Asianet Suvarna News Asianet Suvarna News

ಕಾಂಡೋಮ್ ಬಳಕೆಯಿಂದ ಕ್ಯಾನ್ಸರ್ ಬರುತ್ತಾ? ಅಚ್ಚರಿ, ಆಘಾತಕಾರಿ ವರದಿಯಿಂದ ಬೆಚ್ಚಿದ ಬಳಕೆದಾರರು!

ಕಾಂಡೋಮ್ ಬಳಕೆಯಲ್ಲಿ  ಆ ಒಂದು ವಸ್ತುವಿನಿಂದ ಬಳಕೆದಾರರು ಕ್ಯಾನ್ಸರ್‌ಗೆ ತುತ್ತಾಗಬಹುದು ಎಂಬ ವರದಿ ಬಹಿರಂಗಗೊಂಡಿದೆ. ಈ ವರದಿ ಬಳಿಕ ಕಾಂಡೋಮ್ ಬಳಕೆದಾರರು ಚಿಂತಿತರಾಗಿದ್ದಾರೆ.

Does condom use cause cancer Advantages and Disadvantages details mrq
Author
First Published Sep 11, 2024, 1:27 PM IST | Last Updated Sep 11, 2024, 1:27 PM IST

ವಾಷಿಂಗ್ಟನ್: ಒಬ್ಬರಿಗಿಂತ ಹೆಚ್ಚು ಸಂಗಾತಿಯನ್ನು ಹೊಂದಿರುವ ಜನರು ಲೈಂಗಿಕ ಸೋಂಕುಗಳಿಂದ ರಕ್ಷಣೆ ಪಡೆಯಲು ಕಾಂಡೋಮ್ ಬಳಕೆ ಮಾಡುತ್ತಾರೆ. ಇನ್ನು ಕೆಲವರು ಅನಗತ್ಯ ಗರ್ಭಧಾರಣೆ ತಡೆಯುವ ಉದ್ದೇಶದಿಂದ ಗರ್ಭನಿರೋಧಕವಾಗಿ ಕಾಂಡೋಮ್ ಬಳಸುತ್ತಾರೆ. ಇತ್ತೀಚಿನ ವರದಿಯಿಂದಾಗಿ ಕಾಂಡೋಮ್ ಬಳಕೆದಾರರಿಗೆ ಹೊಸ ಚಿಂತೆಯೊಂದು ಶುರುವಾಗಿದೆ. ಹಾಗಾದ್ರೆ ಆ ವರದಿ ಏನು? ಗ್ರಾಹಕರು ಚಿಂತಿತರಾಗುತ್ತಿರೋದು ಏಕೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
 
ಕಾಂಡೋಮ್ ಬಳಕೆಯಿಂದಾಗಿ ಕ್ಯಾನ್ಸರ್ ಅಪಾಯವಿದೆ ಎಂದು ಅಮೆರಿಕ ಹೇಳುತ್ತಿದೆ. ಅಮೆರಿಕ ನಂಬರ್ ಒನ್ ಕಾಂಡೋಮ್ ಆಗಿರುವ ಟ್ರೋಜನ್‌ ನಲ್ಲಿ ಕ್ಯಾನ್ಸರ್ ಉಂಟು ಮಾಡುವ ವಿಷಕಾರಿ ರಾಸಾಯನಿಕ ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಅಮೆರಿಕದ ಮ್ಯಾಥ್ಯೂ ಗುಡ್‌ಮೆನ್ ಎಂಬವರು ಮ್ಯಾನ್ಹಟನ್ ಫೆಡರಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಟ್ರೋಜನ್ ಕಂಪನಿಯ ಅಲ್ಟ್ರಾ ಥಿನ್ ಕಾಂಡೋಮ್‌ನಲ್ಲಿ ಪಾಲಿಫ್ಲೋರ್ ಎಲ್ಕೈಲ್ ಎಂಬ ಪದಾರ್ಥವಿದೆ. ಈ ಪದಾರ್ಥವನ್ನು PFAS ಎಂದು ಕರೆಯಲಾಗುತ್ತದೆ. PFAS ಬಳಕೆ ಆರೋಗ್ಯಕ್ಕೆ ಹಾನಿಕಾರವಾದ ಪದಾರ್ಥವಾಗಿದ್ದು, ಪರಿಸರ ಮತ್ತು ಮನುಷ್ಯರ ದೇಹದಲ್ಲಿ ದೀರ್ಘ ಸಮಯದವರೆಗೆ ಇರುತ್ತದೆ. ಸಾಮಾನ್ಯವಾಗಿ PFAS ಬಳಕೆ ನಾನ್ ಸ್ಟಿಕ್ ಮತ್ತು ಜೆಲ್ ಬೇಸ್ ಗಳಲ್ಲಿ ಬಳಸಲಾಗುತ್ತದೆ ಎಂದು ಮ್ಯಾಥ್ಯೂ ಆರೋಪಿಸಿದ್ದಾರೆ.

ದೂರುದಾರ ಮ್ಯಾಥ್ಯೂ ಪ್ರಕಾರ, ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್‌ನ್ನು ಲ್ಯಾಬ್ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ ಆರ್ಗ್‌ನಿಕ್ ಫ್ಲೋರಿನ್ ಇದೆ. ಇದು PFAS ಮಾರ್ಕ್ ಸಹಿತ  ಕಾಂಡೋಮ್ ಪ್ಯಾಕೇಟ್ ಬರುತ್ತದೆ. ಎಲ್ಲಾ ಕಂಪನಿಗಳ ಕಾಂಡೋಮ್ ಪ್ಯಾಕೇಟ್ ಮೇಲೆ ಈ ಕುರಿತ ಯಾವುದೇ ಮಾಹಿತಿ ಮುದ್ರಣ ಮಾಡಿರಲ್ಲ. ಒಂದು ವೇಳೆ PFAS ಮುದ್ರಿಸಿದರೆ ಗ್ರಾಹಕರು ಖರೀದಿಸಲ್ಲ ಅಥವಾ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಮಾಡಬೇಕಾಗುತ್ತದೆ. ದೇಶಾದ್ಯಂತ ಈ ಕಾಂಡೋಮ್ ಖರೀದಿಸಿದ ಗ್ರಾಹಕರಿಗೆ 5 ಮಿಲಿಯನ್ ಪರಿಹಾರ ನೀಡಬೇಕು ಎಂದು ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದಾರೆ. 

