Asianet Suvarna News Asianet Suvarna News

ಕೊಲೀಗ್ ಜೊತೆ ಹೆಂಡ್ತಿಯ ಲವ್ವಿಡವ್ವಿ, ಪ್ರೀತಿಸಿ ಮದ್ವೆಯಾಗಿದ್ರೂ ಬಿಟ್ಕೊಟ್ಟ ಪತಿರಾಯ !

ಕಣ್ಣಂಚಿನ ಕುಡಿನೋಟದಲ್ಲೇ ಇಬ್ಬರಿಗೂ ಲವ್ವಾಯ್ತು..ಹಾಗೋ ಹೀಗೋ ಮದುವೆನೂ ಆಯ್ತು. ಸಂಸಾರನೂ ಚೆನ್ನಾಗಿತ್ತು. ಆದ್ರೆ ಆಕೆಗೆ ಮತ್ತೊಮ್ಮೆ ಮತ್ತೊಬ್ಬನ ಮೇಲೆ ಲವ್ವಾಯ್ತ. ಸರಿ ಸಾಕಮ್ಮಾ ಸಹವಾಸ ಅಂತ ಗಂಡ ಪಾಪ ಬಿಟ್ಟೇ ಬಿಟ್ಟ. ಹೆಂಡ್ತಿಯನ್ನೇ ಆಕೆಯ ಹೊಸ ಲವರ್‌ಗೆ ಗಿಫ್ಟ್ ಮಾಡಿದ. 

Relationship Tips: A husband gave his wife to her new lover in Bihar Vin
Author
First Published Jan 5, 2023, 2:35 PM IST

ಪ್ರೀತಿ (Love) ಒಂದು ಸುಂದರವಾದ ಭಾವನೆ (Feelings(. ಯಾರ ಮೇಲಾದರೂ ಪ್ರೀತಿಯಾಗುವುದು, ಯಾರಿಂದಲಾದರೂ ಪ್ರೀತಿಸಲ್ಪಡುವುದು ಇನ್ನಷ್ಟು ಖುಷಿ ತರುವ ವಿಚಾರ. ಪ್ರೀತಿಸಿದವರ ಜೊತೆಯೇ ಮದುವೆಯಾಗಿ ಜೀವನ (Life) ನಡೆಸುವುದು ಸೌಭಾಗ್ಯ. ಆದ್ರೆ ಪ್ರೀತಿ ಖುಷಿ ಕೊಡುವ ಹಾಗೆಯೇ ಸಾಕಷ್ಟು ದುಃಖವನ್ನು ಕೊಡುತ್ತದೆ. ಎಲ್ಲರ ಪ್ರೀತಿಯೂ ಹ್ಯಾಪಿ ಎಂಡಿಂಗ್ ಆಗಿರುವುದಿಲ್ಲ ಹೀಗಾಗಿ ಪ್ರೀತಿಸಿದವರೆಲ್ಲರೂ ಖುಷಿಯಾಗಿಯೂ ಇರುವುದಿಲ್ಲ. ಅದರಲ್ಲೂ ಕೆಲವೊಮ್ಮೆ ಪ್ರೀತಿಯಲ್ಲಿಯೂ ಕೆಲವೊಂದು ಚಿತ್ರ-ವಿಚಿತ್ರ ಘಟನೆಗಳೂ ನಡೆದು ಬಿಡುತ್ತವೆ. ಪ್ರೀತಿಯಾದವನ ಮೇಲೆ ನಿರಾಸಕ್ತಿ, ಒಬ್ಬನ ಮೇಲೆ ಪ್ರೀತಿಯಿರುವಾಗಲೇ ಇನ್ನೊಬ್ಬನ ಜೊತೆಗೆ ಲವ್‌..ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬಿಹಾರದಲ್ಲೂ ಹೀಗೊಂದು ವಿಚಿತ್ರ ಪ್ರೇಮ ಪ್ರಕರಣ ನಡೆದಿದೆ. 

