ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!
ಸಂಗಾತಿ ಗರ್ಭ ತಡೆಯುವ ನಿಟ್ಟಿನಲ್ಲಿ Men ಈ ಜೆಲ್ ಬಳಕೆ ಮಾಡಬಹುದಾಗಿದೆ. Condom And Vasectomy ಶಸ್ತ್ರಚಿಕಿತ್ಸೆ ಬಳಿಕ ಪುರುಷರಿಗೆ ಈ ಜೆಲ್ ಮೂರನೇ ಆಯ್ಕೆಯಾಗಿರಲಿದೆ ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಬೆಂಗಳೂರು: ಜನನ ನಿಯಂತ್ರಣಕ್ಕೆ (Birth Control) ಪುರುಷರು ಕಾಂಡೋಮ್ (Condom) ಬಳಕೆ ಮಾಡುತ್ತಾರೆ. ಕೆಲವರು ವ್ಯಾಸೆಕ್ಟಮಿ (Vasectomy) ಶಸ್ತ್ರಚಿಕಿತ್ಸೆಗೆ ಒಳಗಾಗಿ ಖಾಯಂ ಬಂಜೆತನಕ್ಕೆ ಒಳಗಾಗುತ್ತಾರೆ. ಆದ್ರೆ ಈ ಶಸ್ತ್ರಚಿಕಿತ್ಸೆ ಬಳಿಕ ಪುರುಷನ ಲೈಂಗಿಕ ಜೀವನದಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ ಎಂದು ವೈದ್ಯರು ಖಚಿತಪಡಿಸುತ್ತಾರೆ. ಕಾಂಡೋಮ್ ಮತ್ತು ವ್ಯಾಸೆಕ್ಟಮಿ ಹೊರತಾಗಿ ಪುರುಷರಿಗಾಗಿ ಹೊಸ ಜನನ ನಿಯಂತ್ರಣ ಉತ್ಪನ್ನವೊಂದು ಸಿದ್ಧವಾಗುತ್ತದೆ. ಸಂಶೋಧನಕಾರರು ತಮ್ಮ ಉತ್ಪನ್ನದ ಕುರಿತು ಕೆಲವು ವಿಶೇಷ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಅಮೆರಿಕ ಸಂಶೋಧನಾ ತಂಡ ಜೆಲ್ ಮಾದರಿಯ ವಸ್ತುವೊಂದನ್ನು ಸಂಶೋಧನೆ ಮಾಡುತ್ತಿದೆ. ಈ ಜೆಲ್ ಗ್ಲೂ ಲಿಕ್ಷಿಡ್ (ಗ್ಲೂ) ರೀತಿಯಲ್ಲಿರುತ್ತದೆ ಎಂದು ವರದಿಯಾಗಿದೆ.
ಈ ಜೆಲ್‌ನ್ನು ಪುರುಷರು ತಮ್ಮ ಭುಜಗಳಿಗೆ ಹಚ್ಚಿಕೊಂಡರೆ ಸಾಕು ನಿರ್ದಿಷ್ಟ ಸಮಯದವರೆಗೆ ಸಂತಾನೋತ್ಪತ್ತಿಯ ಫಲವತ್ತತೆ ಇಳಿಕೆಯಾಗುತ್ತದೆ. ಸಂಗಾತಿ ಗರ್ಭ ತಡೆಯುವ ನಿಟ್ಟಿನಲ್ಲಿ ಪುರುಷರು ಈ ಜೆಲ್ ಬಳಕೆ ಮಾಡಬಹುದಾಗಿದೆ. ಕಾಂಡೋಮ್, ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಬಳಿಕ ಪುರುಷರಿಗೆ ಈ ಜೆಲ್ ಮೂರನೇ ಆಯ್ಕೆಯಾಗಿರಲಿದೆ ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಏನಿದು ಜೆಲ್? ಎಷ್ಟು ಸುರಕ್ಷಿತ?
ಸದ್ಯ ಈ ಜೆಲ್ ಕುರಿತು ವಿವರವಾದ ಸಂಶೋಧನೆ ನಡೆಯುತ್ತಿದೆ. ಎನ್ಇಎಸ್/ಟಿ ಎಂದು ಕರೆಯಲಾಗುವ ಈ ಜೆಲ್‌ನ ಸಾಧಕ-ಬಾಧಕಗಳ ಕುರಿತು ಅಧ್ಯಯನಗಳು ನಿರಂತರವಾಗಿ ನಡೆಯುತ್ತಿವೆ. ನೆಸ್ಟೊರಾನ್ ಮತ್ತು ಟೆಸ್ಟೊಸ್ಟೆರೊನ್ ಅಂಶಗಳ ಸಂಯೋಜನೆಯಿಂದ ಸಿದ್ಧವಾಗುವ ಈ ಎನ್ಇಎಸ್/ಟಿ ಜೆಲ್, ಮಹಿಳೆಯರಲ್ಲಿ ಗರ್ಭಧಾರಣೆಯನ್ನು ನಿಯಂತ್ರಿಸುವ ಗುಣವನ್ನು ಹೊಂದಿವೆ. ಹಾರ್ಮೋನ್‌ಗಳ ನಿಯಂತ್ರಣಕ್ಕಾಗಿ ನೆಸ್ಟೊರಾನ್ ಮಾದರಿಯ ಔಷಧಗಳನ್ನು ಈ ಜೆಲ್ ಉತ್ಪಾದನೆಯಲ್ಲಿ ಬಳಕೆ ಮಾಡಲಾಗುತ್ತದೆ.
ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆ
ಈ ಔಷಧ ಅಥವಾ ಜೆಲ್ ಪುರುಷರಿಗೆ ನೀಡಿದಾಗ ವೀರ್ಯಾಣುಗಳ ಉತ್ಪಾದನೆಯನ್ನು ನಿಯಂತ್ರಿಸುವ ಸಾಮಾರ್ಥ್ಯವನ್ನು ಹೊಂದಿದೆ. ಇದರಿಂದ ವೀರ್ಯಾಣುಗಳ ಸಂಖ್ಯೆ ಇಳಿಮುಖವಾಗುತ್ತದೆ. ಈ ಜೆಲ್ ಹಾರ್ಮೋನ್‌ಗಳನ್ನು ನಿರ್ದಿಷ್ಟ ಸಮಯದವರೆಗೆ ಸ್ಥಿರವಾಗಿರಿಸುವ ಕೆಲಸ ಮಾಡೋದರಿಂದ ತಾತ್ಕಾಲಿಕವಾಗಿ ಪುರುಷನ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ವೀರ್ಯಾಣುಗಳ ಪ್ರಮಾಣ ಕ್ಷೀಣಿಸಿದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸೋದರಿಂದ ಸಂಗಾತಿ ಗರ್ಭ ಧರಿಸಲ್ಲ. ಆದರೆ ಈ ಜೆಲ್ ಬಳಕೆಯಿಂದ ಪುರುಷರ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಸಂಶೋಧನೆ ಸಾಗುತ್ತಿದೆ ಎಂದು ಸಂಶೋಧಕರು ಹೇಳುತ್ತಾರೆ.
ವೀರ್ಯ ಹೆಚ್ಚಳಕ್ಕೆ ಏನು ತಿನ್ನಬೇಕು ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ಔಷಧ
ಜೆಲ್ ಸಂಶೋಧಕರು ಯಾರು?
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ಹ್ಯೂಮನ್ ಡೆವಲಪ್‌ಮೆಂಟ್, ಅಮೆರಿಕಾ ಸರ್ಕಾರಿ ಸಂಸ್ಥೆ ಹಾಗೂ ಕೆಲ ಖಾಸಗಿ ಸಂಶೋಧನಾ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಈ ಜೆಲ್ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ಎರಡನೇ ಹಂತದ (2ಬಿ) ಪ್ರಯೋಗಗಳು ನಡೆಯುತ್ತಿವೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಸಂಶೋಧನೆಯ ಮುಖ್ಯಸ್ಥ ಡಯಾನಾ ಬ್ಲೈಥ್ ಈ ಕುರಿತು ಕೆಲವು ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್ದಾರೆ.
ಎಷ್ಟು ವಾರಗಳ ಕಾಲ ಕೆಲಸ ಮಾಡುತ್ತೆ?
ಜೆಲ್ ಹಚ್ಚಿದ 12 ರಿಂದ 15 ವಾರಗಳ ಕಾಲ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಇಳಿಕೆಯಾಗಿದೆ. ಕೆಲವು ಪ್ರಕರಣಗಳಲ್ಲಿ ಈ ಅವಧಿ ಇನ್ನೂ ಕಡಿಮೆಯಾಗಿದೆ. ಈ ಅವಧಿ ಎಷ್ಟು ಎಂಬುವುದು ಇನ್ನು ಸ್ಪಷ್ಟವಾಗುತ್ತಿಲ್ಲ. 222 ಪುರುಷರ ಮೇಲೆ ಜೆಲ್ ಪ್ರಯೋಗ ನಡೆಸಲಾಗಿದ್ದು, ಶೇ.86ರಷ್ಟು ಪುರುಷರಲ್ಲಿ 15 ವಾರ, ಶೇ.20ರಷ್ಟು ಪುರುಷರಲ್ಲಿ 5 ವಾರ, ಶೇ.52 ಪುರುಷರಲ್ಲಿ 8 ವಾರ ಹಾಗೂ ಶೇ.62ರಷ್ಟು ಪುರುಷರಲ್ಲಿ 9 ವಾರಗಳ ಕಾಲ ಜೆಲ್ ಕೆಲಸ ಮಾಡಿದೆ. ಸಂಶೋಧನೆಯಲ್ಲಿ ವಿವಿಧ ವಯಸ್ಸಿನ ಪುರುಷರನ್ನು ಪರಿಗಣಿಸಲಾಗಿತ್ತು ಎಂದು ಡಯಾನಾ ಬ್ಲೈಥ್ ಹೇಳುತ್ತಾರೆ.
ಹೆಂಡತಿ ಗರ್ಭಿಣಿಯಾದಾಗ ಗಂಡ ಈ ಕೆಲಸಗಳನ್ನ ಮಾಡಬಾರದು
ಶೀಘ್ರದಲ್ಲಿಯೇ ಮೂರನೇ ಹಂತದ ಪ್ರಯೋಗಕ್ಕೆ ಡಯಾನಾ ಬ್ಲೈಥ್ ತಂಡ ಮುಂದಾಗುವ ಸಾಧ್ಯತೆಗಳಿವೆ. ನಿಖರ ಸಮಯ ಮತ್ತು ಅಡ್ಡಪರಿಣಾಮಗಳ ಕುರಿತು ಸಹ ಸಂಶೋಧನೆಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ. ಉತ್ಪನ್ನ ಮಾರುಕಟ್ಟೆಗೆ ತರಲು ಕಮರ್ಷಿಯಲ್ ಪಾಲುದಾರ ಹುಡುಕಾಟದಲ್ಲಿದೆ. ಜೆಲ್ ಯಾವಾಗ ಮಾರುಕಟ್ಟೆ ಬರುತ್ತೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ.