ಮಕ್ಕಳು ಇಡೀ ದಿನ ಕಚ್ಚಾಡ್ತಾರಾ? ಅವರ ನಡುವೆ ಪ್ರೀತಿ ತರಲು ಇಲ್ಲಿವೆ vastu tips

ಇರೋದೆರಡು ಮಕ್ಕಳು. ನಿಮ್ಮ ಎರಡು ಕಣ್ಗಳೆಂದೇ ಅಂದುಕೊಂಡು ಸಾಕುತ್ತಿರುತ್ತೀರಿ. ಆದರೆ, ಆ ಇಬ್ಬರು ಮಕ್ಕಳ ನಡುವೆ ಮಾತ್ರ ಕೊಂಚವೂ ಪ್ರೀತಿಯೇ ಇಲ್ಲವೇನೋ ಎಂಬಷ್ಟು ಜಗಳ, ಬೈದಾಟ. ಹೀಗೆ ಮಕ್ಕಳ ನಡುವೆ ದ್ವೇಷ ಶುರುವಾಗಿದ್ದರೆ ಈ ವಾಸ್ತು ಸಲಹೆಗಳನ್ನು ಪಾಲಿಸಿ ಸಂಬಂಧದಲ್ಲಿ ಪ್ರೀತಿ ತನ್ನಿ. 

vastu tips to prevent sibling rivalry skr

ಮೊದಲನೆ ಮಗುವಿಗೆ ಭವಿಷ್ಯದಲ್ಲಿ ಮತ್ತೊಂದು ಹೆಗಲು ಬೇಕೆಂದರೆ ತನ್ನವರಾರೂ ಇಲ್ಲವೆಂದಾಗಬಾರದು ಎಂದು ಬಹಳಷ್ಟು ದಂಪತಿ ಎರಡನೇ ಮಗು ಮಾಡಿಕೊಳ್ಳುತ್ತಾರೆ. ರಕ್ತ ಸಂಬಂಧದಷ್ಟು ಬಲವಾದದ್ದು ಯಾವುದೂ ಇಲ್ಲ, ಅಕ್ಕ- ತಂಗಿ, ಅಣ್ಣ- ತಮ್ಮ.. ಯಾರೇ ಇರಲಿ(siblings)- ಒಬ್ಬರು ಮತ್ತೊಬ್ಬರ ನೋವು ನಲಿವುಗಳಲ್ಲಾಗುತ್ತಾರೆ ಎಂಬ ಬಯಕೆಯಿಂದಲೇ ಪೋಷಕರು ಎರಡು ಮಕ್ಕಳ(children)ನ್ನು ಮಾಡಿಕೊಂಡಿರುತ್ತಾರೆ. ಆದರೆ, ಕೆಲವೊಮ್ಮೆ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಮಕ್ಕಳ ನಡುವೆ ಪ್ರೀತಿ ತರುವುದು ದುಸ್ಸಾಧ್ಯವೆಂದೇ ಎನಿಸುತ್ತದೆ. 

ಮೊದಲನೆಯ ಮಗುವಿಗೆ ಎರಡನೆಯದನ್ನು ಕಂಡರೆ ತನ್ನ ತಂದೆತಾಯಿಯನ್ನು ಕಿತ್ತುಕೊಂಡ ರಾಕ್ಷಸ ಎನಿಸುತ್ತದೆ. ಎರಡನೆಯದಕ್ಕೆ ತಂದೆ ತಾಯಿ ಎಲ್ಲಕ್ಕೂ ಅಕ್ಕನನ್ನೋ, ಅಣ್ಣನನ್ನೋ ನೋಡಿ ಕಲಿ ಎಂಬುದರ ಬಗ್ಗೆ ಕೋಪ. ಎತ್ತು ಏರಿಗೆಳೆದ್ರೆ ಕೋಣ ನೀರಿಗೆಳೀತು ಎಂಬಂತೆ ಅವರಿಬ್ಬರ ಕತೆ. ಒಬ್ಬರನ್ನು ಕಂಡರೆ ಒಬ್ಬರಿಗಾಗಲ್ಲ. ಮಾತೆತ್ತಿದರೆ ಜಗಳ, ಒಬ್ಬರ ಮೇಲೊಬ್ಬರ ಆರೋಪ ಪ್ರತ್ಯಾರೋಪ.. ಇದೆಲ್ಲ ನೋಡೀ ನೋಡಿ ತಂದೆತಾಯಿ(parents) ಬೇಸತ್ತು ಹೋಗಿರುತ್ತಾರೆ. ನಾವೇನೋ ಅಂದುಕೊಂಡರೆ ಆಗಿದ್ದೇ ಒಂದಲ್ಲ ಎಂದು ಕೊರಗುತ್ತಿರುತ್ತಾರೆ. ಹೇಗಪ್ಪಾ ಇದನ್ನು ಸರಿ ಮಾಡುವುದು ಎಂದುಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಈ ಸಿಬ್ಲಿಂಗ್ ರೈವಲ್ರಿ(sibling rivalry)ಗೆ ವಾಸ್ತು ದೋಷವೂ ಕಾರಣವಿರಬಹುದು. ಹಾಗಾಗಿ, ನೀವೂ ನಿಮ್ಮ ಮಕ್ಕಳ ನಡುವಿನ ಸೌಹಾರ್ದತೆ ಕೊರತೆಯಿಂದ ಬೇಸತ್ತಿದ್ದರೆ ವಾಸ್ತುವಿನ ಈ ಏಳು ಸಲಹೆಗಳನ್ನು ಪಾಲಿಸಿ ನೋಡಿ. ಧನಾತ್ಮಕ ಫಲಿತಾಂಶ ಕಾಣಿ. 

