ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವ್ಯಕ್ತಿ

ಅಂತರ್‌ಧರ್ಮೀಯ ವಿವಾಹಗಳು ಆಗಾಗ ನಡೆಯುತ್ತಲೇ ಇರುತ್ತವೆ. ಪರಸ್ಪರ ಪ್ರೀತಿಸುವ ಯುವಕ-ಯುವತಿ ಮದುವೆಯಾಗಲು ಧರ್ಮ ಬದಲಾಯಿಸಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ಯುವಕ ತನ್ನ ಸಂಗಾತಿಯ ಕೋರಿಕೆಯಂತೆ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ.

Muslim man converts to Hinduism to marry a Hindu girl in Madhya Pradesh Vin

ಮಧ್ಯಪ್ರದೇಶ: ಹಿಂದೂ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಮಧ್ಯಪ್ರದೇಶದ ಅಬಲ್ಪುರ್‌ನಲ್ಲಿ ನಡೆದಿದೆ. ಹಿಂದೂ ಧರ್ಮ ಮತ್ತು ಅದರ ತತ್ವಗಳು ಮತ್ತು ಆಚರಣೆಗಳತ್ತ ಒಲವು ಹೊಂದಿರುವ ಮುಸ್ಲಿಂ ಯುವಕ ಪವಿತ್ರ ನದಿ ನರ್ಮದೆಯಲ್ಲಿ ಸ್ನಾನ ಮಾಡುವ ಮೂಲಕ ತನ್ನ ಧರ್ಮವನ್ನು ಪರಿವರ್ತಿಸಿದನು. ಹಿಂದೂ ಧರ್ಮಸೇನೆಯು ನರ್ಮದಾ ನದಿಯಲ್ಲಿ ವೇದ ಮಂತ್ರಗಳನ್ನು ಪಠಿಸುವ ಮೂಲಕ ಮತಾಂತರವನ್ನು ನಡೆಸಿದೆ. ಮತಾಂತರದ ಆಚರಣೆಗಳನ್ನು ಅನುಸರಿಸಿ, ಅಖಿಲ್ ಅನ್ಸಾರಿ ಹರ್ಷ್ ಆರ್ಯ ಆಗಿ ಬದಲಾದರು. 

ಅನ್ಸಾರಿ ಅವರನ್ನು ಮದುವೆ (Marriage)ಯಾಗಲು ತನ್ನ ಧರ್ಮವನ್ನು (Religion) ಬದಲಾಯಿಸುವಂತೆ ಕೇಳಿಕೊಂಡ ಸಂಗಾತಿಯು (Partner) ಮುಂದಿಟ್ಟ ಷರತ್ತೇ ಮತಾಂತರದ ಹಿಂದಿನ ಕಾರಣ ಎಂದು ಗುರುತಿಸಲಾಗಿದೆ. ಆದಾಗ್ಯೂ, ಮತಾಂತರಗೊಳ್ಳುವ ವರ್ಷಗಳ ಹಿಂದೆ ಆ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಒಲವು ಹೊಂದಿದ್ದನು ಎಂದು ತಿಳಿದುಬಂದಿದೆ.

ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಕೇರಳ: ವಧುವಿಗೂ ಮಸೀದಿ ಪ್ರವೇಶಕ್ಕೆ ಅವಕಾಶ

ಹಿಂದೂ ಗೆಳೆಯನೊಂದಿಗೆ ಓಡಿದ ಮುಸ್ಲಿಂ ಯುವತಿ: ಸಂಬಂಧಿಕರ ಗಲಾಟೆ
ಹಿಂದೂ ಗೆಳೆಯನೊಂದಿಗೆ ಮುಸ್ಲಿಂ ಹುಡುಗಿಯೊಬ್ಬಳು ಓಡಿ ಹೋದ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿತ್ತು. ಯುವತಿ ಕಡೆಯವರು ವಿವಾಹ ನೋಂದಣಿ ಕಚೇರಿಗೆ ಬಂದು ಗಲಾಟೆ ಮಾಡಿದ್ದರು. ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದು, ಕೆಲ ದಿನಗಳ ಹಿಂದೆ ಓಡಿ ಹೋಗಿದ್ದರು.  ಅವರು ತಮ್ಮ ವಿವಾಹವನ್ನು ನೋಂದಣಿ (Registration) ಮಾಡಿಸುವುದಕ್ಕಾಗಿ ವಡೋದರ ನಗರದಲ್ಲಿರುವ ವಿವಾಹ ನೋಂದಣಿ ಕಚೇರಿಗೆ ಆಗಮಿಸಿದ್ದು,  ಈ ವಿಚಾರ ತಿಳಿದ ಹುಡುಗಿ ಕಡೆಯವರು ವಿವಾಹ ನೋಂದಣಿ ಕಚೇರಿಗೆ ಆಗಮಿಸಿ ದಾಂಧಲೆ ನಡೆಸಿದ್ದಾರೆ. 

