದ್ದ ಮಕ್ಕಳೆಲ್ಲರೂ ನಾಗರಿಕ ಸೇವಾ ಅಧಿಕಾರಿಗಳು. ಹೀಗೆ ಮನೆ ಮಕ್ಕಳೆಲ್ಲರೂ ಉನ್ನತ ಹುದ್ದೆಗೇರುವುದು ಬಲು ಅಪರೂಪದ ಹಾಗೂ ಬಹು ಹೆಮ್ಮೆಯ ನಿದರ್ಶನ ಇಂತಹ ಒಂದು ಹೆಮ್ಮೆಗೆ ಸಾಕ್ಷಿಯಾಗಿದೆ ಉತ್ತರಪ್ರದೇಶದ ಪ್ರತಾಪ್‌ಗರ್‌ ಜಿಲ್ಲೆಯ ಲಾಲ್‌ಗಂಜ್‌ನಲ್ಲಿರುವ ಕುಟುಂಬ.

4 children from same family cracks Civil Services exams in Uttar pradesh akb
Author
Bangalore, First Published Aug 3, 2022, 5:22 PM IST

ಪ್ರತಾಪ್‌ಗರ್‌: ಒಂದು ಕುಟುಂಬದಲ್ಲಿ ಒಬ್ಬರು ಐಎಎಸ್‌ ಐಪಿಎಸ್ ಅಥವಾ ನಾಗರಿಕ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಪಾಸಾದ ಒಬ್ಬರೇ ಒಬ್ಬರಿದ್ದರು ಆ ಮನೆ ಮಂದಿಯ ಖುಷಿ ಹೆಮ್ಮೆ ಮುಗಿಲು ಮುಟ್ಟಿರುತ್ತದೆ. ಸಾಮಾನ್ಯವಾಗಿ ಒಂದು ಮನೆಯಲ್ಲಿ ಹುಟ್ಟಿದ ಒಡಹುಟ್ಟಿದವರಲ್ಲಿ ಒಬ್ಬರೋ ಇಬ್ಬರೋ ಹೀಗೆ ಐಎಎಸ್‌ ಆಫೀಸರ್‌ಗಳೋ ಫಾರೆಸ್ಟ್, ಆಫೀಸರ್‌ಗಳು ಪೊಲೀಸ್ ಅಧಿಕಾರಿಗಳೋ ಅಥವಾ ಫಾರೀನ್ ಸರ್ವಿಸ್ ಆಫೀಸರ್‌ಗಳೋ ಇರಬಹುದು. ಆದರೆ ಮನೆಯಲ್ಲಿ ಹುಟ್ಟಿದ್ದ ಮಕ್ಕಳೆಲ್ಲರೂ ಹೀಗೆ ಉನ್ನತ ಹುದ್ದೆಗೇರುವುದು ಬಲು ಅಪರೂಪದ ಹಾಗೂ ಬಹು ಹೆಮ್ಮೆಯ ನಿದರ್ಶನ ಇಂತಹ ಒಂದು ಹೆಮ್ಮೆಗೆ ಸಾಕ್ಷಿಯಾಗಿದೆ ಉತ್ತರಪ್ರದೇಶದ ಪ್ರತಾಪ್‌ಗರ್‌ ಜಿಲ್ಲೆಯ ಲಾಲ್‌ಗಂಜ್‌ನಲ್ಲಿರುವ ಕುಟುಂಬ.

ಬಡ ಕುಟುಂಬದಿಂದಲೇ ಬಂದ ಈ ಮಕ್ಕಳು ಇಂದು ದೇಶವೇ ಹೆಮ್ಮೆ ಪಡುವ ಅಧಿಕಾರಿಗಳಾಗಿದ್ದಾರೆ. ಈ ಹೆಮ್ಮೆಯ ಅಧಿಕಾರಿಗಳ ತಂದೆ ಅನಿಲ್‌ ಪ್ರಕಾಶ್‌ ಮಿಶ್ರಾ ಗ್ರಾಮೀಣ ಬ್ಯಾಂಕೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಗ್ರಾಮೀಣ ಬ್ಯಾಂಕೊಂದರ ಮ್ಯಾನೇಜರ್‌ ಆಗಿದ್ದ ನಾನು ಮಕ್ಕಳ ಶಿಕ್ಷಣದ ಗುಣಮಟ್ಟದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರಲಿಲ್ಲ. ನಾನು ನನ್ನ ಮಕ್ಕಳೆಲ್ಲರೂ ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗ ಹಿಡಿಯಬೇಕು ಎಂದು ಬಯಸಿದೆ. ನನ್ನ ಮಕ್ಕಳು ಕೂಡ ಅವರ ಶಿಕ್ಷಣದ ಕಡೆ ಗಮನ ಹರಿಸಿದರು ಎಂದು ಅವರು ತಂದೆ ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

11 ಅಂಕದಿಂದ 10 ವರ್ಷದ ಶ್ರಮ ಬೂದಿಯಾಯ್ತು.. ವೈರಲ್ ಆದ ಐಎಎಸ್ ಆಕಾಂಕ್ಷಿಯ ಟ್ವೀಟ್ !