ಏನಿದು PFAS? ಇದರಿಂದ ಕ್ಯಾನ್ಸರ್ ಬರುತ್ತಾ?
ಕ್ಯಾನ್ಸರ್‌ಗೆ ಕಾರಣವಾಗುವ ಹಾನಿಕಾರಕ ಪದಾರ್ಥವೆಂದು PFASನ್ನು ಕರೆಯಲಾಗುತ್ತದೆ.    PFAS ಇರೋ ಕಾಂಡೋಮ್ ಬಳಕೆದಾರರ ಮಕ್ಕಳ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಮಕ್ಕಳ ತೂಕ ಹೆಚ್ಚಳ, ರೋಗ ನಿರೋಧಕ ಶಕ್ತಿಯನ್ನು ಕ್ಷೀಣಿಸುವ ಕೆಲಸ ಮಾಡುತ್ತದೆ. ಈ ಸಂಬಂಧ ಕೆಲ ಅಧ್ಯಯನಗಳು ನಡೆಸಲಾಗಿದ್ದು, ಕಾಂಡೋಮ್‌ನಲ್ಲಿ ಬಳಸಲಾಗುವ ಲುಬ್ರಿಕೆಂಟ್ಸ್ ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 

ಕಾಂಡೋಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಬಳಕೆಯ ಉದ್ದೇಶವೇ ಈಡೇರಲ್ಲ, ಈ 6 ವಿಷಯ ನಿಮಗೆ ಗೊತ್ತಿರಲಿ!

ಒಂದು ಸರ್ಟಿಫೈಡ್ ಲ್ಯಾಬ್‌ನಲ್ಲಿ 29 ಬೇರೆ ಬೇರೆ ಕಂಪನಿಗಳ ಕಾಂಡೋಮ್ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಟ್ರೋಜನ್ ಮಾದರಿಯೂ ಸೇರಿತ್ತು. ಈ ಪರೀಕ್ಷಾ ವರದಿ ಪ್ರಕಾರ, 29ರಲ್ಲಿ ಶೇ.14ರಷ್ಟು ಕಾಂಡೋಮ್‌ಗಳಲ್ಲಿ PFASನ ಕೆಲ ಕಣಗಳು ಪತ್ತೆಯಾಗಿವೆ. ಮೂರು ಕಾಂಡೋಮ್‌ಗಳಲ್ಲಿ PFAS ಕಂಡು ಬಂದರೆ, 2ರ ಲ್ಯುಬ್ರಿಕೆಂಟ್‌ನಲ್ಲಿ ಈ ವಿಷಕಾರಿ ಅಂಶ ಪತ್ತೆಯಾಗಿದೆ. ಈ ರಾಸಾಯನಿಕ ಕಣಗಳನ್ನು ಕಾಂಡೋಮ್‌ಗಳನ್ನು ನಯವಾಗಿ ಮತ್ತು ಕಲೆ ನಿರೋಧಕವಾಗಿಸಲು ಬಳಸಲಾಗುತ್ತದೆ.

ಈ ವರದಿ ಬಳಿಕ PFAS ಬಳಕೆಯನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಎಲ್ಲಾ ಕಾಂಡೋಮ್ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. PFAS ಬಳಕೆ ಮಾಡುತ್ತಿರುವ ಕಾಂಡೋಮ್ ಕಂಪನಿಗಳ ವಿರುದ್ಧ ತನಿಖೆ ಮಾಡಲಾಗುತ್ತಿದೆ. PFAS ಅಂಶವಿರೋ ಉತ್ಪನ್ನ ಬಳಕೆಯಿಂದಾಗಿ ರುಷ ಅಥವಾ ಮಹಿಳೆಯರ ಖಾಸಗಿ ಭಾಗಗಳಿಗೆ ಯಾವುದೇ ರೀತಿಯಲ್ಲಾದರೂ ಹಾನಿಯುಂಟು ಮಾಡಲಾಗಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ.

ಕಾಂಡೋಮ್ ಬಳಕೆಯ ಸೈಡ್ ಎಫೆಕ್ಟ್‌ಗಳು
*ಕಾಂಡೋಮ್‌ನಲ್ಲಿರುವ ಲೂಬ್ರಿಕಂಟ್‌ನಿಂದ ಕೆಲವರಿಗೆ ಅಲರ್ಜಿ ಉಂಟಾಗಬಹುದು.
*ಕಾಂಡೋಮ್ ಬಳಕೆಯ ತಿಳುವಳಿಕೆ ಇಲ್ಲದಿದ್ರೆ ಅದು ಸಂಪರ್ಕದ ವೇಳೆ ಹರಿದು ಅಥವಾ ಜಾರಬಹುದು.
*ಸಂಪರ್ಕದ ವೇಳೆ ಕಾಂಡೋಮ್ ಹಾನಿಗೊಳಗಾದ್ರೆ ಗರ್ಭಧಾರಣೆಯಾಗುವ ಸಾಧ್ಯತೆಗಳು ಇರುತ್ತದೆ.

ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!

Latest Videos
Follow Us:
Download App:
  • android
  • ios