ಯುವತಿ ಮನೆ ಬಿಟ್ಟು ಹೋದ ನಂತರ ಯುವತಿ ಮನೆಯವರು ಕರ್ಜಾನ್ ಪೊಲೀಸ್ ಠಾಣೆಯಲ್ಲಿ  ಯುವತಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಯುವತಿಯ ಕುಟುಂಬಕ್ಕೆ ತಮ್ಮ ಮನೆ ಮಗಳು ಹಿಂದೂ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದಿತ್ತು. ಈ ಮಧ್ಯೆ ಕೆಲ ದಿನಗಳ ಹಿಂದೆ ಇವರಿಬ್ಬರು ಓಡಿ ಹೋಗಿದ್ದರು. ಹೀಗೆ ಓಡಿ ಹೋದ ಅಂತರ್‌ಧರ್ಮಿಯ (Inter religion) ಜೋಡಿ  ವಡೋದರಾದ ಕುಬೇರ ಭವನದ (Kuber Bhavan) ಆರನೇ ಮಹಡಿಯಲ್ಲಿರುವ ವಿವಾಹ ನೋಂದಣಿ ಕಚೇರಿಗೆ ಆಗಮಿಸುವವರಿದ್ದರು.  ಈ ವಿಚಾರ ತಿಳಿದು ಅಲ್ಲಿ ಹುಡುಗಿ ಕುಟುಂಬದವರು ಆಗಮಿಸಿ ಗಲಾಟೆ ಮಾಡಿದ್ದಾರೆ.

ಶಾಲೆಯ ಪ್ರಿನ್ಸಿಪಲ್‌, ಟೀಚರ್‌, ಸೂಪರ್‌ವೈಸರ್‌ ಮತ್ತು ವಿದ್ಯಾರ್ಥಿನಿ ಎಲ್ಲರಿಗೂ ಒಬ್ಬನೇ ಗಂಡ!

ಕೂಡಲೇ ಪೊಲೀಸರು ಆಗಮಿಸಿ ಈ ಅಂತರ್‌ಧರ್ಮೀಯ ಜೋಡಿಗೆ ರಕ್ಷಣೆ ನೀಡಿದ್ದಾರೆ.  ಇಬ್ಬರು ವಯಸ್ಕರಾಗಿದ್ದು, ಅವರನ್ನು  ರಾವೋಪುರ ಪೊಲೀಸರು  ರಕ್ಷಣೆಯೊಂದಿಗೆ  ಕಟ್ಟಡದ 9ನೇ ಮಹಡಿಗೆ ಕರೆದೊಯ್ದಿದ್ದಾರೆ. ಈ ವೇಳೆ ಮುಸ್ಲಿಂ ಸಂಘಟನೆಯೊಂದರ ಅನೇಕ ಜನರು ಅವರನ್ನು ಹಿಂಬಾಲಿಸಿ ಬಂದಿದ್ದಾರೆ.

ನಂತರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ, ಆಕೆಯ ಕುಟುಂಬದವರು ದಾಖಲಿಸಿದ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಸ್ಲಿಂ ಯುವತಿಯ ಹೇಳಿಕೆಯನ್ನು ಪಡೆದಿದ್ದಾರೆ. ಇತ್ತ ಅಲ್ಲಿಗೆ ಬಂದ ಮುಸ್ಲಿಂ ಸಂಘಟನೆಗಳು ಯುವತಿಯ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನು ನಂತರ ನಾರಿ ಸಂರಕ್ಷಣ ಗೃಹಕ್ಕೆ (Nari Sanrakshan Gruh)ಕಳುಹಿಸಲಾಗಿದೆ. 

Latest Videos
Follow Us:
Download App:
  • android
  • ios