ನಾಲ್ವರು ಮಕ್ಕಳಲ್ಲಿ ದೊಡ್ಡವರಾದ ಯೋಗೇಶ್ ಮಿಶ್ರಾ, ತಮ್ಮ ಬಾಲ್ಯದ ಶಿಕ್ಷಣವನ್ನು ಲಾಲ್‌ಗಂಜ್‌ನಲ್ಲಿ ಮುಗಿಸಿ ನಂತರ ಮೋತಿಲಾಲ್‌ ನೆಹರೂ ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್‌ನಲ್ಲಿ ಮುಗಿಸಿದರು. ನಂತರ ನೊಯ್ಡಾದಲ್ಲಿ ಕೆಲಸ ಗಿಟ್ಟಿಸಿದ ಅವರು ಕೆಲಸದ ಜೊತೆ ಜೊತೆಯಲ್ಲಿಯೇ ಸಿವಿಲ್ ಸರ್ವೀಸ್‌ ಪರೀಕ್ಷೆಗಳಿಗೆ ಸಿದ್ಧರಾದರು. 2013ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಪಾಸಾಗುವಲ್ಲಿ ಯಶಸ್ವಿಯಾದ ಅವರು ಮುಂದೆ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. 

ಇವರ ಸಹೋದರಿ ಕ್ಷಮಾ ಮಿಶ್ರಾ ಅವರು ಕೂಡ ಸಿವಿಲ್‌ ಸರ್ವಿಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೊದಲ ಮೂರು ಪ್ರಯತ್ನಗಳಲ್ಲಿ ಅವರಿಗೆ ಪಾಸ್‌ ಆಗಲು ಸಾಧ್ಯವಾಗಲಿಲ್ಲ. ಆದರೆ ನಾಲ್ಕನೇ ಬಾರಿ ಪರೀಕ್ಷೆ ಪಾಸಾಗುವಲ್ಲಿ ಯಶಸ್ವಿಯಾದ ಅವರು ಈಗ ಭಾರತೀಯ ಪೊಲೀಸ್ ಸೇವೆ (IPS)ಯ ಅಧಿಕಾರಿಯಾಗಿದ್ದಾರೆ. 

UPSC Result 2021 ಮೊದಲ ಯತ್ನದಲ್ಲೇ Davanagere ಅವಿನಾಶ್‌ಗೆ 31ನೇ ರ‍್ಯಾಂಕ್‌!

ನಂತರ ಮತ್ತೊಬ್ಬ ಸಹೋದರಿ ಮಧುರಿ ಮಿಶ್ರಾ ಲಾಲ್‌ಗಂಜ್‌ನ ಕಾಲೇಜೊಂದರಿಂದ ಪದವಿ ಪಡೆದು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಅಲಹಾಬಾದ್‌ಗೆ ತೆರಳಿದರು. ಅಲ್ಲಿ ಶಿಕ್ಷಣದ ಜೊತೆ ಜೊತೆಗೆ ಸಿವಿಲ್‌ ಪರೀಕ್ಷೆಗೆ ಸಿದ್ಧರಾದ ಅವರು, 2014ರಲ್ಲಿ ಐಎಎಸ್ ಪಾಸ್ ಅಗಿದ್ದು, ಜಾರ್ಖಂಡ್‌ ಖೇಡರ್‌ನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇವರೆಲ್ಲರ ಕೊನೆಯ ಸಹೋದರ ಲೋಕೇಶ್ ಮಿಶ್ರಾ 44ನೇ ಶ್ರೇಣಿಯೊಂದಿಗೆ 2015 ರಲ್ಲಿ ಯುಪಿಎಸ್ ಪರೀಕ್ಷೆ ಪಾಸ್ ಮಾಡಿದ್ದು, ಬಿಹಾರ ಖೇಡರ್‌ನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
 

Follow Us:
Download App:
  • android
  • ios