ಎಷ್ಟೊಂದು ವಿಧದ ಮುತ್ತು..! ಕಿಸ್ ಮಾಡೋ ಮುನ್ನ ಅವುಗಳ ಅರ್ಥ ತಿಳ್ಕೊಳ್ಳಿ
ಇಂದು ಕಿಸ್ ಡೇ. ಇದು ವ್ಯಾಲೆಂಟೈನ್ಸ್ ವಾರದ ಅತ್ಯಂತ ರೊಮ್ಯಾಂಟಿಕ್ ದಿನ. ತಮ್ಮ ಸಂಗಾತಿಗೆ ಮುತ್ತನ್ನಿತ್ತು ಪ್ರೀತಿಯನ್ನು ತಿಳಿಸುವ ದಿನ ಇದು. ಕಿಸ್ ಮಾಡೋದ್ರಲ್ಲಿ ಬಹಳಷ್ಟು ವಿಧ ಇದೆ. ಈ ವಿಧಗಳಿಗೆಲ್ಲ ಭಿನ್ನವಾದ ಅರ್ಥಗಳಿವೆ. ಅದು ನಿಮಗೆ ಗೊತ್ತಾ..?
ಕಿವಿಯ ಮುತ್ತಿಡುವುದು ರೊಮ್ಯಾನ್ಸ್‌ಗೆ ಮುನ್ನುಡಿಯ. ಈ ರೀತಿಯ ಕಿಸ್ ರೋಮ್ಯಾಂಟಿಕ್ ಆಗಿದೆ. ಕಿವಿಗಳು ನಿಮ್ಮ ಸಂಗಾತಿಯನ್ನು ಪ್ರಚೋದಿಸುವ ಅತ್ಯಂತ ಸೂಕ್ಷ್ಮ ಭಾಗವಾಗಿದೆ.
ಇದು ಸ್ನೇಹಪರ ಕಿಸ್. ಈ ಕಿಸ್ ಅನ್ನು ಸ್ನೇಹಿತರು ಮತ್ತು ಹತ್ತಿರದ ಮತ್ತು ಆತ್ಮೀಯರ ನಡುವೆ ಹಂಚಿಕೊಳ್ಳಬಹುದು ಮತ್ತು ಯಾವುದೇ ಲೈಂಗಿಕ ಒಪ್ಪಿಗೆಯನ್ನು ಹೊಂದುವ ಅಗತ್ಯವಿಲ್ಲ. ಈ ಕಿಸ್ ಸಿಹಿ ಮತ್ತು ಸೌಮ್ಯವಾಗಿರುತ್ತದೆ.
ಭುಜದ ಮೇಲೆ ಮೆಲ್ಲಗೆ ಮುತ್ತು ನೀಡಿದರೆ ನೀವು ಆ ವ್ಯಕ್ತಿಯನ್ನು ಬಯಸುತ್ತೀರಿ ಎಂದು ಅರ್ಥ. ನಿಮ್ಮ ಸಂಗಾತಿಯನ್ನು ರೊಮ್ಯಾನ್ಸ್‌ಗೆ ರೆಡಿ ಮಾಡಲು ಭುಜದ ಮೇಲೆ ಒಂದು ಕಿಸ್ ಸಾಕು.
ತುಟಿಗಳ ಮೇಲೆ ಒಂದು ಕಿಸ್ ನೀವು ಪ್ರೀತಿಸುವ ವ್ಯಕ್ತಿಯ ಬಗ್ಗೆ ಆಳವಾದ ಭಾವನೆ ಮತ್ತು ಪ್ರೀತಿಯನ್ನು ತೋರಿಸುತ್ತದೆ. ಈ ಕಿಸ್ ಎಲ್ಲ ರೀತಿಯಲ್ಲೂ ವಿಶೇಷವಾಗಿದೆ! ತುಟಿಯ ಮೇಲೆ ಚುಂಬಿಸುವುದು ಶಾರ್ಟ್, ಲಾಂಗ್ ಅಥವಾ ವಿಭಿನ್ನ ರೀತಿಯದ್ದಾಗಿರಬಹುದು - ಆದರೆ ನೀವು ಅದನ್ನು ವಿಶೇಷ ಸಂದರ್ಭಗಳಿಗಾಗಿ ಮೀಸಲಿಡಿ
ಕೈಯ ಹಿಂಭಾಗದಲ್ಲಿ ಚುಂಬಿಸಿದರೆ ವ್ಯಕ್ತಿಯನ್ನು ಆರಾಧಿಸುವುದು ಎಂದು ಅರ್ಥ. ಇದು ಶಾಂತ ಮತ್ತು ಗೌರವದ ಮುತ್ತು. ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸುತ್ತಾನೆ ಮತ್ತು ನಿಮ್ಮನ್ನು ಆರಾಧನಾ ಭಾವದಿಂದ ಕಾಣುತ್ತಾನೆ ಎಂದು ಇದರ ಅರ್ಥ.
ಮುತ್ತಿನ ಗುಟ್ಟು ಗೊತ್ತಾಯ್ತಲ್ಲಾ..? ನಿಮ್ಮ ಸಂಗಾತಿಗೆ ಯಾವ ಕಿಸ್ ನೀವೇ ಡಿಸೈಡ್ ಮಾಡಿ