Asianet Suvarna News Asianet Suvarna News

ಶಾಲೆಯ ಪ್ರಿನ್ಸಿಪಲ್‌, ಟೀಚರ್‌, ಸೂಪರ್‌ವೈಸರ್‌ ಮತ್ತು ವಿದ್ಯಾರ್ಥಿನಿ ಎಲ್ಲರಿಗೂ ಒಬ್ಬನೇ ಗಂಡ!

Weird News: ಅಲ್ಲಾ ಸ್ವಾಮಿ, ವಿಶ್ವದಲ್ಲಿ ಎಂಥ ಚಿತ್ರ – ವಿಚಿತ್ರ ಜನ ಇರ್ತಾರೆ ಗೊತ್ತಾ? ಕೆಲವರ ಲೈಫ್ ಕಲರ್ ಫುಲ್ ಆಗಿರುತ್ತೆ.  ಈತನ ಲೈಫ್ ಗೆ ಪತ್ನಿಯರೇ ಬಣ್ಣ ತುಂಬಿದ್ದಾರೆ. ಒಂದಲ್ಲ ಎರಡಲ್ಲ ನಾಲ್ಕು ಮದುವೆಯಾಗಿ ಹಾಯಾಗಿದ್ದಾನೆ ಈ ರಸಿಕ. 
 

How Saudi Man Married Student And Teacher And Principal From The Same School
Author
Bangalore, First Published May 23, 2022, 11:42 AM IST

ಇತ್ತೀಚಿನ ದಿನಗಳಲ್ಲಿ ಒಂದು ಮದುವೆ (Marriage) ಯೇ ಕಷ್ಟ ಎನ್ನುವಂತಾಗಿದೆ. ವರ (Groom) ನಿಗೆ ಸೂಕ್ತ ವಧು (Bride) ಸಿಗ್ತಿಲ್ಲ. ಇದೇ ಕಾರಣಕ್ಕೆ ಅನೇಕರು ಮದುವೆಯಾಗದೆ ಉಳಿದಿದ್ದಾರೆ. ಅಂತೂ ಇಂತೂ ಸಾಲ ಮಾಡಿ ಒಂದು ಮದುವೆಯಾದವರು ಉಸ್ಸಪ್ಪ ಎನ್ನುತ್ತಿದ್ದಾರೆ. ಇನ್ನು ಭಾರತ (India) ದಲ್ಲಿ ಕೆಲವೇ ಕೆಲವು ಮಂದಿ ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದಾರೆ. ಸಿನಿಮಾ (Cinema) ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಎರಡು ಮದುವೆ ಕಾಮನ್ ಆಗಿದೆ. ಆದ್ರೆ ಎರಡಕ್ಕಿಂತ ಹೆಚ್ಚು ಮದುವೆಯಾಗಿರುವ ಸುದ್ದಿಗಳು ಬಹಳ ಅಪರೂಪ. ಹಾಗೆ ಎರಡಕ್ಕಿಂತ ಹೆಚ್ಚು ಮದುವೆಯಾದವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ಮದುವೆಯಾಗಿ ಸಾಕಪ್ಪ ಸಂಸಾರ ಎನ್ನುವವರಿಗೆ ಶಾಕಿಂಗ್ ನ್ಯೂಸ್ ಒಂದಿದೆ. ಎರಡು ಜಡೆ ಸೇರಿದ್ರೆ ಜಗಳ ಎಂಬ ಮಾತೊಂದಿದೆ. ಅದೇನೇ ಇರಲಿ, ಎರಡಲ್ಲ, ಮೂರಲ್ಲ ನಾಲ್ಕು ಜಡೆಗಳ ಮಧ್ಯೆ ವ್ಯಕ್ತಿಯೊಬ್ಬ ಸಂಸಾರ ನಡೆಸುತ್ತಿದ್ದಾನೆ ಅಂದ್ರೆ ನೀವು ನಂಬ್ಲೇಬೇಕು. ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ನಾಲ್ಕು ಮಹಿಳೆಯರನ್ನು ಮದುವೆಯಾಗಿದ್ದಾನೆ. ವಿಚಿತ್ರವೆಂದ್ರೆ ಎಲ್ಲರೂ ಒಂದೇ ಶಾಲೆಯಲ್ಲಿದ್ದಾರೆ. ಸುಖ ಸಂಸಾರ ನಡೆಸುತ್ತಿರುವ ಆತನ ಕುಟುಂಬದ ಕಥೆ ಏನು ಎಂಬುದನ್ನು ನಾವಿಂದು ಹೇಳ್ತೇವೆ.

