ಕೋಚಿಂಗ್ ಕ್ಲಾಸಲ್ಲಿ ಲವ್: 20ರ ಹರೆಯದ ವಿದ್ಯಾರ್ಥಿನಿ ಮದ್ವೆಯಾದ 42 ವರ್ಷದ ಶಿಕ್ಷಕ

ಇಲ್ಲೊಂದು ಕಡೆ 42 ವರ್ಷದ ಶಿಕ್ಷಕನೋರ್ವ ತನ್ನ 20 ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ದೇಗುಲದಲ್ಲಿ ವಿವಾಹವಾಗಿದ್ದಾನೆ. ಈ ಶಿಕ್ಷಕನ ಪತ್ನಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು.

Age just a number hence proved again, 42 year old teacher married 20 year old student in bihars samastipur akb

ಬಿಹಾರ: ಈ ಲವ್ ಅಥವಾ ಪ್ರೀತಿ ಎಂಬುದು ಹೇಗೆ ಶುರುವಾಗುವುದೋ ಹೇಳಲಾಗದು. ಪ್ರೀತಿ ಕುರುಡು ಎಂಬ ಮಾತಿನಂತೆ ಜಾತಿ ಧರ್ಮ ದೇಶ ಭಾಷೆಯ ಗಡಿಯನ್ನು ಮೀರಿ ಪ್ರೀತಿಸಿ ಮದುವೆಯಾದ ಅನೇಕರು ನಮ್ಮ ಮುಂದೆ ಇದ್ದಾರೆ. ಅದಕ್ಕೆ ಈಗ ಮತ್ತೊಂದು ಉದಾಹರಣೆ ಬಿಹಾರದ ಈ ಜೋಡಿ. ಇಲ್ಲೊಂದು ಕಡೆ 42 ವರ್ಷದ ಶಿಕ್ಷಕನೋರ್ವ ತನ್ನ 20 ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ದೇಗುಲದಲ್ಲಿ ವಿವಾಹವಾಗಿದ್ದಾನೆ. ಈ ಶಿಕ್ಷಕನ ಪತ್ನಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು.

ಬಿಹಾರದ ಸಮಸ್ಟಿಪುರದಲ್ಲಿ (Samastipur) ಈ ಘಟನೆ ನಡೆದಿದೆ. 42 ವರ್ಷದ ಶಿಕ್ಷಕ ಸಂಗೀತಾ ಕುಮಾರ್ (Sangeet Kumar) ಅವರು ಸಮಸ್ಟಿಪುರದ ರೊಸ್ದ ಬಜಾರ್ ಎಂಬಲ್ಲಿ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ಅನ್ನು ನಡೆಸುತ್ತಿದ್ದರು. ಅಲ್ಲಿಗೆ 20 ವರ್ಷದ ವಿದ್ಯಾರ್ಥಿನಿ ಶ್ವೇತಕುಮಾರಿ (Shweta Kumari) ಇಂಗ್ಲೀಷ್ ಕೋಚಿಂಗ್‌ಗಾಗಿ ಆಗಮಿಸುತ್ತಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರೂ ಮದ್ವೆಯಾಗಲೂ ನಿರ್ಧರಿಸಿದ್ದು, ಸಮೀಪದ ದೇವಸ್ಥಾನಕ್ಕೆ ತೆರಳಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಇಬ್ಬರು ದೇಗುಲವೊಂದರಲ್ಲಿ ಸಪ್ತಪದಿ ತುಳಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

 

ಇವರ ಈ ಲವ್ ಸ್ಟೋರಿ ಈಗ ಬಿಹಾರದ ಜನರಿಗೆ ಈ ಹಿಂದೆ ಬಿಹಾರದಲ್ಲಿ ಸಮಸ್ಟಿಪುರದಲ್ಲಿ(Samastipur) ನಡೆದಿದ್ದ ಮತುಕನಾಥ್ ಹಾಗೂ ಜುಲಿಯಾ ಪ್ರೇಮಕತೆಯನ್ನು ನೆನಪಿಸುವಂತೆ ಮಾಡಿದೆ. ಮತುಕನಾಥ್ ಹಾಗೂ ಜುಲಿಯಾ ಪ್ರೇಮಕತೆಯೂ ಇದೇ ರೀತಿ ಇದ್ದು, ಆದರೆ ಅದು ದುರಂತ ಅಂತ್ಯಗೊಂಡಿದೆ. 

