- Home
- Entertainment
- Sandalwood
- ಮಳಿಯಾಳಿ ಕ್ಯೂಟ್ ಲುಕ್ನಲ್ಲಿ Meghana Raj: ಹೊಸ ಅಧ್ಯಾಯಕ್ಕೆ ಮುನ್ನುಡಿ? ಅಭಿನಂದನೆಗಳ ಮಹಾಪೂರ
ಮಳಿಯಾಳಿ ಕ್ಯೂಟ್ ಲುಕ್ನಲ್ಲಿ Meghana Raj: ಹೊಸ ಅಧ್ಯಾಯಕ್ಕೆ ಮುನ್ನುಡಿ? ಅಭಿನಂದನೆಗಳ ಮಹಾಪೂರ
ನಟಿ ಮೇಘನಾ ರಾಜ್ ಅವರು ಮಳಿಯಾಳಿ ವಧುವಿನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿವೆ. ಪತಿ ಚಿರು ನಿಧನದ ನಂತರ ಸಿಂಗಲ್ ಮದರ್ ಆಗಿ ಮಗನನ್ನು ನೋಡಿಕೊಳ್ಳುತ್ತಿರುವ ಅವರು, ಈ ಹಿಂದೆ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದರು. ಇದೀಗ ಅವರ ಈ ಹೊಸ ರೂಪವು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ಮದುವೆಯ ಬಗ್ಗೆ ಮೇಘನಾ
ನಟಿ ಮೇಘನಾ ರಾಜ್ (Meghana Raj) ಅವರು ಪತಿ ಚಿರುವನ್ನು ಕಳೆದುಕೊಂಡ ಬಳಿಕ ಇನ್ನೊಂದು ಮದುವೆಯಾಗಬೇಕು ಎನ್ನುವುದು ಅವರ ಕುಟುಂಬದವರು ಹಾಗೂ ಅವರ ಅಸಂಖ್ಯ ಅಭಿಮಾನಿಗಳ ಆಶಯ ಕೂಡ. ಇದಾಗಲೇ ನಟಿ ಎರಡನೆಯ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. ಇದರಿಂದ ಅವರ ಫ್ಯಾನ್ಸ್ ತುಂಬಾ ಖುಷಿ ಕೂಡ ಆಗಿದ್ದಾರೆ.
ಮಳಿಯಾಳಿ ಲುಕ್ನಲ್ಲಿ
ಇದೀಗ ನಟಿ ಮೇಘನಾ ಅವರು ಮಳಿಯಾಳಿ ವಧುವಿನ ಲುಕ್ನಲ್ಲಿ ಕಂಗೊಳಿಸುತ್ತಿದ್ದಾರೆ. ಇವರಿಗೆ ಇಷ್ಟೊಂದು ಸುಂದರವಾಗಿ ಅಲಂಕಾರ ಮಾಡಿರುವ ಶಾಂತಾ ನಾಗರಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಶೇರ್ ಮಾಡಿದ್ದಾರೆ. ಮಲಯಾಳ ಚಿತ್ರದಲ್ಲಿ ನಟನೆಯಾದರೂ ಸರಿ, ನಿಜವಾಗಿಯೂ ವಧುವಾದರೂ ಸರಿ, ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿರಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಫ್ಯಾನ್ಸ್ ಖುಷ್
ನಟಿಯ ರೂಪ ಕಂಡು ಅವರ ಅಭಿಮಾನಿಗಳು ಮನಸೋತಿದ್ದಾರೆ. ಸುಂದರ ಲುಕ್ಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಈ ವಧುವಿನ ರೂಪ ಸದಾ ನಿಮ್ಮದಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಗರ್ಭಿಣಿಯಾಗಿದ್ದಾಗಲೇ ಪತಿ ನಿಧನ
ಅಷ್ಟಕ್ಕೂ ಗರ್ಭಿಣಿ ಇರುವಾಗಲೇ ಮೇಘನಾ ಅವರು ಪತಿ ಚಿರುವನ್ನು ಕಳೆದುಕೊಂಡವರು. ಇಷ್ಟು ವರ್ಷಗಳವರೆಗೆ ಅಂದರೆ ಐದೂವರೆ ವರ್ಷಗಳ ಕಾಲ ಮಗ ರಾಯನ್ಗೆ ಅಮ್ಮ-ಅಪ್ಪ ಎರಡೂ ಆಗಿ ಪ್ರೀತಿ ಹಂಚುತ್ತಿದ್ದಾರೆ. ಸಂಸಾರ ನಿಭಾಯಿಸುತ್ತಿದ್ದಾರೆ.