ನಾಲ್ಕು ಹೆಂಡಿರ ಗಂಡ : ಒಂದು ಊರಿನಲ್ಲಿ ಒಂದು ಪತ್ನಿ, ಇನ್ನೊಂದು ಊರಿನಲ್ಲಿ ಇನ್ನೊಂದು ಪತ್ನಿ, ಮತ್ತೊಂದು ಊರಿನಲ್ಲಿ ಮತ್ತೊಂದು ಪತ್ನಿ ಹೊಂದಿದ್ದರೆ ಅದು ಬೇರೆ ಸಂಗತಿ. ಪತ್ನಿಯರಿಗೆ ಮೋಸ ಮಾಡಿ ಈತ ಮದುವೆಯಾಗ್ತಿದ್ದಾನೆ ಎನ್ನಬಹುದು. ಆದ್ರೆ ಈ ಭೂಪ ಒಂದೇ ಶಾಲೆಯಲ್ಲಿರುವ ನಾಲ್ವರಿಗೆ ಗಂಡ. ಶಾಲೆಯ ವಿದ್ಯಾರ್ಥಿನಿ, ಶಿಕ್ಷಕಿ, ಮೇಲ್ವಿಚಾರಕಿ ಮತ್ತು ಪ್ರಾಂಶುಪಾಲೆಯನ್ನು ಈತ ಮದುವೆಯಾಗಿದ್ದಾನೆ. 

ಇದನ್ನೂ ಓದಿ: ಹೆಂಡ್ತಿಗೆ ಮಕ್ಕಳಾಗಲ್ಲ ಅಂತ ಅವಳ ತಂಗಿ ಜೊತೆ ಮಲಗ್ತಾನೆ ಗಂಡ, ಪತ್ನಿಗೂ ಇದು ಗೊತ್ತು !

ಕಿರಿಯ ಹೆಂಡತಿ ಇನ್ನೂ ಓದುತ್ತಿದ್ದಾಳೆ : ಮದುವೆಗೆ ಒಂದು ವಯಸ್ಸಿನ ಅಂತರವಿರಬೇಕು. ಆದ್ರೆ ಇಲ್ಲಿ ಬಹಳ ವಿಚಿತ್ರವೆನ್ನಿಸುವ ಸಂಗತಿಯಿದೆ. ವ್ಯಕ್ತಿ, ವಿದ್ಯಾರ್ಥಿನಿಯನ್ನೂ ಬಿಟ್ಟಿಲ್ಲ. ಆತನ ಕಿರಿಯ ಪತ್ನಿ ಇನ್ನೂ ಓದ್ತಿದ್ದಾಳೆ. ಪ್ರಸ್ತುತ ಮಾಧ್ಯಮಿಕ ತರಗತಿಯಲ್ಲಿ ಆಕೆ ವಿದ್ಯಾಭ್ಯಾಸ ಮಾಡ್ತಿದ್ದಾಳೆ.  ವಿದ್ಯಾರ್ಥಿನಿಗೆ ವಿದ್ಯಾಭ್ಯಾಸ ಹೇಳುವ ಶಿಕ್ಷಕಿ ಪತಿ ಕೂಡ ವಿದ್ಯಾರ್ಥಿನಿಯ ಗಂಡನೇ. ಇನ್ನು ವಿದ್ಯಾರ್ಥಿನಿ ಹಾಗೂ ಶಿಕ್ಷಕಿ ಗಂಡನೇ ಮೇಲ್ವಿಚಾರಕಿ ಪತಿ ಕೂಡ ಹೌದು. ಬರೀ ಇಷ್ಟಕ್ಕೆ ಆತನ ಸರಣಿ ಮದುವೆ ನಿಂತಿಲ್ಲ. ಈ ಮೂವರ ಪತಿಯೇ ಪ್ರಾಂಶುಪಾಲೆಯ ಪತಿ.  