ಪ್ರೀತಿಸಿ ಮದುವೆಯಾದ ರಾಮರಾಜ್ ಮತ್ತು ರೂಪ ಕುಮಾರಿ
ಬಿಹಾರದ ಜೆಹಾನಾಬಾದ್ ಜಿಲ್ಲೆಯ ಕುಮ್ಡಿ ಗ್ರಾಮದ ರಾಮರಾಜ್ ಎಂಬ ಯುವಕ, ಸೋಲಂನ ರೂಪ ಕುಮಾರಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಆ ಯುವತಿಯೂ ರಾಮರಾಜ್‌ನ್ನು ಇಷ್ಟಪಡುತ್ತಿದ್ದಳು. ಇಬ್ಬರೂ ಪರಸ್ಪರ ಬಿಟ್ಟಿರಲಾರೆವು ಎಂಬ ಮನಸ್ಥಿತಿಗೆ ಬಂದಾಗ ಮದುವೆ (Marriage)ಯಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಮದುವೆಯಾದ ಬಳಿಕ ಪ್ರತ್ಯೇಕ ಮಾಡಿ ವಾಸವಾಗಿದ್ದರು. ಆಗಲೇ ಇಬ್ಬರು ಮತ್ತೆ ದೂರವಾಗುವಂತಾಗಿದ್ದು. ಪ್ರೀತಿ ಮಾಡಿ ಮದುವೆಯಾಗುವ ವರೆಗೆ ಇಬ್ಬರ ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಜೊತೆಯಾಗಿ ವಾಸಿಸಲು ಶುರು ಮಾಡಿದ ನಂತರ ಗಂಡ ನನಗೆ ಸಮಯ ಕೊಡುತ್ತಿಲ್ಲ, ಹೆಂಡತಿ ನನಗೆ ಸಮಯ ಕೊಡುತ್ತಿಲ್ಲ ಅನ್ನೋ ಸಮಸ್ಯೆ ಶುರುವಾಗಿದೆ. ಅಷ್ಟೇ ಆದರೆ ಪರವಾಗಿರಲ್ಲಿಲ್ಲ. ಮನೆಯಲ್ಲೇ ಇದ್ದ ಹೆಂಡತಿಗೆ ಪ್ರೀತಿಸಿ ಮದುವೆಯಾದ ಗಂಡನನ್ನು ಬಿಟ್ಟು ಮತ್ತೊಬ್ಬನ ಮೇಲೆ ಪ್ರೀತಿ ಮೂಡಿದೆ.

24 ವರ್ಷಗಳ ಕಾಲ ‘ಸಿಸ್ಟರ್‌’ ಅಗಿದ್ದವರಿಗೆ ಚಿಗುರಿತು ಪ್ರೀತಿ: ಸನ್ಯಾಸತ್ವ ತೊರೆದು ಕ್ರೈಸ್ತ ಸನ್ಯಾಸಿ ಜತೆಗೆ ವಿವಾಹ..!

ನಂಬಲು ಕಷ್ಟವಾದರೂ ಇದು ನಿಜ. ಪ್ರೀತಿಸಿ ಮದುವೆಯಾದ ಜೋಡಿ ಹೊಸ ಮನೆಯನ್ನು ಮಾಡಿ ಖುಷಿಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಈ ಮಧ್ಯೆ ರೂಪಾ ನೆಟ್ ವರ್ಕಿಂಗ್ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡು ಪತಿ ಮತ್ತು ಉದ್ಯೋಗದ ನಡುವೆ ಉತ್ತಮ ಸಮತೋಲನದಿಂದ ಜೀವನ ನಡೆಸುತ್ತಿದ್ದಳು. ಆದರೆ ಆರು ತಿಂಗಳ ನಂತರ ರೂಪಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್ ಎಂಬ ಯುವಕನನ್ನು ಭೇಟಿಯಾದಳು. ಈ ಭೇಟಿ ಸ್ನೇಹದಲ್ಲಿ ಆರಂಭಗೊಂಡು ಕ್ರಮೇಣ ಪ್ರೀತಿಗೂ ತಿರುಗಿತು. ಈಗಾಗಲೇ ಮದುವೆಯಾಗಿದ್ದರೂ ರೂಪಾ, ಪತಿ ಕೆಲಸದ ನಿಮಿತ್ತ ಹೊರಗಿರುವಾಗ ಗೆಳೆಯನನ್ನು ಮನೆಗೆ ಕರೆದು ಖುಷಿ ಪಡುತ್ತಿದ್ದಳು.