ಬಾಗಿಲು
ಮೊದಲನೆಯದಾಗಿ ಮಕ್ಕಳ ಕೋಣೆಯ ಬಾಗಿಲುಗಳು ಕಾರಿಡಾರ್ ಎದುರಿಗೇ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವೇ ಎರಡೂ ಮಕ್ಕಳ ಕೋಣೆಗಳು ಎದುರು ಬದರಾಗಿ ಇರಕೂಡದು. ಹೀಗಿದ್ದರೆ ಇದು ಅವರ ನಡುವೆ ಸಾಕಷ್ಟು ಜಗಳಗಳನ್ನು ಉಂಟುಮಾಡುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹೀಗೆಯೇ ಇದ್ದರೆ ಬಾಗಿಲನ್ನು ಒಡೆಯಬೇಕೆಂದು ಭಯ ಬೀಳಬೇಡಿ. ಬಾಗಿಲುಗಳಲ್ಲಿ ಒಂದನ್ನು ಬದಲಾಯಿಸಲಾಗದಿದ್ದರೆ, ಎರಡು ಬಾಗಿಲುಗಳ ನಡುವೆ ವಿಂಡ್ ಚೈಮ್(wind chime) ನೇತು ಹಾಕಿ. ಇದು ಅವರ ನಡುವಿನ ನಕಾರಾತ್ಮಕತೆ(negativity)ಯನ್ನು ಹೊರಹಾಕುತ್ತದೆ.

Sun transits in Pisces 2022: ಸೂರ್ಯ ಗೋಚಾರದಿಂದ ವೃಷಭ, ಮಿಥುನ ರಾಶಿಗೆ ಲಾಟ್ರಿ, ಉಳಿದ ರಾಶಿಗಳ ಕತೆಯೇನು?

ಹಾಸಿಗೆಯ ಗಾತ್ರ(bed size)
ಎತ್ತರದ ಮಕ್ಕಳು ಚಿಕ್ಕ ಹಾಸಿಗೆಗಳ ಮೇಲೆ ಮಲಗಬೇಕಾಗಿ ಬಂದರೆ ಅವು ಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅನಾರೋಗ್ಯದಿಂದ ಮಗುವಿನಲ್ಲಿ ಅತೃಪ್ತಿ ಮತ್ತು ಕೋಪ ಹೆಚ್ಚುತ್ತದೆ. ಆದ್ದರಿಂದ ಮಕ್ಕಳ ಹಾಸಿಗೆ, ಮಂಚವು ಅವುಗಳಿಗಿಂತ ಸಾಕಷ್ಟು ಉದ್ದವಾಗಿವೆ ಎಂದು ಖಚಿತಪಡಿಸಿಕೊಳ್ಳಿ. 

ವಾದಕ್ಕಿದು ಕಾರಣ
ಮಕ್ಕಳ ನಡುವೆ ಸಣ್ಣಪುಟ್ಟ ವಿಷಯಕ್ಕೂ ವಾದ, ಜಗಳ ನಡೆಯುತ್ತಲೇ ಇದ್ದರೆ, ಅವರ ಹಾಸಿಗೆಗಳು ಒಂದೇ ಗಾತ್ರದಲ್ಲಿವೆಯೇ ಎಂದು ಪರಿಶೀಲಿಸಿ. ಬೇರೆ ಬೇರೆ ಗಾತ್ರದ ಹಾಸಿಗೆಯನ್ನು ಹೊಂದಿರುವ ಸೋದರರ ನಡುವೆ ಸಾಕಷ್ಟು ಅಹಿತಕರ ವಾದಗಳು(arguments) ಇರುತ್ತವೆ. ಆದ್ದರಿಂದ ಮಕ್ಕಳಿಬ್ಬರ ಹಾಸಿಗೆಯೂ ಒಂದೇ ಗಾತ್ರದಲ್ಲಿರುವಂತೆ ನೋಡಿಕೊಳ್ಳಿ. 

