ನಮ್ ಇಂಡಿಯಾದಲ್ಲಿ ಕೂತು ಈ ಸುದ್ದಿಯನ್ನು ಸಣ್ಣ ಶಾಕ್‌ನೊಂದಿಗೇ ನೋಡ್ಬೇಕಾಗುತ್ತೆ. ಏಕೆಂದರೆ ನಾವು ಒಂದೆರಡು ದಶಕದ ಕೆಳಗೇ ನಾವಿಬ್ಬರು ನಮಗಿಬ್ಬರು ಅನ್ನೋ ಸಿದ್ಧಾಂತಕ್ಕೆ ಬದ್ಧರಾದವರು. ಈಗಂತೂ ಮನೆಗೊಂದು ಮಗು ಸಾಕು ಅಂತಿದ್ದೀವಿ. ಆದರೆ ಜಾರ್ಜಿಯಾ ದೇಶದಲ್ಲೊಬ್ಬಳು ಮಹಾತಾಯಿ ಇದ್ದಾಳೆ. ಈ ಪುಣ್ಯಾತ್ತಿಗಿತ್ತಿಗೆ ಇನ್ನೂ 23ರ ಹರೆಯ. ಈ ಪ್ರಾಯದಲ್ಲಿ ನಮ್ಮಲ್ಲಿ ಮದುವೆ ಆಗೋರೇ ಬಹಳ ಕಡಿಮೆ ಬಿಡಿ. ಈ ಹುಡುಗಿ ಮದುವೆ ಆಗಿದ್ದು ಮಾತ್ರ ಅಲ್ಲ, ಹನ್ನೊಂದು ಮಕ್ಕಳ ತಾಯಿಯೂ ಆಗಿದ್ದಾಳೆ. ತನಗೆ 105 ಮಕ್ಕಳು ಬೇಕು ಅನ್ನೋದು ಈಕೆಯ ಕನಸು. ಜಾರ್ಜಿಯಾದ ಕ್ರಿಸ್ಟಿನಾ ಓಜ್ವಾರ್ಕ್ ಎಂಬ ಈ ಹೆಣ್ಮಗಳ ಸೋಷಿಯಲ್ ಮೀಡಿಯಾ ಅಕೌಂಟ್‌ಅನ್ನು ನೀವೊಮ್ಮೆ ಚೆಕ್ ಮಾಡ್ಬೇಕು, ವಿಶ್ವಾದ್ಯಂತ ಈಕೆಗಿರುವ ಅಗಾಧ ಫಾಲೋವರ್ಸ್ ಕಂಡು ಶಾಕ್ ಆಗೋದು ಗ್ಯಾರೆಂಟಿ. 
 ಈಗ ಕ್ರಿಸ್ಟಿನಾ ವಿಷಯಕ್ಕೆ ಬರೋಣ. 

ಪ್ರೀತಿ ಉಳಿಸಿಕೊಳ್ಳಲು ಐದು ಸೂತ್ರಗಳು! ...


 

