ಸಂಗಾತಿ ಸಮ್ಮತಿ ಇಲ್ಲದೇ ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ತೆಗೆದ ಪೊಲೀಸ್ ಪೇದೆಗೆ ಜೈಲು ಶಿಕ್ಷೆ ಪ್ರಕಟ

ಸಂಗಾತಿಯ ಒಪ್ಪಿಗೆಯನ್ನು ಪಡೆದುಕೊಳ್ಳದೇ ಕಾಂಡೋಮ್ ತೆಗೆದಿದ್ದ ಪೊಲೀಸ್ ಪೇದೆಯ ಅಪರಾಧ ಸಾಬೀತು ಆಗಿದ್ದು, ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

Police constable sentenced 8 month jail for removing condom without consent of partner mrq

ಬರ್ಲಿನ್: ಸಂಗಾತಿಯ ಸಮ್ಮತಿಯಿಲ್ಲದೇ ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ತೆಗೆದ ವ್ಯಕ್ತಿಗೆ ಜರ್ಮನಿಯ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಕಾಂಡೋಮ್ ತೆಗೆದ ಹಿನ್ನೆಲೆ ಪೊಲೀಸ್ ಪೇದೆಯ ವಿರುದ್ಧ ಮಹಿಳೆ ಅತ್ಯಾಚಾರ ದೂರು ದಾಖಲಿಸಿದ್ದರು. ಅಪರಾಧ ಸಾಬೀತಾದ ಹಿನ್ನೆಲೆ 36 ವರ್ಷದ ಅಪರಾಧಿಗೆ ನ್ಯಾಯಾಲಯ 8 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ನವೆಂಬರ್ -2023ರಲ್ಲಿ ಮಹಿಳೆಯ ದೂರಿನ ಅನ್ವಯ ಪೊಲೀಸ್ ಪೇದೆಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 
 
ಪೊಲೀಸ್ ಪೇದೆ ಮತ್ತು ಮಹಿಳೆ ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು. ಆದ್ರೆ ಸಂಗಾತಿಗೆ ತಿಳಿಯದಂತೆ ಕಾಂಡೋಮ್ ತೆಗೆದು ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಮಹಿಳೆ ದೂರು ದಾಖಲಿಸಿದ್ದರು. ಈ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದನ್ನು ಒಪ್ಪಿಗೆಯ ಲೈಂಗಿಕತೆ ಎಂದು ಕರೆದಿದೆ. ಪೊಲೀಸ್ ಪೇದೆಗೆ 8 ತಿಂಗಳ ಜೈಲು ಶಿಕ್ಷೆ ಮತ್ತು 3,000 ಯುರೋಗಳ ದಂಡ ವಿಧಿಸಿದೆ ಎಂದು ವರದಿಯಾಗಿದೆ.

ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!

ಜುಲೈನಲ್ಲಿ ಇಂತಹವುದೇ ಒಂದು ಪ್ರಕರಣ ಲಂಡನ್‌ನಲ್ಲಿ ವರದಿಯಾಗಿತ್ತು. ದಕ್ಷಿಣ ಲಂಡನ್ ನಿವಾಸಿ 39 ವರ್ಷದ ಗಯ್ ಮುಕೆಂಡಿ ಎಂಬಾತ ಮಹಿಳೆಯೊಬ್ಬರನ್ನು ಸಂಪರ್ಕಿಸಿ ಲೈಂಗಿಕತೆಯ ಆಸೆ ವ್ಯಕ್ತಪಡಿಸಿದ್ದನು. ಲೈಂಗಿಕ ಕ್ರಿಯೆಗೆ ಕಾಂಡೋಮ್ ಕಡ್ಡಾಯ ಎಂಬ ಷರತ್ತು ವಿಧಿಸಿ ಮಹಿಳೆ ಒಪ್ಪಿಕೊಂಡಿದ್ದರು. ಆದ್ರೆ ಮುಕೆಂಡಿ ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ತೆಗೆದಿದ್ದನು. ನಂತರ ವಿಷಯ ತಿಳಿದಾಗ ಮಹಿಳೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಇಂಗ್ಲೆಂಡ್ ಹಾಗೂ ವೇಲ್ಸ್‌ನ ಕ್ರೌನ್ ಕೋರ್ಟ್, ಅಪರಾಧಿ ಗಯ್ ಮುಕೆಂಡಿಗೆ 4 ವರ್ಷ 3 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು.

ಸಂಗಾತಿಗೆ ತಿಳಿಯದಂತೆ ಕಾಂಡೋಮ್ ತೆಗೆದು ಲೈಂಗಿಕ ಕ್ರಿಯೆ ನಡೆಸೋದನ್ನು ಸ್ಟೆಲ್ತಿಂಗ್ ಎಂದು ಕರೆಯಲಾಗುತ್ತದೆ. ಈ ಸಂಬಂಧ ಕೊಲಂಬಿಯಾದ ಜರ್ನಲ್ ಆಫ್ ಜೆಂಡರ್ ಆಂಡ್ ಲಾದಲ್ಲಿ ಸ್ಟೆಲ್ತಿಂಗ್ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಅನಗತ್ಯ ಗರ್ಭಧಾರಣೆ (Unwanted Pregnancy) ತಡೆಯುವ ಉದ್ದೇಶದಿಂದ ಹೆಚ್ಚಾಗಿ ಕಾಂಡೋಮ್ ಬಳಕೆ ಮಾಡಲಾಗುತ್ತದೆ. 

ಕಾಂಡೋಮ್ ಬಳಕೆಯಿಂದ ಕ್ಯಾನ್ಸರ್ ಬರುತ್ತಾ? ಅಚ್ಚರಿ, ಆಘಾತಕಾರಿ ವರದಿಯಿಂದ ಬೆಚ್ಚಿದ ಬಳಕೆದಾರರು!

Latest Videos
Follow Us:
Download App:
  • android
  • ios