ಬಿಹಾರದ ನಿವಾಸಿಯಾಗಿದ್ದ ಮತುಕ್ನಾಥ್ (Matuknath) ಪಾಟ್ನಾ ವಿಶ್ವ ವಿದ್ಯಾಲಯದಲ್ಲಿ (Patna University) ಫ್ರೊಫೆಸರ್ ( Professor) ಆಗಿ ಕೆಲಸ ಮಾಡುತ್ತಿದ್ದರು. ಇವರು ವಿದ್ಯಾರ್ಥಿಗಳಿಗೆ ಕ್ಯಾಂಪೊಂದನ್ನು ಆಯೋಜಿಸಿದ್ದರು. ಇದಕ್ಕೆ ವಿದ್ಯಾರ್ಥಿನಿಯಾಗಿ ಜ್ಯೂಲಿ (Julie) ಕೂಡ ಸೇರಿಕೊಂಡಿದ್ದಳು. ಇದೇ ಸಂದರ್ಭದಲ್ಲಿ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಪರಸ್ಪರ ತಮ್ಮ ದೂರವಾಣಿ ಸಂಖ್ಯೆಗಳನ್ನು ಬದಲಿಸಿಕೊಂಡಿದ್ದರು. ಇದಾದ ಬಳಿಕ ಇವರು ಸುಧೀರ್ಘ ಸಂಭಾಷಣೆಯನ್ನು ಕೂಡ ಆರಂಭಿಸಿದ್ದರು. ಆದರೆ ಇತ್ತ ಮತುಕ್ನಾಥ್‌ಗೆ ಆಗಲೇ ವಿವಾಹವಾಗಿ ಮಕ್ಕಳು ಕೂಡ ಇದ್ದರು. ಆದರೆ ಮತುಕ್ನಾಥ್ ಮಾತ್ರ ಈ ಯುವತಿಯ ಪ್ರೀತಿಗಾಗಿ ತನ್ನ ಮೊದಲ ಮದುವೆ ಪತ್ನಿ ಮಕ್ಕಳನ್ನು  ಬಿಟ್ಟು ಈಕೆಯ ಹಿಂದೆ ಬಂದಿದ್ದರು. ಪರಿಣಾಮ ಅವರನ್ನು ಕೆಲಸದಿಂದಲೂ ಅಮಾನತು ಮಾಡಲಾಗಿತ್ತು. ಇಷ್ಟೆಲ್ಲದರ ಮಧ್ಯೆಯೂ ಇವರ ಪ್ರೀತಿ ಮುಂದುವರೆದಿತ್ತು. 

ಹುಚ್ಚು ಪ್ರೀತಿ: HIV ಪಾಸಿಟಿವ್ ರಕ್ತ ಇಂಜೆಕ್ಟ್‌ ಮಾಡಿಕೊಂಡ ಬಾಲಕಿ

ಆದರೆ ನಂತರ ಇವರಿಬ್ಬರ ಫೋಟೋಗಳು ಸ್ಥಳೀಯ ಪತ್ರಿಕೆಯಲ್ಲಿಯೂ ಕಾಣಿಸಿಕೊಂಡಿದ್ದವು. ಮತುಕ್ನಾಥ್ ಮುಂದೆ ಲವ್ ಗುರು (Love Guru) ಎಂದೇ ಫೇಮಸ್ ಆದರು. ಇದರೊಂದಿಗೆ ಮತುಕ್ನಾಥ್ ಜ್ಯೂಲಿ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆದವು. ಈ ಫೋಟೋಗಳಲ್ಲಿ ಮತುಕ್ನಾಥ್ ಆಟೋ ಓಡಿಸುತ್ತಿದ್ದರೆ, ಜ್ಯೂಲಿ ಆಟೋ (autorickshaw) ಹಿಂದೆ ಕುಳಿತಿದ್ದಳು. ಆದರೆ 2017ರಲ್ಲಿ ಈ ಪ್ರೊಫೆಸರ್‌ನ್ನು ತೊರೆದು ಹೋದ ಜ್ಯೂಲಿ ಆಧ್ಮಾತ್ಮಿಕ ಗುರುವಾಗಿ ಬದಲಾಗಿದ್ದಳು. ಒಟ್ಟಿನಲ್ಲಿ ಬಿಹಾರದ ಸಮಸ್ಟಿಪುರದಲ್ಲಿ ಈಗ ಈ ಹೊಸ ಪ್ರೇಮ ಪ್ರಸಂಗದೊಂದಿಗೆ ಹಳೆಯ ಮತುಕ್ನಾಥ್ ಜ್ಯೂಲಿ ಪ್ರೇಮಕತೆಯನ್ನು ಜನ ನೆನೆಯುತ್ತಿದ್ದಾರೆ.


ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೋಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ

Latest Videos
Follow Us:
Download App:
  • android
  • ios