ಆಗಲೇ ಹೇಳಿದಂತೆ ಈ ಕ್ರಿಸ್ಟಿನಾ ಜಾರ್ಜಿಯಾ ದೇಶದ ಹುಡುಗಿ. ತನ್ನ 23ರ ಹರೆಯದಲ್ಲಿ 11 ಮಕ್ಕಳ ತಾಯಿಯಾಗಿರುವ ಈಕೆ ಮೊದಲ ಮಗುವನ್ನು 17 ವರ್ಷಕ್ಕೇ ಪಡೆಯುತ್ತಾಳೆ. ಮೊದಲ ಮಗಳಿಗೀಗ 6 ವರ್ಷ. ಅಂದರೆ ಲೆಕ್ಕಾಚಾರ ಎಲ್ಲೋ ಮಿಸ್ಸಾಯ್ತು ಅಂದ್ಕೋಬೇಡಿ. ಏಕೆಂದರೆ ಹದಿನೇಳು ವರ್ಷದಿಂದ ವರ್ಷಕ್ಕೊಂದು ಮಗು ಹಡೆದರೂ ಈಗ ಆರು ಮಕ್ಕಳಾಗುತ್ತಾರಷ್ಟೇ. ಅವಳಿ ಮಕ್ಕಳೆಂದರೆ ಇನ್ನೊಂಚೂರು ಹೆಚ್ಚಾಗಬಹುದು. ಆದರೆ ಹನ್ನೊಂದಂತೂ ಸಾಧ್ಯವೇ ಇಲ್ಲ. ಆದರೆ ಇಲ್ಲಿ ಮತ್ತೊಂದು ಮ್ಯಾಟರಿದೆ. ಅದನ್ನು ಆಮೇಲೆ ನೋಡೋಣ. ಈಗ ಈ ಹುಡುಗಿ ವಿಚಾರಕ್ಕೆ ಬರೋಣ. ಈಕೆಗೆ ಮಕ್ಕಳು ಅಂದರೆ ಪಂಚಪ್ರಾಣ. ಅತ್ಯಂತ ಶ್ರೀಮಂತ ವರ್ಗಕ್ಕೆ ಸೇರಿದವಳೀಕೆ. ಬಿಲಿಯನೇರ್‌ ಸಹ ಹೌದು. ಜಾರ್ಜಿಯಾದ ಎರಡನೇ ಅತೀ ದೊಡ್ಡ ನಗರವಾದ ಒಟುಮಿಯಲ್ಲಿ ಈಕೆಯ ವಾಸ. ಈಕೆಗೆ ಇಪ್ಪತ್ತಮೂರಾದರೆ ಈಕೆಯ ಪತಿಗೆ ಈಕೆಯ ತಂದೆಯ ವಯಸ್ಸು. ಅಂದರೆ ಈಗ ಐವತ್ತಾರು ವರ್ಷ. ಅಷ್ಟೊಂದು ವಯಸ್ಸಿನ ಅಂತರ ಇದ್ದರೂ ಇಬ್ಬರ ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ಈಕೆಯ ಪತಿ ಪಲಿಪ್ ಒಜ್ವಾರ್ಕ್ ದೊಡ್ಡ ಉದ್ಯಮಿ. ಟರ್ಕಿಯ ದೊಡ್ಡ ಕುಟುಂಬದಲ್ಲಿ ಹುಟ್ಟಿ ಬೆಳೆದಾತ. ಕ್ರಿಸ್ಟಿನಾ ಹುಟ್ಟಿ ಬೆಳೆದಿದ್ದೆಲ್ಲ ರಷ್ಯಾದ ಮಾಸ್ಕೋದಲ್ಲಿ. 

ಎಷ್ಟೊಂದು ವಿಧದ ಮುತ್ತು..! ಕಿಸ್ ಮಾಡೋ ಮುನ್ನ ಅವುಗಳ ಅರ್ಥ ತಿಳ್ಕೊಳ್ಳಿ ...

'ನನಗೆ ಹೆಚ್ಚೆಚ್ಚು ಮಕ್ಕಳ ತಾಯಿಯಾಗುವ ಆಸೆ. ಮಕ್ಕಳನ್ನು ನಿಯಂತ್ರಿಸುವುದು ಅಂದರೆ ಕುಟುಂಬವನ್ನೇ ನಿಯಂತ್ರಿಸಿದ ಹಾಗೆ. ನನಗದು ಇಷ್ಟವಿಲ್ಲ. ನನಗೆ ಹೆಚ್ಚೆಚ್ಚು ಮಕ್ಕಳನ್ನು ಪಡೆಯುತ್ತಾ, ಮಕ್ಕಳನ್ನು ಚೆನ್ನಾಗಿ ಆರೈಕೆ ಮಾಡುವಾಸೆ. ಎಷ್ಟು ಮಕ್ಕಳಿದ್ದರೂ ಚೆನ್ನಾಗಿ ಬೆಳೆಸಬಹುದು. ಅವರಿಗೆ ಒಳ್ಳೆಯ ಬದುಕು ಕೊಡಬಹುದು ಅಂತ ಬಹಳ ಆತ್ಮವಿಶ್ವಾಸದಿಂದ ಈಕೆ ಹೇಳ್ತಾರೆ. ಸುಮಾರು ೧೦೫ ಮಕ್ಕಳನ್ನು ಪಡೆಯಬೇಕು ಅನ್ನುವ ಆಸೆ ಈ ತಾಯಿಯದ್ದು. ಅದು ಹೇಗೆ ಅಂತೀರಾ.. 23ಕ್ಕೆ 11 ಮಕ್ಕಳನ್ನುಪಡೆದವಳಿಗೆ ಅದೇನೂ ಕಷ್ಟ ಅಲ್ಲ ಬಿಡಿ. 