ಮದುವೆಯ ನಂತರ ಮತ್ತೊಬ್ಬನನ್ನು ಪ್ರೀತಿಸಲು ಆರಂಭಿಸಿದ ರೂಪಾ
ಹೀಗೆ ಅದೊಂದು ದಿನ ಪತಿ ರಾಮ್ ರಾಜು ಮನೆಯಿಂದ ಹೊರಗೆ ಹೋಗಿದ್ದ. ಈ ಸಂದರ್ಭದಲ್ಲಿ ರೂಪಾ ಎಂದಿನಂತೆ ಯುವಕನನ್ನು ಮನೆಗೆ ಕರೆತಂದಿದ್ದಾಳೆ. ಆದರೆ ಹೊರಗೆ ಹೋಗಿದ್ದ ಪತಿ ರಾಮ್ ರಾಜು ಏನೋ ನೆನಪಿಸಿಕೊಂಡು ಮನೆಗೆ ವಾಪಾಸ್‌ ಬಂದಾಗ ಮನೆಯಲ್ಲಿದ್ದ ದೃಶ್ಯ ಕಂಡು ಕಂಗೆಟ್ಟಿದ್ದಾನೆ. ಪತ್ನಿ ರೂಪಾ ತನ್ನ ಬಾಯ್ ಫ್ರೆಂಡ್ ಜೊತೆ ಎಂಜಾಯ್ ಮಾಡುತ್ತಿರುವುದನ್ನು ಕಂಡು ಕೋಪಗೊಂಡು ಇಬ್ಬರನ್ನೂ ರೂಮಿನಲ್ಲಿಟ್ಟು ಬಾಗಿಲು ಹಾಕಿದ್ದಾನೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಪತ್ನಿಯ ವಿವಾಹೇತರ ಸಂಬಂಧವನ್ನು ಬಹಿರಂಗಪಡಿಸಿದ್ದಾನೆ. 

ಕೋಚಿಂಗ್ ಕ್ಲಾಸಲ್ಲಿ ಲವ್: 20ರ ಹರೆಯದ ವಿದ್ಯಾರ್ಥಿನಿ ಮದ್ವೆಯಾದ 42 ವರ್ಷದ ಶಿಕ್ಷಕ

ಪೊಲೀಸರು ವಿಚಾರಿಸಿದಾಗ ತಾವು ಕಳೆದ ಆರು ತಿಂಗಳಿನಿಂದ ರಂಜಿತ್‌ನನ್ನು ಪ್ರೀತಿಸುತ್ತಿರುವುದಾಗಿ ರೂಪಾ ತಿಳಿಸಿದ್ದಾಳೆ. ಗೆಳೆಯ ರಂಜಿತ್ ಕೂಡ ಇದೇ ಮಾತನ್ನು ಹೇಳಿದಾಗ ರಾಮರಾಜ್ ಆಶ್ಚರ್ಯಚಕಿತನಾಗಿದ್ದಾನೆ. ತನ್ನನ್ನು ಪ್ರೀತಿಸಿ ಮದುವೆಯಾಗಿರುವ ಹೆಂಡತಿ ಈಗ ಮತ್ತೊಬ್ಬನನ್ನು ಪ್ರೀತಿಸುತ್ತಿರುವುದು ಆತನಿಗೆ ಅಚ್ಚರಿಯನ್ನುಂಟು ಮಾಡಿತ್ತು. ಆದರೂ ಪ್ರೀತಿಯೆಂದರೆ ಏನೆಂದು ಆತನಿಗೆ ಗೊತ್ತಿದ್ದ ಕಾರಣ, ಇಬ್ಬರನ್ನೂ ದೂರ ಮಾಡುವ ನಿರ್ಧಾರ ಮಾಡಲ್ಲಿಲ್ಲ. ಬದಲಿಗೆ ತಾನೇ ದೂರವಿದ್ದು ಅವರಿಬ್ಬರು ಒಂದಾಗಲು ಅವಕಾಶ ಮಾಡಿಕೊಡಲು ನಿರ್ಧರಿಸಿದನು.

ಅದರಂತೆ ಬೇರೆ ಗಂಡಸನ್ನು ಇಷ್ಟ ಪಡುತ್ತೇನೆ ಎಂದು ಹೇಳಿದ ಹೆಂಡತಿಯನ್ನು ಇಟ್ಟುಕೊಂಡರೆ ನನಗೆ ನೆಮ್ಮದಿ ಎಂಬ ಭಾವನೆಯಿಂದ ಹೆಂಡತಿಗೆ ಹೊಸ ಲವರ್ ಜೊತೆ ಹೋಗಲು ಅವಕಾಶ ಮಾಡಿಕೊಟ್ಟನು. ರಾಮ್ ರಾಜ ನಿಷ್ಕಲ್ಮಶ ಪ್ರೀತಿಗೆ, ತ್ಯಾಗಕ್ಕೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Follow Us:
Download App:
  • android
  • ios