ವಿಚಿತ್ರ ಮದುವೆ ನಡೆದಿದ್ದು ಎಲ್ಲಿ? : ಇದು ನಡೆದಿರೋದು ನೈಋತ್ಯ ಸೌದಿ ಅರೇಬಿಯಾದ ಜಿಜಾನ್‌ನಲ್ಲಿ.  ಜಿಜಾನ್ ನಲ್ಲಿರುವ ಶಾಲೆಯೊಂದರ ನಾಲ್ವರು ಮಹಿಳೆಯರಿಗೆ ಗಂಡ ಒಬ್ಬನೆ.

ಇದನ್ನೂ ಓದಿ: ಹಾಸಿಗೆ ಮೇಲೆ ಮೊಬೈಲ್, ಸೆಕ್ಸ್ ಲೈಫ್ ಹಾಳಾಗೋದು ಗ್ಯಾರಂಟಿ!

ಉದ್ಯೋಗದ ಮೇಲಾಗಿಲ್ಲ ಮದುವೆ ಪ್ರಭಾವ : ಶಾಲೆಯಲ್ಲಿ ಕೆಲಸ ಮಾಡ್ತಿರುವ ಪ್ರಾಂಶುಪಾಲೆ ಹಾಗೂ ನಾಲ್ಕು ಪತ್ನಿಯರಲ್ಲಿ ಒಬ್ಬರಾಗಿರುವ ಮಹಿಳೆ ಈ ಬಗ್ಗೆ ಮಾತನಾಡಿದ್ದಾರೆ. ನನ್ನ ಪತಿ ಇದೇ ಶಾಲೆಯ ಮೂವರನ್ನು ಮದುವೆಯಾಗಿದ್ದಾನೆ. ಆದ್ರೆ ಈ ಮದುವೆ ನನ್ನ ಹಾಗೂ ಇತರರ ವೃತ್ತಿ ಜೀವನದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಉಳಿದ ಮೂವರು ಪತ್ನಿಯರು ನನ್ನ ಹುದ್ದೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದಿದ್ದಾರೆ. ವರದಿಗಳ ಪ್ರಕಾರ, ಎಲ್ಲಾ ಹೆಂಡತಿಯರು ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದಾರಂತೆ.

ಶಾಲೆ ಆವರಣದಲ್ಲಿ ಇದು ಬಿಸಿ ಬಿಸಿ ಚರ್ಚೆಯ ವಿಷ್ಯ :  ಆದ್ರೆ ಶಾಲೆ ತುಂಬ ಈ ನಾಲ್ವರ ಸುದ್ದಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿಗಳು ಮತ್ತು ಕೆಲವು ಸ್ಥಳೀಯರು  ನಾಲ್ಕು ಮಹಿಳೆಯರ ನಡುವೆ ಇರುವ ವಿಚಿತ್ರ ಸಂಬಂಧದ ಬಗ್ಗೆ ಮಾತನಾಡ್ತಿದ್ದಾರೆ. ಇನ್ನು ಕೆಲವರು ಒಟ್ಟಿಗೆ ಬಾಳ್ವೆ ಮಾಡ್ತಿರುವ ಈ ನಾಲ್ವರು ಮಹಿಳೆಯರನ್ನು ನೋಡಿ ಹುಬ್ಬೇರಿಸುತ್ತಿದ್ದಾರೆ. 

Follow Us:
Download App:
  • android
  • ios