ಈಗ ಇಷ್ಟೆಲ್ಲ ಮಕ್ಕಳ ಲೆಕ್ಕ ಕೊಟ್ಟಳಲ್ಲಾ, ಅದ್ರಲ್ಲಿ ಮೊದಲ ಮಗು ಮಾತ್ರ ಈ ಹೆತ್ತ ಮಗಳು. ಉಳಿದ ಮಕ್ಕಳೆಲ್ಲ ಬಾಡಿಗೆ ಗರ್ಭದ ಮೂಲಕ ಜನಿಸಿದವು. ಈ ಬಗ್ಗೆ ಕೊಂಕು ತೆಗೆಯೋರಿಗೆ ಕ್ರಿಸ್ಟಿನಾ ಸರಿಯಾಗಿ ತರಾಟೆಗೆ ತೆಗೆದುಕೊಳ್ತಾರೆ. ಸೊರೊಗೆಸಿಯಲ್ಲಿ ಜನಿಸಿದ ಮಕ್ಕಳು ಅಂದ ಮಾತ್ರಕ್ಕೆ ಅವು ನಮ್ಮ ಮಕ್ಕಳೇ ಅಲ್ಲವೇ. ನನ್ನದೇ ಅಂಡ, ನನ್ನ ಪತಿಯ ವೀರ್ಯದಿಂದ ಜನಿಸಿದ ಮಕ್ಕಳವು. ಹಡೆದಿಲ್ಲ ಅಂದ ಮಾತ್ರಕ್ಕೆ ಮಕ್ಕಳ ಮೇಲಿನ ಪ್ರೀತಿಯಲ್ಲಿಏನೂ ವ್ಯತ್ಯಾಸ ಆಗಲ್ಲ. ಒಂದಿದ್ದರೂ, ಹತ್ತಿದ್ದರೂ, ನೂರಿದ್ದರೂ ಅವು ನಮ್ಮ ಮಕ್ಕಳೇ. ಅವರಿಗೆ ನಾವು ತಂದೆ ತಾಯಿಗಳು ಅಷ್ಟೇ ಅನ್ನೋದು ಈಕೆಯ ಮಾತು. 

ಆದರೂ ಕಷ್ಟದಲ್ಲಿ ಒಂದೋ ಎರಡೋ ಮಗುವನ್ನು ಸೊರೊಗೆಸಿಯಲ್ಲಿ ಪಡೆಯಬಹುದು, ಹತ್ತು ಮಕ್ಕಳನ್ನು ಹೇಗೆ ಪಡೆಯೋದು ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಒಟುಮಿಯ ಕಾನೂನು, ಅಲ್ಲಿನ ಸೊರೊಗೆಸಿ ಕ್ಲಿನಿಕ್ ಗಳ ಬಗ್ಗೆ ತಿಳ್ಕೊಂಡ್ರೆ ಈ ಅನುಮಾನಗಳೆಲ್ಲ ದೂರವಾಗುತ್ತವೆ. ಒಟುಮಿಯಲ್ಲಿ ಹಲವಾರು ಸೊರೊಗೆಸಿ ಕ್ಲಿನಿಕ್ ಗಳಿವೆ. ಇಲ್ಲಿ ಬಾಡಿಗೆ ಗರ್ಭ ಧರಿಸಲು ಹಲವರು ಸಿದ್ಧರಿರುತ್ತಾರೆ. ಹೀಗಾಗಿ ಇಲ್ಲಿನ ಶ್ರೀಮಂತರು ಬಾಡಿಗೆ ಗರ್ಭದ ಮೂಲಕ ಮಗು ಪಡೆಯೋದು ಕಾಮನ್. 

ಸ್ತನಗಳು ಫಿಟ್ ಆಗಿರಲು ಈ ಮನೆಮದ್ದು ಟ್ರೈ ಮಾಡಬಹುದು! ...