ಬದುಕಿನ ವಿಷಯ
ಆದರೆ, 35 ವರ್ಷದ ಮೇಘನಾ ಅವರು ಇನ್ನೊಂದು ಮದುವೆಯಾಗುವ ಬಗ್ಗೆ ಹಲವರು ಹೇಳುತ್ತಿರುವ ನಡುವೆಯೇ, ಈಚೆಗೆ ನಟಿ ಒಂದು ಷೋನಲ್ಲಿ ತಮ್ಮ ಬದುಕಿನ ಹಲವು ವಿಷಯಗಳನ್ನು ನಟಿ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಎರಡನೆಯ ಮದುವೆಯ ಬಗ್ಗೆಯೂ ಮಾತನಾಡಿದ್ದರು.
ಸಿಂಗಲ್ ಮದರ್ ಕಷ್ಟ
ಪಬ್ಲಿಕ್ ಪರ್ಸನ್ಯಾಲಿಟಿ ಆಗಿದ್ದು, ಸಿಂಗಲ್ ಮದರ್ ಆಗುವುದು ತುಂಬಾ ಕಷ್ಟ ಎಂದಿದ್ದಾರೆ ಮೇಘನಾ. ಮಗುವಿನಿಂದ ತುಂಬಾ ಎಕ್ಸ್ಪೆಕ್ಟೇಷನ್ ಇರುತ್ತದೆ. ಅದರಲ್ಲಿಯೂ ನನಗೆ ಇರುವುದು ಗಂಡು ಮಗ. ಆದ್ದರಿಂದ ಮನೆಯಲ್ಲಿ ಗಂಡಸರು ಇರಲೇಬೇಕು ಎಂದು ಎನ್ನಿಸುತ್ತದೆ. ಆ ಸಮಯದಲ್ಲಿ ನಾನು ಆ ಪಾತ್ರವನ್ನೂ ಮಾಡಬಲ್ಲೆ ಎಂದುಕೊಂಡಿದ್ದೆ ಎಂದು ಆ ದಿನಗಳ ನಟಿ ನೆನೆದಿದ್ದರು.
ಅಪ್ಪನ ಪಾತ್ರ
ನಾನು ಅಮ್ಮನಾಗಿ ಮಾತ್ರವಲ್ಲದೇ ಅಪ್ಪನಾಗಿಯೂ ಕಾರ್ಯ ನಿಭಾಯಿಸಬಲ್ಲೆ ಎಂದು ಹೇಳಿಬಿಟ್ಟಿದ್ದೆ. ಆದರೆ ರಿಯಾಲಿಟಿಯಲ್ಲಿ ಪ್ರತಿನಿತ್ಯವೂ ನಾನು ಅಪ್ಪ ಆಗಲು ಸಾಧ್ಯವಾಗುವುದಿಲ್ಲ ಎನ್ನುವ ಸತ್ಯ ಗೊತ್ತಾಗಿದೆ. ನೀನು ಅಮ್ಮ, ಒಳ್ಳೆಯ ಅಮ್ಮನಾಗಲು ನೋಡು, ಅಪ್ಪನ ಸ್ಥಾನ ತುಂಬಲು ನೋಡಬೇಡ ಎಂದು ನನ್ನ ಕಸಿನ್ ಕೂಡ ಹೇಳಿದಳು ಎಂದು ಮೇಘನಾ ತಿಳಿಸಿದ್ದರು. ಇದೀಗ ಅಪ್ಪನ ಸ್ಥಾನವನ್ನು ತುಂಬಲು ಬೇಗ ಒಬ್ಬರು ಸಿಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