ಬಾಗಿಲಿನ ಗಾತ್ರ
ಮಕ್ಕಳ ಕೋಣೆಗಳ ಬಾಗಿಲುಗಳು ಒಂದಕ್ಕೊಂದು ಪಕ್ಕದಲ್ಲಿದ್ದರೆ ಅವು ಒಂದೇ ಗಾತ್ರದಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ದೊಡ್ಡ ಬಾಗಿಲನ್ನು ಹೊಂದಿರುವ ಕೋಣೆಯಲ್ಲಿರುವ ಮಗು ಚಿಕ್ಕ ಬಾಗಿಲಿನ ಕೋಣೆಯಲ್ಲಿರುವ ಮಗುವಿನ ಮೇಲೆ ತನ್ನ ಪ್ರಾಬಲ್ಯ ಸಾಧಿಸುವ ಜೊತೆಗೆ ಅದನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ.

Thursday Remedies: ಗುರುವಾರ ಅರಿಶಿನ ಬಳಸಿ ಈ ಐದು ಕೆಲಸ ಮಾಡಿದ್ರೆ ಒಲಿಯುತ್ತೆ ಅದೃಷ್ಟ

ಅಟ್ಯಾಚ್ಡ್ ಬಾತ್‌ರೂಂ
ನಿಮ್ಮ ಮಕ್ಕಳ ಕೋಣೆಯ ಬಾಗಿಲು ನೇರವಾಗಿ ಟಾಯ್ಲೆಟ್(toilet) ಎದುರಿಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಶೌಚಾಲಯದಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿ(negative energy)ಯು ನಿಮ್ಮ ಮಕ್ಕಳನ್ನು ಅವಿಧೇಯ(disobedient)ರು ಮತ್ತು ಜಗಳಗಂಟರನ್ನಾಗಿ ಮಾಡುತ್ತಿರಬಹುದು. 

ಹೆಡ್‌ರೆಸ್ಟ್
ಮಗು ತನ್ನ ಹಾಸಿಗೆಯ ಹಿಂದೆ ಒಳ್ಳೆಯ ರೀತಿಯ ಹೆಡ್‌ರೆಸ್ಟ್(headrest) ಹೊಂದಿರಬೇಕು. ಇದು ಅವನನ್ನು ಬಲವಾಗಿ ಪ್ರೇರೇಪಿಸುತ್ತದೆ. ಇಲ್ಲದಿದ್ದಲ್ಲಿ ಅವಳು/ಅವನು ತನ್ನ ಗೆಳೆಯರ ಗುಂಪು ಮತ್ತು ಒಡಹುಟ್ಟಿದವರ ಬೆಂಬಲದ ಕೊರತೆಯನ್ನು ಅನುಭವಿಸುತ್ತಾನೆ.

ನೆಲದ ಮೇಲೆ ಮಲುಗಿಸಬೇಡಿ
ಮಗುವನ್ನು ನೀರಿನ ಹಾಸಿಗೆಗಳ ಮೇಲೆ ಅಥವಾ ನೆಲದ ಮೇಲೆ ಮಲಗಲು ಬಿಡಬೇಡಿ. ಬಂಕರ್‌ ಬೆಡ್‌ನ ಮೇಲ್ಭಾಗವೂ ಸೂಕ್ತವಲ್ಲ. ಇದೆಲ್ಲವೂ ಮಗುವಿಗೆ ಆತಂಕ, ಅಸ್ಥಿರತೆಯ ಭಾವ ಹೆಚ್ಚಿಸುತ್ತವೆ. ಅಭದ್ರತಾ ಭಾವ ಕಾಡುತ್ತದೆ. ಇದರಿಂದಲೂ ಅದು ತನ್ನ ಒಡಹುಟ್ಟಿದವರೊಡನೆ ಜಗಳ ಆರಂಭಿಸುತ್ತದೆ. 
 

Latest Videos
Follow Us:
Download App:
  • android
  • ios